Flipkart Big Bachat Dhamal: ಈ ದಿನದಿಂದ ಪ್ರಾರಂಭವಾಗಲಿದೆ ಫ್ಲಿಪ್‌ಕಾರ್ಟ್‌ನ ಹೊಸ ವರ್ಷದ ಬಿಗ್‌ ಬಚತ್‌ ಧಮಾಲ್‌ ಸೇಲ್‌

ಹೊಸ ವರ್ಷದ (2023) ಪ್ರಾರಂಭದಲ್ಲೇ ಯಾವುದಾದರೂ ಒಂದು ಇ–ಕಾಮರ್ಸ್‌ ವೇದಿಕೆ (Flipkart) ಹಣ ಉಳಿತಾಯ ಮಾಡುವ ಸೇಲ್‌ ಅನ್ನು ಪ್ರಾರಂಭಿಸಿದರೆ ಬಹಳಷ್ಟು ಜನರಿಗೆ ಇದರಿಂದ ಸಂತೋಷವಾಗುತ್ತದೆ. ಹಾಗೆ ಫ್ಲಿಪ್‌ಕಾರ್ಟ್‌ ಸಹ ವರ್ಷದ ಮೊದಲ ಸೇಲ್‌ ಪ್ರಾರಂಭಿಸಲಿದೆ (Flipkart Big Bachat Dhamal). ಇ–ಕಾಮರ್ಸ್‌ ದೈತ್ಯ ಫ್ಲಿಪ್‌ಕಾರ್ಟ್‌ ಜನವರಿ 6, 2023 ರಿಂದ ಬಿಗ್‌ ಬಚತ್‌ ಧಮಾಲ್‌ ಮಾರಾಟವನ್ನು ಘೋಷಿಸಿದೆ. ಈ ಮಾರಾಟವು ಜನವರಿ 8, 2023 ರ ವರೆಗೆ ಮುಂದುವರಿಯಲಿದೆ. ಇದು ಖರೀದುದಾರರಿಗೆ ವಿಶೇಷ ರಿಯಾಯಿತಿಗಳನ್ನು ಘೋಷಿಸಿದೆ.

ಫ್ಲಿಪ್‌ಕಾರ್ಟ್ ಬಿಗ್ ಬಚತ್ ಧಮಾಲ್ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು, ಮನೆ, ಅಲಂಕಾರ, ಫ್ಯಾಷನ್, ಅಡುಗೆಮನೆ, ಎಲೆಕ್ಟ್ರಾನಿಕ್ಸ್‌ ಮುಂತಾದ ವಿವಿಧ ಕ್ಯಾಟಗರಿಗಳಿಗೆ ಕೊಡುಗೆಗಳನ್ನು ನೀಡಿದೆ. ಇದರಲ್ಲಿ ಮೂರು ರೀತಿಯ ಡೀಲ್‌ಗಳು ಇರಲಿದೆ.

1) ಧಮಾಲ್ ಡೀಲ್‌ಗಳು: ಗ್ರಾಹಕರು ಜನವರಿ 6 ರಿಂದ ಜನವರಿ 8 ರವರೆಗೆ 12 AM, 8 AM ಮತ್ತು 4 PM ವರೆಗೆ ದೊಡ್ಡ ಉಳಿತಾಯವನ್ನು ಈ ಡೀಲ್‌ನಲ್ಲಿ ಪಡೆಯಬಹುದಾಗಿದೆ.

2) ಲೂಟ್ ಬಜಾರ್: ಬೆಳಿಗ್ಗೆ 10 ರಿಂದ ರಾತ್ರಿ 10 ರವರೆಗಿನ ಮಾರಾಟದ ಅವಧಿಯಲ್ಲಿ, ನೀವು ಕಡಿಮೆ ಬೆಲೆಗಳಲ್ಲಿ ವಸ್ತುಗಳನ್ನು ಖರೀದಿಸಬಹುದಾಗಿದೆ.

3) ಕಾಂಬೊ ಡೀಲ್‌ಗಳು: 12 AM, 8 AM ಮತ್ತು 4 PM ನಲ್ಲಿ, ಕಾಂಬೊ ಡೀಲ್‌ಗಳನ್ನು ಕಾಣಬಹುದು.

ಸ್ಮಾರ್ಟ್‌ಫೋನ್‌ಗಳ ಮೇಲಿನ ಡೀಲ್‌ಗಳು :
ಇ–ಕಾಮರ್ಸ್‌ನ ದೈತ್ಯ ಸಂಸ್ಥೆ ಫ್ಲಿಪ್‌ಕಾರ್ಟ್‌ ಸ್ಮಾರ್ಟ್‌ಫೋನ್‌ಗಳ ಮೇಲೆ ತನ್ನ ರಿಯಾಯಿತಿಗಳನ್ನು ಇನ್ನೂ ಘೋಷಿಸಿಲ್ಲ. ಆದರೆ ವೆಬ್‌ಸೈಟ್ ಪ್ರಕಾರ, ಇದು ಶೀಘ್ರದಲ್ಲೇ Realme 8S 5G, Poco M3 Pro, iPhones ಮುಂತಾದ ಹೆಚ್ಚು ಬೇಡಿಕೆಯ ಸ್ಮಾರ್ಟ್‌ಫೋನ್‌ಗಳ ಬೆಲೆಗಳನ್ನು ಬಹಿರಂಗಪಡಿಸಲಿದೆ.

ಎಲೆಕ್ಟ್ರಾನಿಕ್ಸ್:
ಬಿಗ್ ಬಚತ್ ಧಮಾಲ್‌ನಲ್ಲಿ ಹೆಚ್ಚು ಮಾರಾಟವಾಗುವ ಲ್ಯಾಪ್‌ಟಾಪ್‌ಗಳು 40% ವರೆಗೆ ರಿಯಾಯಿತಿ ಪಡೆಯಬಹುದು. ಇದಲ್ಲದೆ, ಕೇವಲ ರೂ 399/- ರಿಂದ ಪ್ರಾರಂಭವಾಗುವ ಹೆಡ್‌ಫೋನ್ ಮತ್ತು ಸ್ಪೀಕರ್‌ಗಳನ್ನು ಸಹ ಸೇಲ್‌ನಲ್ಲಿ ಕಾಣಬಹುದು.

ಟಿವಿ ಮತ್ತು ಇತರೆ ಉಪಕರಣಗಳು:
ಗ್ರಾಹಕರು ಟಿವಿಯಲ್ಲಿ ಕೇವಲ 7,499/- ರಿಂದ ಪ್ರಾರಂಭವಾಗುವ ಅತ್ಯುತ್ತಮ ಡೀಲ್‌ಗಳನ್ನು ಕಾಣಬಹುದು. ರೆಫ್ರಿಜರೇಟರ್‌ಗಳು 55% ವರೆಗೆ ಮತ್ತು ವಾಷಿಂಗ್‌ ಮಷಿನ್‌ ಅನ್ನು 60% ವರೆಗೆ ರಿಯಾಯಿತಿ ಲಭ್ಯವಾಗಬಹುದು.

ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರಿಗೆ ಕಾರ್ಡ್ ಕೊಡುಗೆಗಳು ಮತ್ತು ಆರಂಭಿಕ ಪ್ರವೇಶ:
ಫ್ಲಿಪ್‌ಕಾರ್ಟ್ ಇನ್ನೂ ಬ್ಯಾಂಕ್ ಕೊಡುಗೆಗಳ ಕುರಿತು ಯಾವುದೇ ಮಾಹಿತಿಯನ್ನು ನೀಡಿಲ್ಲ. ಆದಾಗ್ಯೂ, ಸಾಮಾನ್ಯವಾಗಿ ಇದು ICICI, HDFC ಮುಂತಾದ ಬ್ಯಾಂಕ್‌ಗಳಲ್ಲಿ 10% ಹೆಚ್ಚುವರಿ ರಿಯಾಯಿತಿಗಳನ್ನು ಒದಗಿಸುತ್ತದೆ. ಸಾಮಾನ್ಯವಾಗಿ ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರಿಗೆ ಒಂದು ದಿನ ಮುಂಚಿತವಾಗಿ ತನ್ನ ಮಾರಾಟವನ್ನು ಲೈವ್‌ ಆಗಿಸುತ್ತದೆ. ಆದರೆ ಈ ಬಾರಿ, ಫ್ಲಿಪ್‌ಕಾರ್ಟ್ ಅಂತಹ ಯಾವುದೇ ಮಾಹಿತಿಯನ್ನು ಒದಗಿಸಿಲ್ಲ.

ಇದನ್ನೂ ಓದಿ : Cinema Theater – Supreme Court : ಸಿನಿಮಾ ಥಿಯೇಟರ್‌ಗಳಿಗೆ ಹೊರಗಿನ ತಿಂಡಿ ತಿನಿಸು ತರಬಹುದೇ ? ಸುಪ್ರೀಂ ಕೋರ್ಟ್ ಹೇಳಿದ್ದೇನು ?

ಇದನ್ನೂ ಓದಿ : Worldwide Google Search Movie : 2022ರಲ್ಲಿ ವಿಶ್ವದಾದ್ಯಂತ ಗೂಗಲ್‌ನಲ್ಲಿ ಹೊಸ ಇತಿಹಾಸ ಸೃಷ್ಟಿದ ಕನ್ನಡ ಸಿನಿಮಾ ಯಾವುದು ಗೊತ್ತಾ ?

(Flipkart Big Bachat Dhamal starts on January 6 and will continue up to January 8)

Comments are closed.