Dolo 650 : ಹುಬ್ಬೇರಿಸುತ್ತೆ ಕಳೆದ 2 ವರ್ಷಗಳಲ್ಲಿ ದೇಶದಲ್ಲಿ ಮಾರಾಟವಾದ ಡೋಲೋ 650 ಮಾತ್ರೆಗಳ ಸಂಖ್ಯೆ

Dolo 650 :ಒಂದು ಚೂರು ಜ್ವರದ ರೀತಿಯ ಲಕ್ಷಣಗಳು ಕಂಡುಬಂದರೂ ಸಾಕು ಡೋಲೋ 650 ಮಾತ್ರೆಯನ್ನು ನುಂಗಿಬಿಡುತ್ತೇವೆ. ಈಗಂತೂ ಜ್ವರ ಬಂತೆಂದರೆ ಕೊರೊನಾ ಇರಬಹುದೇನೋ ಎಂಬ ಭಯ ಕೂಡ ಇರೋದ್ರಿಂದ ಡೋಲೋ 650 ಮಾತ್ರೆ ನುಂಗುವುದು ಸರ್ವೇ ಸಾಮಾನ್ಯ ಎನಿಸಿಬಿಟ್ಟಿದೆ. ಆದರೆ ಈ ಡೋಲೋ 650 ದೇಶದಲ್ಲಿ ಎಷ್ಟರ ಮಟ್ಟಿಗೆ ಪ್ರಚಲಿತವಾಗಿದೆ ಎಂದರೆ ಕಳೆದ 2 ವರ್ಷಗಳಲ್ಲಿ ಬರೋಬ್ಬರಿ 358 ಕೋಟಿ ಡೋಲೋ 650 ಮಾತ್ರೆಗಳು ಮಾರಾಟವಾಗಿದೆ.

358 ಕೋಟಿ ಡೋಲೋ 650 ಮಾತ್ರೆಗಳ ಪ್ರಮಾಣ ಎಷ್ಟಿರಬಹುದು ಎಂಬುದು ನಿಮ್ಮ ಅಂದಾಜಿಗೆ ಈಗ ಸಿಗಲಿಕ್ಕಿಲ್ಲ. ಈ 358 ಕೋಟಿ ಡೋಲೋ ಮಾತ್ರೆಗಳನ್ನು ನೀವು ಒಂದರ ಮೇಲೊಂದರಂತೆ ಇಡುತ್ತಾ ಹೋದರೆ ಇದು ವಿಶ್ವದ ಅತಿ ಎತ್ತರವಾದ ಮೌಂಟ್​ ಎವರೆಸ್ಟ್​ ಪರ್ವತಕ್ಕಿಂತ 6000 ಪಟ್ಟು ಎತ್ತರವಾಗಿದೆ.ಡೋಲೋ 650 ಯ ಒಂದು ಮಾತ್ರೆಯು 1.5 ಸೆಂಟಿ ಮೀಟರ್​ ಇದ್ದವಾಗಿದೆ. ಕಳೆದ ಎರಡು ವರ್ಷಗಳಲ್ಲಿ ಈ ಮಾತ್ರೆಯು ಪ್ಯಾರಸಿಟಮಾಲ್​ , ಕ್ರೋಸಿನ್​​ಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದೆ.


2019 ರಲ್ಲಿ ದೇಶದಲ್ಲಿ ಸುಮಾರು 7.5 ಕೋಟಿ ಡೋಲೋ ಟ್ಯಾಬ್ಲೆಟ್​ಗಳನ್ನು ಮಾರಾಟ ಮಾಡಲಾಗಿದೆ. 2020ರಲ್ಲಿ 2019ಕ್ಕಿಂತಲೂ ಎರಡು ಪಟ್ಟು ಹೆಚ್ಚಿನ ಡೋಲೋ 650 ಮಾತ್ರೆಗಳನ್ನು ಮಾರಾಟ ಮಾಡಲಾಗಿದೆ. ನವೆಂಬರ್​ 2021ರ ವೇಳೆಯಲ್ಲಿ 217 ಕೋಟಿ ಡೋಲೋ 650 ಮಾತ್ರೆಗಳು ಮಾರಾಟವಾಗಿವೆ. 2021 ಹಾಗೂ 2021ರಲ್ಲಿ ದೇಶದಲ್ಲಿ ಒಟ್ಟು 358 ಕೋಟಿ ಡೋಲೋ 650 ಮಾತ್ರೆಗಳು ಮಾರಾಟವಾಗಿದೆ.
ಡೋಲಾ 650 ಕೇವಲ ಖರೀದಿಗೆ ಮಾತ್ರ ಸೀಮಿತವಾಗಿಲ್ಲ. ಗೂಗಲ್​ನಲ್ಲಿ ಡೋಲೋ 650ಯನ್ನು ಅನೇಕರು ಗೂಗಲ್​ ಸರ್ಚ್ ಮಾಡುತ್ತಿದ್ದಾರೆ. 2020ರ ಜನವರಿ ತಿಂಗಳಿನಿಂದ ಡೋಲೋ 650ಯನ್ನು ಸುಮಾರು 2 ಲಕ್ಷಕ್ಕೂ ಅಧಿಕ ಬಾರಿ ಹುಡುಕಾಟ ಮಾಡಲಾಗಿದೆ.

How made-in-India pill Dolo 650 became India’s ‘favourite snack’ in Covid waves

ಇದನ್ನು ಓದಿ : CM Meeting : ಕೊರೋನಾ ತಡೆಗೆ ಮಾರ್ಗಸೂಚಿ : ಸಿಎಂ ಸಭೆಗೆ ತಾಂತ್ರಿಕ ಸಮಿತಿ ಶಿಫಾರಸ್ಸುಗಳ ವಿವರ ಇಲ್ಲಿದೆ

ಇದನ್ನೂ ಓದಿ : omicron and corona : ಕೊರೊನಾ ಹಾಗೂ ಓಮೈಕ್ರಾನ್ ಹೆಚ್ಚಳದ ನಡುವೆ ಹೊರಬಿತ್ತು ಸಮಾಧಾನದ ಸಂಗತಿ

Comments are closed.