ನವದೆಹಲಿ : (Diwali Bank Holidays)ದೀಪಾವಳಿ ಹಬ್ಬಕ್ಕೆ ಇಡೀ ದೇಶವೇ ಸಜ್ಜಾಗುತ್ತಿದೆ. ಪ್ರತೀ ಮನೆ ಮನೆಗಳಲ್ಲಿಯೂ ಹಬ್ಬಕ್ಕೆ ಸಿದ್ದತೆ ಜೋರಾಗಿದೆ.ಅಕ್ಟೋಬರ್ 24ರಂದು ನರಕಚತುರ್ದಶಿ, 25ಕ್ಕೆ ಅಮಾವಾಸ್ಯೆ ಮತ್ತು 26ರಂದು ಬಲಿಪಾಡ್ಯಮಿ ಹಬ್ಬ ಇರುತ್ತದೆ. ಹಿಂದೂಗಳ ಪಾಲಿಗೆ ದೀಪಾವಳಿ ಮಹತ್ವದ ಹಬ್ಬ. ಮನೆಯ ತುಂಬಾ ದೀಪವಿಟ್ಟು, ಹೊಸ ಬಟ್ಟೆ ತೊಟ್ಟು ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಹಬ್ಬದ ಸಂಭ್ರಮದ ಜೊತೆಯಲ್ಲೇ ಬ್ಯಾಂಕುಗಳಿಗೆ ಈ ಬಾರಿ ಸಾಲು ಸಾಲು ರೆಜೆ ಬಂದಿದೆ. ದೀಪಾವಳಿಗೂ ಮೊದಲೇ ಬ್ಯಾಂಕುಗಳು ಸತತ ಆರು ದಿನಗಳ ಕಾಲ ಮುಚ್ಚಲ್ಪಟ್ಟಿರುತ್ತದೆ. ಈ ಸಂದರ್ಭದಲ್ಲಿ ಗ್ರಾಹಕರು ಬ್ಯಾಂಕ್ ವ್ಯವಹಾರಕ್ಕಾಗಿ ಹೋಗುವ ಮುಂಚೆ ರಜಾದಿನಗಳನ್ನು ಪರಿಶೀಸಿಲಿಸುವುದು ಉತ್ತಮ.
ನಾಳೆ ಅಂದರೆ ಅಕ್ಟೋಬರ್ 22ರಿಂದ ಆರಂಭಗೊಂಡು ಸತತ ಆರು ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಿರುತ್ತದೆ. ಅಕ್ಟೋಬರ್ 22 ರಂದು ಧನ್ತೇರಸ್ ಆಚರಣೆ ಸಲುವಾಗಿ ದೇಶಾದಾದ್ಯಂತ ಬ್ಯಾಂಕುಗಳು ಮುಚ್ಚಲ್ಪಟ್ಟಿರುತ್ತದೆ. ಇನ್ನೂ ಮುಂಬರುವ ಆರು ದಿನಗಳ ಬ್ಯಾಂಕ್ ರಜಾ ವಿವರ ಈ ಕೆಳಗೆ ತಿಳಿಸಲಾಗಿದೆ.
ಸತತವಾಗಿ ಆರು ದಿನಗಳ ಕಾಲ ಬ್ಯಾಂಕ್ ರಜೆ ವಿವರಗಳು :
- ಅಕ್ಟೋಬರ್ 22 : ನಾಲ್ಕನೇ ಶನಿವಾರದ ಕಾರಣ ಬ್ಯಾಂಕ್ ರಜೆ ಇರುತ್ತದೆ
- ಅಕ್ಟೋಬರ್ 23 : ಭಾನುವಾರದ ಕಾರಣ ಬ್ಯಾಂಕ್ ರಜೆ ಇರುತ್ತದೆ
- ಅಕ್ಟೋಬರ್ 24: ಕಾಳಿ ಪೂಜೆ, ದೀಪಾವಳಿ, (ಲಕ್ಷ್ಮೀ ಪೂಜೆ),ನರಕ ಚತುರ್ದಶಿ ಇರುವುದರಿಂದ ಗ್ಯಾಂಗ್ಟಾಕ್, ಹೈದರಾಬಾದ್, ಇಂಫಾಲ್ ಹೊರತುಪಡಿಸಿ ಭಾರತದಾದ್ಯಂತ ಬ್ಯಾಂಕುಗಳನ್ನು ಮುಚ್ಚಲ್ಪಟ್ಟಿರುತ್ತದೆ.
- ಅಕ್ಟೋಬರ್ 25: ಲಕ್ಷ್ಮಿ ಪೂಜೆ, ದೀಪಾವಳಿ, ಗೋವರ್ಧನ ಪೂಜೆ ಇರುವುದರಿಂದ ಗ್ಯಾಂಗ್ಟಾಕ್, ಹೈದರಾಬಾದ್, ಇಂಫಾಲ್, ಜೈಪುರದಲ್ಲಿ ಬ್ಯಾಂಕುಗಳು ಮುಚ್ಚಿರುತ್ತದೆ.
- ಅಕ್ಟೋಬರ್ 26: ಗೋವರ್ಧನ ಪೂಜೆ, ವಿಕ್ರಮ್ ಸಂವಂತ್ ಹೊಸ ವರ್ಷದ ದಿನ, ಭಾಯ್ ಬಿಜ್, ಭಾಯ್ ದುಜ್,ದೀಪಾವಳಿ (ಬಲಿಪಾಡ್ಯ),ಲಕ್ಷ್ಮಿ ಪೂಜೆ ಇರುವುದರಿಂದ
- ಅಹಮದಾಬಾದ್, ಬೇಲಾಪುರ್, ಬೆಂಗಳೂರು, ಡೆಹ್ರಾಡೂನ್, ಗ್ಯಾಂಗ್ಟಾಕ್, ಜಮ್ಮು, ಕಾನ್ಪುರ, ಲಕ್ನೋ, ಮುಂಬೈ, ನಾಗ್ಪುರ, ಶಿಮ್ಲಾ, ಶ್ರೀನಗರದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
- ಅಕ್ಟೋಬರ್ 27: ಭೈದೂಜ್, ಚಿತ್ರಗುಪ್ತ ಜಯಂತಿ, ಲಕ್ಷ್ಮಿ ಪೂಜೆ, ದೀಪಾವಳಿ ಇರುವುದರಿಂದ ನಿಂಗೋಲ್ ಚಕ್ಕೌಬಾ ಗ್ಯಾಂಗ್ಟಾಕ್, ಇಂಫಾಲ್, ಕಾನ್ಪುರ, ಲಕ್ನೋದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಇದನ್ನೂ ಓದಿ : 108 employees warn strike : ದಸರಾ ಆಯ್ತು ದೀಪಾವಳಿ ಬಂದ್ರೂ ಸಂಬಳವಿಲ್ಲ: ಮುಷ್ಕರದ ಎಚ್ಚರಿಕೆ ಕೊಟ್ಟ 108 ಸಿಬ್ಬಂದಿ
ಇದನ್ನೂ ಓದಿ : BJP secret team visit Karnataka : ಕರ್ನಾಟಕಕ್ಕೆ ಬಿಜೆಪಿ ಸೀಕ್ರೆಟ್ ಟೀಮ್: ದೀಪಾವಳಿಗೆ ಸಿಗಲಿದ್ಯಾ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ ?
ಇದನ್ನೂ ಓದಿ : Deepavali bus fares : ಬೆಂಗಳೂರು – ಹುಬ್ಬಳ್ಳಿ 5 ಸಾವಿರ ರೂ.: ದೀಪಾವಳಿಗೆ ಮನೆಗೆ ಹೊರಟವರಿಗೆ ಶಾಕ್
ಪ್ರತಿವರ್ಷದಂತೆ ಈ ಬಾರಿಯ ದೀಪಾವಳಿಯು ಹಿಂದೂ ಕ್ಯಾಲೆಂಡರ್ ತಿಂಗಳ ಕಾರ್ತಿಕ್ ಮಾಸದ ಹದಿನೈದನೇ ದಿನದಂದೇ ಆಚರಿಸಲಾಗುತ್ತಿದೆ. ಈ ಹಬ್ಬವನ್ನು ಜನರು ಬಹಳಷ್ಟು ಸಂಭ್ರಮದಿಂದ ಆಚರಿಸುತ್ತಾರೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ರಜಾ ಕ್ಯಾಲೆಂಡರ್ ಪ್ರಕಾರ, ಅಕ್ಟೋಬರ್ ತಿಂಗಳಲ್ಲಿ 21 ಬ್ಯಾಂಕ್ ರಜೆಗಳು ಇರುವುದಾಗಿದೆ. ಆದರೆ ಬ್ಯಾಂಕ್ ರಜಾದಿನ ಸಂದರ್ಭದಲ್ಲಿ ಆನ್‌ಲೈನ್ ಹಾಗೂ ಎಟಿಎಂ ವ್ಯವಸ್ಥೆಯಲ್ಲಿ ಯಾವುದೇ ತೊಂದರೆ ಇರುವುದಿಲ್ಲ.
Diwali Bank Holidays : Diwali, 6 consecutive days bank holiday from tomorrow