CBI Arrest: ಮಿಂಚಿನ ಕಾರ್ಯಾಚರಣೆ; NSE GOO ಆನಂದ್ ಸುಬ್ರಮಣಿಯನ್ ಬಂಧನ

ಭಾರತದ ಅತಿ ದೊಡ್ಡ ಷೇರು ವಿನಿಮಯ ಕೇಂದ್ರ ಎನ್‌ಎಸ್‌ಇ (NSE) ಮಾಜಿ ಎಂಡಿ ಮತ್ತು ಸಿಇಒ. ಹಿಮಾಲಯದ ಯೋಗಿಯೊಬ್ಬರಿಗೆ (Himalayan Yogi) ಷೇರು ವಿನಿಮಯ ಕೇಂದ್ರ ಎನ್‌ಎಸ್‌ಇ ಸಂಸ್ಥೆಯ ಗೌಪ್ಯ ಮಾಹಿತಿ ಹಂಚಿಕೊಂಡಿದ್ದಾಗಿ ಆರೋಪ ಕೇಳಿಬಂದಿದ್ದ ಪ್ರಕರಣದಲ್ಲಿ ಬಹುದೊಡ್ಡ ಬೆಳವಣಿಗೆಯಾಗಿದೆ. ರಾಷ್ಟ್ರೀಯ ಷೇರುಪೇಟೆಯಲ್ಲಿನ (ಎನ್‌ಎಸ್ಇ) ಗೌಪ್ಯ ಮಾಹಿತಿ ಸೋರಿಕೆ ಪ್ರಕರಣದ ಸಂಬಂಧ ಅದರ ಮಾಜಿ ವ್ಯಸ್ಥಾಪಕ ನಿರ್ದೇಶಕಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಚಿತ್ರಾ ರಾಮಕೃಷ್ಣರ ವಿರುದ್ಧದ ಪ್ರಕರಣದಲ್ಲಿ ಎನ್‌ಎಸ್‌ಇಯ ಗ್ರೂಪ್‌ ಆಪರೇಟಿಂಗ್‌ ಅಧಿಕಾರಿಯಾಗಿದ್ದ (ಜಿಒಒ) ಆನಂದ್ ಸುಬ್ರಮಣಿಯನ್‌ ಅವರನ್ನು(CBI Arrest) ಸಿಬಿಐ ಗುರುವಾರ ರಾತ್ರಿ ಬಂಧಿಸಿದೆ. ಆನಂದ್‌ ಸುಬ್ರಮಣಿಯನ್‌ 2013ರ ಏಪ್ರಿಲ್‌ನಂತರ ಎನ್‌ಸಿಇಯ ಮುಖ್ಯ ಕಾರ್ಯತಂತ್ರ ಸಲಹೆಗಾರರಾಗಿದ್ದರು. ನಂತರ ಅವರಿಗೆ ಜಿಒಒ ಹುದ್ದೆಗೆ ಬಡ್ತಿ ನೀಡಲಾಯಿತು. ಹೀಗಾಗಿ ಅವರು ಚಿತ್ರ ರಾಮಕೃಷ್ಣ ಅವರಿಗೆ 2015ರ ಏಪ್ರಿಲ್‌ನಿಂದ 2016ರ ಅಕ್ಟೋಬರ್‌ ಅವರೆಗೆ ಸಲಹೆಗಾರರೂ ಆಗಿದ್ದರು.

ಸುಬ್ರಮಣಿಯನ್‌ ಅವರನ್ನು ಬಂಧಿಸುವುದಕ್ಕೂ ಮುನ್ನ ಸಿಬಿಐ ಅವರನ್ನು ಮೂರು ದಿನ ವಿಚಾರಣೆಗೆ ಗುರಿಪಡಿಸಿತ್ತು. ಅದಕ್ಕೂ ಮುನ್ನ ಚಿತ್ರಾ ರಾಮಕೃಷ್ಣ, ಮಾಜಿ ಮುಖ್ಯ ಕಾರ್ಯಾಚರಣೆ ಅಧಿಕಾರಿ ರವಿ ನಾರಾಯಣ್, ಅವರನ್ನೂ ಸಿಬಿಐ ವಿಚಾರಣೆ ನಡೆಸಿತ್ತು. ಈ ವಾರದ ಆರಂಭದಲ್ಲಿ ಮುಂಬೈನಲ್ಲಿರುವ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಕಚೇರಿಗೆ ಭೇಟಿ ನೀಡಿ ಚಿತ್ರಾ ರಾಮಕೃಷ್ಣ ಅವರ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದಿತ್ತು.

ಚಿತ್ರಾ ಅವರು ಎನ್‌ಸಿಇಗೆ ಸಂಬಂಧಿಸಿದ ಗೌಪ್ಯ ಮಾಹಿತಿ ಮತ್ತು ಡೇಟಾಗಳನ್ನು ಹೊರಗಿನ ವ್ಯಕ್ತಿ ಜತೆಗೆ ಹಂಚಿಕೊಳ್ಳುತ್ತಿದ್ದರು. ಇದರಿಂದ ಒಳವ್ಯಹಾರಕ್ಕೆ ಅವಕಾಶ ಆಗಿತ್ತು. ‘ಹಿಮಾಲಯದಲ್ಲಿರುವ ಬಾಬಾ’ ಜತೆಗೆ ಚಿತ್ರಾ ಈ ಮಾಹಿತಿ ಹಂಚಿಕೊಳ್ಳುತ್ತಿದ್ದರು. ಅವರ ಸಲಹೆಯನ್ನು ಪಡೆದೇ ಚಿತ್ರಾ ಕಾರ್ಯನಿರ್ವಹಿಸುತ್ತಿದ್ದರು ಎಂದು ಆರೋಪಿಸಲಾಗಿದೆ. 2016ರಲ್ಲಿ ಚಿತ್ರಾ ಎನ್‌ಸಿಇಗೆ ರಾಜೀನಾಮೆ ನೀಡಿದ್ದರು. ಅಲ್ಲಿಯವರೆಗೂ ಅವರು ಬಾಬಾ ಕೈಗೊಂಬೆಯಂತೆಯೇ ವರ್ತಿಸಿದರು. ಬಾಬಾರ ಸಲಹೆಯಂತೆಯೇ ಆನಂದ ಸುಬ್ರಮಣಿಯನ್‌ ಅವರನ್ನು ಜಿಒಒ ಹುದ್ದೆಗೆ ಮತ್ತು ಸಲಹೆಗಾರರ ಹುದ್ದೆಗೆ ನೇಮಿಸಲಾಗಿತ್ತು. ಇದು ಸೆಬಿ ನಿಯಮಾವಳಿಗೆ ಬಾಹಿರವಾದ ನೇಮಕಾತಿ ಎಂದು ದೂರಲಾಗಿದೆ. ಅಪರಚಿತರಾಗಿರುವ ಬಾಬಾ, ಸರ್ಕಾರದ ಪ್ರಮುಖ ಹುದ್ದೆಯಲ್ಲಿದ್ದ ಮಾಜಿ ಅಧಿಕಾರಿ ಎಂದು ಹೇಳಲಾಗಿದೆ. ಆದರೆ, ಬಾಬಾ ಇರುವಿಕೆ ಬಗ್ಗೆ ಚಿತ್ರಾ ಏನೂ ಹೇಳಿಲ್ಲ

. Chitra Ramkrishna Explainer: ಭಾರತದ ಅತಿ ದೊಡ್ಡ ಷೇರು ವಿನಿಮಯ ಕೇಂದ್ರ, ಹಿಮಾಲಯದ ಯೋಗಿ ಮತ್ತು ಚಿತ್ರಾ ರಾಮಕೃಷ್ಣ; ಎತ್ತಣಿಂದೆತ್ತ ಸಂಬಂಧ?

(CBI Arrest NSE GOO Anand Subrahmanian)

Comments are closed.