Rishabh Pant injury update : ಹೇಗಾಗಿದೆ ನೋಡಿ ರಿಷಭ್ ಪಂತ್ ಪರಿಸ್ಥಿತಿ..! ಮೆಟ್ಟಿಲು ಹತ್ತಲು ಕಷ್ಟ ಪಡುತ್ತಿದ್ದಾರೆ ವಿಕೆಟ್ ಕೀಪರ್

ಬೆಂಗಳೂರು : (Rishabh Pant injury update) ಟೀಮ್ ಇಂಡಿಯಾದ ಸ್ಫೋಟಕ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ (Rishabh Pant) ಈಗ ಹೇಗಿದ್ದಾರೆ? ಪಂತ್ ಮತ್ತೆ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಳ್ಳುವುದು ಯಾವಾಗ? ಈ ಪ್ರಶ್ನೆಗಳು ಅವರ ಅಭಿಮಾನಿಗಳನ್ನು ಕಾಡುತ್ತಲೇ ಇದೆ. ಕಳೆದ ವರ್ಷ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ರಿಷಭ್ ಪಂತ್ ಈಗ ಚೇತರಿಸಿಕೊಳ್ಳುತ್ತಿದ್ದು, ಬೆಂಗಳೂರಿನಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (National Cricket Academy – NCA) ನಡೆಯುತ್ತಿರುವ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.

ಕಳೆದ ಕೆಲ ದಿನಗಳಿಂದ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿರುವ ಪಂತ್, ಬುಧವಾರ ವೀಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಮೆಟ್ಟಿಲುಗಳನ್ನು ಹತ್ತುತ್ತಿರುವ ವೀಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ರಿಷಭ್ ಪಂತ್, “ಸಣ್ಣ ಸಣ್ಣ ವಿಚಾರಗಳು ಕೆಲವೊಮ್ಮೆ ಕಷ್ಟಕರವಾಗುತ್ತವೆ” ಎಂದು ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

25 ವರ್ಷದ ರಿಷಭ್ ಪಂತ್ ಅವರ ಟೀಮ್ ಇಂಡಿಯಾ ಕಂಬ್ಯಾಕ್‌ಗೆ ಇನ್ನೂ 8ರಿಂದ 9 ತಿಂಗಳು ಹಿಡಿಯುವ ಸಾಧ್ಯತೆಯಿದೆ. ಈ ವರ್ಷ ಪೂರ್ತಿ ಪಂತ್ ಕ್ರಿಕೆಟ್‌ನಿಂದ ಹೊರಗುಳಿಯಲಿದ್ದು, ಇದೇ ವರ್ಷದ ಆಕ್ಟೋಬರ್-ನವೆಂಬರ್ ತಿಂಗಳಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಅಲಭ್ಯರಾಗಲಿದ್ದಾರೆ. ಕಳೆದ ವರ್ಷದ ಡಿಸೆಂಬರ್ 30ರಂದು ರಿಷಭ್ ಪಂತ್ ಚಲಾಯಿಸುತ್ತಿದ್ದ ಐಷಾರಾಮಿ ಕಾರು ದೆಹಲಿ-ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯ ರೂರ್ಕಿ ಎಂಬಲ್ಲಿ ಅಫಘಾತಕ್ಕೀಡಾಗಿತ್ತು.

ಇದನ್ನೂ ಓದಿ : Yashaswi Jaiswal : ಪಾನಿಪುರಿ ಹುಡುಗನಿಗೆ ಸಿಗಲಿದ್ಯಾ ವಿಂಡೀಸ್ ಟಿಕೆಟ್? ಟಿ20 ರೇಸ್‌ನಲ್ಲಿ ರಿಂಕು ಸಿಂಗ್!

ಡೆಹ್ರಾಡೂನ್‌ನಲ್ಲಿದ್ದ ಗೆಳತಿಯನ್ನು ಭೇಟಿ ಮಾಡಲು ಬೆಳ್ಳಂಬೆಳಗ್ಗೆ ಹೊರಟಿದ್ದ ರಿಷಭ್ ಪಂತ್ ತಾವೇ ಅತ್ಯಂತ ವೇಗದಲ್ಲಿ ಕಾರು ಚಲಾಯಿಸುತ್ತಿದ್ದರು. ಈ ವೇಳೆ ಪಂತ್ ಕಾರು ಬೆಳಗ್ಗೆ 5 ಗಂಟೆಗೆ ರೂರ್ಕಿ ಬಳಿ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದಿತ್ತು. ಈ ವೇಳೆ ಪಂತ್ ಅವರ ಮುಖ, ಬೆನ್ನು, ಸೊಂಟ, ಕಾಲು ಸೇರಿದಂತೆ ದೇಹಕ್ಕೆ ಗಂಭೀರ ಗಾಯಗಳಾಗಿದ್ದವು. ರಸ್ತೆ ಅಫಘಾತದಲ್ಲಿ ಪಂತ್ ಕಾರಿಗೆ ಬೆಂಕಿ ಹೊತ್ತಿಕೊಂಡಾಗ ಸ್ಥಳೀಯ ಟ್ರಕ್ ಚಾಲಕರೊಬ್ಬರು ರಿಷಭ್ ಪಂತ್ ಅವರನ್ನು ರಕ್ಷಿಸಿ ಡೆಹ್ರಾಡೂನ್ ಆಸ್ಪತ್ರೆಗೆ ಸೇರಿಸಿದ್ದರು. ನಂತರ ಪಂತ್ ಅವರನ್ನು ಬಿಸಿಸಿಐ ಮುಂಬೈನ ಕೋಕಿಲಾ ಬೆನ್ ಧೀರೂಭಾಯ್ ಅಂಬಾನಿ ಆಸ್ಪತ್ರೆಗೆ ಏರ್‌ಲಿಫ್ಟ್ ಮಾಡಿತ್ತು. ಅಲ್ಲಿ ರಿಷಭ್ ಪಂತ್ ಮೊಣಕಾಲಿನ ಶಸ್ತ್ರಚಿಕಿತ್ಸೆಗೊಳಗಾಗಿದ್ದರು.

Rishabh Pant injury update: See how Rishabh Pant’s condition is..! The wicket keeper is struggling to climb the stairs

Comments are closed.