Credit Cards to Reduce Bills: ಕಿರಾಣಿ ಸಾಮಾಗ್ರಿ ಖರೀದಿಯ ಬಿಲ್ ಕಡಿಮೆ ಮಾಡಲು ಬೆಸ್ಟ್ ಕ್ರೆಡಿಟ್ ಕಾರ್ಡ್‌ಗಳಿವು

ಪ್ರತಿದಿನ ಬಳಸುವ ದಿನಸಿ ವಸ್ತುಗಳನ್ನು ಕಾಲಕಾಲಕ್ಕೆ ಎಲ್ಲರೂ ಖರೀದಿಸುತ್ತಲೆ ಇರುತ್ತೇವೆ. ಕಿರಾಣಿ ಅಂಗಡಿಗಳಲ್ಲಿ ಕ್ಯಾಶ್ ಮೂಲಕ ಪಾವತಿ ಅಥವಾ ಸುಮ್ಮನೆ ಗೂಗಲ್ ಪೇ/ಫೋನ್ ಪೇ ಮಾಡುವ ಬದಲು ಕೊಂಚ ಸ್ಮಾರ್ಟ್ ಮಾರ್ಗ ಬಳಸಿದರೆ ಹಣ ಉಳಿಸಬಹುದು. ಕಿರಾಣಿ ಸಾಮಾಗ್ರಿ ಖರೀದಿಸಿ ಬಿಲ್‌ಗಳನ್ನು ಪಾವತಿಸುವಾ ನೀವು ಸಂದರ್ಭಕ್ಕೆ ತಕ್ಕ ಕ್ರೆಡಿಟ್ ಕಾರ್ಡ್ ಬಳಸಿದರೆ (Credit Cards to Reduce Grocery Bills) ನಿಜಕ್ಕೂ ಹಣವನ್ನು ಉಳಿಸಬಹುದು. ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ Grofers (Now Blinkit) ಮತ್ತು Bigbasket ನಂತಹ ಆಯ್ದ ಬ್ರಾಂಡ್‌ಗಳ ಅಂಗಡಿಗಳಲ್ಲಿ ದಿನಸಿ ಖರೀದಿಸುವಾಗ ಹಲವು ಕ್ರೆಡಿಟ್ ಕಾರ್ಡ್‌ಗಳು ವಿವಿಧ ರಿಯಾಯಿತಿಗಳನ್ನು ನೀಡುತ್ತವೆ.  ಕ್ಯಾಶ್‌ಬ್ಯಾಕ್, ಬಹುಮಾನಗಳು ಮತ್ತು ನೇರ ರಿಯಾಯಿತಿಗಳನ್ನು ನೀಡುವ ಮೂಲಕ ದಿನಸಿ ಖರೀದಿಯ ಹಣವನ್ನು ಕೊಂಚವಾದರೂ ನೀವು ಉಳಿಸಬಹುದಾಗಿದೆ. ಕಿರಾಣಿ ಶಾಪಿಂಗ್‌ನಲ್ಲಿ ಹಣ ಉಳಿಸಲು ಸಹಕರಿಸುವ ಉತ್ತಮ ಕ್ರೆಡಿಟ್ ಕಾರ್ಡ್‌ಗಳ ವಿವರಗಳನ್ನು (Credit Cards to Reduce Bills) ನೀವು ಈ ಸುದ್ದಿಯನ್ನು ಸಂಪೂರ್ಣ ಓದಿ ತಿಳಿದುಕೊಳ್ಳಿ.

Amazon Pay ICICI ಕ್ರೆಡಿಟ್ ಕಾರ್ಡ್
ಇದು ಜೀವಮಾನಪೂರ್ಣ ಉಚಿತ ಕ್ರೆಡಿಟ್ ಕಾರ್ಡ್ ಆಗಿದೆ. ಗ್ರಾಹಕರು ಒಂದೇ ಒಂದು ರೂಪಾಯಿಯನ್ನೂ ಶುಲ್ಕ ರೂಪದಲ್ಲಿ ಪಾವತಿಸಬೇಕಿಲ್ಲ. ಅಮೆಜಾನ್ ಪ್ರೈಮ್ ಸದಸ್ಯರಿಗೆ ಅಮೆಜಾನ್‌ನಲ್ಲಿ 5 ಪ್ರತಿಶತ ಕ್ಯಾಶ್‌ಬ್ಯಾಕ್, ಪ್ರೈಮ್ ಸದಸ್ಯರಲ್ಲದವರಿಗೆ 3 ಶೇಕಡಾ ಕ್ಯಾಶ್‌ಬ್ಯಾಕ್ ಲಭ್ಯವಿದೆ.  Amazon Pay ನಲ್ಲಿ 100+ ಪಾಲುದಾರ ವ್ಯಾಪಾರಿಗಳು ತಾವು ಮಾಡುವ ಪಾವತಿಗಳ ಮೇಲೆ 2 ಶೇಕಡಾ ಕ್ಯಾಶ್‌ಬ್ಯಾಕ್ ಪಡೆದುಕೊಳ್ಳಬಹುದು. ಅಲ್ಲದೆ ಈ ಕ್ರೆಡಿಟ್ ಕಾರ್ಡ್ ಇತರ ವಹಿವಾಟುಗಳ ಮೇಲೆ 1 ಶೇಕಡಾ ಕ್ಯಾಶ್‌ಬ್ಯಾಕ್ ನೀಡುತ್ತದೆ.

Flipkart Axis ಬ್ಯಾಂಕ್ ಕ್ರೆಡಿಟ್ ಕಾರ್ಡ್:
ಫ್ಲಿಫ್‌ಕಾರ್ಟ್‌ ಮತ್ತು ಆಕ್ಸಿಸ್ ಬ್ಯಾಂಕ್ ಜಂಟಿಯಾಗಿ ನೀಡುವ ಈ ಕ್ರೆಡಿಟ್ ಕಾರ್ಡ್ ನೀವು Flipkart ಮತ್ತು Myntra ನಲ್ಲಿ ಶಾಪಿಂಗ್ ಮಾಡುವಾಗ 5 ಪ್ರತಿಶತ ಕ್ಯಾಶ್‌ಬ್ಯಾಕ್, Cleartrip, Cure.fit, PVR, Swiggy, Uber ಮುಂತಾದೆಡೆ 4 ಪ್ರತಿಶತ ಕ್ಯಾಶ್‌ಬ್ಯಾಕ್ ಮತ್ತು ಇತರ ಎಲ್ಲಾ ವಿಭಾಗಗಳಲ್ಲಿ 1.5 ಪ್ರತಿಶತ ಕ್ಯಾಶ್‌ಬ್ಯಾಕ್ ನೀಡುತ್ತದೆ. ಖರ್ಚಿನ ಮೇಲೆ ಕ್ಯಾಶ್‌ಬ್ಯಾಕ್ ಜೊತೆಗೆ, ವರ್ಷದಲ್ಲಿ ಕಾರ್ಡ್ ಬಳಕೆದಾರರು ಭಾರತದಲ್ಲಿನ ಫ್ಲಿಫ್‌ಕಾರ್ಟ್‌ ಮತ್ತು ಆಕ್ಸಿಸ್ ಬ್ಯಾಂಕ್‌ಗಳ ಪಾಲುದಾರ ರೆಸ್ಟೋರೆಂಟ್‌ಗಳಲ್ಲಿ ಶೇಕಡಾ 20 ರಷ್ಟು ರಿಯಾಯಿತಿಯೊಂದಿಗೆ 4 ಲೌಂಜ್‌ಗಳಿಗೆ (ಐಷಾರಾಮಿ ಆತಿಥ್ಯ ಕೋಣೆ) ಪ್ರವೇಶವನ್ನು ಸಹ ಪಡೆಯಬಹುದಾಗಿದೆ. ಅಂದಹಾಗೆ ಈ ಈ ಕ್ರೆಡಿಟ್ ಕಾರ್ಡ್‌ನ ವಾರ್ಷಿಕ ಶುಲ್ಕ 500 ರೂ.

ಇದನ್ನೂ ಓದಿ: China: ಚೀನಾ ಹೆದರುವುದು ಈ ಎರಡು ವಿಷಯಕ್ಕೆ ಮಾತ್ರ!

ಸ್ಟ್ಯಾಂಡರ್ಡ್ ಚಾರ್ಟರ್ಡ್ ಡಿಜಿಸ್ಮಾರ್ಟ್ ಕ್ರೆಡಿಟ್ ಕಾರ್ಡ್
ಜೊಮಾಟೊದಲ್ಲಿ ಒಂದು ತಿಂಗಳಲ್ಲಿ ಐದು ಖರೀದಿಗೆ 10 ಪ್ರತಿಶತದಷ್ಟು ರಿಯಾಯಿತಿಯನ್ನು ನೀಡುತ್ತದೆ ಈ ಕ್ರೆಡಿಟ್ ಕಾರ್ಡ್. Myntra ದಲ್ಲಿ ತಿಂಗಳಿಗೊಮ್ಮೆ 20 ಪ್ರತಿಶತ ರಿಯಾಯಿತಿ, ದೇಶೀಯ ವಿಮಾನ ಟಿಕೆಟ್‌ಗಳನ್ನು ಕಾಯ್ದಿರಿಸುವಾಗ 20 ಪ್ರತಿಶತ ರಿಯಾಯಿತಿ ಮತ್ತು ಮೂರು ತಿಂಗಳಿಗೊಮ್ಮೆ ಯಾತ್ರಾ.ಕಾಮ್‌ನಲ್ಲಿ 10,000 ರೂ.ವರೆಗಿನ ಅಂತಾರಾಷ್ಟ್ರೀಯ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡುವಾಗ 10 ಪ್ರತಿಶತ ರಿಯಾಯಿತಿಗಳನ್ನು ಈ ಕ್ರೆಡಿಟ್ ಕಾರ್ಡ್ ಒದಗಿಸುತ್ತದೆ. ಇದು ಪ್ರತಿ ಮೂರು ತಿಂಗಳಿಗೊಮ್ಮೆ ಯಾತ್ರಾದಲ್ಲಿ ದೇಶೀಯ ಹೋಟೆಲ್ ಬುಕಿಂಗ್‌ಗಳ ಮೇಲೆ ಒಂದು ವಹಿವಾಟಿಗೆ ರೂ 4,000 ವರೆಗೆ ಶೇಕಡಾ 25 ರಷ್ಟು ರಿಯಾಯಿತಿ ಮತ್ತು ಇತರ ಪ್ರಯೋಜನಗಳನ್ನು ನೀಡುತ್ತದೆ. ಈ ಕ್ರೆಡಿಟ್ ಕಾರ್ಡ್‌ನಲ್ಲಿ ವಾರ್ಷಿಕ ಶುಲ್ಕ 588 ರೂ.

ಇದನ್ನೂ ಓದಿ: Jeevan Jyoti Bima Yojana: ಜಗತ್ತಿನಲ್ಲಿಯೇ ಅತ್ಯಂತ ಕಡಿಮೆ ದರದ ಟರ್ಮ್ ಇನ್ಶೂರೆನ್ಸ್ ಯೋಜನೆ ಹೊಂದಿದೆ ಭಾರತ

(Credit Cards to Reduce Bills in grocery)

Comments are closed.