ಭಾನುವಾರ, ಏಪ್ರಿಲ್ 27, 2025
Homebusinessಕಾರ್ಮಿಕರಿಗೆ ಸಿಹಿಸುದ್ದಿ: ಏಪ್ರಿಲ್ 1ರಿಂದ ನರೇಗಾ ಕೂಲಿ ದರ ಏರಿಕೆ

ಕಾರ್ಮಿಕರಿಗೆ ಸಿಹಿಸುದ್ದಿ: ಏಪ್ರಿಲ್ 1ರಿಂದ ನರೇಗಾ ಕೂಲಿ ದರ ಏರಿಕೆ

- Advertisement -

NREGA wage rate hike : ಗ್ರಾಮೀಣ ಭಾಗದಲ್ಲಿ ಬಡತನ, ಬರಗಾಲ ಹಾಗೂ ಹಸಿವೆಯಿಂದ ತಪ್ಪಿಸಿಕೊಳ್ಳಲು ಜನರು ಗುಳೆ ಹೋಗುವುದು ನಿಂತಿದೆ. ಇದಕ್ಕೆ ಕಾರಣ ಕೇಂದ್ರ ಸರಕಾರದ ನರೇಗಾ ಕೂಲಿ ಯೋಜನೆ. ಗ್ರಾಮೀಣ ಪ್ರದೇಶದಲ್ಲಿ ಜನರು ಇದ್ದಲ್ಲೇ ಕೆಲಸ ಹಾಗೂ ಸಂಬಳ ಕೊಡುವ ಈ ಯೋಜನೆ ಜನರಿಗೆ ವರವಾಗಿದ್ದು ಸುಳ್ಳಲ್ಲ. ಹೀಗೇ ಮನರೇಗಾ ಯೋಜನೆಯಲ್ಲಿ ದುಡಿಯುವ ಲಕ್ಷಾಂತರ ಕಾರ್ಮಿಕರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ.

ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ (ಮನರೇಗಾ) ಅಡಿಯಲ್ಲಿ ಕೌಶಲ್ಯರಹಿತ ಕಾರ್ಮಿಕರಿಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಕೂಲಿಯನ್ನು ಹೆಚ್ಚು ಮಾಡಿ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿದೆ. ಗ್ರಾಮೀಣಾಭಿವೃದ್ಧಿ ಸಚಿವಾಲಯವು ಸೂಚಿಸಿರುವ ಹೊಸ ಕೂಲಿ ದರವು ಏಪ್ರಿಲ್ 1ರಿಂದ ಜಾರಿಗೆ ಬರಲಿದೆ.

Good news for workers NREGA wage rate hike from April 1
Image Credit to Original Source

ಕರ್ನಾಟಕದಲ್ಲಿ ಕೂಲಿ ಶೇ. 10.44ರಷ್ಟು ಹೆಚ್ಚಳವಾಗಲಿದ್ದು, ಈಗಿರುವ ದೈನಂದಿನ 316 ರೂ. ಕೂಲಿಯು ಏಪ್ರಿಲ್ 1ರಿಂದ ಇದು 349ರೂ. ಗೆ ಏರಿಕೆ ಯಾಗಲಿದೆ. ಕೇಂದ್ರ ಸರ್ಕಾರದ ಅಧಿಸೂಚನೆಯ ಪ್ರಕಾರ, ಹರಿಯಾಣಕ್ಕೆ ಗರಿಷ್ಠ ಕೂಲಿ (ದಿನಕ್ಕೆ 374 ರೂ.) ನಿಗದಿಪಡಿಸಲಾಗಿದ್ದು, ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್‌ಗೆ ಕನಿಷ್ಠ ಕೂಲಿ (ದಿನಕ್ಕೆ 234 ರೂ.) ಗೊತ್ತುಪಡಿಸಲಾಗಿದೆ.

ಶೇ. 10. 56ರಷ್ಟು ಏರಿಕೆ ಮೂಲಕ ಶೇಕಡವಾರು ಕೂಲಿ ಹೆಚ್ಚಳದಲ್ಲಿ ಕವಾಗಿ ಗೋವಾ ನಂ.1 ಸ್ಥಾನದಲ್ಲಿದೆ. ಆದರೆ, ಉತ್ತರಪ್ರದೇಶ ಮತ್ತು ಗಳನ್ನು ಉತ್ತರಾಖಂಡದಲ್ಲಿ ಶೇ. 3.04ರಷ್ಟು ಮಾತ್ರ ಶೇಕಡವಾರು ಹೆಚ್ಚಳವಾಗಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ದಿನಕ್ಕೆ: 300 . ನಿಗದಿಪಡಿಸಲಾಗಿದೆ. ಇದು ಪ್ರಸಕ್ತ ಹಣಕಾಸು ವರ್ಷದಲ್ಲಿ ದಿನಕ್ಕೆ 272 ರೂ.ಗೆ ಹೋಲಿಸಿದರೆ ಶೇ.10.29 ಹೆಚ್ಚಾಗಿದೆ.

ಇದನ್ನೂ ಓದಿ : 10ನೇ ಉತ್ತೀರ್ಣರಾದವರಿಗೆ ಅಂಚೆ ಇಲಾಖೆಯಲ್ಲಿ ಉದ್ಯೋಗ, ರೂ 55000 ರೂ. ವೇತನ, 98,083 ಹುದ್ದೆ ಭರ್ತಿಗೆ ಅರ್ಜಿ

ಮಧ್ಯಪ್ರದೇಶ ಮತ್ತು ಛತ್ತೀಸಗಢದಲ್ಲಿ ಶೇ. 10ರಷ್ಟು ಏರಿಕೆಯಾಗಿದೆ. ಉತ್ತರಪ್ರದೇಶ ಮತ್ತು ಉತ್ತರಾಖಂಡಗಳಲ್ಲಿ 230 ರೂ. ಇದ್ದದ್ದು 237 ರೂ. ಆಗಲಿದೆ. ಹರಿಯಾಣ, ಅಸ್ಸಾಂ, ಮಣಿಪುರ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ರಾಜಸ್ಥಾನ, ಕೇರಳ ಮತ್ತು ಲಕ್ಷದ್ವೀಪಗಳಲ್ಲಿ ಶೇ.5ಕ್ಕಿಂತ ಕಡಿಮೆ ಹೆಚ್ಚಳ ಮಾಡಲಾಗಿದೆ. ಎಲ್ಲ ರಾಜ್ಯಗಳನ್ನು ಪರಿಗಣಿಸಿ ಲೆಕ್ಕ ಹಾಕಿದರೆ ಸರಾಸರಿ ಕೂಲಿ ಹೆಚ್ಚಳ ಶೇ. 7ರಷ್ಟಾಗಿದೆ.

ಇದರಿಂದ ಕರ್ನಾಟಕದಲ್ಲಿ ದಿನವೊಂದಕ್ಕೆ 33 ರೂಪಾಯಿ‌ಕೂಲಿ ದರ ಏರಿಸಿದಂತಾಗಿದೆ. ಗೋವಾದಲ್ಲಿ ಇದುವರೆಗಿನ ಅತ್ಯಂತ ಹೆಚ್ಚು ಏರಿಕೆಯೆಂದರೇ 10.56 ರಷ್ಟು ಏರಿಸಲಾಗಿದೆ. ಪ್ರಸ್ತುತ ಗೋವಾದಲ್ಲಿ ಕೂಲಿಯ ಸಂಬಳ 356 ರೂಪಾಯಿ ದಿನವೊಂದಕ್ಕೆ ನೀಡಲಾಗುತ್ತದೆ. ಕರ್ನಾಟಕದಲ್ಲಿ ಈ ಮೊತ್ತ 349 ರೂಪಾಯಿ ಇದೆ‌.

ಇದನ್ನೂ ಓದಿ : 10ನೇ ತರಗತಿ ಉತ್ತೀರ್ಣರಾದವರಿಗೆ ಅಂಚೆ ಇಲಾಖೆಯಲ್ಲಿ ಉದ್ಯೋಗವಕಾಶ : 98,083 ಹುದ್ದೆಗಳಿಗೆ ಅರ್ಜಿ ಆಹ್ವಾನ

ಆಂಧ್ರಪ್ರದೇಶದಲ್ಲಿ 300, ತೆಲಂಗಾಣದಲ್ಲಿ 300 ಹಾಗೂ ಛತ್ತಿಸಗಡದಲ್ಲಿ 243 ರೂಪಾಯಿ ಇದೆ. ಅತ್ಯಂತ ಕಡಿಮೆ ಎಂದರೇ 237 ಕೂಲಿ ಉತ್ತರಾಖಂಡದಲ್ಲಿ ಇದೆ. 2009 ರಲ್ಲಿ ಮನರೇಗಾ ಎಂದು ಮರುನಾಮಕರಣಗೊಂಡ ಈ ಯೋಜನೆಯ ಪ್ರಕಾರ ದುಡಿಯುವ ಸಾಮರ್ಥ್ಯ ಹೊಂದಿದ ಮನೆಯ ಪ್ರತಿ ಸದಸ್ಯನಿಗೆ ಕನಿಷ್ಠ ನೂರು ದಿನಗಳ ಕೆಲಸ ಒದಗಿಸುವುದು ಈ ಯೋಜನೆಯ ಧ್ಯೇಯ.Good news for workers NREGA wage rate hike from April 1

ಈ ಯೋಜನೆ ಮಹಿಳೆಯರು ಮತ್ತು ವಯಸ್ಸಾದವರಿಗೆ ಅವರ ಸಮೀಪದಲ್ಲಿ ಕೆಲಸ ಮಾಡಲು ವಿಶೇಷ ಭತ್ಯೆ ನೀಡಲಾಗುತ್ತದೆ.ಕಾರ್ಮಿಕರು ಕೆಲಸದ ಸ್ಥಳದಲ್ಲಿ ಸುರಕ್ಷಿತ ಕುಡಿಯುವ ನೀರು, ಮಕ್ಕಳಿಗೆ ಶಿಶುವಿಹಾರ, ಮತ್ತು ದೊಡ್ಡ ಮತ್ತು ಸಣ್ಣ ಗಾಯಗಳಿಗೆ ವೈದ್ಯಕೀಯ ಸೌಲಭ್ಯಗಳಂತಹ ಮೂಲಭೂತ ಸೌಲಭ್ಯಗಳಿಗೆ ಅರ್ಹರಾಗಿರುತ್ತಾರೆ.MNREGA ಸುರಕ್ಷಿತ, ಸುರಕ್ಷಿತ ಮತ್ತು ಯೋಗ್ಯ ಕೆಲಸದ ವಾತಾವರಣವನ್ನು ಒದಗಿಸುತ್ತದೆ.

ಇದನ್ನೂ ಓದಿ : ರಾಜ್ಯ ಪಠ್ಯಕ್ರಮಕ್ಕೆ ಅನುಮತಿ, ಕೇಂದ್ರ ಪಠ್ಯಕ್ರಮ ಬೋಧನೆ: ಪರೀಕ್ಷಾ ಎಡವಟ್ಟಿನಿಂದ ಬಯಲಾಯ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಅಕ್ರಮ

ಇದು ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ.ಈ ಯೋಜನೆಯು ಮಹಿಳೆಯರ ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಸಬಲೀಕರಣ ಮತ್ತು ಉನ್ನತಿಯ ಮೇಲೆ ಕೇಂದ್ರೀಕರಿಸುತ್ತದೆ.15 ದಿನಗಳೊಳಗೆ ವೇತನ ಪಾವತಿಸದಿದ್ದರೆ, ಕಾರ್ಮಿಕರು ಅದಕ್ಕೆ ಪರಿಹಾರವನ್ನು ಸಲ್ಲಿಸಬಹುದು.

ಸ್ಪಂದಿಸುವ ಅನುಷ್ಠಾನ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಕುಂದುಕೊರತೆಗಳ ಪರಿಹಾರ ಕಾರ್ಯವಿಧಾನವನ್ನು ಸಹ ಇರಿಸಲಾಗಿದೆ.MGNREGA ದೇಶದಿಂದ ಬಡತನವನ್ನು ತೊಡೆದುಹಾಕಲು ಮತ್ತು ಶ್ರೀಮಂತ ಮತ್ತು ಬಡವರ ನಡುವಿನ ಅನುಪಾತವನ್ನು ಕಡಿಮೆ ಮಾಡುವ ಏಕೈಕ ಉದ್ದೇಶದಿಂದ ಕಾರ್ಯನಿರ್ವಹಿಸುತ್ತದೆ.

Good news for workers: NREGA wage rate hike from April 1

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular