Best Tax Saving Schemes : ಖಚಿತ ರಿಟರ್ನ್ಸ್‌ ನೀಡುವ ಸರ್ಕಾರದ ಉತ್ತಮ ತೆರಿಗೆ ಉಳಿತಾಯ ಯೋಜನೆಗಳಿವು!!

ಕಷ್ಟಪಟ್ಟು ದುಡಿದು ಗಳಿಸಿದ ಹಣವನ್ನು ದೀರ್ಘಾವಧಿ ಅಥವಾ ಅಲ್ಪಾವಧಿಯಲ್ಲಿ ಉತ್ತಮ ಆದಾಯಕ್ಕಾಗಿ ವಿವಿಧ ಉಳಿತಾಯ ಯೋಜನೆಗಳಲ್ಲಿ ತೊಡಗಿಸುತ್ತಾರೆ. ಆದರೆ ಹೂಡಿಕೆ ಮಾಡುವ ಮೊದಲು ಲಾಭದ ಮೇಲೆ ಪರಿಣಾಮ ಬೀರುವ ತೆರಿಗೆ ಉಳಿತಾಯದ (Best Tax Saving Schemes ) ಬಗ್ಗೆಯೂ ನೆನಪಿಡಬೇಕು. ಮ್ಯೂಚುವಲ್‌ ಫಂಡ್‌ ಅಥವಾ ELSSಗಳು ಉತ್ತಮ ಆಯ್ಕೆಯೇನೋ ಹೌದು, ಆದರೆ ಅವುಗಳು ಖಚಿತ ಆದಾಯವನ್ನು ನೀಡುವುದಿಲ್ಲ. ಆದ್ದರಿಂದ ತೆರಿಗೆ ಉಳಿಸಿ, ಖಚಿತ ಆದಾಯ ತರುವ ಸರ್ಕಾರದ ಯೋಜನೆಗಳನ್ನು ಇಲ್ಲಿ ಹೇಳಿದ್ದೇವೆ. 80C, 80D, ಮುಂತಾದ ಆದಾಯ ತೆರಿಗೆ ಕಾಯಿದೆ ಮತ್ತು 1961 ರ ವಿಭಾಗಗಳ ಮೂಲಕ ತೆರಿಗೆ ಉಳಿತಾಯದ ಪ್ರಯೋಜನಗಳನ್ನು ನೀವು ಪಡೆಯಬಹುದು.

ಎನ್‌ಪಿಎಸ್‌ ಅಥವಾ ರಾಷ್ಟ್ರೀಯ ಪಿಂಚಣಿ ಯೋಜನೆ :
ಇದು ನಿವೃತ್ತಿಯ ಉಳಿತಾಯದ ಯೋಜನೆಯಾಗಿದೆ. ನಿಮ್ಮ ಕೆಲಸದ ಅವಧಿಯಲ್ಲಿ ವ್ಯವಸ್ಥಿತ ಉಳಿತಾಯದ ಯೋಜನೆಯಾಗಿದೆ. ಎನ್‌ಪಿಎಸ್‌ ಅಡಿಯಲ್ಲಿ ಮಾಡಿದ ವೈಯಕ್ತಿಕ ಉಳಿತಾಯವನ್ನು ಪಿಎಫ್‌ಆರ್‌ಡಿಎ ಯಲ್ಲಿರುವ ವಿವಿಧ ಪೋರ್ಟ್‌ಪೋಲಿಯೋಗಳ್ಲಿ ಹೂಡಿಕೆ ಮಾಡುವ ಪಿಂಚಣಿ ನಿಧಿಗೆ ಸಂಗ್ರವಾಗುತ್ತದೆ. ಇದರಲ್ಲಿ ಹೂಡಿಕೆ ಮಾಡಿದ ಮೊತ್ತವು ವರ್ಷಗಳಲ್ಲಿ ಬೆಳೆಯುತ್ತದೆ ಮತ್ತು ಅಲ್ಲಿಯೇ ಸಂಗ್ರಹಗೊಳ್ಳುತ್ತದೆ. ನೀವು ಎನ್‌ಪಿಎಸ್‌ ನಿಂದ ಹೊರಬಂದಾಗ ಗಳಿಸಿದ ಆದಾಯವನ್ನು ಪಿಂಚಣಿಯಾಗಿ ಪಡೆಯಬಹುದು. ಈ ಯೋಜನೆಯನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ನಿರ್ವಹಿಸುತ್ತದೆ. ಇದು ಸಹ 80 CCD (1) ಮತ್ತು 80CCD (1B) ಅಡಿಯಲ್ಲಿ ನಿಮಗೆ ತೆರಿಗೆ ಉಳಿತಾಯದ ಪ್ರಯೋಜನಗಳನ್ನು ನೀಡುತ್ತದೆ.

ಪಿಪಿಎಫ್‌ ಅಥವಾ ಸಾರ್ವಜನಿಕ ಭವಿಷ್ಯ ನಿಧಿ:
ಯಾವುದೇ ಭಾರತೀಯ ಪ್ರಜೆ ತೆರೆಯಬಹುದಾದ ಖಾತೆ ಇದು. ಪಿಪಿಎಫ್‌ ನಲ್ಲಿ ವಾರ್ಷಿಕ ಬಡ್ಡಿ ದರವು 7.1% ಆಗಿದೆ. ಇದರ ಬಡ್ಡಿದರವನ್ನು ಸರ್ಕಾರವೇ ನಿರ್ಧರಿಸುತ್ತದೆ. ಪಿಪಿಎಫ್‌ ಖಾತೆಯ ಕನಿಷ್ಠ ಹೂಡಿಕೆ ಮೊತ್ತವು 500 ರೂ. ಮತ್ತು ಗರಿಷ್ಠ ಹೂಡಿಕೆ ಮೊತ್ತವು ಒಂದು ವಾರ್ಷದಲ್ಲಿ 1,50,000 ಆಗಿದೆ. ಪಿಪಿಎಫ್‌ ಖಾತೆಯನ್ನು ಯಾವುದೇ ಪೋಸ್ಟ್‌ ಆಫೀಸ್‌ ಅಥವಾ ಬ್ಯಾಂಕ್‌ ನಲ್ಲಿ ತೆರೆಯಬಹುದಾಗಿದೆ. ಇದರಲ್ಲಿ ತೊಡಗಿಸಿದ ಠೇವಣಿ ಮೊತ್ತವು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 80C ಅಡಿಯಲ್ಲಿ ತೆರಿಗೆ ವಿನಾಯತಿ ಪಡೆಯುತ್ತದೆ.

ಎಸ್‌ಎಸ್‌ಎಸ್‌ ಅಥವಾ ಸುಕನ್ಯಾ ಸಮೃದ್ಧಿ ಯೋಜನೆ :
ಈ ಯೋಜನೆ ಅಡಿಯಲ್ಲಿ ತೊಡಗಿಸುವ ಹಣಕ್ಕೆ ವಾರ್ಷಿಕ ಬಡ್ಡಿ ದರ 7.6% ಆಗಿದೆ. ಇದು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಗುವಿನ ಹೆಸರಿನಲ್ಲಿ ಪಾಲಕರು ತೆರೆಯಬಹುದಾದ ವಿಶೇಷ ಯೋಜನೆಯಾಗಿದೆ. ಪೋಸ್ಟ್ ಆಫೀಸ್ ಅಥವಾ ಯಾವುದೇ ಬ್ಯಾಂಕ್‌ನಲ್ಲಿ ಭಾರತದ ಪ್ರಜೆ ಕೇವಲ ಒಂದು ಖಾತೆಯನ್ನು ಮಾತ್ರ ತೆರೆಯಬಹುದಾಗಿದೆ. ಒಂದು ಕುಟುಂಬದಲ್ಲಿ ಗರಿಷ್ಠ 2 ಹೆಣ್ಣು ಮಕ್ಕಳು ಮಾತ್ರ ಖಾತೆ ತೆರೆಯಬಹುದು. ಆದರೆ, ಅವಳಿ/ತ್ರಿವಳಿ ಹೆಣ್ಣುಮಕ್ಕಳ ಜನನದ ಸಂದರ್ಭದಲ್ಲಿ, 2 ಕ್ಕಿಂತ ಹೆಚ್ಚು ಖಾತೆಗಳನ್ನು ತೆರೆಯಬಹುದಾಗಿದೆ. ಒಂದು ಆರ್ಥಿಕ ವರ್ಷಕ್ಕೆ ಕನಿಷ್ಠ ಹೂಡಿಕೆಯ ಮೊತ್ತವು ರೂ. 250 ಮತ್ತು ಗರಿಷ್ಠ ಹೂಡಿಕೆಯ ಮೊತ್ತವು ರೂ. 1,50,000. ಈ ಯೋಜನೆಯಲ್ಲಿಯ ಠೇವಣಿಗಳು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಕಡಿತಕ್ಕೆ ಅರ್ಹತೆ ಪಡೆಯುತ್ತವೆ.

ಎಸ್‌ಸಿಎಸ್‌ಎಸ್‌ ಅಥವಾ ಹಿರಿಯ ನಾಗರಿಕರ ಉಳಿತಾಯ ಯೋಜನೆ :
ಈ ಯೋಜನೆಯು ಹಿರಿಯ ನಾಗರಿಕರಿಗೆ ಅತ್ಯಂತ ಲಾಭದಾಯಕ ಹೂಡಿಕೆಯಾಗಿದೆ. ಈ ಯೋಜನೆಯು ವಾರ್ಷಿಕ 7.4% ಬಡ್ಡಿದರವನ್ನು ನೀಡುತ್ತದೆ. 15 ಲಕ್ಷಕ್ಕಿಂತ ಮೀರದ ಗರಿಷ್ಠ 1000 ರೂ.ಗಳ ಹೂಡಿಕೆಯಾಗಿದೆ. 60 ವರ್ಷ ಮೇಲ್ಪಟ್ಟ ವ್ಯಕ್ತಿಯು ಬ್ಯಾಂಕ್‌ ಅಥವಾ ಅಂಚೆ ಕಛೇರಿಯಲ್ಲಿ ಎಸ್‌ಸಿಎಸ್‌ಎಸ್‌ ಖಾತೆಯನ್ನು ತೆರೆಯಬಹುದಾಗಿದೆ. ಈ ಖಾತೆಯ ಮುಕ್ತಾಯ ಅವಧಿಯು 5 ವರ್ಷಗಳಾಗಿದ್ದು, ಖಾತೆಯನ್ನು 5 ವರ್ಷಗಳ ನಂತರ ಮುಚ್ಚಬಹುದಾಗಿದೆ.

ಇದನ್ನೂ ಓದಿ : ITR ಫೈಲಿಂಗ್ ಗೆ ಜುಲೈ 31 ಕೊನೆಯ ದಿನ : ವಿಸ್ತರಣೆಯಾಗುತ್ತಾ ಗಡುವು, ಕೇಂದ್ರ ಸರಕಾರ ಹೇಳಿದ್ದೇನು ?

ಇದನ್ನೂ ಓದಿ : Post Office Schemes : ಪೋಸ್ಟ್‌ ಆಫೀಸ್‌ ನಲ್ಲಿ ಸಣ್ಣ ಉಳಿತಾಯ ಮಾಡಿ, ಹೆಚ್ಚಿನ ಲಾಭ ಪಡೆಯಿರಿ!!

(Best Tax Saving Schemes by the Government)

Comments are closed.