Post Office Schemes : ಪೋಸ್ಟ್‌ ಆಫೀಸ್‌ ನಲ್ಲಿ ಸಣ್ಣ ಉಳಿತಾಯ ಮಾಡಿ, ಹೆಚ್ಚಿನ ಲಾಭ ಪಡೆಯಿರಿ!!

ಕೆಲವು ದಿನಗಳಿಂದ ಷೇರು ಮಾರಕಟ್ಟೆ(Stock Market)ಯಲ್ಲಿ ಆಗುತ್ತಿರುವ ಏರಿಳಿತಗಳನ್ನು ನಾವು ನೋಡುತ್ತಿದ್ದೇವೆ. ಈ ಸಂದರ್ಭದಲ್ಲಿ ಬಹಳಷ್ಟು ಜನರು ಷೇರು ಪೇಟೆಯಲ್ಲಿ ಹಣ ಹೂಡಿಕೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಅವರಿಗಾಗಿ ಪೋಸ್ಟ್‌ ಆಫೀಸ್‌(Post Office) 3 ಉತ್ತಮ ಉಳಿತಾಯ ಯೋಜನೆಗಳನ್ನು ನೀಡುತ್ತಿದೆ(Post Office Schemes). ಪೋಸ್ಟ್‌ ಆಫೀಸಿನ ಸಣ್ಣ ಉಳಿತಾಯ ಯೋಜನೆಗಳು ದೀರ್ಘಾವಧಿಗೆ ಹೆಚ್ಚಿನ ರಿಟರ್ನ್ಸ್‌ ನೀಡುತ್ತದೆ.

ಪೋಸ್ಟ್‌ ಆಫೀಸ್‌ ತನ್ನ ಗ್ರಾಹಕರಿಗೆ ಪೋಸ್ಟ್‌ ಆಫೀಸ್‌ ರಿಕರಿಂಗ್‌ ಡಿಪೋಸಿಟ್‌ ಅಕೌಂಟ್‌(RD), ಪೋಸ್ಟ್‌ ಆಫೀಸ್‌ ಟೈಮ್‌ ಡಿಪೋಸಿಟ್‌ ಅಕೌಂಟ್‌ (POTD), ಮತ್ತು ಪೋಸ್ಟ್‌ ಆಫೀಸ್‌ ನ್ಯಾಷನಲ್‌ ಸೇವಿಂಗ್ಸ್‌ ಸರ್ಟಿಫಿಕೇಟ್‌(NSC) ಎಂಬ 3 ಉಳಿತಾಯ ಯೋಜನೆಗಳನ್ನು ಪರಿಚಯಿಸಿದೆ. ಟೈಮ್‌ ಡಿಪೋಸಿಟ್‌ ಯೋಜನೆಯನ್ನು ಹೊರತುಪಡಿಸಿ ಉಳಿದ ಯೋಜನೆಗಳು 5 ವರ್ಷಗಳ ಲಾಕ್‌–ಇನ್‌ ಅವಧಿ ಹೊಂದಿದೆ. ಪೋಸ್ಟ್‌ ಆಫೀಸಿನ ಉಳಿತಾಯ ಯೋಜನೆಗಳಲ್ಲಿ ಹಣ ತೊಡಗಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಪೋಸ್ಟ್‌ ಆಫೀಸಿನ ಈ ಯೋಜನೆಗಳಲ್ಲಿ ಹಣ ತೊಡಗಿಸುವುದರಿಂದ ಖಚಿತ ರಿಟರ್ನ್ಸ್‌ ಪಡೆಯಬಹುದು ಮತ್ತು ತೆರಿಗೆ ಕಡಿತಗಳಂತಹ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಬಹುದು.

  • ಪೋಸ್ಟ್‌ ಆಫೀಸ್‌ ರಿಕರಿಂಗ್‌ ಡಿಪೋಸಿಟ್‌ ಅಕೌಂಟ್‌(RD):
    ನಿಮ್ಮ ಹಣವನ್ನು ಸುರಕ್ಷಿತವಾಗಿ ಉಳಿತಾಯ ಮಾಡವ ಮತ್ತು ನಿರ್ದಿಷ್ಟ ಅವಧಿಯವರೆಗೆ ಠೇವಣಿ ರೂಪದಲ್ಲಿ ಇಡುವ ಆಲೋಚನೆಯಿದ್ದರೆ ಪೋಸ್ಟ್‌ ಆಫೀಸ್‌ ರಿಕರಿಂಗ್‌ ಡಿಪೋಸಿಟ್‌ ಅಕೌಂಟ್‌(RD) ಉತ್ತಮ ಯೋಜನೆಯಾಗಿದೆ. ಈ ಯೋಜನೆಯು 5 ವರ್ಷಗಳ ಲಾಕ್‌–ಇನ್‌ ಅವಧಿ ಹೊಂದಿದೆ. ಇದು RD ಮೇಲೆ ಶೇಕಡಾ 5.8 ಬಡ್ಡಿ ದರವನ್ನು ನೀಡುತ್ತದೆ ಮತ್ತು ಮೂರು ತಿಂಗಳಿಗೊಮ್ಮೆ ಬಡ್ಡಿಯನ್ನು ಸೇರಿಸಲಾಗುತ್ತದೆ. ಒಂದು ತಿಂಗಳಿಗೆ ಕನಿಷ್ಟ 100 ರೂಪಾಯಿಯಿಂದ RD ಯೋಜನೆಯನ್ನು ಪ್ರಾರಂಭಿಸಿಬಹುದಾಗಿದೆ. ಅಥವಾ ಯಾವುದೇ ಮೊತ್ತವನ್ನು 10 ರಿಂದ ಗುಣಿಸಿದಾಗ ಬರುವ ಮೊತ್ತಗಳಲ್ಲಿ ಹೂಡಿಕೆ ಪ್ರಾರಂಭಿಸಬಹುದಾಗಿದೆ. ಈ ಯೋಜನೆಯಲ್ಲಿ ಯಾವುದೇ ಗರಿಷ್ಠ ಮಿತಿಯಿರುವುದಿಲ್ಲ.
  • ಪೋಸ್ಟ್‌ ಆಫೀಸ್‌ ನ್ಯಾಷನಲ್‌ ಸೇವಿಂಗ್ಸ್‌ ಸರ್ಟಿಫಿಕೇಟ್‌ (NSC):
    5 ವರ್ಷಗಳ ಲಾಕ್‌–ಇನ್‌ ಅವಧಿಯ NSC ಯೋಜನೆ ಪೋಸ್ಟ್‌ ಆಫೀಸ್‌ನಲ್ಲಿದೆ. ಇದು 5 ವರ್ಷಗಳ ಅವಧಿಯಲ್ಲಿ ಶೇಕಡಾ 6.8 ರವರೆಗಿನ ಖಾತರಿ ಬಡ್ಡಿದರವನ್ನು ನೀಡುತ್ತದೆ. ಈ ಯೋಜನೆಯಲ್ಲಿ ಕನಿಷ್ಠ 1000 ರೂಪಾಯಿಗಳ ಹೂಡಿಕೆ ಮಾಡಬೇಕಾಗಿದೆ. ಇಲ್ಲವೇ 100 ರೂಪಾಯಿಗಳಿಂದ ಗುಣಿಸಿದಾಗ ಬರುವ ಮೊತ್ತಗಳಿಂದಲೂ ಪ್ರಾರಂಭಿಸಬಹುದಾಗಿದೆ. ಇದರಲ್ಲಿ ಗರಿಷ್ಠ ಮಿತಿಯಿರುವುದಿಲ್ಲ. 5 ವರ್ಷಗಳ ಲಾಕ್‌–ಇನ್‌ ಅವಧಿಯ ನಂತರ ಮಾತ್ರ ನೀವು ಹಣವನ್ನು ಮರಳಿಪಡೆಯಬಹುದಾಗಿದೆ(Withdraw). ಆದಾರೂ ಕೆಲವು ಷರತ್ತುಗಳ ಅಡಿಯಲ್ಲಿ ನಿಮ್ಮ ಹೂಡಿಕೆಯ ಹಣವನ್ನು ಮ್ಯಾಚುರ್‌ ಆಗುವ ಮೊದಲೇ ಹಿಂಪಡೆಯಬಹುದಾಗಿದೆ. ಈ ಯೋಜನೆ ಅಡಿಯಲ್ಲಿ ಇಡಲಾದ ಠೇವಣಿಗಳು ಟ್ಯಾಕ್ಸ್‌ ಬೆನಿಫಿಟ್‌ ಅನ್ನು ಹೊಂದಿದೆ.
  • ಪೋಸ್ಟ್‌ ಆಫೀಸ್‌ ಟೈಮ್‌ ಡಿಪೋಸಿಟ್‌ ಅಕೌಂಟ್‌ (POTD):
    ಈ ಯೋಜನೆಯು ಪೋಸ್ಟ್‌ ಆಫೀಸ್‌ನ ಫಿಕ್ಸ್ಡ್‌ ಡಿಪೋಸಿಟ್‌ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಒಂದು, ಎರಡು, ಮೂರು ಮತ್ತು ಐದು ವರ್ಷಗಳ ಅವಧಿಗೆ ಸ್ಥಿರ ಠೇವಣಿ (FD)ಯಾಗಿ ಹಣವನ್ನು ಹೂಡಿಕೆ ಮಾಡಬಹುದಾಗಿದೆ. ಶೇಕಡಾ 5.5 ಬಡ್ಡಿ ದರದಲ್ಲಿ ಒಂದು, ಎರಡು ಮತ್ತು ಮೂರು ವರ್ಷಗಳ ಅವಧಿಗೆ FD ಮಾಡಬಹುದಾಗಿದೆ. ಉತ್ತಮ ರಿಟರ್ನ್ಸ್‌ ಗಾಗಿ 5 ವರ್ಷಗಳ FD ಮಾಡಬಹುದಾಗಿದೆ. ಅದಕ್ಕೆ ಗರಿಷ್ಠ ಶೇಕಡಾ 6.7 ಬಡ್ಡಿದರ ಪಡೆಯಬಹುದಾಗಿದೆ. ಈ FDಗಳೂ ಸಹ ಟ್ಯಾಕ್ಸ್‌ ಬೆನಿಫಿಟ್‌ ಅನ್ನು ಹೊಂದಿದೆ. ಕನಿಷ್ಟ 1000 ರೂಪಾಯಿಗಳಿಂದ ಪ್ರಾರಂಭವಾಗುವ FD ಗೆ ಯಾವುದೇ ಗರಿಷ್ಠ ಮಿತಿಗಳಿರುವುದಿಲ್ಲ.

ಇದನ್ನೂ ಓದಿ : FD on Google Pay: ಗೂಗಲ್‌ ಪೇಯಲ್ಲೇ ಎಫ್‌ಡಿ ಅಕೌಂಟ್ ತೆರೆಯಬಹುದು!

ಇದನ್ನೂ ಓದಿ : Senior Citizens : ಹಿರಿಯ ನಾಗರಿಕರಿಗೆ FDಗಳ ಮೇಲೆ ಹೆಚ್ಚಿನ ಬಡ್ಡಿ!!

(Best 3 Post Office Schemes with 5 years lock-in period)

Comments are closed.