ಇರ್ಫಾನ್ ಪಠಾಣ್ ಅಬ್ಬರಕ್ಕೆ ಶ್ರೀಲಂಕಾ ಉಡೀಸ್

0

ಮುಂಬೈ : ಆಲ್ ರೌಂಡರ್ ಆಟಗಾರ ಇರ್ಫಾನ್ ಪಠಾಣ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಭಾರತದ ಲೆಜೆಂಡ್ಸ್ ತಂಡ ಸೇಫ್ಟಿ ವಲ್ಡ್ ಸೀರಿಸ್ ಟಿ20 ಸರಣಿಯಲ್ಲಿ ಶ್ರೀಲಂಕಾ ವಿರುದ್ದ ಟೀಂ ಇಂಡಿಯಾ ಐದು ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದೆ.

ಮೊದಲು ಬ್ಯಾಟಿಂಗ್ ಮಾಡಿ ಶ್ರೀಲಂಕಾ ಲಜೆಂಡ್ಸ್ ಗೆ ನಾಯಕ ತಿಲಕರತ್ನ ದಿಲ್ಶಾನ್ ಮತ್ತು ರೊಮೆಶ್ ಕಲವಿತರಣ ಉತ್ತಮ ಆರಂಭವೊದಗಿಸಿದ್ರು. ದಿಲ್ಶನ್ 23 ರನ್ ಗಳಿಸಿದ್ರೆ, ಕಲವಿತರಣ 21 ರನ್ ಗಳಿಸಿದ್ರು, ಅತ್ತಪತ್ತು ಕೇವಲ 1ರನ್ ಗೆ ವಿಕೆಟ್ ಒಪ್ಪಿಸಿದ್ರೆ, ತಿಲಾನ ತುಷಾರ 11ರನ್ ಗಳಿಸಿದ್ರು, ನಂತರ ಚಮರ ಕಪುಗೆದೆರಾಗೆ ಜೊತೆಯಾದ ಸಚಿತ್ರಾ ಸೇನಾನಾಯಕೆ ಉತ್ತಮ ಜೊತೆಯಾಟ ನೀಡಿದ್ರು.

ಕಪುಗೆದೆರಾ 23 ರನ್ ಗಳಿಸಿದ್ರೆ, ಸಚಿತ್ರಾ ಸೇನಾನಾಯಕೆ 19 ರನ್ ಗಳಿಸಿದ್ರು. ಫರ್ವಿಜ್ ಮೆಹರೂಪ್ 10, ಅಜಂತಾ ಮೆಂಡಿಸ್ 9, ಉಪುಲ್ ಚಂದನಾ 3 ಮತ್ತು ರಂಗನ ಹೆರಾತ್ 12 ರನ್ ನೆರವಿನಿಂದ ಶ್ರೀಲಂಕಾ ಲೆಜೆಂಡ್ಸ್ ತಂಡ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 138ರನ್ ಗಳಿಸಿತ್ತು. ಭಾರತ ಪರ ಮುನಾಫ್ ಪಟೇಲ್ 4 ವಿಕೆಟ್ ಪಡೆದ್ರೆ, ಜಹೀರ್ ಖಾನ್, ಇರ್ಫಾನ್ ಪಠಾಣ್, ಮನ್ ಪ್ರಿತ್ ಗೂನಿ ಹಾಗೂ ಸಂಜಯ್ ಬಂಗಾರ್ ತಲಾ 1 ವಿಕೆಟ್ ಪಡೆದುಕೊಂಡಿದ್ದಾರೆ.

ನಂತರ ಬ್ಯಾಟಿಂಗ್ ಗೆ ಇಳಿದ ಭಾರತಕ್ಕೆ ಆರಂಭಿಕ ಆಘಾತ ಎದುರಾಗಿತ್ತು. ಮಾಸ್ಟರ್ ಬ್ಲಾಸ್ಟರ್ ಶೂನ್ಯಕ್ಕೆ ಔಟಾದ್ರೆ, ಸ್ಪೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ 3 ರನ್ ಗಳಿಸಿ ರನೌಟಾದ್ರು, ನಂತರ ಬಂದ ಯುವರಾಜ್ ಸಿಂಗ್ ಕೂಡ 1 ರನ್ ಗೆ ತನ್ನ ಆಟ ಮುಗಿಸಿದ್ರು. ನಂತರ ಮೊಹಮದ್ ಕೈಪ್ ಗೆ ಜೊತೆಯಾದ ಸಂಜಯ್ ಬಂಗಾರ್ ಉತ್ತಮ ಜೊತೆಯಾಟ ನಡೆಸಿದ್ರು.

ಬಂಗಾರ್ 18 ರನ್ ಗಳಿಸಿ ಔಟಾಗುತ್ತಿದ್ದಂತೆಯೇ ಬ್ಯಾಟಿಂಗ್ ಗೆ ಇಳಿದ ಆಲ್ ರೌಂಡರ್ ಇರ್ಫಾನ್ ಪಠಾಣ್ 31 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 6 ಬೌಂಡರಿ ನೆರವಿನಿಂದ 57 ರನ್ ಗಳಿಸಿದ್ರು. ಮೊಹಮದ್ ಕೈಪ್ ಕೂಡ 45 ಎಸೆತಗಳಲ್ಲಿ 46 ರನ್ ಗಳಿಸಿ ಭಾರತಕಕ್ಕೆ ನೆರವಾದ್ರು. ಮನ್ ಪ್ರಿಯ್ ಗೂನಿ 11 ರನ್ ನೆರವಿನಿಂದ ಭಾರತ 18.4 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 139 ರನ್ ಗಳಿಸೋ ಮೂಲಕ ಜಯಗಳಿಸಿದೆ.
ಸಂಕ್ಷಿಪ್ತ ಸ್ಕೋರ್ :
ಭಾರತ ಲೆಜೆಂಡ್ಸ್ : ಇರ್ಫಾನ್ ಪಠಾಣ್ 57 (31), ಮೊಹಮ್ಮದ್ ಕೈಪ್ 46 (45), ಸಂಜಯ್ ಬಂಗಾರ್ 18 (19), ಮನ್ ಪ್ರಿತ್ ಗೂನಿ 11 (8), ಚಾಮಿಂಡಾ ವಾಸ್ 5/2, ರಂಗನ್ ಹೆರಾತ್ 22/1 ಹಾಗೂ ಸಚಿತ್ರೆ ಸೇನಾನಾಯಕೆ 19/1
ಶ್ರೀಲಂಕಾ ಲೆಜೆಂಡ್ಸ್ : ತಿಲಕರತ್ನೆ ದಿಲ್ಶಾನ್ 23 (23), ಚಾಮರ ಕಪ್ಪುಗೆದರಾ 23 (17), ರೊಮಶ್ ಕಲುವಿತರಣ 21 (25), ಸಚಿತ್ರಾ ಸೇನಾ ನಾಯಕೆ 19 (15), ರಂಗನ್ ಹೆರಾತ್ 12 (3), ಪರ್ವೀಜ್ ಮೆಹರೂಪ್ 10 (9), ತಿಲಾನ ತುಷಾರ 10 (14) ರಂಗನ್ ಹೆರಾತ್ 12 (3), ಮುನಾಪ್ ಪಟೇಲ್ 19/4, ಜಹೀರ್ ಖಾನ್ 35/1, ಇರ್ಫಾನ್ ಪಠಾಣ್ 31/1, ಮನ್ರಿಪ್ ಗೊನಿ 19/1, ಸಂಜಯ್ ಬಂಗಾರ್ 23/1

Leave A Reply

Your email address will not be published.