Nitin Patel: ಭೂಪೇಂದ್ರ ಪಟೇಲ್ ಸಂಪುಟದಲ್ಲಿ ಅಚ್ಚರಿ ಬೆಳವಣಿಗೆ: ಸಚಿವ ಸ್ಥಾನದಿಂದ ವಂಚಿತರಾದ ನಿತಿನ್ ಪಟೇಲ್

ನವದೆಹಲಿ: ಅತ್ಯಂತ ಅಚ್ಚರಿಯ ಬೆಳವಣಿಗೆಯಲ್ಲಿ  ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕ  ನಿತಿನ್ ಪಟೇಲ್ ಗುಜರಾತ್ ನ ನೂತನ ಸಚಿವ ಸಂಪುಟದಲ್ಲಿ ಸ್ಥಾನಪಡೆಯುವಲ್ಲಿ ವಿಫಲರಾಗಿದ್ದಾರೆ. ವಿಜಯ್ ರೂಪಾನಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ನಿತಿನ್ ಪಟೇಲ್ ಸಚಿವ ಸಂಪುಟದಿಂದ ಹೊರಗುಳಿದಿರುವುದು ಚರ್ಚೆಗೆ ಗ್ರಾಸವಾಗಿದೆ.

ಪ್ರಬಲವಾದ ಪಾಟೀದಾರ ಸಮುದಾಯದ ಪ್ರಭಾವಿ ನಾಯಕ ನಿತಿನ್ ಪಟೇಲ್, ಹೊಸದಾಗಿ ರಚನೆಯಾಗಿರುವ ಭೂಪೇಂದ್ರ  ಪಟೇಲ್ ಸಂಪುಟದಲ್ಲಿ ಸೇರ್ಪಡೆಗೊಂಡಿಲ್ಲ. ಗುಜರಾತ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಿದ್ದ ನಿತಿನ್ ಪಟೇಲ್ ರನ್ನು ಸಂಪುಟದಿಂದ ಕೈಬಿಟ್ಟಿರುವ ಬಿಜೆಪಿ ಹೈಕಮಾಂಡ್ ಲೆಕ್ಕಾಚಾರ ಅಚ್ಚರಿಗೆ ಕಾರಣವಾಗಿದೆ.

ಬಿಜೆಪಿ 10 ಹಿರಿಯ ಶಾಸಕರೊಂದಿಗೆ ಭೂಪೇಂದ್ರ್ ಪಟೇಲ್ ಒಟ್ಟು 24 ಸಚಿವರ ಸಂಪುಟ ರಚಿಸಿದ್ದು, ಈ ಸಂಪುಟದಲ್ಲಿ ನಿತಿನ್ ಪಟೇಲ್ ಹಾಗೂ ಇನ್ನೊರ್ವ ಹಿರಿಯ ಬಿಜೆಪಿ ನಾಯಕ ಹಾಗೂ ಶಾಸಕ ಭೂಪೇಂದ್ರ್ ಸಿಂಗ್ ಚೌದಾಸಾಮ್ ಗೆ ಮಂತ್ರಿ ಸ್ಥಾನ ನೀಡಲಾಗಿಲ್ಲ.

ಭೂಪೇಂದ್ರ ಸಿಂಗ್ ಕೂಡ ವಿಜಯ್ ರೂಪಾನಿ ಸರ್ಕಾರದಲ್ಲಿ ಶಿಕ್ಷಣ ಮಂತ್ರಿಯಾಗಿ ಕೆಲಸ ನಿರ್ವಹಿಸಿದ್ದರು. ಆದರೆ ಸಂಪುಟ ರಚನೆಯ ವೇಳೆ ಈ ಇಬ್ಬರೂ ನಾಯಕರನ್ನು ಕೈಬಿಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ.

ಇತ್ತೀಚಿಗೆ ತಮ್ಮ ಸ್ವಕ್ಷೇತ್ರ ಮೆಹಸಾನಾಗೆ ಭೇಟಿ ನೀಡಿದ್ದ ನಿತಿನ್ ಪಟೇಲ್  ನಾನು ಇಲ್ಲಿಗೆ ಬರುವಾಗ  ಸುದ್ದಿವಾಹಿನಿಗಳಲ್ಲಿ ಹಲವಾರು ವಿಚಾರ ಗಮನಿಸಿದೆ. ಆದರೆ ನನ್ನನ್ನು ನನ್ನ ಕ್ಷೇತ್ರದ ಜನರು ಪ್ರೀತಿಸಿ,ಆರಾಧಿಸಿ ಮತ ನೀಡುವರೆಗೂ ಯಾರು ತೆಗೆದು ಹಾಕಲು ಸಾಧ್ಯವಿಲ್ಲ ಎಂದಿದ್ದರು. ಆದರೆ ಈ ಹೇಳಿಕೆಯ ಕೆಲವೇ ದಿನದಲ್ಲಿ ಅವರು ಸಂಪುಟದಿಂದ ಹೊರಬಿದ್ದಿದ್ದಾರೆ.

Nitin patel dropped from the Bhupendra Patel cabinet.

Comments are closed.