ದೆಹಲಿ : Domestic LPG Cylinder Hiked : ದೇಶದಲ್ಲಿ ದಿನಕ್ಕೊಂದರಂತೆ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು ಶ್ರೀ ಸಾಮಾನ್ಯನ ಜೇಬಿಗೆ ಕತ್ತರಿ ಬೀಳುತ್ತಲೇ ಇದೆ. ಪೆಟ್ರೋಲ್ – ಡೀಸೆಲ್ ದರ ಏರಿಕೆ , ತರಕಾರಿ ಬೆಲೆ ಹೆಚ್ಚಳ, ವಿದ್ಯುತ್ ದರ ಹೆಚ್ಚಳ , ಅಡುಗೆ ಎಣ್ಣೆಗಳ ಬೆಲೆ ಏರಿಕೆ ಹೀಗೆ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತಿದೆ. ಇದೀಗ ಪ್ರಮುಖ ಬೆಳವಣಿಗೆಯೊಂದರಲ್ಲಿ 14.2 ಕೆಜಿ ತೂಕವುಳ್ಳ ಗೃಹೋಪಯೋಗಿ ಎಲ್ಪಿಜಿ ಸಿಲಿಂಡರ್ಗಳ ದರದಲ್ಲಿ ಇಂದಿನಿಂದ ಅನ್ವಯವಾಗು ವಂತೆ ಬೆಲೆ ಏರಿಕೆಯಾಗಿದೆ. ಎಲ್ಪಿಜಿ ಸಿಲಿಂಡರ್ನ ಬೆಲೆಯನ್ನು ತೈಲ ಮಾರುಕಟ್ಟೆ ಕಂಪನಿಗಳು ದೆಹಲಿಯಲ್ಲಿ ಪ್ರತಿ ಸಿಲಿಂಡರ್ಗೆ 50 ರೂಪಾಯಿ ಏರಿಕೆ ಮಾಡಿವೆ. ಈ ಬೆಲೆ ಏರಿಕೆಯ ಬಳಿಕ ಈ ಹಿಂದೆ ರಾಷ್ಟ್ರ ರಾಜಧಾನಿಯಲ್ಲಿ 1003 ರೂಪಾಯಿಗೆ ಲಭ್ಯವಿದ್ದ ಸಿಲಿಂಡರ್ ದರ 1053 ರೂಪಾಯಿ ಆಗಿದೆ.
ಇದರ ಜೊತೆಯಲ್ಲಿ ಐದು ಕೆಜಿ ಗೃಹ ಬಳಕೆ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು ಪ್ರತಿ ಲೀಟರ್ಗೆ 18 ರೂಪಾಯಿ ಏರಿಕೆ ಮಾಡಲಾಗಿದೆ. ಇಂದಿನಿಂದ ಜಾರಿಗೆ ಬರುವಂತೆ ದೆಹಲಿಯಲ್ಲಿ 5 ಕೆಜಿ ದೇಶಿಯ ಎಲ್ಪಿಜಿ ಸಿಲಿಂಡರ್ಗಳ ಈ ಹಿಂದೆ 369 ರೂಪಾಯಿಗೆ ಸಿಗುತ್ತಿದ್ದರೆ ಇಂದಿನಿಂದ 387 ರೂಪಾಯಿಗಳನ್ನು ನೀಡಿ ಖರೀದಿ ಮಾಡುವುದು ಅನಿವಾರ್ಯ ವಾಗಲಿದೆ. ಆದರೆ 19 ಕೆ.ಜಿ ವಾಣಿಜ್ಯ ಬಳಕೆಯ ಸಿಲಿಂಡರ್ಗಳ ಬೆಲೆ 8.5 ರೂಪಾಯಿ ಇಳಿಕೆ ಕಂಡಿದೆ. ಈ ಹಿಂದೆ 2021 ರೂಪಾಯಿಗೆ ಲಭ್ಯವಿದ್ದ ವಾಣಿಜ್ಯ ಸಿಲಿಂಡರ್ ದರ 2012.5 ರೂಪಾಯಿಗಳಿಗೆ ಇಳಿಕೆಯಾಗಿದೆ.
ಇತ್ತರ ಮುಂಬೈನಲ್ಲಿ 14.2 ಕೆಜಿ ಗೃಹಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆಯು 1002.50 ರೂಪಾಯಿಗಳಿಂದ 1052.50 ರೂಪಾಯಿಗಳಿಗೆ ಏರಿಕೆ ಕಂಡಿದೆ. ಕೋಲ್ಕತ್ತಾದಲ್ಲಿ ಗ್ರಾಹಕರು 1029 ರೂಪಾಯಿ ಬದಲಿಗೆ 1079 ರೂಪಾಯಿಗಳನ್ನು ಪಾವತಿಸಿ ಗೃಹೋಪಯೋಗಿ ಸಿಲಿಂಡರ್ಗಳನ್ನು ಖರೀದಿಸಬೇಕಾಗಿದೆ. ಚೆನ್ನೈನಲ್ಲಿ ಈ ಹಿಂದೆ 1058 ರೂಪಾಯಿ ಇದ್ದ ಸಿಲಿಂಡರ್ ಬೆಲೆಯು ಇದೀಗ 1068.50 ರೂಪಾಯಿಗಳಿಗೆ ಮಾತ್ರ ಏರಿಕೆ ಕಂಡಿದೆ. ವಾಣಿಜ್ಯ ಬಳಕೆಯ ಸಿಲಿಂಡರ್ಗಳ ಬೆಲೆ ಕೊಂಚ ಇಳಿಕೆ ಕಂಡು ಬಂದಿರುವುದು ಸಮಾಧಾನಕರ ಎನಿಸಿದ್ದರೂ ಸಹ ಗೃಹೋಪಯೋಗಿ ಸಿಲಿಂಡರ್ಗಳ ಬೆಲೆಯಲ್ಲಿ ದಿಢೀರ್ ಏರಿಕೆ ಕಂಡು ಬಂದಿರುವುದು ಮಧ್ಯಮ ವರ್ಗದ ಜನತೆಗೆ ತಲೆ ಕೆಟ್ಟಂತಾಗಿದೆ. ಈ ಹಿಂದೆ ಅಂದರೆ ಮೇ 7ರಂದು ಹಾಗೂ ಮೇ 19ರಂದೂ ದೇಶಿ ಸಿಲಿಂಡರ್ಗಳ ಬೆಲೆಯಲ್ಲಿ ಏರಿಕೆ ಕಂಡು ಬಂದಿತ್ತು.
ಇದನ್ನು ಓದಿ : ವಿಷ್ಣು ದಾದಾ ಎವರ್‌ಗ್ರೀನ್ ಸಾಂಗ್ ಯಾಕೋ ನೆನಪಾಗ್ತಿದೆ ಎಂದ ತಮಿಳುನಾಡು ಕ್ರಿಕೆಟರ್ !
ಇದನ್ನೂ ಓದಿ : murdering Chandrasekhar Guruji : ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣ : ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು
Delhi: Prices Of 14.2 Kg Domestic LPG Cylinder Hiked By Rs 50, Check Revised Rates