Coffee Prices Rise : ಕಾಫಿಗೆ ಬಂತು ದಾಖಲೆಯ ಬೆಲೆ, ಬೆಳೆಗಾರರಿಗೆ ಖುಷಿ : 39,800 ಟನ್‌ ಕಾಫಿ ರಫ್ತು

ಚಿಕ್ಕಮಗಳೂರು : Coffee Prices Rise: ಕಳೆದ ಕೆಲವು ವರ್ಷಗಳಿಂದಲೂ ಹವಾಮಾನ ವೈಪರೀತ್ಯದಿಂದಾಗಿ ಬೆಳೆ ಕಳೆದುಕೊಳ್ಳುತ್ತಿದ್ದ ಕಾಫಿ ಬೆಳೆಗಾರರಿಗೆ ಈ ಬಾರಿ ಕಾಫಿ ಬೆಲೆ ಏರಿಕೆ ಖುಷಿ ಕೊಟ್ಟಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಕಾಫಿ ದಾಖಲೆಯ ಬೆಲೆ ಮಾರಾಟವಾಗುತ್ತಿರುವುದು ಕಾಫಿನಾಡು ಚಿಕ್ಕಮಗಳೂರಿನ ಬೆಳೆಗಾರರಿಗೆ ಸಂತಸ ತಂದಿದೆ. ಈ ಬಾರಿಯೂ ಕೈಕೊಟ್ಟ ಮಳೆಯ ನಡುವಲ್ಲೇ ಇಳುವರಿ ಕುಂಠಿತವಾಗುವ ಭೀತಿಯಿದ್ದರೂ ಕೂಡ ಐತಿಹಾಸಿಕ ಬೆಲೆಗೆ ಕಾಫಿ ಮಾರಾಟವಾಗುತ್ತಿರುವುದು ಬೆಳೆಗಾರರಿಗೆ ಕೊಂಚ ಸಮಾಧಾನವನ್ನು ಕೊಟ್ಟಿದೆ.

ರೊಬಾಸ್ಟಾ ಕಾಫಿಯನ್ನು ಇಂಡೋನೇಷ್ಯಾ ಬ್ರೆಜಿಲ್‌ ಹಾಗೂ ವಿಯೇಟ್ನಾಂಗಳಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಆದರೆ ಈ ಬಾರಿ ಹವಾಮಾನದ ವೈಪರೀತ್ಯದಿಂದಾಗಿ ಕಾಫಿಯ ಇಳುವರಿ ಕಡಿಮೆಯಾಗಿದೆ. ಹೀಗಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಕಾಫಿಗೆ ಉತ್ತಮ ಬೇಡಿಕೆ ಬಂದಿದೆ. ಕಳೆದ ಕೆಲವು ವರ್ಷಗಳಿಂದಲೂ ಕಾಫಿಯ ಇಳುವರಿ ಕುಂಠಿತವಾಗಿರುವ ಹಿನ್ನೆಲೆಯಲ್ಲಿ ಕಾಫಿ ಮಾರುಕಟ್ಟೆಯಲ್ಲಿ ದಾಖಲೆಯ ಬೆಲೆಗೆ ಮಾರಾಟವಾಗುತ್ತಿದೆ.

ದೇಶದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಈ ಬಾರಿ ಕಾಫಿ ರಫ್ತಿನ ಪ್ರಮಾಣದಲ್ಲಿ ಇಳಿಕೆಯಾಗಿದೆ. ಈ ಬಾರಿ ಕಾಫಿ ಮಂಡಳಿ ನೀಡಿರುವ ವಾರ್ಷಿಕ ವರದಿಯ ಪ್ರಕಾರ 39,000 ಟನ್‌ ಕಾಫಿಯನ್ನು ರಫ್ತು ಮಾಡಲಾಗಿತ್ತು. ಆದರೆ 39,800 ಟನ್‌ ಕಾಫಿಯನ್ನು 933 ಕೋಟಿ ರೂಪಾಯಿಗೆ ರಫ್ತು ಮಾಡುವ ಮೂಲಕ ಕಾಫಿ ಹೊಸ ದಾಖಲೆಯನ್ನು ಬರೆದಿದೆ.

ಈ ಬಾರಿಯ ಕಾಫಿಯ ದರವನ್ನು ನೋಡುವುದಾದ್ರೆ, 50ಕೆಜಿ ತೂಕದ ಅರೇಬಿಕಾ ಕಾಫಿ ಪಾರ್ಚ್‌ಮೆಂಟ್‌ 16000 ರೂಪಾಯಿಗೆ ಮಾರಾಟವಾಗುತ್ತಿದ್ರೆ, ಚೆತ್ರಿ 8000 ರೂಪಾಯಿಗೆ ಏರಿಕೆಯಾಗಿದೆ. ಅಲ್ಲದೇ ರೋಬಾಸ್ಟಾ ಕಾಫಿಯ ದರದಲ್ಲಿಯೂ ಏರಿಕೆ ಕಂಡಿದೆ. ಕಳೆದ ವರ್ಷ ಚಿಕ್ಕಮಗಳೂರು ಜಿಲ್ಲೆಯಲ್ಲಿ 16,200 ಹೆಕ್ಟೇರ್‌ ಪ್ರದೇಶದಲ್ಲಿ ಕಾಫಿ ಬೆಳೆ ಬೆಳೆಯಾಗಿತ್ತು. ಅದ್ರಲ್ಲೂ ಚಿಕ್ಕಮಗಳೂರು ತಾಲೂಕಿನಲ್ಲಿಯೇ ಅತೀ ಹೆಚ್ಚು ಪ್ರಮಾಣದಲ್ಲಿ ಕಾಫಿಯನ್ನು ಬೆಳೆಯಲಾಗುತ್ತಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ 7,200 ಹೆಕ್ಟೇರ್‌, ಮೂಡಿಗೆರೆಯಲ್ಲಿ 6,500 ಹೆಕ್ಟೇರ್‌, ಕೊಪ್ಪದಲ್ಲಿ 1,500 ಹೆಕ್ಟೇರ್‌, ಎನ್‌ಆರ್‌ ಪುರದಲ್ಲಿ 350 ಹಾಗೂ ತರಿಕೆರೆ ತಾಲೂಕಿನಲ್ಲಿ 250 ಹೆಕ್ಟೇರ್‌ ಪ್ರದೇಶದಲ್ಲಿ ಕಾಫಿಯನ್ನು ಬೆಳೆಯಲಾಗುತ್ತಿದೆ.

ಇದನ್ನೂ ಓದಿ : Drinik Virus : ಬ್ಯಾಂಕ್‌ ಗ್ರಾಹಕರೇ ಎಚ್ಚರ! ಇದು ನಿಮ್ಮ ಬ್ಯಾಂಕಿಂಗ್‌ ಮಾಹಿತಿಯನ್ನು ಕದಿಯಬಹುದು

ಇದನ್ನೂ ಓದಿ : Mutual Funds : ನಿಮಗೆ SIP ಬಗ್ಗೆ ಗೊತ್ತಾ? ಇದರ ಮೂಲಕವು ಲಕ್ಷಗಟ್ಟಲೇ ಹಣ ಗಳಿಸಬಹುದು.

Comments are closed.