Cryptocurrency: ಕ್ರಿಪ್ಟೋಕರೆನ್ಸಿ ಭಾರತದಲ್ಲಿ ಕಾನೂನುಬದ್ಧವೇ, ಅಲ್ಲವೇ? ಸುಪ್ರೀಂ ಪ್ರಶ್ನೆ

ಭಾರತದಲ್ಲಿ ಬಿಟ್‌ಕಾಯಿನ್ (Bitcoin) ಬಳಕೆಯ ಕಾನೂನುಬದ್ಧತೆಯ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರವನ್ನು ಒತ್ತಾಯಿಸಿದೆ ಎಂದು ವರದಿಯಾಗಿದೆ. ಭಾರತದಲ್ಲಿನ ಕ್ರಿಪ್ಟೋಕರೆನ್ಸಿಗಳ (Cryptocurrency) ಭವಿಷ್ಯದ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ನರೇಂದ್ರ ಮೋದಿ (PM Narendra Modi) ನೇತೃತ್ವದ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ (Supreme Court) ಸೂಚನೆ ನೀಡಿದೆ. ಫೆಬ್ರವರಿ 1 ರಂದು ತಮ್ಮ ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು (Finance Minister Nirmala Sitharaman) ಆರ್‌ಬಿಐ (RBI)ರೂಪಿಸುವ ‘ಡಿಜಿಟಲ್ ರೂಪಾಯಿ’ (Digital Rupee)ಅನ್ನು ಮಾತ್ರ ಅಧಿಕೃತ ಡಿಜಿಟಲ್ ಕರೆನ್ಸಿಯಾಗಿ ಗುರುತಿಸಲಾಗುವುದು. ಏಪ್ರಿಲ್ 1 ರಿಂದ ಯಾವುದೇ ಇತರ ಖಾಸಗಿ ಡಿಜಿಟಲ್ ಆಸ್ತಿಗಳಿಂದ ಗಳಿಸಿದ ಲಾಭದ ಮೇಲೆ ಸರ್ಕಾರವು ಶೇಕಡಾ 30 ರಷ್ಟು ತೆರಿಗೆಯನ್ನು ವಿಧಿಸುತ್ತದೆ ಎಂದು ಹೇಳಿದ್ದರು. ಆದರೆ ಇತರ ಡಿಜಿಟಲ್ ಹಣದ (Digital Money) ಮೇಲೆ ತೆರಿಗೆ ವಿಧಿಸಿದ್ದರೂ ಅವುಗಳನ್ನು ಅಧಿಕೃತವೆಂದು ಮಾನ್ಯ ಮಾಡಿರಲಿಲ್ಲ.

ಕೆಲವು ದಿನಗಳ ಮುನ್ನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು “ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸುವ ಅಥವಾ ನಿಷೇಧಿಸದಿರುವ” ಅಂತಿಮ ನಿರ್ಧಾರವನ್ನು ಸರಿಯಾದ ಸಮಾಲೋಚನೆಯ ನಂತರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದರು. “ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸುವುದು ಅಥವಾ ನಿಷೇಧಿಸದಿರುವುದು ಈಕುರಿತು ಸಂಪೂರ್ಣ ಸಮಾಲೋಚನೆ ನಡೆಸಿದ ನಂತರ ತಿರ್ಮಾನಿಸಲಾಗುವುದು. ಸದ್ಯ ಕ್ರಿಪ್ಟೋಕರೆನ್ಸಿಗಳು ಕಾನೂನುಬದ್ಧವಾಗಿರಲಿ ಅಥವಾ ಕಾನೂನುಬಾಹಿರವಾಗಿರಲಿ, ಅವುಗಳನ್ನು ಕಾನೂನುಬದ್ಧಗೊಳಿಸಲು ಅಥವಾ ನಿಷೇಧಿಸಲು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ರಾಜ್ಯಸಭೆಯಲ್ಲಿ ಬಜೆಟ್ ಚರ್ಚೆಗೆ ಪ್ರತಿಕ್ರಿಯಿಸುವಾಗ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದರು.

ಕ್ರಿಪ್ಟೋಕರೆನ್ಸಿ ಕುರಿತು ಕಾಂಗ್ರೆಸ್ ಸದಸ್ಯೆ ಛಾಯಾ ವರ್ಮಾ ಕೇಳಿದ ಪ್ರಶ್ನೆಗಳಿಗೆ ಸಚಿವರು ಉತ್ತರಿಸಿದ್ದ ಅವರು, ದೇಶದಲ್ಲಿ ಕ್ರಿಪ್ಟೋಕರೆನ್ಸಿಗಳ ಕಾನೂನುಬದ್ಧತೆಗಳ ಬಗ್ಗೆ ಸ್ಪಷ್ಟಪಡಿಸಿದ ಸೀತಾರಾಮನ್, “ನಾನು ತೆರಿಗೆ ವಿಧಿಸುತ್ತೇನೆ ಏಕೆಂದರೆ ಅದು ತೆರಿಗೆಯ ಸಾರ್ವಭೌಮ ಹಕ್ಕು” ಎಂದು ಹೇಳಿದ್ದರು.

ಕ್ರಿಪ್ಟೋಕರೆನ್ಸಿಗಳ ಯಾವುದೇ ರೀತಿಯ ವರ್ಗಾವಣೆಯ ಮೇಲೆ ಕೇಂದ್ರ ಸರ್ಕಾರವು ನೇರವಾಗಿ 30 ಪ್ರತಿಶತ ತೆರಿಗೆಯನ್ನು ಘೋಷಿಸಿರುವುದರಿಂದ, ಹೂಡಿಕೆದಾರರು ಇದನ್ನು ದೇಶದಲ್ಲಿ ಕ್ರಿಪ್ಟೋ ನಿಯಂತ್ರಣಕ್ಕೆ ಮೊದಲ ಧನಾತ್ಮಕ ಹೆಜ್ಜೆಯಾಗಿ ತೆಗೆದುಕೊಳ್ಳುತ್ತಿದ್ದಾರೆ. ಕ್ರಿಪ್ಟೋಕರೆನ್ಸಿಗಳ ಮೇಲೆ ಯಾವುದೇ ನಿಷೇಧವಿಲ್ಲ ಎಂದು ಬಜೆಟ್ ಪ್ರಕಟಣೆಯಿಂದ ಈಗ ಸ್ಪಷ್ಟವಾಗಿದೆ ಮತ್ತು ಇದು ಉದ್ಯಮಕ್ಕೆ ಹೆಚ್ಚಿನ ಹೂಡಿಕೆದಾರರನ್ನು ತಡೆಯುವ ಬದಲು ಪ್ರೋತ್ಸಾಹಿಸಬಹುದು” ಎಂಬ ಅಭಿಪ್ರಾಯ ಬಜೆಟ್ ನಂತರ ಹೊರಹೊಮ್ಮಿತ್ತು. ಅಲ್ಲದೇ ತೆರಿಗೆ ವಿಧಿಸಿದ ನಂತರವೂ ಅಧಿಕೃತವೆಂದು ಘೋಷಿಸಿದ ಬಗ್ಗೆ ಅಸಮಾಧಾನಗಳು ಸಹ ಭುಗಿಲೆದ್ದಿದ್ದವು.

ಇದನ್ನೂ ಓದಿ: Vladimir Putin Profile: ವ್ಲಾದಿಮಿರ್ ಪುಟಿನ್: ಬೇಹುಗಾರಿಕಾ ಸಂಸ್ಥೆ ಕೆಜಿಬಿ ಏಜೆಂಟ್‌ನಿಂದ ರಷ್ಯಾವನ್ನು ಕೈಮುಷ್ಠಿಯಲ್ಲಿ ಇಟ್ಟುಕೊಂಡ ಅಧ್ಯಕ್ಷನಾಗಿ ಬೆಳೆದ ಬಗೆಯಿದು

(Cryptocurrency is illegal in India or legal asks Supreme Court to Central)

Comments are closed.