ಸಂವಿಧಾನದ ವಿಧಿ 224 ಎ :  ಹೊಸ ಇತಿಹಾಸಕ್ಕೆ ನಾಂದಿ ಹಾಡಲಿದೆಯೆ ಸುಪ್ರೀಂ ತೀರ್ಪು ..?

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತದ ಉನ್ನತ ನ್ಯಾಯಾಲಯ ಸುಪ್ರೀಂಕೋರ್ಟ್ ಸಂವಿಧಾನ ಚರ್ಚಿತ 224 ಎ ವಿಧಿಯ ಕುರಿತಂತೆ ತನ್ನ ಆದೇಶವನ್ನು ಕಾಯ್ದಿರಿಸಿದೆ.

ಈ ತೀರ್ಪು 224ಎ ವಿಧಿಗೆ ಸಂಬಂಧಿಸಿದಂತೆ ಹೈಕೋರ್ಟ್ ಗಳಲ್ಲಿ ಹಂಗಾಮಿ ನ್ಯಾಯಾಧೀಶರನ್ನು ನೇಮಕಗೊಳಿಸುವ ಕುರಿತಂತೆ ಇರುವ ಚರ್ಚೆಗಳನ್ನು ಕೊನೆಗೊಳಿಸುತ್ತದೆ ಎಂದು ನಂಬಲಾಗಿದೆ.

ಈ ಕುರಿತಂತೆ ಲೋಕ ಪಹಾರಿ ಎಂಬ ಸಾಮಾಜಿಕ ಸೇವಾ ಸಂಸ್ಥೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ನಲ್ಲಿ ದಾಖಲು ಮಾಡಿದೆ. ಈ ಕುರಿತಂತೆ ನಡೆಯುತ್ತಿರುವ ವಾದ- ವಿವಾದ ಸಂದರ್ಭ ದಲ್ಲಿ ಪೀಠದಲ್ಲಿದ್ದ ನ್ಯಾಯಮೂರ್ತಿ ಎಸ್.ಕೆ.ಕೌಲ್ ಹಂಗಾಮಿ ನ್ಯಾಯಮೂರ್ತಿಗಳು, ಹತ್ತು- ಹದಿನೈದು ವರ್ಷಗಳಿಂದ ಬಾಕಿ ಇರುವ ಅರ್ಜಿಗಳನ್ನು ಇತ್ಯರ್ಥ ಪಡಿಸಬಹುದು ಎಂದು ಅಭಿಪ್ರಾಯಪಟ್ಟರು.

ಈ ನಡುವೆ ಹಂಗಾಮಿ ನ್ಯಾಯಾಧೀಶರು ಭಾರತದ ಸಂಚಿತ ನಿಧಿಯಿಂದ ತಮ್ಮ ಸಂಬಳವನ್ನು ಪಡೆಯಬಹುದು ಎಂದು ಮುಖ್ಯ ನ್ಯಾಯಮೂರ್ತಿ ಗಳು ವಿಚಾರಣೆ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಅರ್ಜಿ ಹಂಗಾಮಿ ನ್ಯಾಯಾಧೀಶರನ್ನು ಹೈಕೋರ್ಟ್ ಗಳಲ್ಲಿ ನೇಮಕಗೊಳಿಸುವ ಪ್ರಕ್ರಿಯೆಯ ವಿಷಯದಲ್ಲಿ ಮುಖ್ಯ ಸ್ಥಾನ ಪಡೆಯುತ್ತದೆ ಎಂದು ಹೇಳಲಾಗಿದೆ.

ಒಂದು ವೇಳೆ ಹೈಕೋರ್ಟ್ ನಲ್ಲಿ ಹಂಗಾಮಿ ನ್ಯಾಯಾಧೀಶರ ನೇಮಕ ನಡೆಯುತ್ತಿದ್ದರೆ ಅವರ ಕರ್ತವ್ಯ, ಕಾರ್ಯ ಹಾಗೂ ಯಾವ ವಿಷಯದ ಕುರಿತಂತೆ ಅವರು ತೀರ್ಪು ನೀಡಬಹುದು ಎಂಬ ಬಗೆಗಿನ ವಾದ-ವಿವಾದಗಳು ಇಂದು ಸುಪ್ರೀಂ ಕೋರ್ಟ್ ನಲ್ಲಿ ನಡೆದಿದೆ. ಸುಪ್ರೀಂಕೋರ್ಟ್ ತನ್ನ ಅಂತಿಮ ತೀರ್ಪನ್ನು ಕಾಯ್ದಿರಿಸಿಕೊಂಡಿದೆ. ಒಟ್ಟಿನಲ್ಲಿ ಸಂವಿಧಾನದ 224ಎ ವಿಧಿ ಬಗೆಗಿನ ಸುಪ್ರೀಂ ತೀರ್ಪು ಕುತೂಹಲ ಕೆರಳಿಸಿದೆ.

Comments are closed.