Education Loan : ಉನ್ನತ ಶಿಕ್ಷಣಕ್ಕೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತವೆ ಈ ಬ್ಯಾಂಕುಗಳು

ನವದೆಹಲಿ : ನಿಮ್ಮ ಮುಂದಿನ ಉನ್ನತ ಶಿಕ್ಷಣವನ್ನು ಉತ್ತಮ ಮಟ್ಟದಲ್ಲಿ ಪಡೆಯಲು ಈಗ ಚಿಂತಿಸುವ ಅಗತ್ಯವಿಲ್ಲ. ಯಾಕೆಂದರೆ ನಿಮ್ಮ ಉನ್ನತ ಶಿಕ್ಷಣವನ್ನು ಮುಂದುವರೆಸಲು ಬ್ಯಾಂಕ್‌ಗಳಲ್ಲಿ ಕಡಿಮೆ ಬಡ್ಡಿದರದಲ್ಲಿ ಶಿಕ್ಷಣ ಸಾಲವನ್ನು (Education Loan) ನೀಡಲಾಗುತ್ತದೆ. ಇದೀಗ ಕೆಲವು ಟಾಪ್‌ ಬ್ಯಾಂಕ್‌ಗಳಲ್ಲಿ ನಿಮ್ಮ ಉನ್ನತ ಶಿಕ್ಷಣಕ್ಕಾಗಿ ಸುಲಭವಾಗಿ 20 ಲಕ್ಷ ರೂ.ವರೆಗೆ ಸಾಲವನ್ನು ತೆಗೆದುಕೊಳ್ಳಬಹುದು.

ಈ ಟಾಪ್‌ ಬ್ಯಾಂಕ್‌ಗಳು ನಿಮ್ಮ ಶಿಕ್ಷಣ ಸಾಲದ ಮೇಲೆ ಅತ್ಯಂತ ಕಡಿಮೆ ಬಡ್ಡಿದರವನ್ನು ವಿಧಿಸುತ್ತವೆ. ಅಷ್ಟೇ ಅಲ್ಲದೇ ಈ ಶಿಕ್ಷಣ ಸಾಲವನ್ನು ಒಟ್ಟು 7 ವರ್ಷಗಳ ಅವಧಿಗೆ ನೀಡಲಾಗುತ್ತದೆ. ಈ ಸಮಯದಲ್ಲಿ ನಿಮಗೆ ಯಾವುದೇ ರೀತಿಯ ಬಡ್ಡಿದರ ವಿಧಿಸಲಾಗುವುದಿಲ್ಲ. ನಿಮ್ಮ ಅಧ್ಯಯನ ಮುಗಿದ ನಂತರ ನೀವು ಸಾಲವನ್ನು ಮರುಪಾವತಿಸಬೇಕಾಗುತ್ತದೆ. ಹಾಗಾದರೆ ಶಿಕ್ಷಣಕ್ಕೆ ಸುಲಭವಾಗಿ ಸಾಲ ನೀಡುವ ಆ ಟಾಪ್‌ ಬ್ಯಾಂಕುಗಳು ಯಾವುದು ಎಂದು ತಿಳಿಯೋಣ.

ಶಿಕ್ಷಣ ಸಾಲಕ್ಕೆ ಬೇಕಾಗುವ ದಾಖಲೆಗಳ ವಿವರ :
ನೀವು 10ನೇ ಮತ್ತು 12ನೇ ತರಗತಿಯ ಅಂಕಪಟ್ಟಿ ಹೊಂದಿರಬೇಕು. ಇದಲ್ಲದೆ ನೀವು ಪ್ರವೇಶ ಪಡೆದಿರುವ ಕಾಲೇಜು ಅಥವಾ ವಿಶ್ವವಿದ್ಯಾಲಯದಿಂದ ವ್ಯಾಸಂಗ ದೃಢೀಕರಣ ಪ್ರಮಾಣಪತ್ರವನ್ನು ಹೊಂದಿರುವುದು ಸಹ ಅಗತ್ಯವಾಗಿದೆ. ಅಲ್ಲಿನ ಪ್ರವೇಶ ಪತ್ರ, ಶುಲ್ಕ ಚೀಟಿ ಮತ್ತು ಅರ್ಜಿದಾರರ ಕೆವೈಸಿ ದಾಖಲೆಗಳು ಅಗತ್ಯವಾಗಿ ಬೇಕಾಗುತ್ತದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ :
ನೀವು ಕಡಿಮೆ ಬಡ್ಡಿದರದಲ್ಲಿ ಶಿಕ್ಷಣ ಸಾಲದ ಬಗ್ಗೆ ಹುಡುಕಾಟ ನಡೆಸುತ್ತಿದ್ದರೆ, ಒಮ್ಮೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಭೇಟಿ ನೀಡಬೇಕು. ಇಲ್ಲಿ ನೀವು ನಿಮ್ಮ ಉನ್ನತ ಅಥವಾ ಮುಂದಿನ ಶಿಕ್ಷಣಕ್ಕಾಗಿ 20 ಲಕ್ಷ ರೂ.ವರೆಗಿನ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.

ಪಂಜಾಬ್ ನ್ಯಾಷನಲ್ ಬ್ಯಾಂಕ್ :
ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಾರ್ವಜನಿಕ ವಲಯದ ಬ್ಯಾಂಕ್ ಆಗಿದೆ. ಇಲ್ಲಿ ನೀವು ಶಿಕ್ಷಣ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಪಂಜಾಬ್ ಬ್ಯಾಂಕ್ ಶಿಕ್ಷಣ ಸಾಲಕ್ಕೆ ಶೇ.7.15 ಬಡ್ಡಿ ವಿಧಿಸುತ್ತಿದೆ. ಆದರೆ ಈ ಬಡ್ಡಿದರವು ಕಾಲಕಾಲಕ್ಕೆ ಬದಲಾಗುತ್ತಲೇ ಇರುತ್ತದೆ. ಈ ಬ್ಯಾಂಕಿನಿಂದ 7 ವರ್ಷಗಳವರೆಗೆ 20 ಲಕ್ಷ ರೂ. ಶಿಕ್ಷಣ ಸಾಲ ಪಡೆಯಬಹುದು.

ಇದನ್ನೂ ಓದಿ : ಮೇಘನಾ ರಾಜ್ ಸರ್ಜಾ ಯೂಟ್ಯೂಬ್ ಚಾನೆಲ್ ಗೆ ಸಖತ್ ರೆಸ್ಪಾನ್ಸ್: ಮಿಲಿಯನ್ಸ್ ವೀವ್ಸ್ ಪಡೆದ ವಿಡಿಯೋ ಯಾವುದು ಗೊತ್ತಾ ?

ಇದನ್ನೂ ಓದಿ : ಮತ್ತೆ ರಾನು ಮಂಡಲ್‌ ಹವಾ : ಬೆಂಗಾಲಿ ವಧುವಿನ ವೇಷದಲ್ಲಿ ಹಾಡಿದ ಹಾಡು ಸಖತ್‌ ವೈರಲ್‌

ಇದನ್ನೂ ಓದಿ : ನಟ ಯಶ್ ಇಲ್ಲದ ಕೆಜಿಎಫ್ 3 : 2025 ರಲ್ಲಿ ಬಿಡುಗಡೆಯಾಗುವ ಸಿನಿಮಾಕ್ಕೆ ನಾಯಕ ಯಾರು ?

ಬ್ಯಾಂಕ್ ಆಫ್ ಬರೋಡಾ :
ಬ್ಯಾಂಕ್ ಆಫ್ ಬರೋಡಾ ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಕೂಡ ಆಗಿದೆ. ಈ ಬ್ಯಾಂಕಿನಲ್ಲಿಯೇ ದೇನಾ ಬ್ಯಾಂಕ್ ಮತ್ತು ವಿಜಯಾ ಬ್ಯಾಂಕ್ ವಿಲೀನಗೊಂಡಿದೆ. ಇಲ್ಲಿಂದ ನೀವು ಸುಲಭವಾಗಿ ಶಿಕ್ಷಣ ಸಾಲವನ್ನು ಪಡೆಯಬಹುದು. ಈ ಬ್ಯಾಂಕ್ ಶಿಕ್ಷಣ ಸಾಲದ ಮೇಲೆ ಶೇ.7.15ರಷ್ಟು ಬಡ್ಡಿಯನ್ನೂ ವಿಧಿಸುತ್ತಿದೆ. ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಬದಲಾಯಿಸಿದಾಗ ಎಲ್ಲಾ ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿ ದರವನ್ನು ಸಹ ಬದಲಾಯಿಸುತ್ತವೆ. ಈ ಬ್ಯಾಂಕ್‌ಗೆ ಅರ್ಜಿ ಸಲ್ಲಿಸುವ ಮೂಲಕ ನೀವು 20 ಲಕ್ಷ ರೂ.ವರೆಗೆ ಶಿಕ್ಷಣ ಸಾಲವನ್ನು ಪಡೆಯಬಹುದು.

Education Loan: These banks provide loans for higher education at low interest rates

Comments are closed.