Good Health Insurance: ಉತ್ತಮ ಆರೋಗ್ಯ ವಿಮೆ ಆರಿಸಿಕೊಳ್ಳುವುದು ಹೇಗೆ?

ಕೊರೊನ ಮಹಾಮಾರಿ ಬಂದ ನಂತರ ಜನರಲ್ಲಿ ಆರೋಗ್ಯದ (Health) ಕುರಿತಾದ ಜಾಗೃತಿ ಹೆಚ್ಚಿದೆ. ಇದರ ಜೊತೆಗೆ ಬಹಳಷ್ಟು ಜನ ಆರೋಗ್ಯ ವಿಮೆ ಮಾಡಿಸಲು ಯೋಚಿಸುತ್ತಿದ್ದಾರೆ. ಹಲವಾರು ಕಂಪೆನಿಗಳು ವಿಮೆ ಸೌಲಭ್ಯ (Company Health Insurence Benefits) ಒದಗಿಸಲು ಮುಂದಾಗಿವೆ. ಆದರೆ, ವಿಮೆ ಮಾಡುವ ಮುನ್ನ ಬಹಳಷ್ಟು ಜಾಗ್ರತೆ (Good Health Insurance) ವಹಿಸುವುದು ಅತಿ ಅಗತ್ಯ. ಅಷ್ಟೇ ಅಲ್ಲದೇ, ಈ ವಿಮೆಗಳಲ್ಲಿನ ಷರತ್ತುಗಳನ್ನು ಓದುವುದು ಮುಖ್ಯ.

ಜನರು ಆರೋಗ್ಯ ವಿಮೆ ಮಾಡುವ ಮುನ್ನ ಅದರ ನಿಯಮಗಳನ್ನು, ವ್ಯಾಪ್ತಿ, ವಿಧಗಳ ಕುರಿತು ಅರಿಯುವುದು ಉತ್ತಮ. ರೀತಿಯ ಆಧುನಿಕ ಚಿಕಿತ್ಸೆಯಾದರೆ, ವಿಮೆ ಮಾಡಿಸುವ ಮುನ್ನ ನೀತಿಗಳನ್ನು ನೋಡಬೇಕು. ಕೆಲವೊಂದು ಕಂಪೆನಿಯ ವಿಮೆಗಳು ನಿರ್ದಿಷ್ಟ ಚಿಕೆತ್ಸೆಗಳಿಗೆ ಮಾತ್ರ ಮೀಸಲಾಗಿ ರುತ್ತವೆ. ಹಾಗಾಗಿ, ಚಿಕಿತ್ಸೆ ವ್ಯಾಪ್ತಿ ಮುಂತಾದವ ಅಂಶಗಳನ್ನು ಕಂಪೆನಿಯಿಂದ ಮೊದಲೇ ಕೇಳಿ ತಿಳಿಯುವುದು ಉತ್ತಮ.

ಕಡಿಮೆ ಪ್ರೀಮಿಯಂ ಆಯ್ಕೆ ಮಾಡಿ
ಹೀಗೆ ಮಾಡುವುದರಿಂದ ನೀವು ಆಯ್ಕೆ ಮಾಡಿದ ಪಾಲಿಸಿಯು ಕಡಿಮೆ-ಪ್ರೀಮಿಯಂನೊಂದಿಗೆ ಉತ್ತಮ ಪ್ರಯೋಜನಗಳನ್ನು ನೀಡುತ್ತದೆಯೇ ಎಂದು ಖಚಿತಪಡಿಸಿಕೊಳ್ಳಿ. ಉದಾಹರಣೆಗೆ, ವಿಮಾದಾರರ ವೆಬ್‌ಸೈಟ್‌ನಿಂದ ನೇರವಾಗಿ ವಿಮಾ ಪಾಲಿಸಿಯನ್ನು ಖರೀದಿಸಿ. ಹೀಗೆ ಖರೀದಿಸುವುದರಿಂದ ಆನ್‌ಲೈನ್‌ನಲ್ಲಿ ರಿಯಾಯಿತಿ ಸಿಗಲಿದೆ.

ವಿಮೆಯ ಕಾಯುವ ಅವಧಿ
ಹೆಚ್ಚಿನ ಆರೋಗ್ಯ ವಿಮೆಗಳು ಕಾಯುವ ಅವಧಿಯೊಂದಿಗೆ ಬರುತ್ತದೆ. ಹಾಗಾಗಿ ನೀವು ಯಾವುದೇ ಕಾಯಿಲೆ ಅಥವಾ ಯಾವುದೇ ಗಂಭೀರ ರೋಗವನ್ನು ಹೊಂದಿದ್ದರೆ ನಿಮ್ಮ ವಿಮೆ ಕವರ್ ಆಗಲಿದೆಯೇ ಎಂಬ ಮಾಹಿತಿಯನ್ನು ಮೊದಲೇ ಕೇಳಿ ತಿಳಿಯಿರಿ. ವಿಮಾ ಕಂಪನಿಯು ಪಾಲಿಸಿಯಲ್ಲಿ ನೀಡಿದ ಕಾಯುವ ಅವಧಿಯನ್ನು ಪರಿಶೀಲಿಸಿ. ಸಾಧ್ಯವಾದಷ್ಟು ಕಡಿಮೆ ಕಾಯುವ ಅವಧಿಯನ್ನು ಹೊಂದಿರುವ ವಿಮೆಯ ಸೌಲಭ್ಯ ಆಯ್ಕೆ ಮಾಡಲು ಪ್ರಯತ್ನಿಸಿ.

ನಿಮ್ಮ ಅವಶ್ಯಕತೆ ಬಗ್ಗೆ ನಿಮಗೆಷ್ಟು ಗೊತ್ತು?
ಯಾವುದೇ ವಿಮೆ ಖರೀದಿಸುವ ಮುನ್ನ, ನಿಮ್ಮ ಅವಶ್ಯಕತೆ ಏನು ಎಂದು ತಿಳಿಯಿರಿ. ಇವುಗಳು ಲಿಂಗ, ಉದ್ಯೋಗ, ವಯಸ್ಸು, ಶಿಕ್ಷಣ, ಸ್ಥಳ, ಪ್ರದೇಶಗಳನ್ನು ಅಧರಿಸಿಕೊಂಡು ನಿಮಗೆ ವೆಚ್ಚವನ್ನು ನಿರ್ವಹಣೆ ಮಾಡಲು ಸಹಾಯ ಮಾಡುತ್ತದೆ. ರೋಬೋಟಿಕ್ ಚಿಕಿತ್ಸೆ

ಕ್ಯಾಶ್‌ಲೆಸ್ ಆಗಿರಲಿ
ಮೊದಲು ನೀವು ಚಿಕಿತ್ಸೆಗೆ ತೆರಳುವ ಆಸ್ಪತ್ರೆಯ ನೆಟ್‌ವರ್ಕ್‌ ಎಷ್ಟಿದೆ ಎಂಬುದರ ಬಗ್ಗೆ ತಿಳಿಯಿರಿ. ಆಸ್ಪತ್ರೆಯವರು ಕ್ಯಾಶ್‌ಲೆಸ್ ಚಿಕಿತ್ಸೆಯ ಸೌಲಭ್ಯವನ್ನು ನೀಡುತ್ತಾರೆಯೇ ಎಂದು ಪರಿಶೀಲಿಸಿ. ಏಕೆಂದರೆ ವೈದ್ಯಕೀಯ ತುರ್ತು ಸಮಯದಲ್ಲಿ ಅಡ್ವಾನ್ಸ್ ಆಗೀ ಬಿಲ್ ಪಾವತಿ ಮಾಡುವುದು ಕಷ್ಟವಾಗಿರುತ್ತದೆ. ಆದ್ದರಿಂದ ಆಸ್ಪತ್ರೆಗಳ ಕ್ಯಾಶ್ ಲೆಸ್ ಸೌಲಭ್ಯ ಮತ್ತು ವ್ಯಾಪ್ತಿಯನ್ನು ನೀಡುವ ಕವರ್ ಆಯ್ಕೆಮಾಡಿ.

ಯಾವುದೇ ಆರೋಗ್ಯ ವಿಮಾ ಖರೀದಿಸುವ ಮೊದಲು ಪಾಲಿಸಿದಾರನು ಯಾವಾಗಲೂ ತನ್ನ ಮತ್ತು ಅವನ ಅವಲಂಬಿತರ ವಯಸ್ಸು ಮತ್ತು ಆರೋಗ್ಯ ಸ್ಥಿತಿಯನ್ನು ತಿಳಿದಿರಬೇಕು.
ಉದಾಹರಣೆಗೆ, ಪಾಲಿಸಿದಾರರು ಈಗಾಗಲೇ ಕಡಿಮೆ ಮೊತ್ತದ ಪಾಲಿಸಿಯನ್ನು ಹೊಂದಿದ್ದರೆ. ಅವರು ಅಪ್‌ಗ್ರೇಡ್ ಮಾಡಲು ಸಾಧ್ಯವಿದೆ. ಹೆಚ್ಚುವರಿ ವ್ಯಾಪ್ತಿಗಾಗಿ ಸೂಪರ್ ಟಾಪ್-ಅಪ್ ಪಾಲಿಸಿಯನ್ನು ಆರಿಸಲು ಸಾಧ್ಯವಿದೆ. ಆಸ್ಪತ್ರೆಯ ಖರ್ಚುಗಳನ್ನು ಒಳಗೊಂಡಿರುವ ನೀತಿಯನ್ನು ಆಯ್ಕೆ ಮಾಡುವುದು ಉತ್ತಮ ಆಯ್ಕೆ ಎಂದು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: 5 Best Credit Cards : ಕ್ಯಾಶ್‌ಬ್ಯಾಕ್ ನೀಡುವ ಅತ್ಯುತ್ತಮ 5 ಕ್ರೆಡಿಟ್ ಕಾರ್ಡ್‌ಗಳು ಯಾವುವು? ಅವುಗಳು ನೀಡುವ ಕೊಡುಗೆಗಳೇನು?

(Good Health Insurance choose tips)

Comments are closed.