ಗ್ರಾಹಕರ ಗಮನಕ್ಕೆ : 2 ದಿನ ದೇಶದಾದ್ಯಂತ ಬ್ಯಾಂಕುಗಳಿಗೆ ರಜೆ

ನವದೆಹಲಿ : ಬ್ಯಾಂಕ್ ಗ್ರಾಹಕರ ಗಮನಕ್ಕೆ, ಒಂದು ಮಹತ್ವದ ಸುದ್ದಿ ಪ್ರಕಟವಾಗಿದೆ. ಗ್ರಾಹಕರು ಒಂದು ವೇಳೆ ಈ ತಿಂಗಳ ಕೊನೆಯಲ್ಲಿ ಬ್ಯಾಂಕ್‌ಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಬಾಕಿ ಇಟ್ಟುಕೊಂಡಿದ್ದರೆ, ಅದನ್ನು ಆದಷ್ಟು ಬೇಗನೆ (Bank Strike 2023) ಮಾಡಿಕೊಳ್ಳಿ. ಏಕೆಂದರೆ ಜನವರಿ 28 ರಿಂದ ಜನವರಿ 31 ರವರೆಗೆ, ಬ್ಯಾಂಕಿಂಗ್‌ ವ್ಯವಹಾರದಲ್ಲಿ ಗ್ರಾಹಕರಿಗೆ ತೊಂದರೆಗಳು ಎದುರಾಗುವ ಸಾಧ್ಯತೆ ಇದೆ. ಬ್ಯಾಂಕ್ ಯೂನಿಯನ್ 2 ದಿನಗಳ ಕಾಲ ಮುಷ್ಕರ ನಡೆಸಲು ನಿರ್ಧರಿಸಿದೆ.

ಜನವರಿ 28 ರಂದು ತಿಂಗಳ ನಾಲ್ಕನೇ ಶನಿವಾರ, ಈ ಕಾರಣದಿಂದಾಗಿ ಬ್ಯಾಂಕ್ ಗಳಿಗೆ ರಜೆ ಇರುತ್ತದೆ. ಇದರ ಬೆನ್ನಲ್ಲೇ ಭಾನುವಾರದ ಕಾರಣ ಜನವರಿ 29 ರಂದು ದೇಶಾದ್ಯಂತ ಬ್ಯಾಂಕುಗಳಿಗೆ ಸಾರ್ವಜನಿಕ ರಜಾದಿನ ಇರಲಿದೆ. ಇದೆಲ್ಲದರ ಹೊರತಾಗಿ ಬ್ಯಾಂಕ್ ಯೂನಿಯನ್ ಜನವರಿ 30 ಮತ್ತು 31 ರಂದು ಮುಷ್ಕರವನ್ನು ಘೋಷಿಸಿದ್ದು, ಇದರಿಂದಾಗಿ ಗ್ರಾಹಕರು 4 ದಿನಗಳ ಕಾಲ ಬ್ಯಾಂಕಿಂಗ್‌ ವ್ಯವಹಾರಕ್ಕೆ ಸಂಬಂಧಿಸಿದಂತೆ ತೊಂದರೆ ಅನುಭವಿಸಬೇಕಾಗಬಹುದು.

ಬ್ಯಾಂಕ್‌ ಯೂನಿಯನ್‌ ಮುಷ್ಕರಕ್ಕೆ ಕರೆ ಕೊಟ್ಟಿದ್ದು ಯಾಕೆ ?
ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ (ಯುಎಫ್‌ಬಿಯು) ಸಭೆ ಮುಂಬೈನಲ್ಲಿ ನಡೆದಿದ್ದು, ಎರಡು ದಿನಗಳ ಕಾಲ ಮುಷ್ಕರ ನಡೆಸಲು ಬ್ಯಾಂಕ್ ಒಕ್ಕೂಟಗಳು ನಿರ್ಧರಿಸಿವೆ. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರದ ಮೇಲೆ ಒತ್ತಡ ಹೇರಲು ಬ್ಯಾಂಕ್ ಒಕ್ಕೂಟಗಳು ಮುಷ್ಕರ ನಡೆಸುತ್ತಿವೆ. ಈ ಕುರಿತು ಮಾಹಿತಿ ನೀಡಿದ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಚ್.ವೆಂಕಟಾಚಲಂ, ಯುನೈಟೆಡ್ ಫೋರಂನ ಸಭೆ ನಡೆಸಲಾಗಿದ್ದು, 2 ದಿನಗಳ ಕಾಲ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. 5 ದಿನಗಳ ಕಾಲ ಬ್ಯಾಂಕಿಂಗ್ ಕೆಲಸ ಮಾಡಬೇಕು ಎಂಬುದು ಬ್ಯಾಂಕ್ ಒಕ್ಕೂಟಗಳ ಬೇಡಿಕೆಯಾಗಿದೆ ಎಂದು ತಿಳಿಸಿದರು. ಇದರೊಂದಿಗೆ ಪಿಂಚಣಿಯನ್ನೂ ಸಹ ನವೀಕರಿಸಬೇಕು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : EPFO Website Down : ಇಪಿಎಫ್ಒ ಚಂದಾದಾರರಿಗೆ ಇ-ಪಾಸ್ ಬುಕ್ ಸೌಲಭ್ಯದಲ್ಲಿ ವ್ಯತ್ಯಯ

ಇದನ್ನೂ ಓದಿ : ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್ ಪೋರ್ಟ್ ಪಟ್ಟಿ 2023 : ಭಾರತಕ್ಕೆ ಎಷ್ಟನೇ ಸ್ಥಾನ ?

ಇದನ್ನೂ ಓದಿ : ಸುಕನ್ಯಾ ಸಮೃದ್ಧಿ ಯೋಜನೆ : ವರ್ಷಕ್ಕೆ 250 ರೂ. ಹೂಡಿಕೆ, ಪಡೆಯಿರಿ 1.5 ಲಕ್ಷ ರೂ.

ಬ್ಯಾಂಕ್‌ ಯೂನಿಯನ್‌ ಬೇಡಿಕೆ ಏನು ?
ಇದರೊಂದಿಗೆ ಎನ್ ಪಿಎಸ್ ರದ್ದುಪಡಿಸಿ ವೇತನ ಹೆಚ್ಚಳಕ್ಕೆ ಮಾತುಕತೆ ನಡೆಸಬೇಕು ಎಂಬುದು ನೌಕರರ ಆಗ್ರಹವಾಗಿದೆ. ಇದೆಲ್ಲದರ ಹೊರತಾಗಿ ಎಲ್ಲ ಕೇಡರ್‌ಗಳಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕೆಂಬ ಆಗ್ರಹ ಕೇಳಿ ಬಂದಿದೆ. ಈ ಎಲ್ಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರ ನಡೆಸಲು ಸಂಘ ನಿರ್ಧರಿಸಿದೆ. ಶನಿವಾರ ಮತ್ತು ಭಾನುವಾರ ಬ್ಯಾಂಕ್ ರಜೆ ಇದೆ . ಇದಾದ ನಂತರ ಸೋಮವಾರ ಮತ್ತು ಮಂಗಳವಾರ ಬ್ಯಾಂಕ್ ಮುಷ್ಕರ ನಡೆಯುತ್ತಿದ್ದು, ಗ್ರಾಹಕರು ಸಮಸ್ಯೆ ಎದುರಿಸಬೇಕಾಗಬಹುದು. ಎಟಿಎಂನಲ್ಲಿ ಹಣ ಖಾಲಿಯಾಗುವ ಸಮಸ್ಯೆ ಕೂಡ ಎದುರಾಗಬಹುದು. ಇದರೊಂದಿಗೆ, ಚೆಕ್ ಕ್ಲಿಯರೆನ್ಸ್ ಬಗ್ಗೆಯೂ ಸಮಸ್ಯೆಗಳಿರಬಹುದು ೆನ್ನುವುದನ್ನು ಗ್ರಾಹಕರು ಗಮನಹರಿಸಬೇಕಾಗಿದೆ.

Bank Strike 2023: Attention of customers: 2 days holiday for banks across the country

Comments are closed.