ಜನಪ್ರತಿನಿಧಿಗಳ ಪೋಟೋಶೋಕಿಗೆ ಸುಪ್ರೀಂ ಬ್ರೇಕ್…! ಸರ್ಕಾರಿ ಯೋಜನೆಗಳಿಂದ ಭಾವಚಿತ್ರ ತೆರವಿಗೆ ಆಯುಕ್ತರ ಆದೇಶ…!

ಬೆಂಗಳೂರು: ಸರ್ಕಾರಿ ಅನುದಾನದಲ್ಲಿ ಕಟ್ಟಡ,ರಸ್ತೆ,ವಾಟರ್ ಟ್ಯಾಂಕ್ ಕಟ್ಟಿಸಿ ಜನಪ್ರತಿನಿಧಿಗಳ ಪೋಟೋ ಹಾಕಿಸಿ ಮೆರೆಯುವ ರಾಜಕೀಯ ಮೇಲಾಟಕ್ಕೆ ಬ್ರೇಕ್ ಬಿದ್ದಿದ್ದು, ನಗರದ ಸರ್ಕಾರಿ ಯೋಜನೆಗಳಲ್ಲಿ ಜನಪ್ರತಿನಿಧಿ ಪೋಟೋ ತೆರವಿಗೆ ಬಿಬಿಎಂಪಿ ಆಯುಕ್ತರ ಆದೇಶ ಹೊರಡಿಸಿದ್ದಾರೆ.

ಸರ್ಕಾರಿ ಅನುದಾನದಲ್ಲಿ ಜಾರಿಯಾಗೋ ಯೋಜನೆ ಹಾಗೂ ಕಟ್ಟಡಗಳ ಮೇಲೂ ಜನಪ್ರತಿನಿಧಿಗಳ ಆಳೆತ್ತರದ ಪೋಟೋ ಹಾಕೋ ಪ್ರವೃತ್ತಿ ನಮ್ಮಲ್ಲಿದೆ. ಆದರೆ ಈ ಪ್ರವೃತ್ತಿಗೆ ಸರ್ವೋಚ್ಛ ನ್ಯಾಯಾಲಯ ಬ್ರೇಕ್ ಹಾಕಿದೆ. ಹೀಗಾಗಿ ನಗರದ ವ್ಯಾಪ್ತಿಯಲ್ಲಿ ಸರ್ಕಾರಿ ಯೋಜನೆಗಳಲ್ಲಿ ಅಳವಡಿಸಲಾದ ಜನಪ್ರತಿನಿಧಿಗಳ ಪೋಟೋ ತೆರವುಗೊಳಿಸುವಂತೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಆದೇಶ ಹೊರಡಿಸಿದ್ದಾರೆ.

(adsbygoogle = window.adsbygoogle || []).push({});

ಯಾವುದೇ ಸರ್ಕಾರಿ ಕಾಮಗಾರಿಯಲ್ಲಿ ರಾಷ್ಟ್ರಪತಿ,ಪ್ರಧಾನಮಂತ್ರಿ,ಮುಖ್ಯಮಂತ್ರಿ ಹಾಗೂ ರಾಷ್ಟ್ರದ ಪಿತಾಮಹರ ಹೆಸರನ್ನು ಬಳಸಲು ಮಾತ್ರ ಸುಪ್ರೀಂಕೋರ್ಟ್ ಅವಕಾಶ ನೀಡಿದೆ.  ಹೀಗಾಗಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ನಿರ್ಮಿಸಲಾದಬಸ್ ನಿಲ್ದಾಣ,ವಾಟರ್ ಟ್ಯಾಂಕ್,ಶುದ್ಧಕುಡಿಯುವ ನೀರಿನ ಘಟಕ್,ರಸ್ತೆಗಳಲ್ಲಿ ಅಳವಡಿಸಲಾದ ಜನಪ್ರತಿನಿಧಿಗಳು, ಕಾರ್ಪೋರೇಟರ್,ಎಂಎಲ್ಎಗಳ ಪೋಟೋ ತೆರವುಗೊಳಿಸಲು ಬಿಬಿಎಂಪಿ ಆದೇಶಿಸಿದೆ.

(adsbygoogle = window.adsbygoogle || []).push({});

ಒಂದೊಮ್ಮೆ ಈ ಆದೇಶದ ಪಾಲಿಸದೇ ಸರ್ಕಾರಿ ಅನುದಾನದಲ್ಲಿ ನಿರ್ಮಿಸಲಾದ ಯೋಜನೆಗಳಿಗೆ ಸ್ಥಳೀಯ ಜನಪ್ರತಿನಿಧಿಗಳ ಪೋಟೋ ಬಳಸಿದಲ್ಲಿ ಅಂಥಹವರ ವಿರುದ್ಧ ಮೊಕದ್ದಮೆ ದಾಖಲಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಎಚ್ಚರಿಸಿದ್ದಾರೆ.

(adsbygoogle = window.adsbygoogle || []).push({});

ಇದು ಕೇವಲ ಬಿಬಿಎಂಪಿ ಮಾತ್ರವಲ್ಲದೇ ಕರ್ನಾಟಕ ಹಾಗೂ ದೇಶದ ಎಲ್ಲ ಭಾಗಗಳಿಗೂ ಅನ್ವಯವಾಗಲಿದ್ದು, ಇದರಿಂದ ಸರ್ಕಾರಿ ಅನುದಾನದಲ್ಲಿ ತಾವು ಪೋಸು ಕೊಡುವ ಪ್ರಚಾರ ಪ್ರಿಯ ಜನಪ್ರತಿನಿಧಿಗಳ ಶೋಕಿಗೆ ಬ್ರೇಕ್ ಬಿದ್ದಂತಾಗಲಿದೆ.

Comments are closed.