ಭಾರತದಲ್ಲಿ ಸಿಟಿ ಬ್ಯಾಂಕ್ ಸ್ಥಗಿತ : ಗ್ರಾಹಕರಿಗೆ ಶಾಕ್‌ ಕೊಟ್ಟ ಬ್ಯಾಂಕ್

ಮುಂಬೈ : ಅಮೆರಿಕ ಮೂಲದ `ಸಿಟಿಬ್ಯಾಂಕ್’ ಭಾರತದಲ್ಲಿ ಗ್ರಾಹಕ ರಿಗೆ ಬ್ಯಾಂಕಿಂಗ್ ಸೇವೆಗಳನ್ನು ಸ್ಥಗಿತಗೊಳಿಸಲಿದೆ. ಈ ಕುರಿತು ಬ್ಯಾಂಕ್ ಅಧಿಕೃತ ಪ್ರಕಟಣೆಯನ್ನು ಹೊರಡಿಸಿದೆ.

ಸಿಟಿ ಬ್ಯಾಂಕ್ ಭಾರತದಲ್ಲಿ ಒಟ್ಟು 35 ಶಾಖೆಗಳನ್ನು ಹೊಂದಿದ್ದು, ಕ್ರೆಡಿಟ್ ಕಾರ್ಡ್, ಗೃಹ ಸಾಲ, ಸಂಪತ್ತು ನಿರ್ವಹಣೆ ಸೇರಿದಂತೆ ಹಲವು ಸೇವೆಗಳನ್ನು ಒದಗಿಸುತ್ತಿದೆ. ಆದರೆ ಒಟ್ಟು 13 ದೇಶಗಳಲ್ಲಿ ಗ್ರಾಹಕ ಬ್ಯಾಂಕಿಂಗ್ ಸೇವೆಗಳನ್ನು ಸ್ಥಗಿತಗೊಳಿಸುತ್ತಿದ್ದೇವೆ. ಈ ದೇಶಗಳಲ್ಲಿ ಇತರರಿಗೆ ಸ್ಪರ್ಧೆ ನೀಡಲು ಅಗತ್ಯ ಇರುವಷ್ಟು ಪ್ರಮಾಣದಲ್ಲಿ ದೊಡ್ಡದಾಗಿ ಬೆಳೆದಿಲ್ಲದ ಕಾರಣ ಈ ಸೇವೆಗಳನ್ನು ಸ್ಥಗಿತಗೊಳಿಸುವ ನಿರ್ಧಾರ ವನ್ನು ಪ್ರಕಟಿಸುತ್ತಿದ್ದೇವೆ ಎಂದು ಸಿಟಿ ಬ್ಯಾಂಕ್‍ನ ಜಾಗತಿಕ ವಹಿವಾಟುಗಳ ಸಿಇಒ ಜೇನ್ ಫ್ರೇಸರ್ ಗುರುವಾರ ಹೇಳಿದ್ದಾರೆ.

1902ರಲ್ಲಿ ಭಾರತಕ್ಕೆ ಬಂದ ಸಿಟಿಬ್ಯಾಂಕ್ 1985ರಿಂದ ಗ್ರಾಹಕ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತಿದೆ. ಮುಂಬೈ, ಪುಣೆ, ಬೆಂಗಳೂರು, ಚೆನ್ನೈ ಮತ್ತು ಗುರುಗ್ರಾಮದಲ್ಲಿ ಇರುವ ತನ್ನ ಕೇಂದ್ರ ಗಳಿಂದ ಜಾಗತಿಕ ವಾಣಿಜ್ಯ ವಹಿವಾಟುಗಳಿಗೆ ಬೆಂಬಲ ನೀಡುವ ಕೆಲಸವನ್ನು ಮುಂದುವರಿಸಲಿದೆ.

ಆದರೆ ತಕ್ಷಣಕ್ಕೆ ನಮ್ಮ ಚಟುವಟಿಕೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಬ್ಯಾಂಕ್  ಸೇವೆಗಳನ್ನು ಸ್ಥಗಿತ ಗೊಳಿಸಲು ಕಾನೂನು ಜಾರಿ ಸಂಸ್ಥೆಗಳ ಅನುಮೋದನೆ ಅಗತ್ಯವಿದೆ. ಈ ಘೋಷಣೆಯಿಂದ ಉದ್ಯೋಗಿಗಳ ಮೇಲೆ ತಕ್ಷಣಕ್ಕೆ ಯಾವುದೇ ಪರಿಣಾಮ ಉಂಟಾಗು ವುದಿಲ್ಲ. ಸದ್ಯಕ್ಕೆ ನಮ್ಮ ಗ್ರಾಹಕರಿಗೆ ಸೇವೆ ಒದಗಿಸುವುದನ್ನು ಮುಂದುವರಿಸುತ್ತೇವೆ ಎಂದು ಸಿಇಒ ತಿಳಿಸಿದ್ದಾರೆ.

Comments are closed.