Mysuru Chamundeswari Temple : ಮದುವೆಗೂ ಮುನ್ನ ಚಾಮುಂಡಿ ತಾಯಿಯ ಆಶೀರ್ವಾದ ಪಡೆದ ಕ್ರಿಕೆಟಿಗ ರಾಹುಲ್

ಮೈಸೂರು : ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಕೆ.ಎಲ್ ರಾಹುಲ್ (KL Rahul) ಅವರ ಮದುವೆ ಬಾಲಿವುಡ್ ನಟಿ ಆತಿಯಾ ಶೆಟ್ಟಿ (Athiya Shetty) ಅವರ ಜೊತೆ ಇದೇ ತಿಂಗಳ 22 ಮತ್ತು 23ರಂದು ಪುಣೆಯ ಖಂಡಾಲದಲ್ಲಿ ನಡೆಯಲಿದೆ. ಪ್ರೀತಿಸಿದ ಹುಡುಗಿಯ ಜೊತೆ ಸಪ್ತಪದಿ ತುಳಿಯುವ ಮುನ್ನ ರಾಹುಲ್ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದಿದ್ದಾರೆ (Mysuru Chamundeswari Temple).

ಬುಧವಾರ ಬೆಳ್ಳಂ ಬೆಳಗ್ಗೆ ಬೆಂಗಳೂರಿನಿಂದ ಮೈಸೂರಿಗೆ ತೆರಳಿದ ರಾಹುಲ್, ಚಾಮುಂಡಿ ತಾಯಿಯ ದರ್ಶನ ಮಾಡಿದ್ದಾರೆ. ತಾಯಿಯ ಸನ್ನಿಧಿಯಲ್ಲಿ 15 ನಿಮಿಷಗಳ ಕಾಲ ನಿಂತು ಪ್ರಾರ್ಥನೆ ಸಲ್ಲಿಸಿದ್ದಾರೆ.ಬಾಂಗ್ಲಾದೇಶ ಪ್ರವಾಸಕ್ಕೂ ಮುನ್ನ ರಾಹುಲ್ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿರುವ ಪ್ರಸಿದ್ಧ ತೀರ್ಥಕ್ಷೇತ್ರ ಕುಕ್ಕೆ ಸುಬ್ರಮಣ್ಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದರು. ಆದರೆ ಬಾಂಗ್ಲಾ ಪ್ರವಾಸದಲ್ಲಿ ರಾಹುಲ್ ಏಕದಿನ ಹಾಗೂ ಟೆಸ್ಟ್ ಸರಣಿಯಲ್ಲಿ ದಯನೀಯ ವೈಫಲ್ಯ ಎದುರಿಸಿದ್ದರು.

ಬಾಂಗ್ಲಾ ವಿರುದ್ಧದ ವೈಫಲ್ಯದ ಬೆನ್ನಲ್ಲೇ ರಾಹುಲ್ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡಿ ತಾಯಿಯ ದರ್ಶನ ಪಡೆದಿದ್ದಾರೆ.ಶ್ರೀಲಂಕಾ ವಿರುದ್ಧ ನಡೆಯುತ್ತಿರುವ 3 ಪಂದ್ಯಗಳ ಟಿ20 ಸರಣಿಗೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜೊತೆ ರಾಹುಲ್ ಅವರಿಗೂ ವಿಶ್ರಾಂತಿ ನೀಡಲಾಗಿದೆ. ಜನವರಿ 10ರಂದು ಆರಂಭವಾಗಲಿರುವ ಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ರಾಹುಲ್ ಆಡಲಿದ್ದಾರೆ. 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಜನವರಿ 10ರಂದು ಅಸ್ಸಾಂನ ಗುವಾಹಟಿಯಲ್ಲಿ ನಡೆಯಲಿದೆ.

ಇದನ್ನೂ ಓದಿ : Saurashtra Cricket Association : ಮೊದಲ ಓವರ್‌ನಲ್ಲೇ ಹ್ಯಾಟ್ರಿಕ್, ಜೈದೇವ್ ಉನಾದ್ಕಟ್ ದಾಳಿಗೆ ಡೆಲ್ಲಿ ಚಿಂದಿ ಚಿತ್ರಾನ್ನ : ಟಾಪ್-6ರಲ್ಲಿ ಐದು ಡಕ್

ಇದನ್ನೂ ಓದಿ : India Cricket Team Next Coach : ದ್ರಾವಿಡ್ ನಂತರ ಇವರೇ ಟೀಮ್ ಇಂಡಿಯಾ ಕೋಚ್, ಬಿಸಿಸಿಐ ಸೂಪರ್ ಪ್ಲಾನ್

ಇದನ್ನೂ ಓದಿ : Abhimanyu Eswaran : ತಂದೆ ಕಟ್ಟಿಸಿದ ತನ್ನ ಸ್ವಂತ ಮೈದಾನದಲ್ಲೇ ರಣಜಿ ಪಂದ್ಯವಾಡುತ್ತಿದ್ದಾನೆ ಅಭಿಮನ್ಯು!

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ 2ನೇ ಪಂದ್ಯ ಜನವರಿ 12ರಂದು ಕೋಲ್ಕತಾದ ಈಡನ್ ಗಾರ್ಡನ್ಸ್’ನಲ್ಲಿ ನಡೆಯಲಿದ್ರೆ, 3ನೇ ಪಂದ್ಯ ಜನವರಿ 15ರಂದು ತಿರುವನಂತಪುರಂನಲ್ಲಿ ನಡೆಯಲಿದೆ. 3ನೇ ಪಂದ್ಯ ಮುಗಿಸಿಕೊಂಡು ರಾಹುಲ್ ಮುಂಬೈಗೆ ತೆರಳಲಿದ್ದಾರೆ. ಮದುವೆ ಜನವರಿ 22ರಂದು ನಡೆಯಲಿದೆ.

Mysuru Chamundeswari Temple: Cricketer Rahul got blessings of Chamundeswari mother before marriage

Comments are closed.