ಸದ್ಯಕ್ಕಂತೂ ಎಲ್ಲಿ ನೋಡಿದ್ರೂ ಕೊರೊನಾದ್ದೇ ಮಾತು. ಟಿವಿ ಹಾಕಿದ್ರೂ ಕೊರೊನಾದ್ದೆ ಸುದ್ದಿ, ಮೊಬೈಲ್ ನಲ್ಲಿ ಕಾಲ್ ಮಾಡಿದ್ರೂ ಕೊರೊನಾ…ಕೊರೊನಾ… ಒಟ್ಟಿನಲ್ಲಿ ಜನರು ಕೆಮ್ಮಿದ್ರೆ ಸಾಕು.. ಸೀನಿದ್ರೆ ಸಾಕು.. ಕೊರೊನಾ ಬಂತೆನೋ ಅಂತಾ ಭಯ ಪಡೋ ಸ್ಥಿತಿ ಬಂದು ಬಿಟ್ಟಿದೆ.

ಇಷ್ಟು ದಿನ ಚೀನಾ, ಇಟಲಿ, ಇರಾನ್ ದೇಶಗಳ ಕೊರೊನಾ ಸುದ್ದಿ ಕೇಳಿ ಭಯಪಡ್ತಿದ್ದ, ಜನ ಇದೀಗ ನಮ್ಮ ದೇಶ, ನಮ್ಮ ರಾಜ್ಯದಲ್ಲೇ ಕೊರೊನಾ ದೃಢಪಟ್ಟಿದೆ ಅನ್ನೋ ಸುದ್ದಿ ಕೇಳಿ ನಿಜಕ್ಕೂ ಬೆಚ್ಚಿಬಿದ್ದಿದ್ದಾರೆ. ಸರಕಾರ ಮುಂಜಾಗೃತಾ ಕ್ರಮವಾಗಿ ಜನರಿಗೆ ಕೊರೊನಾ ಮಾಹಿತಿ, ಎಚ್ಚರಿಕೆಯನ್ನು ನೀಡುತ್ತಿದೆ. ಶಾಲೆ, ಕಾಲೇಜು, ಸಾರ್ವಜನಿಕ ಸ್ಥಳಗಳು ಸೇರಿದಂತೆ ಸಾರ್ವಜನಕರಲ್ಲಿ ಕೊರೊನಾ ಸೋಂಕಿನ ಬಗ್ಗೆ ಜಾಗೃತಿಯನ್ನು ಮೂಡಿಡಿಸಲಾಗುತ್ತಿದೆ. ಆದರೆ ಮೊಬೈಲ್ ಗಳಲ್ಲಿ ಕೊರೊನಾ ಜಾಗೃತಿ ಮೂಡಿಸುತ್ತಿರೋದು ನಿಜಕ್ಕೂ ಕಿರಿಕಿರಿಯಾಗ್ತಿದೆ ಅಂತಿದ್ದಾರೆ ಜನ.

ದೇಶದ ಪ್ರಮುಖ ಟೆಲಿಕಾಂ ಕಂಪೆನಿಗಳು ಕೊರೊನಾ ಜಾಗೃತಿ ಸಂದೇಶವನ್ನು ರವಾನಿಸುತ್ತಿದೆ. ಎಲ್ಲರ ಕಾಲರ್ ಟೋನ್ ಗಳಲ್ಲಿಯೂ ಕೊರೊನಾ ಮೆಸೆಜ್ ಕೇಳಿಬರುತ್ತಿದೆ. ತುರ್ತು ಸಂದರ್ಭದಲ್ಲಿ ಕೆರೆ ಮಾಡಿದ್ರೆ ಆ ಕಡೆಯಿಂದ ಕೆಮ್ಮಿದ ಶಬ್ದ ಕೇಳಿ ಜನ ಸಿಟ್ಟಾಗುತ್ತಿದ್ದಾರೆ. ಎಷ್ಟೇ ಬಾರಿ ಕರೆ ಮಾಡಿದ್ರೂ ಪದೇ ಪದೇ ಕೊರೊನಾ ಸಂದೇಶ ಕೇಳಿ ಕೇಳಿ ಜನ ಸುಸ್ತಾಗಿ ಹೋಗಿದ್ದಾರೆ.

ಕೆಲವರು ಟೆಲಿಕಾಂ ಕಂಪೆನಿಗಳ ಕಸ್ಟಮರ್ ಕೇರ್ ಗೆ ಕರೆ ಮಾಡಿ ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಆದರೆ ಇನ್ನೂ ಮೂರು ದಿನ ಸರಕಾರದ ಆದೇಶವಿರೋದ್ರಿಂದ ಕಾಲರ್ ಟೋನ್ ತೆಗೆಯೋಕೆ ಆಗೋದಿಲ್ಲಾ ಅಂತಾ ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ ಉತ್ತರ ಕೊಡ್ತಿದ್ದಾರೆ.
ನೀವೂ ಕೂಡ ಕೊರೊನಾ ಸಂದೇಶ ಕೇಳಿ ಕೇಳಿ ಸುಸ್ತಾಗಿ ಹೋಗಿದ್ದೀರಾ.

ನಿಮಗೂ ಇದು ಕಿರಿ ಕಿರಿ ಅನ್ನಿಸೋದಕ್ಕೆ ಶುರುವಾಗಿದ್ಯಾ. ಹಾಗಾದ್ರೆ ಏನ್ ಮಾಡಿದ್ರೆ ಕೊರೊನಾ ಕಾಲರ್ ಟೋನ್ ಕಿರಿಕಿರಿಯಿಂದ ಮುಕ್ತರಾಗಬಹುದು ಅನ್ನೋದನ್ನು ನಾವು ಹೇಳ್ತಿವಿ ಕೇಳಿ. ನೀವು ಯಾರಿಗೆ ಕರೆ ಮಾಡ್ತಿರೋ ಆವಾಗ, ನೀವು ಬ್ಯಾಂಕ್ ಎಂಡ್ ಬಟನ್ ಪ್ರೆಸ್ ಮಾಡಿ ಡಯಲ್ ಪ್ಯಾಡ್ ಗೆ ಬರಬೇಕು.

ಡಯಲ್ ಪ್ಯಾಡಿನಲ್ಲಿರೋ # ಟ್ಯಾಗ್ ಪ್ರೆಸ್ ಮಾಡಿದ್ರೆ ಸಾಕು. ಕೊರೊನಾ ಕಾಲರ್ ಟೋನ್ ಕೇಳಿಸೋದಿಲ್ಲ. ಬದಲಾಗಿ ನಿಮಗೆ ಮೊಬೈಲ್ ರಿಂಗಣಿಸುತ್ತೆ. ಇನ್ಯಾಕೆ ತಡ, ಕೊರೊನಾ ಮೆಸೇಜ್ ನಿಮಗೆ ಕಿರಿಕಿರಿ ಅನ್ನಿಸಿದ್ರೆ ಕಸ್ಟಮರ್ ಕೇರ್ ಗೆ ಕರೆ ಮಾಡಿ ಸಮಯ ಹಾಳು ಮಾಡ್ಬೇಡಿ. ಬದಲಾಗಿ ಈ ಸಣ್ಣ ಕೆಲಸ ಮಾಡಿ.