PAN card is fake or not : ಪಾನ್​ ಕಾರ್ಡ್​ ನಕಲಿಯೋ ಅಥವಾ ಅಸಲಿಯೋ ಎಂದು ಪರಿಶೀಲಿಸುವುದು ಹೇಗೆ..? ಇಲ್ಲಿದೆ ಮಾಹಿತಿ

PAN card is fake or not Fraud Alert : ದಿ ಪರ್ಮನೆಂಟ್​ ಅಕೌಂಟ್​ ನಂಬರ್​ ಅಥವಾ ಪಾನ್​ ಕಾರ್ಡ್​ ಎನ್ನುವುದು ಭಾರತೀಯರ ಪಾಲಿಗೆ ಅತ್ಯಂತ ಮುಖ್ಯವಾದ ದಾಖಲೆಗಳಲ್ಲಿ ಒಂದಾಗಿದೆ.ಬ್ಯಾಂಕ್​ ಖಾತೆಗಳನ್ನು ತೆರೆಯುವಾಗ ಅಥವಾ ಮತದಾರರ ಚೀಟಿಯಲ್ಲಿ ಏನಾದರೂ ಬದಲಾವಣೆ ತರಬೇಕು ಎಂದುಕೊಂಡಾಗ ಅಥವಾ ಯಾವುದೇ ಬ್ಯಾಂಕಿಂಗ್​ ವ್ಯವಹಾರಗಳ ಸಂದರ್ಭದಲ್ಲಿ ನಾವು ಗುರುತಿನ ಚೀಟಿ ರೂಪದಲ್ಲಿ ಈ ಪಾನ್​ಕಾರ್ಡ್​ಗಳನ್ನು ಬಳಕೆ ಮಾಡುತ್ತೇವೆ.

ಆದರೆ ಪಾನ್​ ಕಾರ್ಡ್​ ಬಳಸಿ ಅನೇಕ ವಂಚನೆ ಪ್ರಕರಣಗಳು ನಡೆಯುತ್ತಿರುವುದು ಬೆಳಕಿಗೆ ಬಂದ ಬಳಿಕ ಅಂದರೆ 2018ರ ಜುಲೈನಿಂದ ಪಾನ್​ ಕಾರ್ಡ್ ಪಡೆದ ಜನರಿಗೆ ಕ್ವಿಕ್​ ರೆಸ್ಪಾನ್ಸ್​ ಕೋಡ್​ನ್ನು ನೀಡಲಾಗಿದೆ. ಈ ಕ್ಯೂಆರ್ ಕೋಡ್​ಗಳು ನಕಲಿ ಹಾಗೂ ಅಸಲಿ ಪಾನ್​ ಕಾರ್ಡ್​ಗಳನ್ನು ಪತ್ತೆ ಮಾಡಲು ಅತ್ಯಂತ ಸಹಕಾರಿಯಾಗಿದೆ. ಇದಕ್ಕಾಗಿ ನಿಮ್ಮ ಬಳಿ ಒಂದು ಸ್ಮಾರ್ಟ್​ ಫೋನ್​ ಹಾಗೂ ಆದಾಯ ತೆರಿಗೆ ಇಲಾಖೆ ರಿಲೀಸ್​ ಮಾಡಿರುವ ಒಂದು ಅಪ್ಲಿಕೇಶನ್​ ಇದ್ದರೆ ಸಾಕು.

ಪಾನ್​ ಕಾರ್ಡ್ ನಕಲಿ ಎಂದು ಕಂಡುಹಿಡಿಯುವುದು ಹೇಗೆ..?

  • ನಿಮ್ಮ ಮೊಬೈಲ್​ ಫೋನ್​​ನಿಂದ ಪ್ಲೇಸ್ಟೋರ್​ಗೆ ಭೇಟಿ ಕೊಡಿ. ಹಾಗೂ ಇಲ್ಲಿ ಪಾನ್​ ಕ್ಯೂಆರ್​ ರೀಡರ್​ ಎಂಬ ಅಪ್ಲಿಕೇಶನ್​ನ್ನು ಡೌನ್​ಲೋಡ್​ ಮಾಡಿ.
  • ಈ ಅಪ್ಲಿಕೇಶನ್​​ ಡೌನ್​ಲೋಡ್​ ಮಾಡುವ ಮುನ್ನ ಒಂದು ವಿಚಾರವನ್ನು ನೀವು ಗಮನಿಸಲೇಬೇಕು. ಈಗೆಲ್ಲ ಸಾಕಷ್ಟು ನಕಲಿ ಅಪ್ಲಿಕೇಶನ್​ ಕೂಡ ಪ್ಲೇ ಸ್ಟೋರ್​ನಲ್ಲಿ ಲಭ್ಯವಿದೆ. ಹೀಗಾಗಿ ಯಾವ ಅಪ್ಲಿಕೇಶನ್​ನ ಡೆವಲಪರ್​ ಹೆಸರು NSDL e-Governance Infrastructure Limited’ ಎಂದಿದೆಯೋ ಅದೇ ಅಪ್ಲಿಕೇಶನ್​ ಡೌನ್​ಲೋಡ್​ ಮಾಡಿ.
  • ಒಮ್ಮೆ ಅಪ್ಲಿಕೇಶನ್​ ಡೌನ್​ಲೋಡ್​ ಆಗುತ್ತಿದ್ದಂತೆಯೇ ಆ್ಯಪ್​ನ್ನು ಓಪನ್ ಮಾಡಿ. ನಿಮಗೆ ಈಗ ಕ್ಯಾಮರಾ ವೀವ್​ ಫೈಂಡರ್​ ಬಳಿಯಲ್ಲಿ ಒಂದು ಹಸಿರು ಬಣ್ಣದ + ಆಕೃತಿ ಕಾಣಲಿದೆ.
  • ಈಗ ವೀವ್​ ಫೈಂಡರ್​ ಸಹಾಯದಿಂದ ಪಾನ್​ ಕಾರ್ಡ್​ನ ಮೇಲಿರುವ ಕ್ಯೂ ಆರ್​ ಕೋಡ್​ನ್ನು ಕ್ಲಿಕ್ಕಿಸಿ. ಈ ಫೋಟೋ ಕ್ಲಿಕ್ಕಿಸುವ ವೇಳೆಯಲ್ಲಿ ಕ್ಯೂಆರ್​ ಕೋಡ್​ ಸ್ಪಷ್ಟವಾಗಿ ಕಾಣುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
  • ಒಮ್ಮೆ ನೀವು ಕ್ಯಾಮರಾದಲ್ಲಿ ಪಾನ್​ ಕಾರ್ಡ್​ ಫೋಟೋ ಕ್ಲಿಕ್ಕಿಸಿದ ಬಳಿಕ ನಿಮ್ಮ ಮೊಬೈಲ್​ಗೆ ಪಾನ್​ ಕಾರ್ಡ್​ ಮಾಹಿತಿ ಬರಲಿದೆ.
  • ಈಗ ನೀವು ಪಾನ್​ ಕಾರ್ಡ್​ಗೂ ಹಾಗೂ ನಿಮ್ಮ ಮೊಬೈಲ್​ಗೆ ಬಂದ ದಾಖಲೆಗಳು ಹೊಂದಾಣಿಕೆ ಆಗುತ್ತಿದೆಯೇ ಎಂಬುದನ್ನು ಪರಿಶೀಲಿಸಿ ನೋಡಿ .
  • ಮೊಬೈಲ್​ನಲ್ಲಿ ಗೋಚರವಾಗುತ್ತಿರುವ ಮಾಹಿತಿಗೂ ಹಾಗೂ ಪಾನ್​ ಕಾರ್ಡ್​ನ ಮಾಹಿತಿಗೂ ಹೊಂದಾಣಿಕೆ ಆಗದೇ ಇದಲ್ಲಿ ಅದು ನಕಲಿ ಪಾನ್​ ಕಾರ್ಡ್ ಎಂದರ್ಥವಾಗಿದೆ.

ಇದನ್ನು ಓದಿ : 100 Cantonment Zone: 15 ದಿನ 100 ಕಂಟೋನ್ಮೆಂಟ್ ಝೋನ್ : ಸದ್ದಿಲ್ಲದೇ ಹೆಚ್ಚುತ್ತಿದೆ ಕೊರೋನಾ

ಇದನ್ನೂ ಓದಿ : New Rules : ಮುಂದಿನ ತಿಂಗಳಿಂದ ಬದಲಾಗಲಿವೆ ಈ ನಿಯಮ : ಚೆಕ್‌ಬುಕ್‌, ಪಿಂಚಣಿ, ಡೆಬಿಟ್‌ ಕಾರ್ಡ್‌ ನಿಯಮ ಅರಿತುಕೊಳ್ಳಿ

Fraud Alert ! Find out if a PAN card is fake or not – Here’s how

Comments are closed.