Check Provident Fund Balance : ಭವಿಷ್ಯ ನಿಧಿ (PF) ಬ್ಯಾಲೆನ್ಸ್‌ ಅನ್ನು ಹೇಗೆಲ್ಲಾ ಚೆಕ್‌ ಮಾಡಬಹುದು ಗೊತ್ತಾ? ಇಲ್ಲಿದೆ 5 ಸರಳ ಮಾರ್ಗಗಳು

ಪ್ರತಿ ಹೊಸ ಹಣಕಾಸು ವರ್ಷದ ಪ್ರಾರಂಭದಲ್ಲಿ ಉದ್ಯೋಗಿಗಳು ಮಾಡುವ ಒಂದು ಪ್ರಮುಖ ಆರ್ಥಿಕ ಕಾರ್ಯವೆಂದರೆ ಅವನು ಅಥವಾ ಅವಳು ಎಷ್ಟು ಭವಿಷ್ಯ ನಿಧಿಯ ಬ್ಯಾಲೆನ್ಸ್‌ (Check Provident Fund Balance) ಎಷ್ಟಿದೆ ಎಂದು ತಿಳಿಯ ಬಯಸುವುದು. ಪ್ರತಿ ತಿಂಗಳು, ನೌಕರರು ಪಿಎಫ್‌ (PF)ಖಾತೆಗೆ ಮೂಲ ವೇತನದ ಶೇಕಡಾ 12 ರಷ್ಟು ಮೊತ್ತವನ್ನು ಸ್ಥಿರವಾಗಿ ಒದಗಿಸುತ್ತಾರೆ. ಮತ್ತು ಅದಕ್ಕೆ ಉದ್ಯೋಗದಾತರು ಸಮಾನ ಮೊತ್ತವನ್ನು ನೀಡುತ್ತಾರೆ.

ಪಿಎಫ್‌ ಕಛೇರಿಗೆ ಭೇಟಿ ನೀಡದೇ ಅಥವಾ ಉದ್ಯೋಗದಾತರನ್ನು ಕೇಳದೆಯೇ ಪಿಎಫ್‌ ಬ್ಯಾಲೆನ್ಸ್‌ ಚೆಕ್‌ ಮಾಡಲು ವಿವಿಧ ವಿಧಾನಗಳಿವೆ. ನಿಮ್ಮ ಉದ್ಯೋಗ ಭವಿಷ್ಯ ನಿಧಿ (EPF) ಬ್ಯಾಲೆನ್ಸ್‌ ಪರಿಶೀಲಿಸಲು 5 ಮಾರ್ಗಗಳಿವೆ.

1. EPFO ವೆಬ್‌ಸೈಟ್‌ :
EPFO ವೆಬ್‌ಸೈಟ್‌ಗೆ ಭೇಟಿ ನೀಡಿದ ನಂತರ ಎಂಪ್ಲಾಯೀ ಸೆಕ್ಷನ್‌ ಅಡಿಯಲ್ಲಿರುವ ಮೆಂಬರ್‌ ಪಾಸ್‌ಬುಕ್‌ ಅನ್ನು ಕ್ಲಿಕ್ಕಿಸಿ. ನಿಮ್ಮ UAN ಮತ್ತು ಪಾಸ್‌ವರ್ಡ್‌ ಒದಗಿಸಿ ಲಾಗಿಂಗ್‌ ಆಗಿ. ನೀವು ಪಿಎಫ್‌ ಪಾಸ್‌ಬುಕ್‌ ಅನ್ನು ನೀವು ಅಲ್ಲಿ ನೋಡಬಹದು. ಉದ್ಯೋಗಿ ಮತ್ತು ಉದ್ಯೋಗದಾತರ ಕೊಡುಗೆಯ ಆರಂಭಿಕ ಮತ್ತು ಮುಕ್ತಾಯದ ಬ್ಯಾಲೆನ್ಸ್‌ ತೋರಿಸುತ್ತದೆ. ಗಳಿಸಿದ PF ಬಡ್ಡಿ ಮತ್ತು ಯಾವುದೇ PF ವರ್ಗಾವಣೆ ಮೊತ್ತದ ವಿವಿರ ಸಹ ಅಲ್ಲಿ ತೋರಿಸುತ್ತದೆ. ನಿಮ್ಮ UAN ಗೆ ಒಂದಕ್ಕಿಂತ ಹೆಚ್ಚು ಭವಿಷ್ಯ ನಿಧಿ ಸಂಖ್ಯೆಗಳನ್ನು ಲಗತ್ತಿಸಿದರೆ ಅವೆಲ್ಲವೂ ಅದರಲ್ಲಿ ತೋರಿಸುತ್ತದೆ. PF ಖಾತೆಯ ಬ್ಯಾಲೆನ್ಸ್‌ ತಿಳಿಯಲು ನೀವು ಸದಸ್ಯರ ನಿರ್ದಿಷ್ಟ ID ಯನ್ನು ಕ್ಲಿಕ್‌ ಮಾಡಬೇಕಾಗುತ್ತದೆ.

2. ಯುನಿಫೈಡ್‌ ಪೋರ್ಟಲ್‌ ಮೂಲಕ :
ನಿಮ್ಮ UAN ಮತ್ತು ಪಾಸ್‌ವರ್ಡ್‌ಮೂಲಕ ಯುನಿಫೈಡ್‌ ಪೋರ್ಟಲ್‌ಗೆ ಲಾಗ್‌ ಇನ್‌ ಆಗಬಹುದು ಮತ್ತು ಭವಿಷ್ಯ ನಿಧಿಯ ಪಾಸ್‌ಬುಕ್‌ ತೆರಯುವುದರ ಮೂಲಕ PF ಬ್ಯಾಲೆನ್ಸ್‌ ಚೆಕ್‌ ಮಾಡಬಹುದು. ಇದರ ಜೊತೆಗೆ ಆಯಾ ವರ್ಷದ ವಿವಿಧ ಹಣಕಾಸು ಕೊಡುಗೆಗಳನ್ನು ವೀಕ್ಷಿಸಿಬಹುದು.

3. SMS ಮೂಲಕ PF ಬ್ಯಾಲೆನ್ಸ್‌ ಚೆಕ್‌ ಮಾಡುವುದು :

ನೀವು SMS ಸೇವೆಯನ್ನು ಬಳಸಿಕೊಂಡು ಸಹ ನಿಮ್ಮ ಮೊಬೈಲ್‌ನಲ್ಲಿ PF ಬ್ಯಾಲೆನ್ಸ್‌ ಚೆಕ್‌ ಮಾಡಬಹುದು. 7738299899 ಗೆ EPFOHO UAN ENG ಎಂದು SMS ಕಳುಹಿಸಬೇಕು. ಆದರೆ ನೆನಪಿಡಿ ಇದಕ್ಕೆ ನಿಮ್ಮ ನೋಂದಾಯಿತ ಮೊಬೈಲ್‌ ಸಂಖ್ಯೆಯಿಂದಲೇ SMS ಮಾಡಿದ್ದೀರಿ ಖಚಿತಪಡಿಸಿಕೊಳ್ಳಿ. SMS ಕಳುಹಿಸಿದ ನಂತರ PFನ ಕೊನೆಯ ಮೊತ್ತವನ್ನು ನೀವು ಸ್ವೀಕರಿಸುತ್ತೀರಿ.

4. ಮಿಸ್ಡ್‌ಕಾಲ್‌ ನೀಡುವುದರ ಮೂಲಕವೂ ಚೆಕ್‌ ಮಾಡಬಹುದು :
EPF ಬ್ಯಾಲೆನ್ಸ್‌ ಚೆಕ್‌ ಮಾಡಲು ನಿಮ್ಮ ಮೊಬೈಲ್‌ ಫೋನ್‌ ಬಳಸಿ. ಇದಕ್ಕಾಗಿ UAN ಅಗತ್ಯವಿಲ್ಲ. ಇದಕ್ಕಾಗಿ ನೀವು EPFO ಒದಗಿಸಿದ ಮಿಸ್ಡ್‌ ಕಾಲ್‌ ಸೇವೆಯನ್ನು ಬಳಸಿಕೊಳ್ಳಬಹುದಾಗಿದೆ. ನಿಮ್ಮ ನೋಂದಾಯಿತ ಮೊಬೈಲ್‌ ಸಂಖ್ಯೆಯಿಂದ ನೀವು 011–22901406 ಗೆ ಮಿಸ್ಡ್‌ ಕಾಲ್ ನೀಡಬೇಕು. ಎರಡು ರಿಂಗ್‌ಗಳ ನಂತರ, ಕರೆ ಸಂಪರ್ಕ ಕಡಿತಗೊಳ್ಳುತ್ತದೆ ಮತ್ತು ಬಳಕೆದಾರರು PF ಬ್ಯಾಲೆನ್ಸ್‌ ತೋರಿಸುವ ಸಂದೇಶವನ್ನು ನೀವು ಪಡೆಯುತ್ತೀರಿ. ಮುಖ್ಯವಾಗಿ ಈ ಸೇವೆ ಉಚಿತವಾಗಿ ಲಭ್ಯವಿದೆ. ಇದಕ್ಕಾಗಿ ಸ್ಮಾರ್ಟ್‌ ಫೋನ್‌ ಅಲ್ಲದ ಫೋನ್‌ಗಳಿಂದಲೂ ಪಡೆಯಬಹುದು. ಉದ್ಯೋಗಿಯಾಗಿ ನಿಮ್ಮ UAN ಅನ್ನು ನಿಮ್ಮ ಬ್ಯಾಂಕ್‌ ಖಾತೆ, ಆಧಾರ್‌ ಸಂಖ್ಯೆ ಮತ್ತು PAN ಗೆ ಲಿಂಕ್‌ ಮಾಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದರ ಜೊತೆಗೆ ನಿಮ್ಮ ಮೊಬೈಲ್‌ ಸಂಖ್ಯೆಯನ್ನು ಸಹ ಲಿಂಕ್‌ ಮಾಡಬೇಕು.

5. UMANG ಆಪ್‌ ಮೂಲಕ PF ಬ್ಯಾಲೆನ್ಸ್‌ ಚೆಕ್‌ ಮಾಡುವುದು :
PF ಬ್ಯಾಲೆನ್ಸ್‌, ಕ್ಲೈಮ್‌ ಸ್ಥಿತಿ, KYC(Know Your Customer) ತಿಳಿಯಲು ಇತ್ಯಾದಿ EPF ವಿವರಗಳನ್ನು ಪಡೆಯಲು UMANG ಅಪ್ಲಿಕೇಶನ್ ಡೌನ್‌ಲೋಡ್‌ ಮಾಡಿಕೊಳ್ಳುವುದರ ಮೂಲಕವೂ ಬ್ಯಾಲೆನ್ಸ್‌ ಚೆಕ್‌ ಮಾಡಬಹುದು.

ಇದನ್ನೂ ಓದಿ : WhatsApp Business App : ವಾಟ್ಸ್‌ಅಪ್‌ ಸಣ್ಣ ವ್ಯಾಪಾರಗಳು ಡಿಜಿಟಲೀಕರಣದಲ್ಲಿ ತೊಡಗಲು ಹೇಗೆ ಸಹಾಯ ಮಾಡಲಿದೆ ಗೊತ್ತಾ?

ಇದನ್ನೂ ಓದಿ: Credit Cards : ನೀವು ಬಳಸುವ ಕ್ರೆಡಿಟ್‌ ಕಾರ್ಡ್‌ ಮೇಲೆ ಒಂದು ಕಣ್ಣಿಡಿ!!

(Check Provident Fund Balance with or without universal account number)

Comments are closed.