Digant’s health : ಪತಿ ದಿಗಂತ್​ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡ ನಟಿ ಐಂದ್ರಿತಾ ರೇ

Digant’s health : ಗೋವಾದ ಬೀಚ್​​ನಲ್ಲಿ ಕುಟುಂಬಸ್ಥರ ಜೊತೆ ತೆರಳಿದ್ದ ನಟ ದಿಗಂತ್​ ಅಪಘಾತ ಮಾಡಿಕೊಂಡಿದ್ದರು. ಸಮ್ಮರ್​ ಸಾಲ್ಟ್​ ಮಾಡಲು ಹೋಗಿ ಕುತ್ತಿಗೆಗೆ ಬಲವಾದ ಏಟನ್ನು ಮಾಡಿಕೊಂಡಿದ್ದ ನಟ ದಿಗಂತ್​​ ಶಸ್ತ್ರಚಿಕಿತ್ಸೆ ಬಳಿಕ ಮಣಿಪಾಲ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪತಿಯ ಆರೋಗ್ಯದ ಬಗ್ಗೆ ಖುದ್ದು ನಟಿ ಐಂದ್ರಿತಾ ರೇ ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.


ಈ ಸಂಬಂಧ ಟ್ವೀಟ್​ ಮಾಡಿರುವ ನಟಿ ಐಂದ್ರಿತಾ ರೇ ನಿನ್ನೆ ದಿಗಂತ್​​ಗೆ ನಡೆದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂಬ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಂತಸವಾಗುತ್ತಿದೆ. ದಿಗಂತ್​ ಈಗ ಶೀಘ್ರ ಗುಣಮುಖದ ಹಾದಿಯಲ್ಲಿದ್ದಾರೆ. ಎಲ್ಲಾ ಅಭಿಮಾನಿಗಳು, ಹಿತೈಷಿಗಳು, ಮಾಧ್ಯಮದ ಎಲ್ಲಾ ಸ್ನೇಹಿತರು ಹಾಗೂ ಕನ್ನಡ ಸಿನಿಮಾ ಇಂಡಸ್ಟ್ರಿಯ ಪ್ರತಿಯೊಬ್ಬರಿಗೂ ನಿಮ್ಮೆಲ್ಲರ ಹಾರೈಕೆಗಳಿಗಾಗಿ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.


ದೂದ್​ಪೇಡ ಖ್ಯಾತಿಯ ನಟ ದಿಗಂತ್​ ಗೋವಾ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಸಮುದ್ರ ತೀರದಲ್ಲಿ ಪಲ್ಟಿ ಮಾಡಲು ಹೋಗಿ ಕತ್ತಿಗೆ ಬಲವಾದ ಏಟನ್ನು ಮಾಡಿಕೊಂಡಿದ್ದರು. ಇದಾದ ಬಳಿಕ ಅವರಿಗೆ ಗೋವಾದಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ ತ್ವರಿತವಾಗಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಏರ್​ಲಿಫ್ಟ್​ ಮಾಡಲಾಗಿತ್ತು .ದಿಗಂತ್​​​ಗೆ ಅಪಘಾತವಾಗಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಸಿನಿಮಾ ಇಂಡಸ್ಟ್ರಿಯ ಸ್ನೇಹಿತರು ಹಾಗೂ ಅಭಿಮಾನಿಗಳು ದಿಗಂತ್​ ಶೀಘ್ರ ಚೇತರಿಕೆಗೆ ಹಾರೈಸಿದ್ದರು.

ಗೋವಾದಿಂದ ಸ್ವಲ್ಪ ದೂರದಲ್ಲಿದ್ದ ರೆಸಾರ್ಟ್​ನಲ್ಲಿದ್ದ ಐಂದ್ರಿತಾ ಹಾಗೂ ದಿಗಂತ್​​ ಸ್ಪೋರ್ಟ್ಸ್​ ಆ್ಯಕ್ಟಿವಿಟಿಯಲ್ಲಿ ಭಾಗಿಯಾಗಿದ್ದರು. ಇಲ್ಲೇ ಸೋಮರ್​ ಸಾಲ್ಟ್​ ಮಾಡುತ್ತಿದ್ದ ವೇಳೆಯಲ್ಲಿ ಆಯತಪ್ಪಿದ ಪರಿಣಾಮ ನಟ ದಿಗಂತ್​ ಕತ್ತಿಗೆ ಬಲವಾದ ಏಟು ಬಿದ್ದಿತ್ತು.

ಇದನ್ನು ಓದಿ : ಮಾನ್ಸೂನ್ ಪ್ರವಾಸಕ್ಕೆ ಹೇಳಿ ಮಾಡಿದ ಸ್ಥಳ : ಭಾರತದ ಜಲಪಾತಗಳ ಗ್ರಾಮ ಕೊಡಗಿನ ಕರಿಕೆ

ಇದನ್ನೂ ಓದಿ : BCCI warnings : ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಬಿಸಿಸಿಐ ವಾರ್ನಿಂಗ್‌

Aindrita, his wife, who informed about Digant’s health

Comments are closed.