10ನೇ ತರಗತಿ ಉತ್ತೀರ್ಣರಾದವರಿಗೆ ಅಂಚೆ ಇಲಾಖೆಯಲ್ಲಿ ಉದ್ಯೋಗವಕಾಶ : 98,083 ಹುದ್ದೆಗಳಿಗೆ ಅರ್ಜಿ ಆಹ್ವಾನ

Post Office Recruitment 2024: ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಎಂಟಿಎಸ್‌, ಪೋಸ್ಟ್‌ಮ್ಯಾನ್‌ ಹಾಗೂ ಮೇಲ್‌ ಗಾರ್ಡ್‌ ಸೇರಿದಂತೆ ಒಟ್ಟು 98,083 ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

Post Office Recruitment 2024: ಅಂಚೆ ಇಲಾಖೆ ಎಸ್‌ಎಸ್‌ಎಲ್‌ಸಿ (ಹತ್ತನೇ ತರಗತಿ) ಉತ್ತೀರ್ಣರಾದವರಿಂದ ಉದ್ಯೋಗಾವಕಾಶಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ. ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಎಂಟಿಎಸ್‌, ಪೋಸ್ಟ್‌ಮ್ಯಾನ್‌ ಹಾಗೂ ಮೇಲ್‌ ಗಾರ್ಡ್‌ ಸೇರಿದಂತೆ ಒಟ್ಟು 98,083 ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಭಾರತೀಯ ಅಂಚೆ ಇಲಾಖೆಯು ದೇಶದಾದ್ಯಂತ ಹಲವು ರಾಜ್ಯಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸುತ್ತಿದೆ. 10 ನೇ ತರಗತಿ ಮತ್ತು 12 ನೇ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಭಾರತೀಯ ಅಂಚೆ ಇಲಾಖೆಯ ಎಂಟಿಎಸ್‌, ಪೋಸ್ಟ್‌ಮ್ಯಾನ್‌ ಹಾಗೂ ಮೇಲ್‌ ಗಾರ್ಡ್‌ಗಳಾಗಿ ಉದ್ಯೋಗ ಮಾಡಲು ಅವಕಾಶವಿದೆ.

Post Office Recruitment 2024 10th Pass Can Apply Online For 98083 Vacancies
Image Credit to Original Source

ಇಂಡಿಯನ್‌ ಪೋಸ್ಟ್‌ನ ಅಧಿಕೃತ ವೆಬ್‌ಸೈಟ್‌ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಫೆಬ್ರವರಿ ಅಂತ್ಯದ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆದರೆ ಅರ್ಜಿ ಸಲ್ಲಿಸಲು ನಿಖರವಾದ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಅದ್ರಲ್ಲೂ ಅಂಚೆ ಇಲಾಖೆಯ ಅಧಿಸೂಚನೆಯ ಪಿಡಿಎಫ್‌ ಇನ್ನಷ್ಟೇ ಪ್ರಕಟವಾಗಬೇಕಾಗಿದೆ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದ ಹೊಸ ರೂಲ್ಸ್‌ : ಅನರ್ಹರ ಲಿಸ್ಟ್‌ನಲ್ಲಿ ನಿಮ್ಮ ಹೆಸರಿದ್ಯಾ ? ಚೆಕ್‌ ಮಾಡಿ

ಅಂಚೆ ಕಚೇರಿ ಖಾಲಿ ಹುದ್ದೆಗಳ ಪೈಕಿ ಕರ್ನಾಟಕ ವೃತ್ತದಲ್ಲಿ ಒಟ್ಟು 5731 ಹುದ್ದೆಗಳಿವೆ. ಕರ್ನಾಟಕದಲ್ಲಿ ಎಂಟಿಎಸ್‌ 1754, ಪೋಸ್ಟ್‌ಮ್ಯಾನ್ -3887 ಹುದ್ದೆ, ಮೇಲ್ ಗಾರ್ಡ್ -90 ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ. ಭಾರತ ಅಂಚೆ ಇಲಾಖೆಯ ನೇಮಕಾತಿಯ ಕುರಿತ ಸಂಪೂರ್ಣ ಮಾಹಿತಿಗಾಗಿ https://www.Indiapost.Gov.In/ ಅನ್ನು ಸಂಪರ್ಕಿಸಬಹುದಾಗುದೆ.

ಪೋಸ್ಟ್‌ ಆಫೀಸ್‌ ಹುದ್ದೆಗೆ ಅರ್ಹತೆ

ಎಂಟಿಎಸ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 10ನೇ ತರಗತಿ ಉತ್ತೀರ್ಣರಾಗಿರಬೇಕು. ಅಲ್ಲದೇ ವಯೋಮಿತಿ 18-32 ವರ್ಷಗಳ ಒಳಗೆ ಇರಬೇಕು. ಮೇಲ್ ಗಾರ್ಡ್ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕಡ್ಡಾಯವಾಗಿ 12 ನೇ ಉತ್ತೀರ್ಣರಾಗಿರಬೇಕು. ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರುವುದು ಕಡ್ಡಾಯ ವಾಗಿದ್ದು, ವಯೋಮಿತಿಯನ್ನು 18-32 ವರ್ಷ ನಿಗದಿ ಪಡಿಸಲಾಗಿದೆ. ಇನ್ನು ಪೋಸ್ಟ್‌ ಮ್ಯಾನ್‌ ಹುದ್ದೆಗೆ ಅರ್ಜಿ ಸಲ್ಲಿಸಲು 10ನೇ ತರಗತಿ ಅಥವಾ 12ನೇ ತರಗತಿ ತೇರ್ಗಡೆ ಹೊಂದಿರಬೇಕು. ವಯಸ್ಸು 18-32 ವರ್ಷಗಳ ಒಳಗಿರಬೇಕು.

ಅರ್ಜಿದಾರರು ಅಂಚೆ ಇಲಾಖೆಯ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ನಂತರದಲ್ಲಿ ಅರ್ಜಿ ಪ್ರತಿಯನ್ನು ಪ್ರಿಂಟ್‌ ತೆಗೆದು ಇಟ್ಟುಕೊಂಡಿರಬೇಕು. ಅಲ್ಲದೇ ಸಾಫ್ಟ್‌ ಕಾಫಿಯನ್ನು ಕೂಡ ಸಂಗ್ರಹಿಸಿ ಇಟ್ಟುಕೊಳ್ಳಬೇಕು. ದಾಖಲೆಗಳ ಪರಿಶೀಲನೆಯ ವೇಳೆಯ ವರೆಗೆ ಇದು ಕಡ್ಡಾಯವಾಗಿದೆ. ಅಲ್ಲದೇ ಮೂರು ಹುದ್ದೆಗಳಿಗೂ ಆನ್‌ಲೈನ್‌ ಮೂಲಕವೇ ಅರ್ಜಿಗಳನ್ನು ಸಲ್ಲಿಸಬೇಕಾಗಿದೆ.

Post Office Recruitment 2024 10th Pass Can Apply Online For 98083 Vacancies
Image Credit to Original Source

ಅಧಿಕೃತ ಅಧಿಸೂಚನೆ ಹೊರ ಬಿದ್ದ ನಂತರದಲ್ಲಿ ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ ಮೂಲಕವಾಗಿ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿದೆ. ಅರ್ಜಿಯನ್ನು ಸಲ್ಲಿಸುವ ವೇಳೆಯಲ್ಲಿ ವಿದ್ಯಾರ್ಹತೆಯ ಅಂಕಪಟ್ಟಿ, 10 ನೇ ತರಗತಿ ವಿದ್ಯಾಭ್ಯಾಸದ ಪ್ರಮಾಣಪತ್ರ, ಆಧಾರ್ ಕಾರ್ಡ್‌ ಪ್ರತಿ, ಮನೆಯ ವಿಳಾಸ, ಸಹಿ, ಪೋಟೋ ಸೇರಿದಂತೆ ಅಗತ್ಯ ಮೂಲ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು.

ಇದನ್ನೂ ಓದಿ : ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಅವಕಾಶ : 3000 ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಕೆಯಾದ ನಂತರ ಅಭ್ಯರ್ಥಿಗಳು ಲಿಖಿತ ಪರೀಕ್ಷೆಯನ್ನು ಎದುರಿಸಬೇಕು. ಅಂಚೆ ಇಲಾಖೆ ನೇಮಕಾತಿ ಅರ್ಜಿ ಶುಲ್ಕ: ಸಾಮಾನ್ಯ ವರ್ಗ ಮತ್ತು OBC ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.100. SC/ST ವರ್ಗಕ್ಕೆ ಶುಲ್ಕ ಶೂನ್ಯ
Post Office Recruitment 2024: 10th Pass Can Apply Online For 98,083 Vacancies

Comments are closed.