ಬಾರೀ ಅಗ್ನಿಅವಘಡ : ಸುಟ್ಟು ಕರಕಲಾಯ್ತು ಮೊಬೈಲ್‌ ಶಾಪ್‌, ದ್ವಿಚಕ್ರ ವಾಹನ ಶೋರೂಂ

ಪುಣೆ : ಬಾರೀ ಅಗ್ನಿ ಅವಘಡ (fire accident) ಸಂಭವಿಸಿ ದ್ವಿಚಕ್ರವಾಹನ ಶೋರೂಂ, ಮೊಬೈಲ್‌ ಶಾಪ್‌ ಹಾಗೂ ಗೃಹೋಪಕರಣ ಮಳಿಗೆ ಬೆಂಕಿಯ ಕೆನ್ನಲಾಗೆಗೆ ಸುಟ್ಟು ಕರಕಲಾಗಿದೆ. ಪುಣೆಯ ಸತಾರದ ಡಿಮಾರ್ಟ್‌ ಬಳಿಯಲ್ಲಿಯ ರಸ್ತೆಯಲ್ಲಿ ಈ ಅವಘಡ ಸಂಭವಿಸಿದ್ದು, ಸುಮಾರು ಏಳಕ್ಕೂ ಅಧಿಕ ಅಗ್ನಿಶಾಮಕ ವಾಹನಗಳ ಮೂಲಕ ಬೆಂಕಿ ನಂದಿಸುವ ಕಾರ್ಯವನ್ನು ಮಾಡಲಾಗುತ್ತಿದೆ.

ಸೋಮವಾರ ನಸುಕಿನ ಜಾವ ಈ ಅವಘಡ ಸಂಭವಿಸಿದೆ. ಆರಂಭದಲ್ಲಿ ಗೃಹೋಪಕರಣ ಮಳಿಗೆಗೆ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಅಕ್ಕಪಕ್ಕದಲ್ಲಿರುವ ಅಂಗಡಿಗಳಿಗೆ ಬೆಂಕಿ ವ್ಯಾಪಿಸಿದೆ. ಗೃಹೋಪಯೋಗಿ ವಸ್ತುಗಳ ಮಳಿಗೆ, ಅಡುಗೆ ಸಲಕರಣೆ, ಮೊಬೈಲ್ ಫೋನ್‌ ಮಾರಾಟ ಮಳಿಗೆ ಹಾಗೂ ದ್ವಿಚಕ್ರ ವಾಹನ ಮಳಿಗೆಗಳು ಇದರಲ್ಲಿ ಸೇರಿವೆ. ಅಗ್ನಿಅವಘಡದಲ್ಲಿ ಎರಡು ಅಂತಸ್ಥಿನ ಕಟ್ಟಡ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ : Wrestlers vs WFI : ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ 7 ಮಹಿಳಾ ಕುಸ್ತಿಪಟುಗಳಿಗೆ ಭದ್ರತೆ ನೀಡಿದ ದೆಹಲಿ ಪೊಲೀಸರು

ಇದನ್ನೂ ಓದಿ : ಫ್ಯಾಕ್ಟರಿಯಲ್ಲಿ ಅನಿಲ ಸೋರಿಕೆ : 9 ಸಾವು, ಹಲವರಿಗೆ ಗಾಯ

ಬೆಂಕಿಯ ತೀವ್ರತೆ ಸುಮಾರು 100 ಅಡಿಗಳಷ್ಟು ಎತ್ತರಕ್ಕೆ ವ್ಯಾಪಿಸಿತ್ತು. ಶೋರೂಂನ ಗೋಡೆಗಳು ಕುಸಿದಿದ್ದು, ಗಾಜುಗಳು ಒಡೆದು ಹೋಗಿವೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಸುಮಾರು ಏಳು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯವನ್ನು ನಡೆಸುತ್ತಿವೆ. ಯಾವ ಕಾರಣಕ್ಕೆ ಬೆಂಕಿ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿಲ್ಲ. ಈ ಹಿನ್ನೆಲೆಯಲ್ಲಿ ತನಿಖೆಯನ್ನು ನಡೆಸಲಾಗುತ್ತಿದೆ. ಗೃಹೋಪಕರಣ ಮಳಿಗೆ, ಮೊಬೈಲ್‌ ಶಾಪ್‌ ಹಾಗೂ ದ್ವಿಚಕ್ರವಾಹನ ಶೋ ರೂಂಗೆ ಬೆಂಕಿ ತಗುಲಿದ್ದು, ಮೊಬೈಲ್‌ ಪೋನ್‌ ಹಾಗೂ ದ್ವಿಚಕ್ರ ವಾಹನಗಳು ಬೆಂಕಿಯ ಕೆನ್ನಾಲಗೆಗೆ ಸುಟ್ಟು ಕರಕಲಾಗಿವೆ. ಅಗ್ನಿಶಾಮಕ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ.

ಇದನ್ನೂ ಓದಿ : ಕಟ್ಟಡ ಕುಸಿತ ಎರಡನೇ ಮಹಡಿಯಲ್ಲಿ ಸಿಕ್ಕಿಬಿದ್ದ 7 ಮಂದಿ : 2ನೇ‌ ದಿನವೂ ಮುಂದುವರಿದ ಕಾರ್ಯಾಚರಣೆ

ಫ್ಯಾಕ್ಟರಿಯಲ್ಲಿ ಅನಿಲ ಸೋರಿಕೆ : 9 ಸಾವು, ಹಲವರಿಗೆ ಗಾಯ

ಲೂಧಿಯಾ : ಪಂಜಾಬ್‌ನ ಲೂಧಿಯಾನದ ಗಿಯಾಸ್‌ಪುರ ಪ್ರದೇಶದಲ್ಲಿ ಭಾನುವಾರ ಅನಿಲ ಸೋರಿಕೆಯ ಘಟನೆ (Ludhiana Gas Leak) ವರದಿಯಾಗಿದೆ. ಈ ಘಟನೆಯಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿದ್ದು, 11 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸ್ಥಳೀಯ ಆಡಳಿತ, ಪೊಲೀಸ್ ಅಧಿಕಾರಿಗಳು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡ ಸ್ಥಳದಲ್ಲಿ ಹಾಜರಿದ್ದರು.

“ಖಂಡಿತವಾಗಿ, ಇದು ಅನಿಲ ಸೋರಿಕೆ ಪ್ರಕರಣವಾಗಿದೆ. ಜನರನ್ನು ಸ್ಥಳಾಂತರಿಸಲು ಎನ್‌ಡಿಆರ್‌ಎಫ್ ತಂಡವು ಸ್ಥಳದಲ್ಲಿದೆ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತದೆ. ಈ ಘಟನೆಯಲ್ಲಿ 9 ಜನರು ಸಾವನ್ನಪ್ಪಿದ್ದಾರೆ ಮತ್ತು 11 ಜನರು ಅಸ್ವಸ್ಥರಾಗಿದ್ದಾರೆ” ಎಂದು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಸ್ವಾತಿ ತಿವಾನಾ , ಲುಧಿಯಾನ ವೆಸ್ಟ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕನಿಷ್ಠ ಐದು ಸಾವು ನೋವುಗಳು ವರದಿಯಾಗಿವೆ ಎಂದು ಮೊದಲು ಪೊಲೀಸರು ಹೇಳಿದರು. “ಮೊದಲಿಗೆ 5 ರಿಂದ 6 ಜನರು ಪ್ರಜ್ಞಾಹೀನರಾದರು ಮತ್ತು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ಷಣಾ ತಂಡವನ್ನು ಸ್ಥಳಕ್ಕೆ ಕರೆಸಲಾಗಿದೆ. ವೈದ್ಯರು ಮತ್ತು ಆಂಬ್ಯುಲೆನ್ಸ್‌ಗಳ ತಂಡವನ್ನು ಸಹ ಕರೆಸಲಾಗಿದೆ” ಎಂದು ಎಎನ್‌ಐ ಪ್ರಕಾರ ಪೊಲೀಸರು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

Another fire accident: Mobile shop, two-wheeler showroom burnt down.

Comments are closed.