export tax on petrol : ದೇಶಿಯ ಮಾರುಕಟ್ಟೆಯಲ್ಲಿ ಉಂಟಾಗಿರುವ ಇಂಧನ ಕೊರತೆಯನ್ನು ತಗ್ಗಿಸುವ ಸಲುವಾಗಿ ಕೇಂದ್ರ ಸರ್ಕಾರ ಹೊಸ ಪ್ಲಾನ್ವೊಂದನ್ನು ರೂಪಿಸಿದೆ. ವಿದೇಶಗಳಿಗೆ ತೈಲ ರಫ್ತಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ವಿಮಾನ ಇಂಧನ ರಫ್ತಿನ ಮೇಲೆ ಭಾರೀ ಪ್ರಮಾಣದಲ್ಲಿ ತೆರಿಗೆ ವಿಧಿಸಲಾಗಿದೆ. ಈ ಮೂಲಕ ಇಂಧನ ಅಭಾವವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಕೇಂದ್ರ ಸರ್ಕಾರದ ಹೊಸ ಆದೇಶದ ಪ್ರಕಾರ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ವಿಮಾನ ಇಂಧನಗಳ ರಫ್ತಿನ ಮೇಲೆ ಆರು ರೂಪಾಯಿ ಹಾಗೂ ಡೀಸೆಲ್ ರಫ್ತಿನ ಮೇಲೆ 13 ರೂಪಾಯಿ ತೆರಿಗೆ ನಿಗದಿಪಡಿಸಲಾಗಿದೆ. ಪ್ರತಿ ಟನ್ ಇಂಧನ ರಫ್ತಿಗೆ 23,230 ರೂಪಾಯಿ ಹೆಚ್ಚುವರಿ ತೆರಿಗೆಯನ್ನು ವಿಧಿಸುವ ಮೂಲಕ ಕೇಂದ್ರ ಸರ್ಕಾರವು ದೇಶಿ ತೈಲೋತ್ಪನ್ನಗಳನ್ನು ವಿದೇಶಿಗಳಿಗೆ ಕಳುಹಿಸಿ ಭಾರೀ ಮೊತ್ತದ ಲಾಭವನ್ನು ಪಡೆಯುತ್ತಿದ್ದ ಖಾಸಗಿ ಕಂಪನಿಗಳಿಗೆ ಮೂಗು ದಾರವನ್ನು ಹಾಕಿದೆ.
ಕೇಂದ್ರ ಸರ್ಕಾರದ ಈ ನಿರ್ಧಾರ ಹೊರ ಬೀಳುತ್ತಿದ್ದಂತೆಯೇ ರಿಲಯನ್ಸ್ ಇಂಡಸ್ಟ್ರೀಸ್, ಎನ್ಜಿಸಿ ಷೇರುಗಳಿಗೆ ಭಾರೀ ದೊಡ್ಡ ಮಟ್ಟದ ಹೊಡೆತ ಬಿದ್ದಿದೆ. ಸರ್ಕಾರಿ ಸ್ವಾಮ್ಯದ ಎನ್ಸಿಜಿ ಷೇರು ಶೇಕಡಾ 10ರಷ್ಟು ಕುಸಿತ ಕಂಡಿದ್ದರೆ ಒತ್ತೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಳೆದ 18 ತಿಂಗಳುಗಳಲ್ಲಿ ಇದೇ ಮೊದಲ ಬಾರಿಗೆ ಐದು ಪ್ರತಿಶತ ಷೇರು ಕುಸಿತ ದಾಖಲಿಸಿದೆ.
ಕನ್ಹಯ್ಯಲಾಲ್ ಶಿರಚ್ಛೇದ ಪ್ರಕರಣ : ಮತ್ತಿಬ್ಬರು ಆರೋಪಿಗಳ ಬಂಧನ
ರಾಜಸ್ಥಾನದ ಉದಯಪುರದಲ್ಲಿ ನಡೆದ ಟೈಲರ್ ಕನ್ಹಯ್ಯಲಾಲ್ ಶಿರಚ್ಛೇಧ ಪ್ರಕರಣವು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಪ್ರವಾದಿ ಮುಹಮ್ಮದ್ ವಿರುದ್ಧ ಮಾತನಾಡಿ ಭಾರೀ ವಿವಾದದ ಸುಳಿಯಲ್ಲಿ ಸಿಲುಕಿರುವ ನೂಪುರ್ ಶರ್ಮಾ ಪರವಾಗಿ ಸೋಶಿಯಲ್ ಮೀಡಿಯಾದಲ್ಲಿ ಕನ್ಹಯ್ಯಲಾಲ್ ಪೋಸ್ಟ್ ಹಾಕಿದ್ದಾರೆ ಎಂಬ ಕಾರಣಕ್ಕೆ ಈ ಕೊಲೆ ನಡೆದಿತ್ತು . ಈ ಪ್ರಕರಣದಲ್ಲಿ ಇದೀಗ ಪೊಲೀಸರು ಇನ್ನೂ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ಇವರು ಇಡೀ ಪ್ರಕರಣದ ಸಂಚು ಹಾಗೂ ಸಿದ್ಧತೆಯ ಮಾಸ್ಟರ್ ಮೈಂಡ್ ಆಗಿದ್ದರು ಎಂದು ಉದಯಪುರ ಐಜಿ ಪ್ರಫುಲ್ಲ ಕುಮಾರ್ ಮಾಹಿತಿ ನೀಡಿದ್ದಾರೆ.
ಮಂಗಳವಾರ ಮಧ್ಯಾಹ್ನದ ವೇಳೆಯಲ್ಲಿ ಅಂಗಡಿಯಲ್ಲಿ ಬಟ್ಟೆ ಹೊಲಿಯುತ್ತಿದ್ದ ಕನ್ಹಯ್ಯಲಾಲ್ ಬಳಿಗೆ ಬಂದ ಇಬ್ಬರು ದುಷ್ಕರ್ಮಿಗಳು ಬಟ್ಟೆ ಹೊಲಿದುಕೊಡುವಂತೆ ಹೇಳಿದ್ದರು, ಕನ್ಹಯ್ಯಲಾಲ್ ಇವರು ಗ್ರಾಹಕರು ಎಂದುಕೊಂಡು ಮಾತನಾಡಲು ಮುಂದಾಗುತ್ತಿದ್ದಂತೆಯೇ ಇಬ್ಬರು ದುಷ್ಕರ್ಮಿಗಳು ಕನ್ಹಯ್ಯಲಾಲ್ ಕತ್ತನ್ನು ಸೀಳಿದ್ದರು. ಬರೋಬ್ಬರಿ 27 ಬಾರಿ ಕನ್ಹಯ್ಯಲಾಲ್ ಭುಜದಿಂದ ಕುತ್ತಿಗೆಯವರೆಗೆ ಇರಿದು ಆತನ ಶಿರಚ್ಛೇಧ ಮಾಡಿದ್ದರು. ಮಾತ್ರವಲ್ಲದೇ ಈ ಸಂಪೂರ್ಣ ದೃಶ್ಯವನ್ನು ಚಿತ್ರೀಕರಿಸಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುವ ಮೂಲಕ ಪ್ರಧಾನಿ ಮೋದಿ ಹಾಗೂ ನೂಪುರ್ ಶರ್ಮಾರಿಗೂ ಜೀವ ಬೆದರಿಕೆಯೊಡ್ಡಿದ್ದರು. ಈ ಘಟನೆ ಬಳಿಕ ಅಲರ್ಟ್ ಆದ ಪೊಲೀಸರು ಮಾರನೇ ದಿನವೇ ಕೊಲೆ ಎಸಗಿದ ರಿಯಾಜ್ ಅಖ್ತರಿ ಹಾಗೂ ಘೌಸ್ ಮೊಹಮ್ಮದ್ರನ್ನು ಬಂಧಿಸಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ನೂಪುರ್ ಶರ್ಮಾ ಪರವಾಗಿ ಪೋಸ್ಟ್ ಹಾಕುತ್ತಿದ್ದಂತೆಯೇ ಜೂನ್ 17ರಂದು ಮೃತ ಕನ್ಹಯ್ಯಲಾಲ್ಗೆ ಜೀವ ಬೆದರಿಕೆಯೊಡ್ಡಲಾಗಿತ್ತು. ಇದರಿಂದ ಭಯಗೊಂಡಿದ್ದ ಕನ್ಹಯ್ಯ ಲಾಲ್ ಪೊಲೀಸ್ ಠಾಣೆಗೂ ತೆರಳಿ ತಮಗೆ ಜೀವ ಭಯ ಇದೆ ಎಂದು ಹೇಳಿದ್ದರು. ಆದರೆ ಅಂದು ಪೊಲೀಸರು ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳದೇ ನಿರ್ಲಕ್ಷ್ಯ ತೋರಿದ್ದರು ಎನ್ನಲಾಗಿದೆ.
ಇದನ್ನು ಓದಿ : ಬೆನ್ನು ಬಿಡದೆ ಫಾಲೋ ಮಾಡಿದ ಕ್ಯಾಮರಾಮೆನ್‌ಗೆ ಸೀರಿಯಸ್ ಲುಕ್ ಕೊಟ್ಟ ಕಿಂಗ್ ಕೊಹ್ಲಿ
ಇದನ್ನೂ ಓದಿ : KL Rahul Health Report : ರಾಹುಲ್‌ಗೆ ಜರ್ಮನಿಯಲ್ಲಿ ಆಪರೇಷನ್ ಸಕ್ಸಸ್.. ಪ್ರಿಯತಮನ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ ಪ್ರೇಯಸಿ
government hikes export tax on petrol by 6 rupees and diesel by 13 rupees