Indian Passport Holders : ನಿಮಗಿದು ಗೊತ್ತೇ? ಯಾವ ದೇಶಗಳು ಭಾರತೀಯ ಪಾಸ್‌ಪೋರ್ಟ್‌ ಹೊಂದಿರುವವರಿಗೆ ಆಗಮನದ ವೀಸಾ ನೀಡುತ್ತದೆ ಎಂದು

ಸಾಂಕ್ರಾಮಿಕ ರೋಗದ ಮಧ್ಯೆ, ವಿದೇಶ ಪ್ರವಾಸವು (Foreign Trip) ಕಠಿಣ ಕೆಲಸವಾಗಿಬಹುದು. ಆದರೆ ಪ್ರವಾಸ ಪ್ರಿಯರಿಗೆ ಕೆಲವು ಸಿಹಿ ಸುದ್ದಿಗಳಿವೆ. ವೀಸಾ(Visa) ಅರ್ಜಿಗಳು ಮತ್ತು ಅನುಮೋದನೆಗಳು ಒತ್ತಡವನ್ನು ನೀಡುವ ಪ್ರಕ್ರಿಯೆಯಾಗಿರಬಹುದು. ಆದ್ದರಿಂದ ನೀವು ವಿಮಾನ ಏರಲು ಮತ್ತು ಹೊಸ ವಿದೇಶಿ ಸ್ಥಳಗಳನ್ನು ಅನ್ವೇಷಿಸಲು ಉತ್ಸುಕರಾಗಿದ್ದರೆ ಕೆಲವು ದೇಶಗಳು(Countries) ಆಗಮನದ ವೀಸಾವನ್ನು(Visa on arrival) ಅನುಮತಿಸುತ್ತಿವೆ. ಅಂತಹ ಕೆಲವು ಜನಪ್ರಿಯ ದೇಶಗಳು ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ (Indian Passport Holder) ಆಗಮನದ ವೀಸಾಗಳನ್ನು ಅನುಮತಿಸುತ್ತಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಅಂತಹ ಕೆಲವು ವಿದೇಶಿ ಸ್ಥಳಗಳ ಪರಿಚಯ ಇಲ್ಲಿ ನೀಡಲಾಗಿದೆ.

ಭಾರತೀಯ ಪಾಸ್‌ಪೋರ್ಟ್‌ ಹೊಂದಿರುವವರಿಗೆ ಆಗಮನದ ವೀಸಾ ನೀಡುತ್ತಿರುವ ಜನಪ್ರಿಯ ದೇಶಗಳಿವು :

ಥೈಲ್ಯಾಂಡ್‌ :
ಭಾರತೀಯರಿಗೆ ಅತ್ಯಂತ ಜನಪ್ರಿಯ ರಜೆಯ ತಾಣಗಳಲ್ಲಿ ಒಂದಾದ ಥೈಲ್ಯಾಂಡ್‌ ಈಗ ಪ್ರವಾಸಿಗರಿಗೆ ಮುಕ್ತವಾಗಿದೆ. ಭಾರತೀಯ ಪಾಸ್‌ಪೋರ್ಟ್‌ಗಳನ್ನು ಹೊಂದಿರುವವರಿಗೆ ವೀಸಾ ಆನ್ ಅರೈವಲ್‌ ಸೌಲಭ್ಯಗಳನ್ನು ಸಹ ಅನುಮತಿಸುತ್ತಿದೆ. ಅಲ್ಲಿಗೆ ಭೇಟಿ ನೀಡಿ. ಥೈಲ್ಯಾಂಡ್‌ ದೇಶ ನೀಡುವ ಅನೇಕ ಕಡಲತೀರಗಳು ಮತ್ತು ದ್ವೀಪಗಳನ್ನು ಅನ್ವೇಷಿಸಿ!.

ಮ್ಯಾನ್ಮಾರ್‌ :
ಭಾರತದ ನೆರೆ ರಾಷ್ಟ್ರವಾದ ಮ್ಯಾನ್ಮಾರ್‌ ಪ್ರವಾಸಕ್ಕೆ ಸುಂದರ ತಾಣವಾಗಿದೆ. ಅದರಲ್ಲೂ ತಮ್ಮ ಬಜೆಟ್‌ ಬಗ್ಗೆ ಯೋಚಿಸುವವರಿಗೂ ಉತ್ತಮವಾಗಿದೆ. ಈ ದೇಶವು ಸಂಪೂರ್ಣವಾಗಿ ದೇವಸ್ಥಾನಗಳು, ರುಚಿಕರವಾದ ವ್ಯಂಜನಗಳು ಮತ್ತು ವೈವಿಧ್ಯಮಯ ಭೂದೃಶ್ಯದೊಂದಿಗೆ ಸಂಪೂರ್ಣವಾಗಿದೆ. ಇದು ಏಂಕಾಂಗಿ ಮತ್ತು ಗುಂಪುಗಳಲ್ಲಿ ಪ್ರಯಾಣಿಸಲು ಉತ್ತಮವಾಗಿದೆ ತಾಣವಾಗಿದೆ.

ಮಲೇಷ್ಯಾ:
ಮತ್ತೊಂದು ಉತ್ತಮ ತಾಣವೆಂದರೆ ಭಾರತಕ್ಕೆ ಸಮೀಪವಿರುವ ಮಲೇಷ್ಯಾ. ಇದು ಇತ್ತೀಚೆಗೆ ಭಾರತೀಯ ಪಾಸ್‌ಪೋರ್ಟ್‌ ಹೊಂದಿರುವವರಿಗೆ ವೀಸಾ ಆನ್‌ ಅರೈವಲ್‌ ಸೌಲಭ್ಯ ಪ್ರಾರಂಭಿಸಿದೆ. ನಿಮಗೆ ಬೇಕಾಗಿರುವುದು ದೃಢೀಕೃತ ವಿಮಾನ ಟಿಕೆಟ್‌. ಅತೀ ಕಡಿಮೆ ಶುಲ್ಕದಲ್ಲಿ 15 ದಿನಗಳವರೆಗೆ ವೀಸಾವನ್ನು ಪಡೆಯಬಹುದು.

ಮಾರಿಶಸ್‌ :
ಸ್ವಚ್ಛ ನೀಲಿ ನೀರು, ಆಳ ಸಮುದ್ರ ಡೈವಿಂಗ್‌, ಅತ್ಯಾಕರ್ಷಕ ರೆಸಾರ್ಟ್‌, ರುಚಿಯಾದ ಊಟ ಇವೆಲ್ಲವೂ ನೀವು ಮಾರಿಶಸ್‌ಗೆ ಭೇಟಿ ನೀಡುವಂತೆ ಮಾಡುತ್ತದೆ. ಭಾರತೀಯರು ಆಗಮನದ ಮೊದಲು ವೀಸಾವನ್ನು ಹೊಂದುವ ಅಗತ್ಯವಿಲ್ಲದ ಪ್ರವಾಸಿ ತಾಣವಾಗಿದೆ. ರಜೆಯ ಮಜಾ ಸವಿಯಲು ದೇಶವಾಗಿದೆ.

ಇದನ್ನೂ ಓದಿ : The Pink City: ಜೈಪುರ ಭಾರತದ ಪಿಂಕ್ ಸಿಟಿ ಜೈಪುರದ ಬಗ್ಗೆ ಕೇಳಿದ್ದೀರಾ? ಇಲ್ಲಿನ ಪ್ರತಿ ಕಟ್ಟಡಕ್ಕೂ ಇದೆ ಒಂದು ಕಥೆ
ನೇಪಾಳ:
ಭಾರತದಿಂದ ನೇಪಾಳಕ್ಕೆ ಭೇಟಿ ನೀಡುವುದು ಸುಲಭ. ನೀವು ಕಠ್ಮಂಡುವಿಗೆ ವಿಮಾನವನ್ನು ಬುಕ್‌ ಮಾಡಬಹುದು ಅಥವಾ ರಸ್ತೆಯ ಮುಲಕವೂ ದೇಶವನ್ನು ತಲುಪಬಹುದು. ನಿಮ್ಮ ಎಲ್ಲಾ ಪ್ರಯಾಣದ ದಾಖಲೆಗಳು ನಿಮ್ಮ ಜೊತೆ ಇರುವವರೆಗೆ ನೀವು ಹೆಚ್ಚು ತೊಂದರೆಯಿಲ್ಲದೆ ಆಗಮನದ ವೀಸಾವನ್ನು ಪಡೆಯಬಹುದು. ಈ ದೇಶವು ಪ್ರಯಾಣದ ಅನುಭವಗಳ ವಿಷಯದಲ್ಲಿ ಸಾಕಷ್ಟು ಕೊಡುಗೆಗಳನ್ನು ನೀಡಿದೆ.

ಭೂತಾನ್‌:
ಸಾಹಸವನ್ನು ಬಯಸುವವರಿಗೆ ಭೂತಾನ್‌ ಮತ್ತೊಂದು ಉತ್ತಮ ತಾಣವಾಗಿದೆ. ನೀವು ಭಾರತೀಯ ಪಾಸ್‌ಪೋರ್ಟ್‌ ಹೊಂದಿದ್ದರೆ ಆಗಮನದ ವೀಸಾವನ್ನು ಸುಲಭವಾಗಿ ಪಡೆಯಬಹುದು.

ಕಾಂಬೋಡಿಯಾ :
ಅದ್ಭುತವಾದ ಕಡಲ ತೀರಗಳು, ಭವ್ಯವಾದ ದೇವಾಲಯಗಳು, ಮತ್ತು ಶ್ರೀಮಂತ ಪರಂಪರೆಯ ತಾಣವಾದ ಕಾಂಬೋಡಿಯಾ ನಿಮ್ಮನ್ನು ಕೈಬೀಸಿ ಕರೆಯುತ್ತದೆ. ನೀವು ಭಾರತೀಯ ಪಾಸ್‌ಪೋರ್ಟ್‌ ಹೊಂದಿದ್ದರೆ, ಆಗಮನದ ವೀಸಾವನ್ನು ಪಡೆಯುವ ಮೂಲಕ ನಿಮ್ಮ ವಿದೇಶ ಪ್ರಯಾಣದ ಆನಂದ ಅನುಭವಿಸಬಹುದು.

ಇದನ್ನೂ ಓದಿ : Best Places In Bangalore: ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ ಬೆಂಗಳೂರಿನ ಈ ತಾಣಗಳು

(Indian Passport Holders these countries are allowing visa on arrival)

Comments are closed.