appointment of ten month old girl : 10 ತಿಂಗಳ ಕಂದಮ್ಮನನ್ನು ಕೆಲಸಕ್ಕೆ ಸೇರಿಸಿಕೊಂಡ ಭಾರತೀಯ ರೈಲ್ವೆ ಇಲಾಖೆ

ಛತ್ತೀಸಗಢ : appointment of ten month old girl : ಸರ್ಕಾರಿ ಕೆಲಸದಲ್ಲಿ ಇರುವಾಗಲೇ ಮೃತರಾದರೆ ಅಂತಹ ವ್ಯಕ್ತಿಗಳ ಕುಟುಂಬಕ್ಕೆ ಅನುಂಕಪದ ಆಧಾರದಲ್ಲಿ ಕೆಲಸ ಸಿಗುತ್ತದೆ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಮೃತಪಟ್ಟ ವ್ಯಕ್ತಿಯ ಪತ್ನಿ, ಪತಿ, ಮಕ್ಕಳು, ಸಹೋದರರು ಹೀಗೆ ಯಾರೂ ಬೇಕಿದ್ದರೂ ಈ ಕೆಲಸವನ್ನು ಪಡೆಯಬಹುದು. ಛತ್ತೀಸಗಢದ ಆಗ್ನೇಯ ಕೇಂದ್ರ ರೈಲ್ವೆಯ ರಾಯಪುರ ವಿಭಾಗದಲ್ಲಿ ಇಂತಹದ್ದೊಂದು ನೇಮಕಾತಿ ನಡೆದಿದೆ. ವಿಶೇಷ ಅಂದರೆ ಅನುಕಂಪದ ಆಧಾರದಲ್ಲಿ ಉದ್ಯೋಗವನ್ನು ಪಡೆದ ಅಭ್ಯರ್ಥಿಗೆ ಕೇವಲ 10 ತಿಂಗಳು. ಹೌದು..! ರೈಲ್ವೆ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ 10 ತಿಂಗಳ ಹೆಣ್ಣು ಮಗುವಿಗೆ ಅನುಕಂಪದ ಆಧಾರದಲ್ಲಿ ಕೆಲಸವನ್ನು ನೀಡಿದ ಘಟನೆಯೊಂದು ಜರುಗಿದೆ. ಈಕೆಗೆ 18 ವರ್ಷ ತುಂಬಿದ ಬಳಿಕ ಈಕೆ ರೈಲ್ವೆ ಇಲಾಖೆಯಲ್ಲಿ ಕೆಲಸಕ್ಕೆ ಹಾಜರಾಗಳಿದ್ದಾರೆ.


ಹೆಣ್ಣು ಕಂದಮ್ಮ ರಾಧಿಕಾಳ ತಂದೆ ರಾಜೇಂದ್ರ ಕುಮಾರ್​ ಯಾದವ್​ ಎಂಬವರು ಭಿಲಾಯ್​ ಪಿಸಿ ಯಾರ್ಡ್​ನಲ್ಲಿ ಸಹಾಯಕ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಮಂದಿರ್​ ಹಸೌದ್​ನ ಚಾರೋಡದ ರೈಲ್ವೆ ಮನೆಯಲ್ಲಿಯೇ ರಾಜೇಂದ್ರ ಕುಮಾರ್​ ಯಾದವ್​ ಸಂಸಾರ ನಡೆಸುತ್ತಿದ್ದರು. ಆದರೆ ದುರಾದೃಷ್ಟವಶಾತ್​ ಜೂನ್​ 10ರಂದು ರಾಜೇಂದ್ರ ಕುಮಾರ್​ ತಮ್ಮ ಪತ್ನಿ ಮಂಜು ಯಾದವ್​ ಹಾಗೂ ಮಗಳು ರಾಧಿಕಾ ಜೊತೆಯಲ್ಲಿ ಮಂದಿರ ಹಸೌದ್​ನಿಂದ ಭಿಲಾಯ್​ಗೆ ತೆರಳುತ್ತಿದ್ದ ಸಂದರ್ಭದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಅಪಘಾತದಲ್ಲಿ ಮಂಜು ಯಾದವ್​ ಕೂಡ ಸಾವನ್ನಪ್ಪಿದ್ದರು. ಪವಾಡ ಸದೃಶ ರೀತಿಯಲ್ಲಿ ಮಗಳು ರಾಧಿಕಾ ಮಾತ್ರ ಬದುಕುಳಿದಿದ್ದಳು. ಪೋಷಕರ ಸಾವಿನ ಬಳಿಕ ರಾಧಿಕಾ ತನ್ನ ಅಜ್ಜಿ ಮನೆಯಲ್ಲಿ ಅಜ್ಜಿಯ ಆರೈಕೆಯಲ್ಲಿ ಬೆಳೆಯುತ್ತಿದ್ದಾಳೆ ಎನ್ನಲಾಗಿದೆ.


ಛತ್ತೀಸಗಢದ ಆಗ್ನೇಯ ಕೇಂದ್ರ ರೈಲ್ವೆಯ ರಾಯಪುರ ವಿಭಾಗದಲ್ಲಿ ಇಂದು ಮಗುವಿನ ದಾಖಲಾತಿ ಪ್ರಕ್ರಿಯೆಯ್ನು ರೈಲ್ವೆ ಇಲಾಖೆ ಸಿಬ್ಬಂದಿ ನೆರವೇರಿಸಿದ್ದಾರೆ. ಹಿರಿಯ ವಿಭಾಗೀಯ ಸಿಬ್ಬಂದಿ ಉದಯ್​ ಕುಮಾರ್ ಭಾರ್ತಿ ಮಗು ರಾಧಿಕಾಳ ಹೆಬ್ಬೆಟ್ಟನ್ನು ಪಡೆದು ದಾಖಲಾತಿ ಮಾಡಿಕೊಂಡಿದ್ದಾರೆ. ರಾಧಿಕಾ ತನಗೆ 18 ವರ್ಷ ತುಂಬಿದ ಬಳಿಕ ಈ ಕೆಲಸಕ್ಕೆ ಹಾಜರಾಗಳಿದ್ದಾಳೆ.

ಇದನ್ನು ಓದಿ : Covid-19 precautionary dose : ಕೋವಿಡ್​ 19 ಬೂಸ್ಟರ್​ ಡೋಸ್​ ನಡುವಿನ ಅಂತರ ಇಳಿಕೆ ಮಾಡಿದ ಕೇಂದ್ರ

ಇದನ್ನೂ ಓದಿ : section 144 imposed : ಕೆರೂರಿನಲ್ಲಿ ಅನ್ಯಕೋಮಿನ ಸಂಘರ್ಷದ ವೇಳೆ ಚಾಕು ಇರಿತ : ನಿಷೇಧಾಜ್ಞೆ ಜಾರಿ

registration for compassionate appointment of ten month old girl in south east central railway raipur

Comments are closed.