ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆ : ಯಾವ ನಗರದಲ್ಲಿ ಎಷ್ಟಿದೆ ಚಿನ್ನದ ದರ

ಬೆಂಗಳೂರು : ಕಳೆದ ಕೆಲ ದಿನಗಳಿಂದಲೂ ಚಿನಿವಾರು ಮಾರುಕಟ್ಟೆಯಲ್ಲಿ ಸತತವಾಗಿ ಎರಡು ದಿನದಿಂದ ಚಿನ್ನದ ಬೆಲೆಯಲ್ಲಿ (Gold Price in Commercial City) ಭಾರೀ ಇಳಿಕೆ ಕಂಡಿದೆ. ವಾರಾಂತ್ಯದಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗೆ 300 ರೂ.ನಷ್ಟು ಕುಸಿತ ಕಂಡಿದೆ. ಚಿನ್ನದ ಬೆಲೆ ಕಳೆದ ಹತ್ತು, ಹದಿನೈದು ದಿನದಿಂದ ಬೆಳ್ಳಿ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡಿದೆ. ಹೀಗಾಗಿ ಚಿನ್ನನ ಬೆಳ್ಳಿ ಖರೀದಿದಾರರಿಗೆ ಸೂಕ್ತವಾದ ಸಮಯ ಆಗಿದೆ. ಅದರಲ್ಲೂ ಈ ಮದುವೆ ಸಮಾರಂಭಗಳ ಸೀಸನ್‌ನಲ್ಲಿ ಚಿನ್ನ, ಬೆಳ್ಳಿ ಬೆಲೆ ಸತತವಾಗಿ ಇಳಿಕೆ ಕಂಡಿದ್ದು, ಗ್ರಾಹಕರಿಗೆ ಮೊಗದಲ್ಲಿ ಸಂತಸ ಮೂಡಿದೆ.

ಈ ತಿಂಗಳ ಆರಂಭದಿಂದ ಅಂದರೆ ಮೇ 5ರಂದು 100 ಗ್ರಾಮ್‌ಗೆ 7825 ರೂ. ಇದ್ದ ಬೆಳ್ಳಿ ಬೆಲೆ ಇದೀಗ 7460ರೂ. ಗೆ ಇಳಿದಿದೆ. ಹೀಗಾಗಿ ಕಳೆದ ಏಂಟು, ಹತ್ತು ದಿನದಲ್ಲಿ ಸುಮಾರು 900ರೂ.ನಷ್ಟು ಬೆಳ್ಳಿ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡಿದೆ. ಸದ್ಯ ಭಾರತದ ವಿವಿಧ ವಾಣಿಜ್ಯ ನಗರಗಳಲ್ಲಿ 10 ಗ್ರಾಮ್‌ನ 22 ಕ್ಯಾರೆಟ್‌ ಚಿನ್ನದ ಬೆಲೆ 55800ರೂಪಾಯಿ ಇದೆ. 24 ಕ್ಯಾರೆಟ್‌ನ ಚಿನ್ನದ ಬೆಲೆ 60870 ರೂಪಾಯಿ ಆಗಿದೆ. 100 ಗ್ರಾಮ್‌ ಬೆಳ್ಳಿ ಬೆಲೆ 7430 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗೆ 55850 ರೂಪಾಯಿ ಆಗಿದೆ. ಬೆಳ್ಳಿ ಬೆಲೆ 100 ಗ್ರಾಮ್‌ಗೆ 7800 ರೂಪಾಯಿ ಇದೆ. ಇನ್ನುಳಿದಂತೆ ದೇಶದ ವಿವಿಧ ವಾಣಿಜ್ಯ ನಗರಗಳಲ್ಲಿ ಇಂದಿನ ಚಿನ್ನ ಹಾಗೂ ಬೆಳ್ಳಿ ಬೆಲೆಗಳನ್ನು ಈ ಕೆಳಗೆ ತಿಳಿಸಲಾಗಿದೆ.

ದೇಶದ ವಿವಿಧ ವಾಣಿಜ್ಯ ನಗರಗಳಲ್ಲಿರುವ 22 ಕ್ಯಾರೆಟ್‌ ಚಿನ್ನದ ಬೆಲೆ (10ಗ್ರಾಮ್‌) ವಿವರ :

  • ಬೆಂಗಳೂರು : ರೂ. 55850
  • ಚೆನ್ನೈ : ರೂ. 56250
  • ಮುಂಬೈ : ರೂ. 55800
  • ದೆಹಲಿ : ರೂ. 55950
  • ಕೋಲ್ಕತ್ತಾ : ರೂ. 55800
  • ಕೇರಳ : ರೂ. 55800
  • ಅಹ್ಮದಬಾದ್‌ : ರೂ. 55850
  • ಜೈಪುರ : ರೂ. 55950
  • ಲಕ್ನೋ : ರೂ. 55950
  • ಭುವನೇಶ್ವರ್‌ : ರೂ. 55800

ದೇಶದ ವಿವಿಧ ವಾಣಿಜ್ಯ ನಗರಗಳಲ್ಲಿ ಬೆಳ್ಳಿ ಬೆಲೆ (100ಗ್ರಾಮ್)‌ ವಿವರ :

  • ಬೆಂಗಳೂರು : ರೂ. 7800
  • ಚೆನ್ನೈ : ರೂ. 7800
  • ಮುಂಬೈ : ರೂ. 7430
  • ದೆಹಲಿ : ರೂ. 7430
  • ಕೋಲ್ಕತ್ತಾ : ರೂ. 7430
  • ಕೇರಳ : ರೂ. 7800
  • ಅಹ್ಮದಾಬಾದ್‌ : ರೂ. 7430
  • ಜೈಪುರ : ರೂ. 7430
  • ಲಕ್ನೋ : ರೂ. 7430
  • ಭುವನೇಶ್ವರ್‌ : ರೂ. 7800

ಇದನ್ನೂ ಓದಿ : RBI Ban Rs 2000 Currency : ಬ್ಯಾಂಕ್‌ನಲ್ಲಿ ನೋಟುಗಳನ್ನು ಬದಲಾಯಿಸುವುದು ಹೇಗೆ ಗೊತ್ತೆ ?

ಇದನ್ನೂ ಓದಿ : PUBG Krafton : ಭಾರತದಲ್ಲಿ ಮತ್ತೆ ಶುರುವಾಗಲಿದೆ ಪಬ್‌ಜೀ

ಇನ್ನು ಅನ್ವಯವಾಗುವ ಎಲ್ಲಾ ತೆರಿಗೆಗಳು ಮತ್ತು ಶುಲ್ಕಗಳು ಸೇರಿದಂತೆ ನಿಜವಾದ ದರಗಳನ್ನು ಪಡೆಯಲು ಗ್ರಾಹಕರು ತಮ್ಮ ಸ್ಥಳೀಯ ಆಭರಣ ಅಂಗಡಿಗಳಿಗೆ ಭೇಟಿ ನೀಡಲು ಸಲಹೆ ನೀಡಲಾಗುತ್ತದೆ. ಗ್ರಾಹಕರು ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸಲು ಪಾವತಿಸಬೇಕಾದ ಅಂತಿಮ ಬೆಲೆಯ ಬಗ್ಗೆ ಉತ್ತಮ ತಿಳುವಳಿಕೆಯನ್ನು ಪಡೆಯಲು ಇದು ಸಹಾಯ ಮಾಡುತ್ತದೆ. ಭಾರತದಲ್ಲಿ ಚಿನ್ನದ ಬೆಲೆಗಳು ಮಾರುಕಟ್ಟೆಯನ್ನು ಅವಲಂಬಿಸಿವೆ. ಬಾಷ್ಪಶೀಲ ನೀತಿಗಳು, ನಿಧಾನಗತಿಯ ಆರ್ಥಿಕ ಬೆಳವಣಿಗೆ ಮತ್ತು ಯುಎಸ್ ಡಾಲರ್ ಎದುರು ರೂಪಾಯಿಯ ಬಲ ಸೇರಿದಂತೆ ಹಲವಾರು ಅಂಶಗಳಿಂದ ಬೆಲೆಗಳನ್ನು ನಿರ್ಧರಿಸಲಾಗುತ್ತದೆ.

Gold Price in Commercial City: Substantial decrease in the price of gold: What is the price of gold in which city?

Comments are closed.