ಗಲ್ಲಿ ಗಲ್ಲಿಗೊಂದು ಮದ್ಯದಂಗಡಿ: ಕಾಂಗ್ರೆಸ್ ಸರ್ಕಾರದ ಹೊಸ ಗ್ಯಾರಂಟಿ

ಕಾಂಗ್ರೆಸ್ ಸರ್ಕಾರದ (Karnataka Congress Government)  ಗ್ಯಾರಂಟಿ ಯೋಜನೆಗಳಿಂದಾಗಿ (Gurantee Scheme) ಬೊಕ್ಕಸ ಬರಿದಾಗುತ್ತಿದೆ. ಸರಕಾರ ಮದ್ಯದಂಗಡಿಗಳ (liquor Shops) ಪರವಾನಿಗೆ ವಿಚಾರದಲ್ಲಿ ಹೊಸ ವಿವಾದಕ್ಕೆ ನಾಂದಿ ಹಾಡೋ ಮುನ್ಸೂಚನೆ ನೀಡಿದೆ.

ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ (Karnataka Congress Government)  ಗ್ಯಾರಂಟಿ ಯೋಜನೆಗಳಿಂದಾಗಿ (Gurantee Scheme) ಬೊಕ್ಕಸ ಬರಿದಾಗುತ್ತಿದೆ. ಹೀಗಾಗಿ ಸರಕಾರಕ್ಕೆ ಆದಾಯ ತರುವ ಯೋಜನೆಗಳನ್ನು ರೂಪಿಸುವಲ್ಲಿ ಸರಕಾರ ಹೆಚ್ಚು ಆಸಕ್ತಿ ತೋರುತ್ತಿದೆ.ಆದರೆ ಸದ್ಯ ಸರಕಾರ ಮದ್ಯದಂಗಡಿಗಳ (liquor Shops)  ಪರವಾನಿಗೆ ವಿಚಾರದಲ್ಲಿ ಹೊಸ ವಿವಾದಕ್ಕೆ ನಾಂದಿ ಹಾಡೋ ಮುನ್ಸೂಚನೆ ನೀಡಿದೆ.

ಗಾಂಧೀಜಿ ವ್ಯಸನ ಮುಕ್ತ ಭಾರತದ ಕನಸು ಕಂಡಿದ್ದರು. ಆದರೆ ಗಾಂಧಿ ತತ್ವಗಳ ಭಾಷಣ ಬಿಗಿಯುವ ರಾಜ್ಯ ಕಾಂಗ್ರೆಸ್ ಸರ್ಕಾರ ಮನೆ ಮನೆಯಲ್ಲೂ ಕುಡುಕರ ಸಂಖ್ಯೆ ಹೆಚ್ಚಿಸುವ ಲೆಕ್ಕಾಚಾರದಲ್ಲಿದ್ದಂತಿದೆ. ಸರ್ಕಾರ ಹೊಸತಾಗಿ ಎಮ್ಎಸ್ಐಎಲ್ (MSIL Shops) ಮದ್ಯದಂಗಡಿಗಳಿಗೆ ಅನುಮತಿ ನೀಡಲು ನಿರ್ಧರಿಸಿದೆ ಎನ್ನಲಾಗ್ತಿದೆ .

Karnataka Street-to-street liquor shop Congress government new guarantee
Image Credit to Original Source

ಇದರೊಂದಿಗೆ ಗ್ರಾಮಕ್ಕೊಂದರಂತೆ ಮದ್ಯದಂಗಡಿ ತೆರೆಯಲು ಅನುಮತಿ ನೀಡಲು ಸರ್ಕಾರ ಚಿಂತನೆ ನಡೆಸಿದೆ‌. ಮೂರು ಸಾವಿರ ಜನಸಂಖ್ಯೆ ಹೊಂದಿರುವ ಪ್ರದೇಶದಲ್ಲಿ ಸರ್ಕಾರಿ ಮದ್ಯದಂಗಡಿ ಅಂದ್ರೇ ಎಮ್ ಎಸ್ ಆಯ್ ಎಲ್ ಔಟ್ ಲೆಟ್ ತೆರೆಯಲು ಸರ್ಕಾರ ಚಿಂತನೆ ನಡೆಸಿದೆ.

ಇದನ್ನೂ ಓದಿ : ಬಿಜೆಪಿ – ಜೆಡಿಎಸ್‌ ಮೈತ್ರಿಗೆ ಮುಳುವಾಗುತ್ತಾ ಬಿಎಂಎಸ್ ಪರಭಾರೆ ಹಗರಣ : ತನಿಖೆ ಆದೇಶಿಸಲು ಸಿಎಂ ಸಿದ್ದರಾಮಯ್ಯ ಸಿದ್ಧತೆ

ಈಗಾಗಲೇ ರಾಜ್ಯದಲ್ಲಿ 12589 MSIL ಔಟ್ ಲೆಟ್ ಗಳಿದ್ದು ಇನ್ನೂ 389 ಹೊಸ ಸರ್ಕಾರಿ ಮದ್ಯ ಮಾರಾಟ ಕೇಂದ್ರ ತೆರೆಯಲು ಅನುಮತಿ ನೀಡಲು ಸರ್ಕಾರ ಸಜ್ಜಾಗಿದೆ. ಸಂಪನ್ಮೂಲ ಕ್ರೋಡಿಕರಣದ ಹೆಸರಿನಲ್ಲಿ ಸರ್ಕಾರ ಎಮ್ ಎಸ್ ಆಯ್ ಎಲ್ ಮಾತ್ರವಲ್ಲ ಗ್ರಾಮಕ್ಕೊಂದರಂತೆ ಮದ್ಯದಂಗಡಿ ತೆರೆಯಲು ಅನುಮತಿ ನೀಡಲು ಮುಂದಾಗಿದೆ.

ಇದರಿಂದ ಸರ್ಕಾರಕ್ಕೆ ಆದಾಯ ಹೆಚ್ಚಾಗಲಿದ್ದು, ಬೊಕ್ಕಸಕ್ಕೆ ಹಣ ಬಂದರೇ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸುಲಭವಾಗಲಿದೆ ಅನ್ನೋದು ಲೆಕ್ಕಾಚಾರ. ಆದರೆ ಸರ್ಕಾರದ ಮದ್ಯದಂಗಡಿಗಳ ಸಂಖ್ಯೆ ಹೆಚ್ಚಿಸುವ ನಿರ್ಧಾರಕ್ಕೆ ಸ್ವಪಕ್ಷಿಯರಿಂದಲೇ ವಿರೋಧ ವ್ಯಕ್ತವಾಗಿದೆ. ಆಳಂದ ಶಾಸಕ ಬಿ.ಆರ್‌‌.ಪಾಟೀಲ್ ಸರ್ಕಾರದ ಈ ತೀರ್ಮಾನವನ್ನು ಖಡಾಖಂಡಿತವಾಗಿ ವಿರೋಧಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರೋ ಬಿ.ಅರ್.ಪಾಟೀಲ್ ಸರ್ಕಾರ ಆಡಳಿತ ನಡೆಸುವುದಕ್ಕಾಗಿ ಈ ಪಾಪದ ಹಣವನ್ನು ಬಳಸಬೇಕಿಲ್ಲ. ಪಾಪದ ಹಣದಿಂದ ಸರ್ಕಾರ ನಡೆಸುವ ಅಗತ್ಯವಿಲ್ಲ. ಸರ್ಕಾರ ನಡೆಸಲು ಸಂಪನ್ಮೂಲ ಕೊರತೆಯಿದ್ದರೇ ಬೇರೆ ಯಾವುದಾದರೂ ಒಂದು ದಾರಿ ಹುಡುಕಬೇಕು.

ಇದನ್ನೂ ಓದಿ : ಅಕ್ಟೋಬರ್‌ನಲ್ಲಿ 18 ದಿನ ಬ್ಯಾಂಕ್ ರಜೆ : ಬ್ಯಾಂಕ್‌ ಕೆಲಸವನ್ನು ಶೀಘ್ರವಾಗಿ ಮುಗಿಸಿ

ಸಿಎಂ ಸಿದ್ಧರಾಮಯ್ಯನವರು ಸ್ವತಃ ಹಣಕಾಸು ಸಚಿವರಿದ್ದಾರೇ, ಮಾತ್ರವಲ್ಲ ಆರ್ಥಿಕ ತಜ್ಞರು ಆಗಿದ್ದಾರೆ. ಹೀಗಾಗಿ ಅವರು ಗ್ಯಾರಂಟಿ ಹಾಗೂ ಸರ್ಕಾರ ನಡೆಸಲು ಅಗತ್ಯ ಹಣ ಒದಗಿಸಲು ಬೇರೆ ಯೋಜನೆ ರೂಪಿಸಬೇಕು.

ಅದರ ಬದಲು ಜನರ ರಕ್ತ ಹೀರುವ ಮದ್ಯದಂಗಡಿ ಗೆ ಅನುಮತಿ ನೀಡುವ ಕೆಲಸ ಮಾತ್ರ ಮಾಡಬಾರದು ಎಂದಿದ್ದಾರೆ. ಒಂದೊಮ್ಮೆ ಸರ್ಕಾರ ಈ‌ ನಿರ್ಧಾರದಿಂದ ಹಿಂದೆಸರಿಯದಿದ್ದರೇ ತಾವೇ ಹೋರಾಟದ ನೇತೃತ್ವ ವಹಿಸುವುದಾಗಿಯೂ ಪಾಟೀಲ್ ಎಚ್ಚರಿಸಿದ್ದಾರೆ. ಈಗಾಗಲೇ ಸರ್ಕಾರದ ಈ ತೀರ್ಮಾನಕ್ಕೆ ವಿರೋಧ ವ್ಯಕ್ತ ವಾಗಿದೆ.

Karnataka Street-to-street liquor shop Congress government new guarantee
Image Credit to Original Source

ಬಾಗಲಕೋಟೆ ಸೇರಿದಂತೆ ಹಲವೆಡೆ ಹೆಣ್ಣುಮಕ್ಕಳು ಅಹೋರಾತ್ರಿ ಪ್ರತಿಭಟನೆ ಮೂಲಕ ಸರ್ಕಾರದ ನಿಲುವನ್ನು ಖಂಡಿಸಿದ್ದಾರೆ. ಒಟ್ಟು 600 ಗ್ರಾಮಗಳು ಸೇರಿದಂತೆ 1000 ಮದ್ಯದಂಗಡಿ ತೆರೆಯಲು ಸರ್ಕಾರ ಅನುಮತಿ ನೀಡಲು ಮುಂದಾಗಿದೆ. ಇನ್ನೂ ಈಗಾಗಲೇ ಸಂಪನ್ಮೂಲ ಕ್ರೋಡಿಕರಣದ ಕಾರಣ ಮುಂದಿಟ್ಟುಕೊಂಡು ಅಬಕಾರಿ ಇಲಾಖೆ ಹೊಸ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲು ಸಿದ್ಧತೆ ನಡೆಸಿದೆ.

ರಾಜ್ಯದ ವಿವಿಧೆಡೆ 247 ಮದ್ಯದಂಗಡಿ ತೆರೆಯಲು ಮೈಸೂರು ಸೇಲ್ಸ್ ಇಂಟರನ್ಯಾಶನಲ್ ಲಿಮಿಟೆಡ್ ಸಂಸ್ಥೆಗೆ ಮಂಜೂರಾತಿ ನೀಡಲಾಗಿತ್ತು. ಅವು ಇನ್ನೂ ಆರಂಭವಾಗಿಲ್ಲ.1987 ರಲ್ಲಿ ಸಿದ್ಧಪಡಿಸಲಾದ ಕೋಟಾದಲ್ಲಿ ಇನ್ನೂ137 ಪರವಾನಿಗೆಗೆ ಅವಕಾಶವಿದೆ.

ಇದನ್ನೂ ಓದಿ : ಮೀಸಲಾತಿ ಸಂಕಷ್ಟ: ಸದ್ಯಕ್ಕಿಲ್ಲ ಬಿಬಿಎಂಪಿ ಎಲೆಕ್ಷನ್

ಈಗ ಒಟ್ಟು 379 ಮದ್ಯದಂಗಡಿ ಪರವಾನಿಗೆಯನ್ನು ಎರಡು ವರ್ಷಗಳ ಖಾಸಗಿ ಹರಾಜಿನ ಮೂಲಕ ನೀಡುವ ಪ್ರಸ್ತಾವನೆಯನ್ನು ಅಬಕಾರಿ ಇಲಾಖೆ ಸರ್ಕಾರದ ಮುಂದಿಟ್ಟಿದೆ‌. ಅಲ್ಲದೇ ಧೀರ್ಘಕಾಲದಿಂದ‌ ನವೀಕರಣವಾಗದೇ ಉಳಿದ ಮದ್ಯದಂಗಡಿಗಳ ಪರವಾನಿಗೆ ನವೀಕರಣಕ್ಕೂ ಇಲಾಖೆ  ಚಿಂತನೆ ನಡೆಸಿದೆ.

Karnataka Street-to-street liquor shop Congress government new guarantee

Comments are closed.