50 ಸಾವಿರದ ಗಡಿ ದಾಟಿದ ಶುದ್ಧ ಚಿನ್ನ, ಬೆಳ್ಳಿ: ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆ ಸಾಧ್ಯತೆ !

0

ಬೆಂಗಳೂರು : ಆಭರಣ ಪ್ರಿಯರಿಗೆ ಚಿನ್ನ, ಬೆಳ್ಳಿ ದರ ಏರಿಕೆ ಶಾಕ್ ಕೊಟ್ಟಿದೆ. ಶುದ್ದ ಚಿನ್ನದ ದರ 50 ಸಾವಿರದ ಗಡಿದಾಟಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಹಣ ದುಬ್ಬರ, ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ, ಬಡ್ಡಿ ದರ, ಜ್ಯುವೆಲರಿ ಮಾರುಕಟ್ಟೆ ಮತ್ತು ವ್ಯಾಪಾರ ಯುದ್ಧಗಳು ಚಿನ್ನದ ಬೆಲೆ ಏರಿಳಿತಕ್ಕೆ ನೇರ ಕಾರಣವಾಗುತ್ತಿದೆ. ಲಾಕ್​ಡೌನ್​ ಪೂರ್ಣಗೊಂಡ ಬೆನ್ನಲ್ಲೇ ಚಿನ್ನಕ್ಕೆ ಭಾರೀ ಬೇಡಿಕೆ ಬರುತ್ತಿದೆ. ಮಾರುಕಟ್ಟೆಯಲ್ಲಿ ಶುದ್ಧ ಚಿನ್ನದ ದರ 50 ಸಾವಿರದ ಗಡಿ ದಾಟಿದೆ.

ಬೆಂಗಳೂರಿನಲ್ಲಿ ಬುಧವಾರ 22 ಕ್ಯಾರೆಟ್​ನ 10 ಗ್ರಾಂ ಚಿನ್ನ 370 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ ಬೆಲೆ 46,050 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 370 ರೂಪಾಯಿ ಏರಿಕೆ ಕಂಡಿದ್ದು, 50,200 ರೂಪಾಯಿ ಆಗಿದೆ.

ಕೇವಲ ಚಿನ್ನ ಮಾತ್ರವಲ್ಲ ಬೆಳ್ಳಿ ಖರೀದಿಗೂ ಗ್ರಾಹಕರು ಮನಸ್ಸು ಮಾಡ್ತಿದ್ದಾರೆ. ಹೀಗಾಗಿ ಬೆಳ್ಳಿ ಬೆಲೆಯಲ್ಲೂ ಭಾರೀ ಏರಿಕೆ ಕಂಡಿದೆ. ಕೆಜಿ ಬೆಳ್ಳಿಗೆ 1,500 ರೂಪಾಯಿ ಆಗಿದೆ. ಈ ಮೂಲಕ ಬೆಳ್ಳಿ ದರ 50,060 ರೂಪಾಯಿ ಆಗಿದೆ

ಮುಂದಿನ ದಿನಗಳಲ್ಲಿ ಚಿನ್ನ ಹಾಗೂ ಬೆಳ್ಳಿಯ ದರದಲ್ಲಿ ಭಾರೀ ಏರಿಕೆಯಾಗುವ ಸಾಧ್ಯತೆಯಿದೆ. ಚಿನ್ನ ಖರೀದಿಸುವ ಪ್ಲ್ಯಾನ್ ನಲ್ಲಿರುವವರು ಈಗನೇ ಖರೀದಿ ಮಾಡುವುದು ಒಳಿತು.

Leave A Reply

Your email address will not be published.