PM Modi : ಪ್ರಧಾನಿ ನರೇಂದ್ರ ಮೋದಿ ಚಾಲನೆ ಮಾಡಿದ ನಾಲ್ಕು ಹೊಸ ಡಿಜಿಟಲ್‌ ಯೋಜನೆಗಳು!

ಪ್ರಧಾನಿ ನರೇಂದ್ರ ಮೋದಿ (PM Modi) ಯವರು ಡಿಜಿಟಲ್‌ ಇಂಡಿಯಾ ವೀಕ್‌ 2022 (Digital India Week 2022) ಅನ್ನು ಸೋಮವಾರ ಉದ್ಘಾಟಿಸಿದರು. ಗಾಂಧಿನಗರದಲ್ಲಿ ಈ ಕಾರ್ಯಕ್ರಮ ಉದ್ಘಾಟಿಸುವುದರ ಜೊತೆಗೆ ಪಿಎಂ ಮೋದಿ ಭಾರತದಲ್ಲಿ ನಾಲ್ಕು ಹೊಸ ಡಿಜಿಟಲ್‌ ಯೋಜನೆಗಳಿಗೆ (4 New Digital Schemes) ಚಾಲನೆ ನೀಡಿದರು. ಈ ಯೋಜನೆಗಳು ಡಿಜಿಟಲ್‌ ಇಂಡಿಯಾ ಭಾಷಿಣಿ, ಡಿಜಿಟಲ್‌ ಇಂಡಿಯಾ ಜೆನೆಸಿಸ್‌, Indiastack.global, ಮತ್ತು MyScheme ಗಳಾಗಿವೆ.

ಪ್ರಧಾನಿಯವರು ಚಾಲನೆ ಮಾಡಿದ ನಾಲ್ಕು ಯೋಜನೆಗಳ ವಿವಿರ ಹೀಗಿದೆ.

  1. ಡಿಜಿಟಲ್‌ ಇಂಡಿಯಾ ಭಾಷಿಣಿ ಯೊಜನೆ
    ಈ ಯೋಜನೆಯು ಧ್ವನಿ ಆಧಾರಿತ ಸೇವೆ ಸೇರಿದಂತೆ ಭಾರತೀಯ ಭಾಷೆಗಳಲ್ಲಿ ಇಂಟರ್ನೆಟ್‌ ಮತ್ತು ಡಿಜಿಟಲ್‌ ಸೇವೆಗಳನ್ನು ಸುಲಭವಾಗಿ ಪಡೆಯಲು ಸಹಾಯ ಮಾಡುತ್ತದೆ. ಇದು ಕಂಟೆಂಟ್‌ ಗಳನ್ನು ಭಾರತೀಯ ಭಾಷೆಗಳಲ್ಲಿ ರಚಿಸಲು ಸಹಾಯ ಮಾಡುತ್ತದೆ. ಡಿಜಿಟಲ್‌ ಇಂಡಿಯಾ ಭಾಷಿಣಿ ಯೋಜನೆಯು ಭಾಷಾದಾನ್‌ಎಂಬ ಕ್ರಾಡ್‌ಸೋರ್ಸಿಂಗ್‌ ಮೂಲಕ ಡೇಟಾಸೆಟ್‌ಗಳನ್ನು ನಿರ್ಮಿಸಲು ನಾಗರಿಕರಿಗೆ ಸಹಾಯ ಮಾಡುತ್ತದೆ ಎಂದು ಸರ್ಕಾರ ಹೇಳಿದೆ.
  2. ಡಿಜಿಟಲ್ ಇಂಡಿಯಾ ಜೆನಿಸಿಸ್‌
    ಡಿಜಿಟಲ್ ಇಂಡಿಯಾ ಜೆನಿಸಿಸ್‌ ಎಂದರೆ ಜೆನ್‌–ನೆಕ್ಸ್ಟ್‌ ಸಪೋರ್ಟ್‌ ಫಾರ್‌ ಇನೋವೇಟಿವ್‌ ಸ್ಟಾರ್ಟ್‌ಅಪ್‌. ಇದರ ಉದ್ದೇಶವು ನ್ಯಾಷನಲ್‌ ಡೀಪ್‌–ಟೆಕ್‌ ಸ್ಟಾರ್ಟ್‌ ಅಪ್‌ ಪ್ಲಾಟ್‌ಫಾರ್ಮ್‌ ಅನ್ನು ರಚಿಸುವದಾಗಿದೆ. ಭಾರತದ ಟೈರ್‌–II ಮತ್ತು ಟೈರ್‌–III ನಗರಗಳಲ್ಲಿ ಯಶಸ್ವೀ ಸ್ಟಾರ್ಟ್‌ಅಪ್‌ಗಳನ್ನು ಅನ್ವೇಷಿಸಲು, ಬೆಂಬಲಿಸಲು ಮತ್ತು ಬೆಳೆಸಲು ಮಾಡುವ ಪ್ರಯತ್ನವಾಗಿದೆ. ಈ ಯೋಜನೆಯು ಒಟ್ಟು ರೂ. 750 ಕೋಟಿ ವೆಚ್ಚವನ್ನು ಹೊಂದಿದೆ.
  3. Indiastack.global
    Indiastack.global ಅನ್ನುವ ಯೋಜನೆಯು ಆಧಾರ್‌, UPI, ಡಿಜಿಲಾಕರ್‌, ಕೋವಿನ್‌ ವ್ಯಾಕ್ಸಿನೇಷನ್ ಪ್ಲಾಟ್‌ಫಾರ್ಮ್‌, ಸರಕಾರಿ ಇ–ಮಾರ್ಕೆಟ್‌ಪ್ಲಸ್‌(GeM), ದಿಕ್ಷಾ ಪ್ಲಾಟ್‌ಫಾರ್ಮ್‌ ಮತ್ತು ಆಯುಷ್ಮಾನ್‌ ಭಾರತ್‌ ಡಿಜಿಟಲ್‌ ಹೆಲ್ತ್‌ ಮಿಷನ್‌ಗಳು ಇಂಡಿಯಾ ಸ್ಟಾಕ್‌ ಅಡಿಯಲ್ಲಿ ಜಾರಿಗೊಳಿಸಲಾದ ಪ್ರಮುಖ ಯೋಜನೆಗಳಾಗಿವೆ. ಗ್ಲೋಬಲ್‌ ಪಬ್ಲಿಕ್‌ ಡಿಜಿಟಲ್‌ ಗೂಡ್ಸ್‌ ರೆಪೊಸಿಟರಿಗೆ ಇದು ಭಾರತದ ಕೊಡುಗೆಯಾಗಿದೆ. ಜನಸಂಖ್ಯೆಯ ಪ್ರಮಾಣದಲ್ಲಿ ಡಿಜಿಟಲ್‌ ಪರಿವರ್ತನೆ ಯೋಜನೆಗಳನ್ನು ನಿರ್ಮಿಸುವಲ್ಲಿ ಭಾರತವನ್ನು ನಾಯಕನಾಗಿ ಇರಿಸಲು ಸಹಾಯ ಮಾಡುತ್ತದೆ. ತಂತ್ರಜ್ಞಾನ ಪರಿಹಾರಗಳನ್ನು ಹುಡುಕುತ್ತಿರುವ ಇತರ ದೇಶಗಳಿಗೆ ಸಹಾಯ ನೀಡುತ್ತದೆ.
  4. MyScheme
    MyScheme ಎಂಬುದುಸರ್ಕಾರಿ ಯೋಜನೆಗಳನ್ನು ಬಳಸಲು ಒದಗಿಸುವ ಸೇವಾ ಶೋಧನೆಯಾಗಿದೆ. ಇದು ಒನ್‌–ಸ್ಟಾಪ್‌ ಸರ್ಚ್‌ ಮತ್ತು ಅನ್ವೇಷಣೆ ಪೋರ್ಟಲ್‌ಅನ್ನು ಒದಗಿಸುವ ಗುರಿ ಹೊಂದಿದೆ. ಅಲ್ಲಿ ಬಳಕೆದಾರರು ತಾವು ಯಾವ ಸ್ಕೀಮ್‌ಗಳ ಅಡಿಯಲ್ಲಿ ಅರ್ಹರು ಎಂದು ಹುಡುಕಬಹುದಾಗಿದೆ. ಇದರ ಜೊತೆಗೆ ಪಿಎಂ ಮೋದಿ ಮೇರಿ ಪೆಹಚಾನ್‌ ಯೋಜನೆಯನ್ನು ಸಹ ಘೋಷಿಸಿದರು. ಇದು ಬಹು ಆನ್‌ಲೈನ್‌ ಅಪ್ಲಿಕೇಷನ್‌ಗಳು ಅಥವಾ ಸೇವೆಗಳಿಗೆ ಒಂದೇ ಸೆಟ್‌ನಲ್ಲಿ ಪರಿಚಯಿಸುವ ಗುರಿ ಹೊಂದಿದೆ.

C2S ಪ್ರೋಗ್ರಾಂ
ಕೊನೆಯದಾಗಿ, ಚಿಪ್ಸ್ ಟು ಸ್ಟಾರ್ಟ್ಅಪ್ (C2S) ಕಾರ್ಯಕ್ರಮದ ಅಡಿಯಲ್ಲಿ ಬೆಂಬಲಿತವಾಗಿರುವ 30 ಸಂಸ್ಥೆಗಳ ಮೊದಲ ಸಮೂಹವನ್ನು ಪ್ರಧಾನಿ ಮೋದಿ ಘೋಷಿಸಿದರು. ಗಮನಾರ್ಹವಾಗಿ, C2S ಪ್ರೋಗ್ರಾಂ ಪದವಿ, ಸ್ನಾತಕೋತ್ತರ ಮತ್ತು ಸಂಶೋಧನಾ ಹಂತಗಳಲ್ಲಿ ಸೆಮಿಕಂಡಕ್ಟರ್ ಚಿಪ್‌ಗಳ ತಯಾರಿಕಾ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲವನ್ನು ತರಬೇತಿ ಮಾಡುವ ಗುರಿ ಹೊಂದಿದೆ. ಇದು ಭಾರತದಲ್ಲಿ ಸೆಮಿಕಂಡಕ್ಟರ್ ವಿನ್ಯಾಸದ ಕ್ಷೇತ್ರದಲ್ಲಿ ಕೆಲಸ ಮಾಡುವ ಸ್ಟಾರ್ಟ್‌ಅಪ್‌ಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದು ಸಾಂಸ್ಥಿಕ ಮಟ್ಟದಲ್ಲಿ ಮಾರ್ಗದರ್ಶನ ನೀಡುತ್ತದೆ ಮತ್ತು ವಿನ್ಯಾಸಕ್ಕಾಗಿ ಸಂಸ್ಥೆಗಳಿಗೆ ಅತ್ಯಾಧುನಿಕ ಸೌಲಭ್ಯಗಳು ಲಭ್ಯವಾಗುವಂತೆ ಮಾಡುತ್ತದೆ.

ಮುಂದಿನ ಮೂರು–ನಾಲ್ಕು ವರ್ಷಗಳ್ಲಲಿ ಇಲೆಕ್ಟ್ರಾನಿಕ್‌ ತಯಾರಿಕೆಯಲ್ಲಿ 300 ಬಿಲಿಯನ್‌ ಡಾಲರ್‌ಗಿಂತ ಹೆಚ್ಚಿನ ಮಟ್ಟಕ್ಕೆ ಕೊಂಡೊಯ್ಯುವ ಗುರಿಯಲ್ಲಿ ಭಾರತ ಕಾರ್ಯನಿರ್ವಹಿಸುತ್ತಿದೆ ಎಂದು ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಹೇಳಿದರು.

ಇದನ್ನೂ ಓದಿ : Top 5 Automatic Cars: 8 ಲಕ್ಷಕ್ಕಿಂತ ಕಡಿಮೆ ಬೆಲೆಯ ಭಾರತದ ಟಾಪ್‌ 5 ಆಟೊಮೆಟಿಕ್‌ ಕಾರುಗಳು!

ಇದನ್ನೂ ಓದಿ : PM Free Silai Machine Yojana : ಗುಡ್‌ ನ್ಯೂಸ್‌! ಮಹಿಳೆಯರಿಗಾಗಿ ಪ್ರಧಾನಮಂತ್ರಿ ಉಚಿತ ಹೊಲಿಗೆ ಯಂತ್ರ ಯೋಜನೆ!

(PM Modi launches four new digital schemes in India)

Comments are closed.