ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್‌ : ಮಾರುಕಟ್ಟೆಯಲ್ಲಿ ಭಾರೀ ಇಳಿಕೆ

ಬೆಂಗಳೂರು : ಮಾರುಕಟ್ಟೆಯಲ್ಲಿ ಇಂದು (ಮೇ 9) ಚಿನ್ನಾಭರಣ ಬೆಲೆಯಲ್ಲಿ ಭಾರೀ ಇಳಿಕೆ ಕಂಡಿದ್ದು, ಗ್ರಾಹಕರ ಸಿಹಿ ಸುದ್ಧಿ ಸಿಕ್ಕಂತೆ ಆಗಿದೆ. ಕಳೆದ ವಾರದಿಂದಲೂ ಏರಿಕೆ ಕಂಡಿದ್ದು, ಚಿನ್ನ ಹಾಗೂ ಬೆಳ್ಳಿಗಳ ಬೆಲೆಯಲ್ಲಿ (Gold and Silver Prices) ದುಬಾರಿಯಾಗಿದೆ. ಸದ್ಯ ವಾರಂತ್ಯದಲ್ಲಿ ಚಿನಿವಾರಪೇಟೆಯಲ್ಲಿ ಅಗ್ಗವಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 56,600 ರುಪಾಯಿ ಇದೆ. 24 ಕ್ಯಾರಟ್​ನ ಚಿನ್ನದ ಬೆಲೆ 61,750 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,810 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 56,650 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 8,270 ರುಪಾಯಿಯಲ್ಲಿ ಇದೆ.

ಕಳೆದ ತಿಂಗಳಿಂದ ಮದುವೆ ಸಮಾರಂಭಗಳು ಆರಂಭಗೊಂಡಿದ್ದು, ಜನರು ಚಿನ್ನಾಭರಣ ಖರೀದಿಗಾಗಿ ಅಂಗಡಿಗಳಲ್ಲಿ ಮುಗಿಬಿದ್ದಿದ್ದಾರೆ. ಅಷ್ಟೇ ಅಲ್ಲದೇ ಇನ್ನು ಕೆಲವರು ಚಿನ್ನಾಭರಣವನ್ನು ಭವಿಷ್ಯಕ್ಕಾಗಿ ಖರೀದಿ ಮಾಡುತ್ತಾರೆ. ಚಿನ್ನವು ಹೂಡಿಕೆಗೆ ಉತ್ತಮ ಆಯ್ಕೆ ಆಗಿರುವುದರಿಂದ ಖರೀದಿ ಮಾಡುತ್ತಾರೆ. ದೇಶದ ವಿವಿಧ ನಗರಗಳಲ್ಲಿ ಇಂದಿನ ಚಿನ್ನ ಹಾಗೂ ಬೆಳ್ಳಿ ಬೆಲೆಗಳನ್ನು ಈ ಕೆಳಗೆ ತಿಳಿಸಲಾಗಿದೆ.

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​) ವಿವರ :

ಬೆಂಗಳೂರು : ರೂ. 56,650
ಚೆನ್ನೈ : ರೂ. 57,100
ಮುಂಬೈ : ರೂ. 56,600
ದೆಹಲಿ : ರೂ. 56,750
ಕೋಲ್ಕತಾ : ರೂ. 56,600
ಕೇರಳ : ರೂ. 56,600
ಅಹ್ಮದಾಬಾದ್ : ರೂ. 56,650
ಜೈಪುರ್ : ರೂ. 56,750
ಲಕ್ನೋ : ರೂ. 56,750
ಭುವನೇಶ್ವರ್ : ರೂ. 56,600

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​) ವಿವರ :

ಬೆಂಗಳೂರು : ರೂ. 8,270
ಚೆನ್ನೈ : ರೂ. 8,270
ಮುಂಬೈ : ರೂ. 7,810
ದೆಹಲಿ : ರೂ. 7,810
ಕೋಲ್ಕತಾ : ರೂ. 7,810
ಕೇರಳ : ರೂ. 8,270
ಅಹ್ಮದಾಬಾದ್ : ರೂ. 7,810
ಜೈಪುರ್ : ರೂ. 7,810
ಲಕ್ನೋ : ರೂ. 7,810
ಭುವನೇಶ್ವರ್ : ರೂ. 8,270

ಆದ್ದರಿಂದ, ಅನ್ವಯವಾಗುವ ಎಲ್ಲಾ ತೆರಿಗೆಗಳು ಮತ್ತು ಶುಲ್ಕಗಳು ಸೇರಿದಂತೆ ನಿಜವಾದ ದರಗಳನ್ನು ಪಡೆಯಲು ಗ್ರಾಹಕರು ತಮ್ಮ ಸ್ಥಳೀಯ ಆಭರಣಗಳನ್ನು ಸಂಪರ್ಕಿಸಲು ಸಲಹೆ ನೀಡಲಾಗುತ್ತದೆ. ಗ್ರಾಹಕರು ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸಲು ಪಾವತಿಸಬೇಕಾದ ಅಂತಿಮ ಬೆಲೆಯ ಬಗ್ಗೆ ಉತ್ತಮ ತಿಳುವಳಿಕೆಯನ್ನು ಪಡೆಯಲು ಇದು ಸಹಾಯ ಮಾಡುತ್ತದೆ. ಭಾರತದಲ್ಲಿ ಚಿನ್ನದ ಬೆಲೆಗಳು ಮಾರುಕಟ್ಟೆಯನ್ನು ಅವಲಂಬಿಸಿವೆ. ಬಾಷ್ಪಶೀಲ ನೀತಿಗಳು, ನಿಧಾನಗತಿಯ ಆರ್ಥಿಕ ಬೆಳವಣಿಗೆ ಮತ್ತು ಯುಎಸ್ ಡಾಲರ್ ಎದುರು ರೂಪಾಯಿಯ ಬಲ ಸೇರಿದಂತೆ ಹಲವಾರು ಅಂಶಗಳಿಂದ ಬೆಲೆಗಳನ್ನು ನಿರ್ಧರಿಸಲಾಗುತ್ತದೆ.

ಇದನ್ನೂ ಓದಿ : ಮನೆಯಲ್ಲೇ ಕುಳಿತು ಪ್ಯಾನ್‌ ಕಾರ್ಡ್‌ ತಿದ್ದುಪಡಿ ಮಾಡುವುದು ಹೇಗೆ ಗೊತ್ತಾ ?

ಇದನ್ನೂ ಓದಿ : ವಿಶ್ವಬ್ಯಾಂಕ್‌ ಮುಂದಿನ ಅಧ್ಯಕ್ಷರಾಗಿ ಭಾರತೀಯ ಮೂಲದ ಅಜಯ್ ಬಂಗಾ ನೇಮಕ

Gold and Silver Prices: Good news for jewelery lovers: There has been a huge decrease in the market

Comments are closed.