Prohibition of extremist organizations: ಭಯೋತ್ಪಾದನ ನಿಗ್ರಹಕ್ಕೆ ಕಠಿಣ ಕ್ರಮ: ಎರಡು ಉಗ್ರ ಬೆಂಬಲಿತ ಸಂಘಟನೆಗಳು ನಿಷೇಧ

ನವದೆಹಲಿ: (Prohibition of extremist organizations) ದೇಶದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನ ಕೃತ್ಯಗಳು ನಡೆಯುತ್ತಿರುವ ಹಿನ್ನಲೆ ಭಯೋತ್ಪಾದನ ನಿಗ್ರಹಕ್ಕೆ ಕಠಿಣ ಕ್ರಮವನ್ನು ಕೈಗೊಂಡ ಕೇಂದ್ರ ಸರಕಾರ ಉಗ್ರ ಬೆಂಬಲಿತ ಎರಡು ಸಂಘಟನೆಗಳನ್ನು ನಿಷೇಧಿಸಿದೆ.

ನಾಡಿನಲ್ಲಿ ಉಗ್ರಸಂಘಟನೆಗಳ ಹಾವಳಿ ಹೆಚ್ಚಾಗುತ್ತಿದ್ದು,ದೇಶದಲ್ಲಿ ದಿನೇ ದಿನೇ ಉಗ್ರ ಕೃತ್ಯಗಳು ಹೆಚ್ಚಾಗುತ್ತಿದ್ದು, ಉಗ್ರ ಸಂಘಟನೆಗಳನ್ನು ನಿಗ್ರಹಿಸುವುದು ಅಗತ್ಯವಾಗಿದೆ. ಹೀಗಾಗಿ ಕೇಂದ್ರ ಸರಕಾರ ಉಗ್ರ ಸಂಘಟನೆಗಳ ನಿಗ್ರಹ(Prohibition of extremist organizations)ಕ್ಕೆ ಮಹತ್ವದ ಕ್ರಮ ಕೈಗೊಂಡಿದೆ. ಎರಡು ಉಗ್ರ ಸಂಘಟನೆಗಳಾದ ಲಷ್ಕರ್-ಇ-ತಯ್ಯಬಾ ಬೆಂಬಲಿತದ ರೆಸಿಸ್ಟೆನ್ಸ್‌ ಫ್ರಂಟ್‌ (ಟಿ ಆರ್‌ ಎಫ್)‌ ಮತ್ತು ಜೈಷ್-ಇ- ಮೊಹಮ್ಮದ್‌ ಉಗ್ರ ಸಂಘಟನೆಗಳ ಬೆಂಬಲಿತ ಪೀಪಲ್ಸ್‌ ಆಂಟಿ-ಫ್ಯಾಸಿಸ್ಟ್-ಫ್ರಂಟ್‌ (ಪಿಎಎಫ್‌ ಎಫ್)‌ ಸಂಘಟನೆಗಳನ್ನು ಕೇಂದ್ರ ಸರಕಾರ ನಿಷೇಧಿಸಿದೆ.

ರೆಸಿಸ್ಟೆನ್ಸ್‌ ಫ್ರಂಟ್‌ (ಟಿ ಆರ್‌ ಎಫ್)‌ ಮತ್ತು ಪೀಪಲ್ಸ್‌ ಆಂಟಿ-ಫ್ಯಾಸಿಸ್ಟ್-ಫ್ರಂಟ್‌ (ಪಿಎಎಫ್‌ ಎಫ್)‌ ಸಂಘಟನೆಗಳು ಆನ್‌ ಲೈನ್‌ ಮೂಲಕವೇ ಯುವಕರನ್ನು ಭಯೋತ್ಪಾದನಾ ಚಟುವಟಿಕೆಗಳತ್ತ ಪ್ರೇರೇಪಿಸುವ ಕೆಲಸವನ್ನು ಮಾಡುತ್ತಿದ್ದವು ಎನ್ನಲಾಗಿದೆ. ಈ ಹಿಂದೆ ರಾಜ್ಯದಲ್ಲಿ ನಡೆದ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಉಗ್ರರು ಕೂಡ ಈ ಸಂಘಟನೆಗಳಿಂದಲೇ ಪ್ರೇರೇಪಣೆಗೊಂಡಿದ್ದರು ಎನ್ನಲಾಗಿದೆ.ಅಲ್ಲದೇ ಉಗ್ರ ಕೃತ್ಯಗಳನ್ನು ನಡೆಸಲು ಆರ್ಥಿಕ ಸಹಾಯ ಕೂಡ ಈ ಸಂಘಟನೆಗಳು ಮಾಡುತ್ತಿದ್ದವು ಎನ್ನಲಾಗಿದೆ.

ಇದನ್ನೂ ಓದಿ : Bald Head men Monthly Pension : ಬೋಳು ತಲೆಯ ಪುರುಷರಿಗೆ ಪಿಂಚಣಿ ನೀಡಿ : ಸರಕಾರದ ಮುಂದೇ ವಿಚಿತ್ರ ಬೇಡಿಕೆ

ಇದನ್ನೂ ಓದಿ : US judge Surendran.K patil: ಅಂದು ಶಾಲೆ ಬಿಟ್ಟು ಮನೆಯಲ್ಲಿ ಬೀಡಿ ಕಟ್ಟುತ್ತಿದ್ದ ಬಾಲಕ, ಇಂದು ಅಮೇರಿಕಾದ ನ್ಯಾಯಾಧೀಶ

ಇದನ್ನೂ ಓದಿ : Antyodaya and BPL card holders : ನೀವು ಅಂತ್ಯೋದಯ ಮತ್ತು ಬಿಪಿಎಲ್‌ ಕಾರ್ಡ್‌ದಾರರೇ ? ಇಲ್ಲಿದೆ ಮಹತ್ವದ ಮಾಹಿತಿ

ಇನ್ನು ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ನಾಲ್ಕು ಮಂದಿಯನ್ನು ನಿರ್ದಿಷ್ಟ ಉಗ್ರರು ಎಂಬುದಾಗಿ ಸರಕಾರ ಘೋಷಿಸಿದ್ದು, ಭಯೋತ್ಪದನೆ ವಿರುದ್ದ ಕೇಂದ್ರ ಶೂನ್ಯ ಸಹಿಷ್ಣುತೆ ಹೊಂದಿದೆ ಎಂಬ ಪುನರುಚ್ಚಾರದ ನಂತರ ಈ ಕ್ರಮವನ್ನು ಕೈಗೊಳ್ಳಲಾಗಿದೆ.

Prohibition of extremist organizations: Strict action to curb terrorism: Two extremist supported organizations are banned

Comments are closed.