ಸೋಮವಾರ, ಏಪ್ರಿಲ್ 28, 2025
Homebusinessಬಿಪಿಎಲ್ ಪಡಿತರ ಕಾರ್ಡುದಾರರಿಗೆ ಗುಡ್‌ನ್ಯೂಸ್‌ : ತಿದ್ದುಪಡಿಗೆ ಸರಕಾರದಿಂದ ಹೊಸ ರೂಲ್ಸ್‌ ಜಾರಿ

ಬಿಪಿಎಲ್ ಪಡಿತರ ಕಾರ್ಡುದಾರರಿಗೆ ಗುಡ್‌ನ್ಯೂಸ್‌ : ತಿದ್ದುಪಡಿಗೆ ಸರಕಾರದಿಂದ ಹೊಸ ರೂಲ್ಸ್‌ ಜಾರಿ

- Advertisement -

ಬೆಂಗಳೂರು : ರಾಜ್ಯ ಸರಕಾರ ಗ್ಯಾರಂಟಿ ಯೋಜನೆಗಳ (Congress Guarantee Scheme ) ಜಾರಿಯ ಬೆನ್ನಲ್ಲೇ ಪಡಿತರ ಕಾರ್ಡ್‌ ತಿದ್ದುಪಡಿಗೆ (Ration Card Updates) ಅವಕಾಶ ನೀಡಿತ್ತು. ನಂತರದಲ್ಲಿ ತಿದ್ದುಪಡಿಯನ್ನು ಸ್ಥಗಿತಗೊಳಿಸಿತ್ತು. ಆದ್ರೀಗ ಬಿಪಿಎಲ್‌ ಕಾರ್ಡುದಾರರಿಗೆ (BPL Card) ರಾಜ್ಯ ಸರಕಾರ (karnataka Government) ಮತ್ತೊಮ್ಮೆ ಗುಡ್‌ನ್ಯೂಸ್‌ ಕೊಟ್ಟಿದ್ದು, ಪಡಿತರ ಕಾರ್ಡ್‌ ತಿದ್ದುಪಡಿಗೆ (BPL Card Updates) ಅವಕಾಶ ಕಲ್ಪಿಸಿದೆ.

ಆಹಾರ ಇಲಾಖೆ ಬಿಪಿಎಲ್‌ ಕಾರ್ಡುದಾರರಿಗೆ ಅಕ್ಟೋಬರ್‌ 5 ರಿಂದ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯ ವರೆಗೆ ಪಡಿತರ ಕಾರ್ಡ್‌ ತಿದ್ದುಪಡಿಗೆ ಅವಕಾಶ ಕಲ್ಪಿಸಿದ್ದು, ಕಾರ್ಡುದಾರರು ಬೆಂಗಳೂರು ಒನ್‌ (Bangalore One), ಕರ್ನಾಟಕ ಒನ್‌ (karnataka One) ಹಾಗೂ ಗ್ರಾಮ ಒನ್‌ ಕೇಂದ್ರಗಳಲ್ಲಿ(Grama One Center) ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ.

Good news for BPL ration card holders Updates Karnataka Government has issued new rules for amendment
Image credit to Original Source

ಆರಂಭಿಕ ಹಂತದಲ್ಲಿ ಅಕ್ಟೋಬರ್‌ 5 ರಿಂದ 7 ರ ವರೆಗೆ ಬೆಂಗಳೂರು ನಗರ (Bangalore town), ಬೆಂಗಳೂರು ಗ್ರಾಮಾಂತರ (bangaluru Rural) ಜಿಲ್ಲೆಯಲ್ಲಿನ ಬಿಪಿಎಲ್‌ ಕಾರ್ಡುದಾರರು ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ. ನಂತರದಲ್ಲಿ ಹಂತ ಹಂತವಾಗಿ ಇತರ ಜಿಲ್ಲೆಗಳಲ್ಲಿ ತಿದ್ದುಪಡಿಗೆ ಅವಕಾಶವನ್ನು ಕಲ್ಪಿಸಲಾಗಿದೆ.

ಇನ್ನು ಅಕ್ಟೋಬರ್‌ 8 ರಿಂದ ಅಕ್ಟೋಬರ್‌ 10ರ ವರೆಗೆ 2ನೇ ಹಂತದಲ್ಲಿ ದಕ್ಷಿಣ ಕನ್ನಡ, ಚಾಮರಾಜನಗರ, ಧಾರವಾಡ, ಬೆಳಗಾವಿ, ಬಾಗಲಕೋಟೆ, ಹಾಸನ, ಹಾವೇರಿ, ಗದಗ, ಉಡುಪಿ, ಮೈಸೂರು, ಮಂಡ್ಯ, ಉತ್ತರ ಕನ್ನಡ, ಕೊಡಗು, ವಿಜಯಪುರ ಸೇರಿ 15 ಜಿಲ್ಲೆಗಳ ಜನರಿಗೆ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯ ಹಣ ಇನ್ನೂ ಸಿಕ್ಕಿಲ್ವಾ ? ಹಾಗಾದ್ರೆ ಗುಡ್‌ನ್ಯೂಸ್‌, ಸರಕಾರದಿಂದ ಹೊಸ ರೂಲ್ಸ್‌

ಮೂರನೇ ಹಂತದಲ್ಲಿ ಅಕ್ಟೋಬರ್‌ 11 ರಿಂದ 13 ರ ವರೆಗೆ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದ್ದು, ಕಲಬುರಗಿ, ಬೀದರ್‌, ಚಿಕ್ಕಬಳ್ಳಾಪುರ, ಬಳ್ಳಾರಿ, ಕೊಪ್ಪಳ, ದಾವಣಗೆರೆ, ರಾಯಚೂರು, ಕೋಲಾರ, ಶಿವಮೊಗ್ಗ, ರಾಮನಗರ, ವಿಜಯನಗರ, ತುಮಕೂರು, ಯಾದಗಿರಿ ಸೇರಿದಂತೆ ಒಟ್ಟು 14 ಜಿಲ್ಲೆಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.

ಎಲ್ಲಾ ಜಿಲ್ಲೆಗಳಲ್ಲಿಯೂ ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯ ವರೆಗೆ ಬಿಪಿಎಲ್‌ ಕಾರ್ಡುದಾರರು ತಿದ್ದುಪಡಿಯನ್ನು ಮಾಡಿಸಿಕೊಳ್ಳಲು ಅವಕಾಶವಿದೆ. ಈ ಅವಕಾಶವನ್ನು ಬಳಸಿಕೊಳ್ಳುವಂತೆ ಆಹಾರ ಇಲಾಖೆ ಮಾಹಿತಿಯನ್ನು ನೀಡಿದೆ. ಗೃಹಲಕ್ಷ್ಮೀ ಯೋಜನೆ (Gruha Lakshmi Scheme), ಗೃಹಜ್ಯೋತಿ ಯೋಜನೆಗಳಿಗಾಗಿ (Gruha Jyothi Scheme) ರಾಜ್ಯ ಸರಕಾರ ಎಪಿಎಲ್‌ (APL Card), ಬಿಪಿಎಲ್‌ (BPL Card) ಹಾಗೂ ಅಂತ್ಯೋದಯ ಪಡಿತರ ಕಾರ್ಡ್‌ (Anthyodaya Card) ತಿದ್ದುಪಡಿಗೆ ಅವಕಾಶ ಕಲ್ಪಿಸಿತ್ತು.

Good news for BPL ration card holders Updates Karnataka Government has issued new rules for amendment
Image Credit to Original Source

ಆದ್ರೆ ಸರ್ವರ್‌ ಸಮಸ್ಯೆಯ (Ration Card Server Problem) ಹಿನ್ನೆಲೆಯಲ್ಲಿ ಹಲವರಿಗೆ ಪಡಿತರ ಕಾರ್ಡ್‌ ತಿದ್ದುಪಡಿ ಸಾಧ್ಯವಾಗಿರಲಿಲ್ಲ. ಆದ್ರೆ ಇದೀಗ ಸರಕಾರ ಮತ್ತೊಮ್ಮೆ ಬಿಪಿಎಲ್‌ ಕಾರ್ಡ್‌ ತಿದ್ದುಪಡಿಗೆ ಅವಕಾಶ ನೀಡಿದೆ. ಪಡಿತರ ಚೀಟಿಯಲ್ಲಿ ತಿದ್ದುಪಡಿ ಮಾಡದ ಹಿನ್ನೆಲೆಯಲ್ಲಿ ಲಕ್ಷಾಂತರ ಗೃಹಿಣಿಯರಿಗೆ ಇನ್ನೂ ಗೃಹಲಕ್ಷ್ಮೀ ಯೋಜನೆಯ ಲಾಭ ದೊರೆತಿಲ್ಲ.

ಇದನ್ನೂ ಓದಿ : ಗಲ್ಲಿ ಗಲ್ಲಿಗೊಂದು ಮದ್ಯದಂಗಡಿ: ಕಾಂಗ್ರೆಸ್ ಸರ್ಕಾರದ ಹೊಸ ಗ್ಯಾರಂಟಿ

ಇದೀಗ ಪ್ರತೀ ಜಿಲ್ಲೆಗಳಿಗೂ ರಾಜ್ಯ ಸರಕಾರ ಪಡಿತರ ಕಾರ್ಡ್‌ ತಿದ್ದುಪಡಿಗೆ ಮೂರು ದಿನಗಳ ಕಾಲಾವಕಾಶವನ್ನು ನೀಡಿದೆ. ಈ ಅವಧಿಯಲ್ಲಿ ಬಿಎಪಿಎಲ್‌ ಕಾರ್ಡುದಾರರು ಹೊಸ ಹೆಸರು ಸೇರ್ಪಡೆಯ ಜೊತೆಗೆ ಕಾರ್ಡುದಾರರ ಹೆಸರು, ವಿಳಾಸ ಸೇರಿದಂತೆ ಎಲ್ಲಾ ರೀತಿಯ ತಿದ್ದುಪಡಿಗೆ ಅವಕಾಶವನ್ನು ಕಲ್ಪಿಸಲಾಗಿದೆ.

Good news for BPL ration card holders Updates Karnataka Government has issued new rules for amendment

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular