ಅಗ್ಗದ ಬೆಲೆಯಲ್ಲಿ ಸಿಗುತ್ತೆ ಸ್ಯಾಮ್ ಸಂಗ್ 5G ಸ್ಮಾರ್ಟ್ ಫೋನ್ : ಬೆಲೆ ಎಷ್ಟು ಗೊತ್ತಾ ?

ದೇಶದಲ್ಲಿ ತಂತ್ರಜ್ಞಾನ ಮುಂದುವರಿಯುತ್ತಿದ್ದು, ಮೊಬೈಲ್ ಕಂಪೆನಿಗಳು 5 ಜಿ ಮೊಬೈಲ್ ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಕಾತರವಾಗಿವೆ. ಈ ನಡುವಲ್ಲೇ ಸ್ಮಾರ್ಟ್ ಫೋನ್ ಅಗ್ರಗಣ್ಯ ಸಂಸ್ಥೆ ಸ್ಯಾಮ್ ಸಂಗ್ 5 ಜಿ ಸ್ಮಾರ್ಟ್ ಫೋನ್ ಆವೃತ್ತಿಯಲ್ಲಿ A42 ಮಾದರಿಯನ್ನು ಲೋಕಾರ್ಪಣೆಗೊಳಿಸಿದೆ.

ಈಗಾಗಲೇ ಸ್ಯಾಮ್ ಸಂಗ್ ಎ ಸರಣಿಯ ಮೊಬೈಲ್ ಪೋನ್ ಗಳು ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿವೆ. ಇದರ ಬೆನ್ನಲ್ಲೇ ಸ್ಯಾಮ್ ಸಂಗ್ ಕಂಪೆನಿ A ಸರಣಿಯಲ್ಲಿ 5 ಜಿ ಕನೆಕ್ಟಿವಿಟಿಯನ್ನು ಮುಂದುವರೆಸಿದೆ.

ಮಲ್ಟಿ ರೋಲ್ ಕ್ವಾಡ್ ಕ್ಯಾಮರಾ, 5000 ಎಂಎಎಚ್ ದೀರ್ಘಾವಧಿ ಬ್ಯಾಟರಿ, ವೇಗಗತಿಯ ಚಾರ್ಜಿಂಗ್ ಸಾಮರ್ಥ್ಯ ಇನ್ಫಿನಿಟಿ-ಯು ಡಿಸ್ಪ್ಲೇ ಹಾಗೂ ಗ್ಯಾಲೆಕ್ಸಿ A ಸರಣಿಯಲ್ಲಿ ಗ್ರಾಹಕರ ಬೇಡಿಕೆಗೆ ತಕ್ಕಂತ ಸೌಲಭ್ಯಗಳನ್ನು ಒದಗಿಸಲಾಗಿದೆ.

ಬ್ರಿಟನ್ ಮಾರುಕಟ್ಟೆಯಲ್ಲಿ ಈಗಾಗಲೇ ಸ್ಯಾಮ್ ಸಂಗ್  ಗ್ಯಾಲೆಕ್ಸಿ A42 5ಜಿ ಗ್ರಾಹಕರ ಕೈಗೆ ಲಭಿಸುತ್ತಿದೆ. ಬ್ರಿಟನ್ ಮಾರುಕಟ್ಟೆಯಲ್ಲಿ 5ಜಿ ಮೊಬೈಲ್ 349 ಪೌಂಡ್ ಗಳು (33,000 ರೂಪಾಯಿ) ಬೆಲೆಗೆ ಮಾರಾಟವಾಗುತ್ತಿದೆ. ಆದರೆ ಭಾರತದ ಮಾರುಕಟ್ಟೆಯಲ್ಲಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ.

128 ಜಿಬಿ ಆಂತರಿಕ ಸ್ಟೋರೇಜ್, 4 ಜಿಬಿ RAM 1 ಟಿಬಿ ವರೆಗಿನ ಮೈಕ್ರೋ ಸಾಫ್ಟ್ ಎಸ್ ಡಿ ಸಪೋರ್ಟ್ ನ್ನು ಹೊಂದಿದೆ. 48 ಮೆಗಾ ಪಿಕ್ಸಲ್ ಕ್ಯಾಮರಾ 8 ಮೆಗಾ ಪಿಕ್ಸಲ್ ಅಲ್ಟ್ರಾ ವೈಡ್ ಕ್ಯಾಮರಾ 5 ಮೆಗಾ ಪಿಕ್ಸಲ್ ಮ್ಯಾಕ್ರೋ ಕ್ಯಾಮರಾ ಹಾಗೂ 5 ಮೆಗಾ ಪಿಕ್ಸಲ್ ಡೆಪ್ತ್ ಕ್ಯಾಮರ, 20 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮರಾಗಳಿರುವುದು ಈ ಮೊಬೈಲ್ ನ ವೈಶಿಷ್ಟ್ಯವಾಗಿದ್ದು, ಭಾರತದ ಮಾರುಕಟ್ಟೆಯಲ್ಲಿ ಕಡಿಮೆ ದರದಲ್ಲಿ 5ಜಿ ಮೊಬೈಲ್ ಒದಗಿಸಲು ಸ್ಯಾಮ್ ಸಂಗ್ ಮುಂದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Comments are closed.