Union Minister Sharath Yadav: ಮಾಜಿ ಕೇಂದ್ರ ಸಚಿವ ಶರದ್‌ ಯಾದವ್‌ ವಿಧಿವಶ

ಗುರುಗ್ರಾಮ: (Union Minister Sharath Yadav) ಮಾಜಿ ಕೇಂದ್ರ ಸಚಿವ ಶರದ್‌ ಯಾದವ್‌ ಅವರು ಕಳೆದ ಕೆಲವು ದಿನಗಳಿಂದ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ.

ಕಳೆದ ಕೆಲವು ದಿನಗಳಿಂದ ಶರದ್‌ ಯಾದವ್‌ (Union Minister Sharath Yadav) ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಈ ಹಿನ್ನಲೆಯಲ್ಲಿ ಅವರನ್ನು ಗುರುಗ್ರಾಮದ ಫೋರ್ಟಿಸ್‌ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ. ಶರದ್‌ ಯಾದವ್‌ ಅವರು 1999 -2004 ರ ನಡುವೆ ಅಟಲ್‌ ಬಿಹಾರಿ ವಾಜಪೇಯಿ ಅವರ ಸಹಕಾರದಲ್ಲಿ ವಿವಿಧ ಖಾತೆಗಳನ್ನು ನಿರ್ವಹಿಸಿದ್ದರು. 2003 ರಲ್ಲಿ ಸಂಯುಕ್ತ ಜನತಾದಳದ ಅಧ್ಯಕ್ಷರಾಗಿದ್ದು, ಆನಂತರ ಅವರು 2004 ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಆದರೆ ಆಗ ಅವರಿಗೆ ರಾಜ್ಯಸಭೆಯ ಸ್ಥಾನ ಪಡೆಯಲು ಆಗಿನ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೆರವಾಗಿದ್ದರು.

2009 ರಲ್ಲಿ ಶರದ್‌ ಯಾದವ್‌ ಅವರು ಮತ್ತೆ ಮಾಧೆಪುರ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಆದರೆ, 2014 ರಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಯು ಸೋತ ಬಳಿಕ ನಿತೀಶ್‌ ಕುಮಾರ್‌ ಅವರೊಂದಿಗಿನ ಯಾದವ್‌ ಅವರ ಸಂಬಂಧ ಹದಗೆಟ್ಟಿತ್ತು. 2017 ರ ಬಿಹಾರ್‌ ವಿಧಾನ ಸಭೆ ಚುನಾವಣೆ ಸಂದರ್ಭ ನೀತೀಶ್‌ ಕುಮಾರ್‌ ನೇತ್ರತ್ವದ ಜೆಡಿಯು ಬಿಜೆಪಿಯೊಂದಿಗೆ ಕೈ ಜೋಡಿಸಿತು. ಇದರಿಂದ ಅಸಮಾಧಾನಗೊಂಡಿದ್ದ ಶರದ್‌ ಯಾದವ್‌ ಅವರು ಜೆಡಿಯುನಿಂದ ಹೊರಬಂದರು. ಈ ಹಿನ್ನಲೆಯಲ್ಲಿ ರಾಜ್ಯಸಭೆಯಿಂದ ಅವರನ್ನು ಹೊರಕಳುಹಿಸಲು ಜೆಡಿಯು ಕೋರಿತ್ತು.

ಅನಂತರದಲ್ಲಿ ಶರದ್‌ ಯಾದವ್‌ ಅವರು ನಿತೀಶ್‌ ಕುಮಾರ್‌ ಅವರಿಂದ ಪ್ರತ್ಯೇಕವಾಗಿದ್ದು, ತನ್ನದೇ ಆದ ಕೋಲತಾಂತ್ರಿಕ ಜನತಾ ದಳವನ್ನು 2018 ರಲ್ಲಿ ಆರಂಭಿಸಿದರು. ಮಧ್ಯಪ್ರದೇಶದ ಜಬಲ್ಪುರದಿಂದ ಮೊದಲ ಬಾರಿಗೆ ಲೋಕಸಭೆಗೆ ಪ್ರವೇಶಿಸಿದ್ದ ಶರದ್‌ ಯಾದವ್‌ ಲೋಕಸಭೆ ಸದಸ್ಯರಾಗಿ ಏಳು ಬಾರಿ ರಾಜ್ಯಸಭೆಗೆ ನಾಲ್ಕು ಬಾರಿ ಸದಸ್ಯರಾಗಿ ಆಯ್ಕೆಯಾದರು. ವಿ.ಪಿ.ಸಿಂಗ್‌ ವಾಜಪೇಯಿಯವರ ಸರಕಾರದಲ್ಲಿ ಕೇಂದ್ರದ ಜವಳಿ ಮತ್ತು ಆಹಾರ ಸಂಸ್ಕರಣಾ, ಕಾರಮಿಕ ಇಲಾಖೆ, ನಾಗರಿಕ ವಿಮಾನಯಾನ, ಆಹಾರ ಸಚಿವರಾಗಿದ್ದರು.

ಇದನ್ನೂ ಓದಿ : ರಾಷ್ಟ್ರೀಯ ಯುವಜನೋತ್ಸವ : ಪ್ರಧಾನಿ ಮೋದಿ ಬರುವ ಹಾದಿಯಲ್ಲಿ ಅಪರಿಚಿತ ವಾಹನ ಪತ್ತೆ

Union Minister Sharath Yadav: Former Union Minister Sharad Yadav passed away

Comments are closed.