ಸಕಲ ಸರಕಾರಿ ಗೌರವದೊಂದಿಗೆ ಬಲರಾಮ ಆನೆ ಅಂತ್ಯಕ್ರಿಯೆ : ಭಾವುಕ ವಿದಾಯ

ಮೈಸೂರು : ಮೈಸೂರು ದಸರಾ ವಿಶ್ವವಿಖ್ಯಾತಿ ಪಡೆದ ರಾಷ್ಟ್ರದ ಹಬ್ಬ. ಅದರಲ್ಲೂ ದಸರಾ ಎಂದ ಕೂಡಲೇ ಎಲ್ಲರಿಗೂ ನೆನಪಾಗುವುದೇ ಅಂಬಾರಿ ಹೊತ್ತು ನಡೆಯುವ ಆನೆ. ದಸರಾದಲ್ಲಿ ಭಾಗವಹಿಸುವ ಆನೆಗಳಿಗೆ ಒಂದೊಂದು ಹೆಸರನ್ನು ಸೂಚಿಸಿದ್ದು, ಅದರಲ್ಲೂ ವಿಶೇಷವಾಗಿ ಮೈಸೂರು ದಸರಾದಲ್ಲಿ 14‌ ಬಾರಿ ಅಂಬಾರಿ ಹೊತ್ತಿದ್ದ ಬಲರಾಮ ಆನೆ (67) (Mysore Dasara Ambari Elephant Balarama) ಅನಾರೋಗ್ಯದಿಂದ ಮೃತ ಪಟ್ಟಿದೆ. ಹೀಗಾಗಿ ಸಕಲ ಸರಕಾರಿ ಗೌರವದೊಂದಿಗೆ (Funeral of Balarama Elephant ) ಬಲರಾಮ ಆನೆಯ ಅಂತ್ಯಕ್ರಿಯೆ ಮಾಡಲಾಗಿದೆ.

ಬಲರಾಮನ ಅಂತ್ಯಕ್ರಿಯೆಯನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಭೀಮನಕಟ್ಟೆ ಆನೆ ಶಿಬಿರದಲ್ಲಿ ಶಾಸ್ತ್ರೋತ್ರವಾಗಿ ನೆರವೇರಿಸಲಾಗಿದೆ. ಮೃತ ಬಲರಾಮ ಆನೆ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಜಂಬೂ ಸವಾರಿ ಮೆರವಣಿಗೆಯಲ್ಲಿ 14‌ ಬಾರಿ ಚಿನ್ನದ ಅಂಬಾರಿ ಹೊತ್ತು ಹೋಗುವ ಮೂಲಕ ಎಲ್ಲರ ಕಣ್ಮಣಿಯಾಗಿತ್ತು. ಅತ್ಯಂತ ಮೃದು ಸ್ವಭಾವದ ಬಲರಾಮ ಆನೆ ಇತ್ತೀಚೆಗೆಷ್ಟೇ ತೀವ್ರ ಅನಾರೋಗ್ಯಕ್ಕೆ ತುತ್ತಾಗಿತ್ತು. ನಾಗರಹೊಳೆ ಉದ್ಯಾನವನದ ಹುಣಸೂರು ರೇಂಜ್ ವ್ಯಾಪ್ತಿಯ ಭೀಮನಕಟ್ಟೆ ಆನೆ ಶಿಬಿರದಲ್ಲಿ ಪಶು ವೈದ್ಯರ ತಂಡ ಬಲರಾಮನಿಗೆ ಚಿಕಿತ್ಸೆ ನೀಡುತ್ತಿದ್ದರು. ಬಲರಾಮನ ಬಾಯಿಯಲ್ಲಿ ಹುಣ್ಣಾಗಿದ್ಧರಿಂದ ಆಹಾರ ಸೇವಿಸಲು ನೀರು‌ ಕುಡಿಯಲು ಆಗದೇ ಅಸ್ವಸ್ಥಗೊಂಡಿತ್ತು. ವೈದ್ಯರು ನೀಡುತ್ತಿದ್ಧ ಚಿಕಿತ್ಸೆಗೆ ಸ್ಪಂದಿಸದೇ ಬಲರಾಮ ಭಾನುವಾರ ಇಹಲೋಕ ತ್ಯಜಿಸಿದ್ದಾನೆ.

ಬಲರಾಮನ ಅಂತ್ಯ ಸಂಸ್ಕಾರದ ವೇಳೆ ಮಾವುತ, ಅರಣ್ಯ ಇಲಾಖೆಯ ಸಿಬ್ಬಂದಿ, ಪಶು ವೈದ್ಯರು ಭಾವುಕರಾಗಿದ್ದರು. ಸೌಮ್ಯ ಸ್ವಭಅವದ ಬಲರಾಮನನ್ನು ನೆನೆದು ಸಿಬ್ಬಂದಿ ವರ್ಗ ಕೆಲಕಾಲ ಗದ್ಗರಿತರಾದರು. ಅತ್ಯಂತ ಸೌಮ್ಯ ಸ್ವಭಾವಿಯಾಗಿದ್ದ ಬಲರಾಮ ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರವಲ್ಲದೆ, ಸಾರ್ವಜನಿಕರ ಗಮನವನ್ನು ಸೆಳೆದಿತ್ತು. 1999ರಿಂದ 2011ರವರೆಗೆ ಸತತ 14 ಬಾರಿ ಚಿನ್ನದ ಅಂಬಾರಿಯನ್ನು ನಿರಾಯಾಸವಾಗಿ ಅರಮನೆ ಆವರಣದಿಂದ ಬನ್ನಿಮಂಟಪದವರೆಗೂ ಹೊತ್ತು, ಪ್ರೀತಿಗೆ ಪಾತ್ರವಾಗಿತ್ತು.

ಇದನ್ನೂ ಓದಿ : ಮೈಸೂರು ದಸರಾದಲ್ಲಿ 14‌ ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಬಲರಾಮ ಆನೆ ಇನ್ನಿಲ್ಲ

ಬಲರಾಮ ಅತ್ಯಂತ ಶಕ್ತಿಶಾಲಿ ಆನೆ ಎಂದು ಪ್ರಖ್ಯಾತಿ ಗಳಿಸಿತ್ತು. ಅತ್ಯಂತ ಮೃದು ಸ್ವಭಾವಿಯಾಗಿ ಪರಿವರ್ತನೆಯಾದ ಬಲರಾಮ ಜೀವಿತಾವಧಿಯಲ್ಲಿ ಯಾರಿಗೂ ತೊಂದರೆ ಕೊಡಲಿಲ್ಲ. ಬಲರಾಮ ತನ್ನ ಕ್ಯಾಂಪ್‍ ನಲ್ಲಿದ್ದ ಚಿಕ್ಕ ಆನೆಗಳಿಗೂ ತರಬೇತಿದಾರನಾಗಿದ್ದ. ಕೆಲ ಜ್ಯೂನಿಯರ್ ಆನೆಗಳಿಗೂ ಕೆಲವು ವಿಷಯಗಳ ಬಗ್ಗೆ ಹೇಳಿಕೊಡುವುದರಲ್ಲಿ ನಿಸ್ಸೀಮನಾಗಿದ್ದ. ಚಿಕ್ಕ ಆನೆಗಳನ್ನು ಪ್ರೀತಿಯಿಂದ ಕಾಣುತ್ತಿದ್ದ ಬಲರಾಮನ ಸಾವಿನಿಂದ ಭೀಮನಕಟ್ಟೆ ಆನೆ ಶಿಬಿರದಲ್ಲಿ ಶೋಕ ಮಡುಗಟ್ಟಿದೆ.

Mysore Dasara Ambari Elephant Balarama : Funeral of Balarama Elephant with Full Government Honours: Emotional Farewell

Comments are closed.