ಕ್ರೆಡಿಟ್ ಕಾರ್ಡ್ ಮೂಲಕ ಬಾಡಿಗೆ ಪಾವತಿಸಬಹುದೇ ? ಆದರೆ ಈ ತಪ್ಪುಗಳನ್ನು ಮಾತ್ರ ಮಾಡಲೇ ಬೇಡಿ

ಡೆಬಿಟ್‌ ಕಾರ್ಡ್‌ (Debit Card) ಸಾಮಾನ್ಯವಾಗಿ ಎಲ್ಲರೂ ಬಳಕೆ ಮಾಡುತ್ತಾರೆ. ಆದರೆ ಕ್ರೆಡಿಟ್‌ ಕಾರ್ಡ್‌ (Credit Card) ಬಳಕೆ ಮಾಡುವವರು ತೀರಾ ಕಡಿಮೆ. ಡೆಬಿಟ್‌ ಕಾರ್ಡ್‌ಗೆ ಹೋಲಿಕೆ ಮಾಡಿದ್ರೆ ಕ್ರೆಡಿಟ್‌ ಕಾರ್ಡ್‌ ಹೆಚ್ಚು ಅನುಕೂಲಕರ. ಆದ್ರೆ ಅಷ್ಟೇ ಅಪಾಯಕಾರಿಯೂ ಹೌದು. ಇದೀಗ ಕ್ರೆಡಿಟ್‌ ಕಾರ್ಡ್‌ ಬಳಸಿ ಮನೆ, ಕಟ್ಟಡದ ಬಾಡಿಗೆ ( Rent On Credit Card) ಪಾವತಿಸ ಬಹುದು.

ಡೆಬಿಟ್‌ ಕಾರ್ಡ್‌ (Debit Card) ಸಾಮಾನ್ಯವಾಗಿ ಎಲ್ಲರೂ ಬಳಕೆ ಮಾಡುತ್ತಾರೆ. ಆದರೆ ಕ್ರೆಡಿಟ್‌ ಕಾರ್ಡ್‌ (Credit Card) ಬಳಕೆ ಮಾಡುವವರು ತೀರಾ ಕಡಿಮೆ. ಡೆಬಿಟ್‌ ಕಾರ್ಡ್‌ಗೆ ಹೋಲಿಕೆ ಮಾಡಿದ್ರೆ ಕ್ರೆಡಿಟ್‌ ಕಾರ್ಡ್‌ ಹೆಚ್ಚು ಅನುಕೂಲಕರ. ಆದ್ರೆ ಅಷ್ಟೇ ಅಪಾಯಕಾರಿಯೂ ಹೌದು. ಇದೀಗ ಕ್ರೆಡಿಟ್‌ ಕಾರ್ಡ್‌ ಬಳಸಿ ಮನೆ, ಕಟ್ಟಡದ ಬಾಡಿಗೆ ( Rent On Credit Card) ಪಾವತಿಸ ಬಹುದು. ಆದ್ರೆ ಈ ನಿಯಮಗಳ ವಿಚಾರದಲ್ಲಿ ತಪ್ಪು ಮಾಡಲೇಬೇಡಿ.

ಕ್ರೆಡಿಟ್‌ ಕಾರ್ಡ್‌ ಅಂದ್ರೆ ಸಾಕು ಬಹುತೇಕರು ಭಯ ಪಡುತ್ತಾರೆ. ಆದ್ರೆ ಕ್ರೆಡಿಟ್‌ ಕಾರ್ಡ್‌ ಲಾಭ ಪಡೆಯೋದಕ್ಕೆ ಗೊತ್ತಿರುವವರು ಒಂದಲ್ಲ, ಎರಡು ಮೂರು ಕ್ರೆಡಿಟ್‌ ಕಾರ್ಡ್‌ ಬಳಕೆ ಮಾಡುತ್ತಾರೆ. ನೋಡೋದಕ್ಕೆ ತೀರಾ ದುಬಾರಿ ಎನಿಸಿದ್ರೂ ಕೂಡ ಕ್ರೆಡಿಟ್‌ ಕಾರ್ಡ್‌ ಸರಿಯಾಗಿ ಬಳಕೆ ಮಾಡಿದ್ರೆ ಹೆಚ್ಚು ಹೆಚ್ಚು ಲಾಭ ಪಡೆಯಬಹುದು.

ಸದ್ಯ ಎಲ್ಲಾ ಬ್ಯಾಂಕುಗಳು ಕೂಡ ಗ್ರಾಹಕರಿಗೆ ಕ್ರೆಡಿಟ್‌ ಕಾರ್ಡ್‌ ನೀಡುತ್ತವೆ. 50 ಸಾವಿರ ಕ್ರೆಡಿಟ್‌ ಲಿಮಿಟ್‌ನಿಂದ ಹಿಡಿದು 5 ಲಕ್ಷದ ವರೆಗೂ ಲಿಮಿಟ್‌ ನೀಡುತ್ತಿವೆ. ಆದರೆ ಸಕಾಲದಲ್ಲಿ ಕ್ರೆಡಿಟ್‌ ಕಾರ್ಡ್‌ ಪಾವತಿ ಮಾಡಿದ್ರೆ ಕ್ರೆಡಿಟ್‌ ಸ್ಕೋರ್‌ (credit Score) ಜೊತೆಗೆ ಸಿಬಿಲ್‌ ಸ್ಕೋರ್‌ (Cibil Score)ಕೂಡ ಹೆಚ್ಚಳವಾಗುತ್ತದೆ.

Can i Pay Rent On Credit Card, But dont make these mistakes alone
Image Credit to Original Source

ಇದನ್ನೂ ಓದಿ : Income Tax Return File : ಆದಾಯ ತೆರಿಗೆ ಮರುಪಾವತಿ ಮೊತ್ತ ಇನ್ನೂ ಕ್ರೆಡಿಟ್‌ ಆಗಿಲ್ವಾ ? ಚಿಂತೆ ಬಿಡಿ, ಈ ಟಿಫ್ಸ್‌ ಫಾಲೋ ಮಾಡಿ

ಕ್ರೆಡಿಟ್‌ ಕಾರ್ಡ್‌ ಪಾವತಿಯ ವಿಚಾರದಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರಲೇ ಬೇಕು. ನಿಮಗೆ ಎಲ್ಲಾ ಅಮೌಂಟ್‌ ಪಾವತಿ ಮಾಡಲು ಸಾಧ್ಯವಾಗದೇ ಇದ್ರೆ ಮಿನಿಮಮ್‌ ಡ್ಯೂ ಆದ್ರೂ ಪಾವತಿಸಿದ್ರೆ ಪೆನಾಲ್ಟಿಯಿಂದ ಬಚಾವ್‌ ಆಗಬಹುದು. ಜೊತೆಗೆ ಸಿಬಿಲ್‌ ಸ್ಕೋರ್‌ ಮೇಲೆ ಯಾವುದೇ ಪರಿಣಾಮವೂ ಬಿರೋದಿಲ್ಲ.

ತೀರಾ ಎಮರ್ಜೆನ್ಸಿ ಸಂದರ್ಭಗಳಲ್ಲಿ ನಮ್ಮ ಸಹಕಾಯಕ್ಕೆ ಬರುವುದೇ ಇದೇ ಕ್ರೆಡಿಟ್‌ ಕಾರ್ಡ್.‌ ಸಾಲದಾತರ ಟಾರ್ಚರ್‌, ಮನೆಗೆ ಗೃಹೋಪಯೋಗಿ ಸೇರಿದಂತೆ ಎಲ್ಲಾ ವಸ್ತುಗಳ ಖರೀದಿ, ಪೆಟ್ರೋಲ್‌, ಡಿಸೇಲ್‌ ಹಾಕಿಸೋದಕ್ಕೂ ಕ್ರೆಡಿಟ್‌ ಕಾರ್ಡ್‌ ಸಹಕಾರಿ. ಶಾಪಿಂಗ್‌ ಸಂದರ್ಭದಲ್ಲಂತೂ ಹೆಚ್ಚು ಹೆಚ್ಚು ಆಫರ್‌ಗಳು ಧಕ್ಕುತ್ತವೆ.

ಇಷ್ಟೇ ಅಲ್ಲಾ ಇದೀಗ ಮನೆ ಬಾಡಿಗೆ ಪಾವತಿಗೂ ಕೂಡ ಕ್ರೆಡಿಟ್‌ ಕಾರ್ಡ್‌ ಬಳಕೆ ಮಾಡಬಹುದು. ಕ್ಯಾಶ್‌ ಮೂಲಕ ಬಾಡಿಗೆದಾರರ ಖಾತೆಗಳಿಗೆ ಹಣ ವರ್ಗಾವಣೆ ಮಾಡುವುದರಿಂದ ಹಲವು ಪ್ರಯೋಜನಗಳಿವೆ. ಈ ಪ್ರಯೋಜನಗಳನ್ನು ಕೇಳಿದ್ರೆ ನೀವು ನಿಜಕ್ಕೂ ಅಚ್ಚರಿ ಪಡ್ತೀರಿ.

ಕ್ರೆಡಿಟ್ ಕಾರ್ಡ್ ಬಳಸಿ ಬಾಡಿಗೆ ಪಾವತಿಸಿದ್ರೆ (Rent on Credit Card) ಲಾಭವೇನು ?

ಕ್ರೆಡಿಟ್‌ ಕಾರ್ಡ್ ಬಳಸಿ ಬಾಡಿಗೆ ಪಾವತಿಸುವುದು ಗ್ರಾಹಕರಿಗೆ ಪ್ರಯೋಜನಕಾರಿಯೇ ಎನ್ನುವುದುನ್ನು ಅರ್ಥ ಮಾಡಿಕೊಳ್ಳಬೇಕು. ಹಾಗಾದ್ರೆ ಕ್ರಿಡಿಟ್‌ ಕಾರ್ಡ್‌ ಮೂಲಕ ಬಾಡಿಗೆ ಪಾವತಿಸಿದ್ರೆ ಸಿಗುವ ಲಾಭಗಳೇನು ?

ಕ್ಯಾಶ್‌ಬ್ಯಾಕ್ ಕೊಡುಗೆಗಳು :
ಕ್ರೆಡಿಟ್ ಕಾರ್ಡ್‌ ಬಳಸಿ ಬಾಡಿಗೆ ಪಾವತಿಸಿದಾಗ, ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ನೀವು ಪ್ರತಿ ಬಾರಿ ಬಳಸಿದಾಗ ಹಲವಾರು ಬ್ಯಾಂಕ್‌ಗಳು ಮತ್ತು ಇಕಾಮರ್ಸ್ ಪೋರ್ಟಲ್‌ಗಳು ನಿಮಗೆ ಉತ್ತಮ ಕ್ಯಾಶ್‌ಬ್ಯಾಕ್ ಗಳನ್ನು ನೀಡುತ್ತವೆ. ಜೊತೆಗೆ ನೀವು ಗಳಿಸುವ ಕ್ಯಾಶ್‌ಬ್ಯಾಕ್ ನಿಮ್ಮ ಖಾತೆಗೆ ಜಮೆ ಆಗಲಿದೆ.

ರಿವಾರ್ಡ್ ಪಾಯಿಂಟ್‌ ಗಳಿಸಿ:
ನಗದು ವಹಿವಾಟು ಮಾಡಿದ್ರೆ ನಿಮಗೆ ಯಾವುದೇ ರೀತಿಯಲ್ಲಿಯೂ ಲಾಭ ಸಿಗೋದಿಲ್ಲ. ಬದಲಾಗಿ ಕ್ರೆಡಿಟ್‌ ಕಾರ್ಡ್‌ಗಳ ಮೂಲಕ ಬಾಡಿಗೆ ಪಾವತಿ ಮಾಡುವುದರಿಂದ ನಿಮ್ಮ ರಿವಾರ್ಡ್‌ ಪಾಯಿಂಟ್ಸ್‌ ಪಡೆಯಬಹುದಾಗಿದೆ. ಅಲ್ಲದೇ ಪ್ರಖ್ಯಾತ ಬ್ರ್ಯಾಂಡ್‌ಗಳ ಖರೀದಿ, ಬುಕ್ಕಿಂಗ್‌ ಆಪ್‌ಗಳ ಮೇಲೆ ರಿಯಾಯಿತಿಯನ್ನು ಪಡೆಯಲು ಸಾಧ್ಯವಾಗಲಿದೆ. ರಿಯಾಯಿತಿಗಳನ್ನು ಪಡೆಯಲು ರಿಡೀಮ್ ಮಾಡಬಹುದು.

Can i Pay Rent On Credit Card, But dont make these mistakes alone
Image Credit To original Source

ಉಚಿತ ಕ್ರೆಡಿಟ್ ಅವಧಿ:
ಕ್ರೆಡಿಟ್‌ ಕಾರ್ಡ್‌ ಬಳಸಿ ಬಾಡಿಗೆ ಪಾವತಿ ಮಾಡುವುದರಿಂದ ಬಹುಮುಖ್ಯವಾಗಿರುವ ಲಾಭ ಅಂದ್ರೆ ಕ್ರೆಡಿಟ್‌ ಅವಧಿ. ಬಾಡಿಗೆದಾರರಿಗೆ ಇಂದು ನೀವು ಬಾಡಿಗೆ ಹಣವನ್ನು ಕ್ರೆಡಿಟ್‌ ಕಾರ್ಡ್‌ ಮೂಲಕ ಪಾವತಿ ಮಾಡಿದ್ರೆ, ಆ ಹಣವನ್ನು ನೀವು ಕ್ರೆಡಿಟ್‌ ಕಾರ್ಡ್‌ ಕಂಪೆನಿಗಳಿಗೆ ಪಾವತಿ ಮಾಡಲು ನೀವು 45 ದಿನಗಳ ಅವಧಿಯನ್ನು ಪಡೆಯಲಿದ್ದೀರಿ. ಆದರೆ ಈ 45 ದಿನಗಳ ಅವಧಿಯಲ್ಲಿ ಕ್ರೆಡಿಟ್‌ ಕಾರ್ಡ್‌ ಬಿಲ್‌ ಪಾವತಿ ಮಾಡಿದ್ರೆ ನೀವು ಯಾವುದೇ ಬಡ್ಡಿಯನ್ನು ಪಾವತಿ ಮಾಡಬೇಕಾಗಿಲ್ಲ.

ನಿಗದಿತ ಸಮಯಕ್ಕೆ ಬಾಡಿಗೆ ಪಾವತಿ:
ಸಾಮಾನ್ಯವಾಗಿ ದುಡಿಯುವ ವರ್ಗಕ್ಕೆ ಕ್ರೆಡಿಟ್‌ ಕಾರ್ಡ್‌ ವರದಾನವಾಗಿ ಪರಿಣಮಿಸಲಿದೆ. ಸಾಮಾನ್ಯವಾಗಿ ವೇತನ ಹಲವು ತಿಂಗಳಲ್ಲಿ ವಿಳಂಭವಾಗುವುದು ಸರ್ವೇ ಸಾಮಾನ್ಯ. ಆದರೆ ಮಾಲೀಕರಿಗೆ ಸರಿಯಾದ ಸಮಯಕ್ಕೆ ಬಾಡಿಗೆ ಪಾವತಿ ಮಾಡಲೇ ಬೇಕು. ಹೀಗಾಗಿ ಕ್ರೆಡಿಟ್‌ ಕಾರ್ಡ್‌ ಬಳಕೆ ಮಾಡುವುದರಿಂದ ನಿಗದಿತ ಸಮಯದಲ್ಲಿಯೇ ಬಾಡಿಗೆ ಪಾವತಿ ಮಾಡಬಹುದು. ಇದರಿಂದಾಗಿ ಮಾಲೀಕರ ಕಿರಿಕಿರಿ ತಪ್ಪಲಿದೆ. ನಿಮ್ಮ ಮುಂದಿನ ತಿಂಗಳ ವೇತನದಲ್ಲಿಯೂ ಹಿಂದಿನ ತಿಂಗಳ ಬಿಲ್‌ ಪಾವತಿ ಮಾಡುವಷ್ಟು ಕಾಲಾವಕಾಶ ನಿಮ್ಮದಾಗಲಿದೆ.

ಇದನ್ನೂ ಓದಿ : ಮದುವೆಯಾದ ಎಲ್ಲಾ ದಂಪತಿಗಳಿಗೆ ಸರಕಾರ ಕೊಡುತ್ತೆ 10 ಸಾವಿರ ರೂ. : ಈ ಯೋಜನೆ ನಿಮಗೆ ಗೊತ್ತಾ ?

ಕ್ರೆಡಿಟ್ ಸ್ಕೋರ್ ಹೆಚ್ಚಿಸಿಕೊಳ್ಳಿ :
ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಾಗಿದ್ದರೆ (750 ಕ್ಕಿಂತ ಕಡಿಮೆ) ಇದ್ದಾಗ ನೀವು ದೊಡ್ಡ ವ್ಯವಹಾರ ಮಾಡಬೇಕು. ಅಂದ್ರೆ ನೀವು ಬಾಡಿಗೆ ಹಣವನ್ನು ಪಾವತಿ ಮಾಡುತ್ತಾ, ಸರಿಯಾದ ಸಮಯಕ್ಕೆ ನೀವು ಕ್ರೆಡಿಟ್‌ ಕಾರ್ಡ್‌ ಬಿಲ್‌ ಪಾವತಿ ಮಾಡಿದ್ರೆ ನಿಮ್ಮ ಕ್ರೆಡಿಟ್‌ ಸ್ಕೋರ್‌ ಕೂಡ ಹೆಚ್ಚಳವಾಗಲಿದೆ. ಬ್ಯಾಂಕುಗಳ ಯಾವುದೇ ಸಾಲವನ್ನು ನೀಡುವಾಗ ನಿಮ್ಮ ಕ್ರೆಡಿಟ್‌ ಸ್ಕೋರ್‌ ಅನ್ನು ತಾಳೆ ಹಾಕಲಾಗುತ್ತದೆ.

ಒಬ್ಬ ವ್ಯಕ್ತಿಯು ಸಾಲಕ್ಕೆ ಅರ್ಹರೇ ಎಂದು ನಿರ್ಧರಿಸುವ ಮೊದಲು ಬ್ಯಾಂಕ್‌ಗಳು ಅಥವಾ NBFC ಗಳು ಕ್ರೆಡಿಟ್ ಸ್ಕೋರ್ ಅನ್ನು ಪರಿಗಣನೆಗೆ ತೆಗೆದುಕೊಳ್ಳುತ್ತವೆ. ಆದರೆ ನಿಮ್ಮ ಕ್ರೆಡಿಟ್ ಬಳಕೆಯ ಅನುಪಾತದ 30% ಕ್ಕಿಂತ ಹೆಚ್ಚು ಹೋಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಇಲ್ಲವಾದ್ರೆ ನಿಮ್ಮ ಕ್ರೆಡಿಟ್‌ ಸ್ಕೋರ್‌ ಕುಸಿತ ಕಾಣಲಿದೆ.

ತಡೆರಹಿತ ಪಾವತಿ :
ಇನ್ನು ಕ್ರೆಡಿಟ್‌ ಕಾರ್ಡ್‌ಗಳ ಮೂಲಕ ಬಾಡಿಗೆ ಪಾವತಿ ಮಾಡುವುದರ ಇನ್ನೊಂದು ಲಾಭ ತಡೆ ತಹಿತ ಪಾವತಿ. ಕ್ರೆಡಿಟ್‌ ಕಾರ್ಡ್‌ಗಳಲ್ಲಿ ನಿಮ್ಮ ಮಾಲೀಕರ ವಿವರಗಳನ್ನು ಒಮ್ಮೆ ನಮೋದಿಸಿದ್ರೆ ಕೆಲವೇ ಕ್ಷಣಗಳಲ್ಲಿ ಬಾಡಿಗೆ ಹಣವನ್ನು ವರ್ಗಾವಣೆ ಮಾಡಬಹುದಾಗಿದೆ.

ವಾರ್ಷಿಕ ಖರ್ಚು ಮಿತಿ ಹೆಚ್ಚಳ :
ಸಾಮಾನ್ಯವಾಗಿ ಮಧ್ಯಮ ವರ್ಗದವರ ಖರ್ಚು ವೆಚ್ಚಗಳು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತದೆ. ಆದರೆ ವೇತನ ಮಾತ್ರ ಹೆಚ್ಚಳವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ನೀವು ಕ್ರೆಡಿಟ್‌ ಕಾರ್ಡ್‌ ಬಳಕೆ ಮಾಡಿ ಬಾಡಿಗೆ ಪಾವತಿ ಮಾಡಿದ್ರೆ, ಕ್ರೆಡಿಟ್‌ ಕಾರ್ಡ್‌ಗೆ ಹಣ ಪಾವತಿ ಮಾಡಲು ಸುಮಾರು ನಲವತ್ತೈದು ದಿನಗಳ ಕಾಲಾವಕಾಶ ದೊರೆಯಲಿದೆ. ಹೀಗಾಗಿ ಬಾಡಿಗೆ ಹಣವನ್ನು ಇತರ ಖರ್ಚುಗಳಿಗೆ ಬಳಕೆ ಮಾಡಬಹುದು.

ಕ್ರೆಡಿಟ್ ಕಾರ್ಡ್ ಮೂಲಕ ಬಾಡಿಗೆ ಪಾವತಿ ಸುರಕ್ಷಿತವೇ ?

ಕ್ರೆಡಿಟ್‌ ಕಾರ್ಡ್‌ಗಳ ಮೂಲಕ ಬಾಡಿಗೆ ಪಾವತಿ ಮಾಡುವುದು ಸುರಕ್ಷಿತವೇ ಅನ್ನೋ ಪ್ರಶ್ನೆ ಹಲವರನ್ನು ಕಾಡುತ್ತದೆ. ಆದರೆ ಕ್ರೆಡಿಟ್‌ ಕಾರ್ಡ್‌ ಬಳಕೆ ಮಾಡಿ ಬಾಡಿಗೆ ಪಾವತಿಸಿದ್ರೆ, ಸಕಾಲದಲ್ಲಿ ಬಾಡಿಗೆ ನೀಡುವ ಮೂಲಕ ಮನೆ ಮಾಲೀಕರ ಮನಸ್ಸನ್ನು ಗೆಲ್ಲಬಹುದು. ಕ್ರೆಡಿಟ್‌ ಕಾರ್ಡ್‌ ಬಳಕೆ ಮಾಡುವಾಗ ಎಚ್ಚರಿಕೆಯಿಂದ ಉಪಯೋಗಿಸಿದ್ರೆ ಯಾವುದೇ ಸಮಸ್ಯೆಯಿಲ್ಲ. ಒಂದೊಮ್ಮೆ ಗೊಂದಲ ಇರುವವರು ಕ್ರೆಡಿಟ್‌ ಕಾರ್ಡ್‌ ಬಳಕೆ ಮಾಡುವಾಗ ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು.

  • ನಿಮ್ಮ ಕ್ರೆಡಿಟ್ ಕಾರ್ಡ್ ಸಂಖ್ಯೆ, CVV ಅಥವಾ ಮುಕ್ತಾಯ ದಿನಾಂಕಗಳಂತಹ ನಿಮ್ಮ ಸೂಕ್ಷ್ಮ ಮಾಹಿತಿಯನ್ನು ಕೇಳುವ ಕರೆಗಳ ಬಗ್ಗೆ ಎಚ್ಚರದಿಂದಿರಿ. ಯಾವುದೇ ಬ್ಯಾಂಕ್ ಅಥವಾ ಯಾವುದೇ ಹಣಕಾಸು ಸಂಸ್ಥೆ ನಿಮ್ಮ ಕ್ರೆಡಿಟ್ ಕಾರ್ಡ್ ವಿವರಗಳನ್ನು ಕೇಳುವುದಿಲ್ಲ.
  • ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ನೀವು ಕಳೆದುಕೊಂಡರೆ, ತಕ್ಷಣವೇ ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ ಮತ್ತು ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ನಿರ್ಬಂಧಿಸಲು ಹೇಳಿ.
  • ಯಾವುದೇ ಕ್ರೆಡಿಟ್ ಕಾರ್ಡ್ ವಂಚನೆಗಳನ್ನು ತಪ್ಪಿಸಲು ನಿಮ್ಮ ಕ್ರೆಡಿಟ್ ಕಾರ್ಡ್ ವಿವರಗಳನ್ನು ಯಾದೃಚ್ಛಿಕ ವೆಬ್‌ಸೈಟ್‌ಗಳಲ್ಲಿ ಹಂಚಿಕೊಳ್ಳಬೇಡಿ.
  • ನಿಮ್ಮ ಕ್ರೆಡಿಟ್ ಕಾರ್ಡ್‌ನೊಂದಿಗೆ ನೀವು ಬಾಡಿಗೆಯನ್ನು ಪಾವತಿಸಬಹುದು ಆದರೆ ನೀವು ನಂಬದ ಸೈಟ್‌ಗಳಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ಪ್ರಾಥಮಿಕ ಪಾವತಿ ವಿಧಾನವಾಗಿ ಬಳಸುವುದನ್ನು ತಪ್ಪಿಸಿ.
  • ಸಾಧ್ಯವಾದಾಗ ಎರಡು ಅಂಶಗಳ ದೃಢೀಕರಣವನ್ನು (Two Factor Authuntication) ಆರಿಸಿಕೊಳ್ಳಿ, ಇದು ನಿಮ್ಮ ಕ್ರೆಡಿಟ್ ಕಾರ್ಡ್‌ಗೆ ಹೆಚ್ಚುವರಿ ರಕ್ಷಣೆಯನ್ನು ನೀಡುತ್ತದೆ.
  • ನೀವು ಕ್ರೆಡಿಟ್ ಕಾರ್ಡ್‌ನೊಂದಿಗೆ ಬಾಡಿಗೆ ಪಾವತಿಸಿದಾಗಲೆಲ್ಲಾ ಯಾವುದೇ ಕಾರಣಕ್ಕೂ ನಿಮ್ಮ OTP ಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.

    Can i Pay Rent On Credit Card, But dont make these mistakes alone
    Image Credit To Original Source

ಕ್ರೆಡಿಟ್‌ ಕಾರ್ಡ್‌ ಪಾವತಿಗೆ (Credit Card Payment) ಅಗ್ಗದ ಪ್ಲ್ಯಾಟ್‌ಫಾರ್ಮ್‌ಗಳು :

ಸಾಮಾನ್ಯವಾಗಿ ಕ್ರೆಡಿಟ್‌ ಕಾರ್ಡ್‌ಗಳ ಮೂಲಕ ಪಾವತಿ ಮಾಡುವಾಗ ಇತರ ಪ್ಲ್ಯಾಟ್‌ಫಾರ್ಮ್‌ಗಳನ್ನು ಬಳಕೆ ಮಾಡುತ್ತೇವೆ. ಬಾಡಿಗೆಯನ್ನು ಮನೆ ಮಾಲೀಕರ ಖಾತೆಗಳಿಗೆ ವರ್ಗಾವಣೆ ಮಾಡುವಾಗ ನೇರವಾಗಿ ಕ್ರೆಡಿಟ್‌ ಕಾರ್ಡ್‌ಗಳಿಂದ ಪಾವತಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ಇತರ ಪ್ಲ್ಯಾಟ್‌ಫಾರ್ಮ್‌ಗಳು ಅತ್ಯಗತ್ಯ.

ಇಂತಹ ಪ್ಲ್ಯಾಟ್‌ಫಾರ್ಮ್‌ಗಳನ್ನು ಬಳಕೆ ಮಾಡುವುದರಿಂದಾಗಿ ಹೆಚ್ಚುವರಿ ಲಾಭಗಳನ್ನು ತಂದುಕೊಡುತ್ತವೆ. ಹಾಗಾದ್ರೆ ಯಾವ ಪ್ಲ್ಯಾಟ್‌ಫಾರ್ಮ್‌ಗಳ ಮೂಲಕ ಕ್ರೆಡಿಟ್‌ ಕಾರ್ಡ್‌ದಾರರು ವ್ಯವಹಾರ ಮಾಡಬಹುದು. ಜೊತೆಗೆ ಹೆಚ್ಚು ಲಾಭ ಯಾರಿಂದ ದೊರೆಯಲಿದೆ ಅನ್ನೋ ಮಾಹಿತಿ ಇಲ್ಲಿದೆ.

ಮ್ಯಾಜಿಕ್ ಬ್ರಿಕ್ಸ್ (Magic Bricks)

ಮ್ಯಾಜಿಕ್‌ಬ್ರಿಕ್ಸ್ ವಸತಿ ಮತ್ತು ವಾಣಿಜ್ಯ ಆಸ್ತಿಗಳನ್ನು ಮಾರಾಟ ಮಾಡಲು, ಖರೀದಿಸಲು ಮತ್ತು ಬಾಡಿಗೆಗೆ ನೀಡಲು ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದೆ. ಮ್ಯಾಜಿಕ್‌ಬ್ರಿಕ್ಸ್ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ, ಅದು ಬಳಕೆದಾರರಿಗೆ ಕ್ರೆಡಿಟ್ ಕಾರ್ಡ್ ಬಳಸಿ ಬಾಡಿಗೆಯನ್ನು ಪಾವತಿಸುವುದು. ಅದರಲ್ಲೂ ಅಗ್ಗದ ಬಾಡಿಗೆ ಪಾವತಿಗೆ ಮ್ಯಾಜಿಕ್‌ ಬ್ರಿಕ್ಸ್‌ ಹೆಚ್ಚು ಸಹಕಾರಿ.

ಇದನ್ನೂ ಓದಿ : ಬ್ಯಾಂಕ್ ಅಫ್ ಬರೋಡಾ ಗ್ರಾಹಕರಿಗೆ ಗುಡ್ ನ್ಯೂಸ್ : ಎಟಿಎಂ ಇಲ್ಲದೆ ಡ್ರಾ ಮಾಡಿ ಹಣ

ಮ್ಯಾಜಿಕ್‌ ಬ್ರಿಕ್ಸ್‌ನಲ್ಲಿ ವೀಸಾ ಅಥವಾ ಮಾಸ್ಟರ್‌ಕಾರ್ಡ್ ಕ್ರೆಡಿಟ್ ಕಾರ್ಡ್ ಅನ್ನು ಬಳಸಿದರೆ ವಹಿವಾಟು ಮಾಡಿದ್ರೆ, ನಿಮ್ಮ ಬಾಡಿಗೆ ಮೊತ್ತದ ಮೇಲೆ 1% ರಷ್ಟು ಕನಿಷ್ಟ ಪ್ರಕ್ರಿಯೆ ಶುಲ್ಕವನ್ನು ವಿಧಿಸುತ್ತದೆ. ಒಂದು ದಿನಗಳ ಅವಧಿಯಲ್ಲಿ ಬಾಡಿಗೆದಾರರು ಬಾಡಿಗೆ ಹಣವನ್ನು ಪಡೆಯಲಿದ್ದಾರೆ.

ಮ್ಯಾಜಿಕ್‌ ಬ್ರಿಕ್ಸ್‌ ಮೂಲಕ ಪಾವತಿ ಮಾಡಿದ್ರೆ ಕ್ಯಾಶ್‌ಬ್ಯಾಕ್‌ ಜೊತೆಗೆ 23,000 ರೂ. ವರೆಗೆ ವಿಶೇಷ ರಿಯಾಯಿತಿಯನ್ನು ಪಡೆಯಲು ಅವಕಾಶವಿದೆ. ಇನ್ನು 1 ಲಕ್ಷದವರೆಗಿನ ಉಚಿತ ಬಾಡಿಗೆ ವಿಮೆಯನ್ನು ಪಡೆದುಕೊಳ್ಳಬಹುದಾಗಿದೆ. ಅಲ್ಲದೇ ಬಾಡಿಗೆ ಪಾವತಿಯ ಮೇಲೆ ಶೇ. 100% ಕ್ಯಾಶ್‌ಬ್ಯಾಕ್ ಪಡೆಯಲು ಅವಕಾಶವಿದೆ. ಇನ್ನು PharmEasy, EaseMyTrip, rentickle, Domino’s, Myntra ಕಂಎಪನಿಗಳ ಬ್ರಾಂಡ್‌ಗಳ ಮೇಲೆ ಕನಿಷ್ಠ ಶೇ. 10 ರಿಂದ 50% ರಷ್ಟು ರಿಯಾಯಿತಿ ಪಡೆಯಲು ಅವಕಾಶವಿದೆ.

ಈ ಪೇ ರೆಂಟ್‌ (ePayRent )

ಈ ಪೇ ರೆಂಟ್‌ ಕೂಡ ಕ್ರೆಡಿಟ್‌ ಕಾರ್ಡ್‌ ಬಳಸಿ ವ್ಯವಹಾರ ಮಾಡಲು ಉತ್ತಮವಾದ ವೇದಿಕೆಯಾಗಿದೆ. ಬಾಡಿಗೆ ಪಾವತಿ ಮಾಡಿದ ನಂತರದಲ್ಲಿ ಶೂನ್ಯ ಬಡ್ಡಿ ದರದಲ್ಲಿ 45 ದಿನಗಳವರೆಗೆ ಕ್ರೆಡಿಟ್‌ ಅವಧಿಯನ್ನು ಪಡೆಯಬಹುದಾಗಿದೆ. ಜೊತೆಗೆ ಸಿಬಿಲ್‌ ಸ್ಕೋರ್‌ ಹೆಚ್ಚಿಸಿಕೊಳ್ಳಲು ಹೆಚ್ಚು ಸಹಕಾರಿಯಾಗಿದೆ.

ಈ ಪೇ ರೆಂಟ್‌ ಕೂಡ ಸುರಕ್ಷಿತವಾದ ವೇದಿಕೆಯಾಗಿದ್ದು, ನಿಮ್ಮ ಮಾಹಿತಿಗಳನ್ನು ಗೌಪ್ಯವಾಗಿ ಇರಿಸಲಾಗುತ್ತದೆ. ಜೊತೆಗೆ ಮಾಹಿತಿಯನ್ನು ಎನ್‌ಕ್ರಿಪ್ಟ್ ಮಾಡಲಾಗಿದೆ. ಇನ್ನು ಬಾಡಿಗೆ ಪಾವತಿ ಮಾಡಿದ ಕೂಡಲೇ ನಿಮಗೆ ರಶೀದಿ ದೊರೆಯಲಿದ್ದು, ಈ ರಶೀದಿಯನ್ನು ಪಡೆದು ನೀವು ಎಚ್‌ಆರ್‌ಎ (HRA)ವಿನಾಯಿತಿ ಪಡೆಯಲು ಅವಕಾಶವಿದೆ. ಅಲ್ಲದೇ ರಿವಾರ್ಡ್‌ ಪಾಯಿಂಟ್ಸ್‌ ಕೂಡ ಪಡೆಯಬಹುದಾಗಿದೆ.

ಕ್ರೀಡ್‌ ( CRED )

ಕ್ರೀಡ್‌ ಕೂಡ ಕ್ರೆಡಿಟ್‌ ಕಾರ್ಡ್‌ ಬಿಲ್‌ ಪಾವತಿಯ ಆಪ್ಲಿಕೇಶನ್‌ ಆಗಿದ್ದು, ಸರಿಯಾದ ಸಮಯದಲ್ಲಿ ಕ್ರೆಡಿಟ್‌ ಕಾರ್ಡ್‌ ಬಿಲ್‌ ಪಾವತಿ ಮಾಡಿದ್ರೆ ಬಹುಮಾನ ವನ್ನು ನೀಡಲಿದೆ. ಬಾಡಿಗೆ ಪಾವತಿ ಮಾಡಿದ ನಂತರದಲ್ಲಿ ಪಾಯಿಂಟ್ಸ್‌, ಕ್ಯಾಶ್‌ಬ್ಯಾಕ್‌ ಪಡೆಯಲು ಕೂಡ ಅವಕಾಶವಿದೆ. ಆದರೆ ಸೇವಾ ಶುಲ್ಕವಾಗಿ ಶೇ.1 ರಿಂದ ಶೇ.1.5 ವರೆಗಿನ ಪಾವತಿಸಬೇಕಾಗುತ್ತದೆ.

ಕ್ರೀಡ್‌ ಆಪ್‌ ಮೂಲಕ ನೀವು ಕನಿಷ್ಠ ಬಾಡಿಗೆ ಪಾವತಿ ಮಾಡಿಬಹುದಾಗಿದೆ. ಒಂದೊಮ್ಮೆ ನಿಮ್ಮ RuPay ಕ್ರೆಡಿಟ್ ಕಾರ್ಡ್ ಬಳಸಿ 10,000, ನೀವು ಫ್ಲಾಟ್ ರೂ. 250 ರಿಯಾಯಿತಿಯನ್ನು ಒಂದು ಬಾರಿಗೆ ಪಡೆಯಬಹುದಾಗಿದೆ. ಇನ್ನು AXIS ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಪಾವತಿಸಿದ್ರೆ ನೀವು ಮೊದಲ ಬಾರಿಗೆ 500 ರೂಪಾಯಿ ಕ್ಯಾಶ್‌ಬ್ಯಾಕ್‌ ದೊರೆಯಲಿದೆ. ಬಾಡಿಗೆ ಪಾವತಿಸಿದರೆ, ನೀವು ರೂ. IDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಬಾಡಿಗೆ ಪಾವತಿಸಿದರೆ, ನೀವು 10x ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸಬಹುದು

ಪೇಟಿಎಂ (Paytm )

ಪೇಟಿಎಂ ಭಾರತದಲ್ಲಿ ಅತ್ಯಂತ ಜನಪ್ರಿಯ ಆಪ್.‌ ರಿಚಾರ್ಜ್‌ ಮಾಡಲು ಹೆಚ್ಚಾಗಿ ಪೇಟಿಎಂ ಬಳಕೆ ಮಾಡುತ್ತಾರೆ. ಅದ್ರಲ್ಲೂ ಮನೆ ಬಾಡಿಗೆ ಪಾವತಿ ಮಾಡಲು ಪೇಟಿಎಂ ಪ್ಲಾಟ್‌ಫಾರ್ಮ್‌ ಬಳಕೆ ಮಾಡಬಹುದಾಗಿದೆ. ಬಾಡಿಗೆದಾರರ ಯುಪಿಐ ಅಥವಾ ಬ್ಯಾಂಕ್‌ ಖಾತೆಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡಲು ಅವಕಾಶವಿದೆ.

ಪೇಟಿಎಂ ಮೂಲಕ ಕ್ರೆಡಿಟ್‌ ಕಾರ್ಡ್‌ ಮೂಲಕ ಬಾಡಿಗೆ ಪಾವತಿ ಮಾಡಿದ್ರೆ ಬೋನಸ್‌ ಜೊತೆಗೆ ಶುಲ್ಕ ವಿನಾಯಿತಿಯನ್ನು ಪಡೆಯಬಹುದಾಗಿದೆ. ಪೇಟಿಎಂ ಮೂಲಕ 10 ಬಾಡಿಗೆ ಪಾವತಿ ಮಾಡಬಹುದಾಗಿದೆ. ಕ್ರೆಡಿಟ್‌ ಕಾರ್ಡ್‌ ಬಳಸಿ ಬಾಡಿಗೆ ಪಾವತಿ ಮಾಡಲು ಹೆಚ್ಚು ಅನುಕೂಲಕರವಾಗಿದೆ.

ಇದನ್ನೂ ಓದಿ : ರೈತರಿಗಾಗಿ ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿ ಸಿಗಲಿದೆ ದುಪ್ಪಟ್ಟು ಲಾಭ

ಫ್ರೀಚಾರ್ಜ್ (Freechange )

ಪ್ರೀಚಾರ್ಜ್‌ ಎಕ್ಸಿಸ್‌ ಬ್ಯಾಂಕಿನ (Axis Bank) ವೇದಿಕೆ ಯಾಗಿದೆ ಮತ್ತು ಇದು ಪಾವತಿ ಅಪ್ಲಿಕೇಶನ್ ಆಗಿದೆ. ಫ್ರೀಚಾರ್ಜ್ ನಿಮ್ಮ ಕ್ರೆಡಿಟ್ ಕಾರ್ಡ್‌ನಿಂದ ಬಾಡಿಗೆದಾರರ ಖಾತೆಗಳಿಗೆ ನೇರವಾಗಿ ವರ್ಗಾವಣೆ ಆಗಲಿದೆ. ಇನ್ನು ಕ್ರೆಡಿಟ್‌ ಕಾರ್ಡ್‌ನಿಂದ ಮಾಡುವ ಪ್ರತಿಯೊಂದು ವರ್ಗಾವಣೆಯ ಮೇಲೆ 1.1% ಶುಲ್ಕವನ್ನು ವಿಧಿಸಲಾಗುತ್ತದೆ. ಆದರೆ ಕ್ರೆಡಿಟ್ ಕಾರ್ಡ್ ಬಳಸಿ ಬಾಡಿಗೆ ಪಾವತಿ ಮಾಡುವ ವೇಳೆಯಲ್ಲಿ ಶೇ.3 ರಷ್ಟು ರಿವಾರ್ಡ್ ಪಾಯಿಂಟ್ಸ್‌ ಗಳಿಸಬಹುದಾಗಿದೆ.

ಕ್ಯಾಶ್‌ಬ್ಯಾಕ್‌ ಹಾಗೂ ರಿವಾರ್ಡ್‌ ಪಾಯಿಂಟ್ಸ್‌ಗಳಿಸಲು ಅವಕಾಶವಿದ್ದು, ಒಂದೇ ಬಾರಿಗೆ ಮೂರು ಮಂದಿ ಭೂ ಮಾಲೀಕರಿಗೆ ಬಾಡಿಗೆ ಹಣವನ್ನು ವರ್ಗಾಯಿಸ ಬಹುದು. ಒಂದು ದಿನಗಳಲ್ಲಿ 2 ಲಕ್ಷ ರೂ. ಹಣವನ್ನು ವರ್ಗಾವಣೆ ಮಾಡಲು ಅವಕಾಶವಿದೆ.

ಪೋನ್‌ಪೇ ( PhonePe )

ಭಾರತದ ಅತ್ಯಂತ ಆದ್ಯತೆಯ ಡಿಜಿಟಲ್‌ ಪಾವತಿ ಪ್ಲಾಟ್‌ ಫಾರ್ಮ್‌ಗಳಲ್ಲಿ ಒಂದಾಗಿರುವ ಪೋನ್‌ಪೇ ಕ್ರೆಡಿಟ್‌ ಕಾರ್ಡ್‌ ಬಳಸಿ ಬಾಡಿಗೆ ಪಾವತಿ ಮಾಡಲು ಅವಕಾಶವಿದೆ. ಕ್ರೆಡಿಟ್‌ ಕಾರ್ಡ ಮೂಲಕ ಬಾಡಿಗೆ ಪಾವತಿ ಮಾಡಲು 1.50% ರಷ್ಟು ಸೇವಾ ಶುಲ್ಕವನ್ನು ಪೋನ್‌ ಪೇ ಭರಿಸುತ್ತದೆ. ಇಲ್ಲಿಯೂ ಕ್ಯಾಶ್‌ಬ್ಯಾಕ್.‌ ವಿನಾಯಿತಿ ಸೇರಿದಂತೆ ಹಲವು ಅವಕಾಶಗಳಿವೆ.

ನೋಬ್ರೋಕರ್ ಡಾಟ್‌ ಕಾಂ (NoBroker )

ನೋ ಬ್ರೋಕರ್‌ ಡಾಟ್‌ಕಾಂ ರಿಯಲ್ ಎಸ್ಟೇಟ್ ಪ್ಲಾಟ್‌ಫಾರ್ಮ್ ಆಗಿದ್ದು ಇಲ್ಲಿಯೂ ಬಾಡಿಗೆ ಪಾವತಿಗೆ ಅವಕಾಶವಿದೆ. ಬಾಡಿಗೆ ಪಾವತಿಸಿದ ನಂತರ ರಿವಾರ್ಡ್ ಪಾಯಿಂಟ್‌ಗಳು ಮತ್ತು ಕ್ಯಾಶ್‌ಬ್ಯಾಕ್ ಗಳಿಸಬಹುದಾಗಿದೆ. ವೀಸಾ ಮತ್ತು ಮಾಸ್ಟರ್‌ ಕಾರ್ಡ್‌ನಂತಹ ಪ್ರಮುಖ ಕ್ರೆಡಿಟ್‌ ಕಾರ್ಡ್‌ಗಳನ್ನು ನೋ ಬ್ರೋಕರ್‌ ಪ್ಲಾಟ್‌ ಫಾರ್ಮ್‌ ನಲ್ಲಿ ಬಳಸಬಹುದಾಗಿದೆ.

ನೋಬ್ರೋಕರ್‌ ಡಾಟ್‌ ಕಾಂನಲ್ಲಿ ಬಾಡಿಗೆ ಪಾವತಿ ಮಾಡಿದ್ರೆ ಶೇ.50ರಷ್ಟಯ ರಿಯಾಯಿತಿಯನ್ನು ಪಡೆಯಬಹುದಾಗಿದೆ. ವೀಸಾ ಮತ್ತು ಮಾಸ್ಟರ್‌ಕಾರ್ಡ್‌ನಲ್ಲಿ 30,000 ರಿವಾರ್ಡ್ ಪಾಯಿಂಟ್‌ಗಳಿಸಬಹುದು.

Can i Pay Rent On Credit Card, But dont make these mistakes alone. Magic Bricks epayrent cred Paytm Freecharge Phone pay No Broker 

Comments are closed.