Electricity Bill Scam : ಎಚ್ಚರ ! ವಿದ್ಯುತ್ತ ಬಿಲ್‌ ಕಟ್ಟಿ ಎಂದೂ ನಿಮ್ಮ ಹಣ ದೋಚಬಹುದು!!

ಇಂದು ಜಗತ್ತಿನಲ್ಲಿ ಹಲವಾರು ರೀತಿಯ ವಂಚನೆಗಳು ನಡೆಯುತ್ತಿವೆ. ಮುಗ್ಧ ಜನರು ವಂಚನೆಗಳು ಸುಲಭವಾಗಿ ಬಲಿಯಾಗುತ್ತಿದ್ದಾರೆ ಕೂಡಾ. ಇಂತಹ ವಂಚನೆಗಳಲ್ಲಿ ವಿದ್ಯುತ್‌ ಬಿಲ್‌ ಹಗರಣವೂ ಒಂದು(Electricity Bill Scam). ವಂಚಕರು ವಿದ್ಯುತ್‌(Electricity) ಸಂಪರ್ಕ ಕಡಿತಗೊಳಿಸುವ ಭಯ ಹುಟ್ಟಿಸಿ ಅದರ ಲಾಭ ಪಡೆಯಲು ಮುಂದಾಗುತ್ತಿದ್ದಾರೆ. ಅಷ್ಟೇ ಅಲ್ಲದೇ ರಿಯಾಯಿತಿಗಳನ್ನು ನೀಡುವುದಾಗಿ ಹೇಳಿಯೂ ಜನರನ್ನು ಆಕರ್ಷಿಸುತ್ತಿದ್ದಾರೆ. ವಂಚಕರು ಮೆಸ್ಸೇಜ್‌ ಗಳನ್ನು ಕಳುಹಿಸುವುದರ ಮೂಲಕ ಜನರನ್ನು ಸುಲಭವಾಗಿ ಗುರಿಯಾಗಿಸುತ್ತಾರೆ.

ಏನಿದು ವಿದ್ಯುತ್‌ ಬಿಲ್‌ ಹಗರಣ?

ಬೇಸಿಗೆಯಲ್ಲಿ ಏರ್‌ ಕಂಡಿಷನರ್ಸ್‌, ಏರ್‌ ಕೂಲರ್‌, ಫ್ಯಾನ್‌ಗಳ ಬಳಕೆಯಿಂದ ವಿದ್ಯುತ್‌ ಬಳಕೆ ಹೆಚ್ಚಿ ವಿದ್ಯುತ್‌ ಬಿಲ್‌ ಗಗನಕ್ಕೇರುತ್ತದೆ. ವಂಚಕರು ಇದನ್ನು ಚೆನ್ನಾಗಿ ತಿಳಿದುಕೊಂಡು, ಭಾರಿ ಮೊತ್ತದ ಹಣವನ್ನು ಬೇಡಿಕೆಯಿಡುವ ಮೂಲಕ ಮುಗ್ಧ ಜನರನ್ನು ವಂಚಿಸುತ್ತಾರೆ. ಆನ್‌ಲೈನ್‌ನಲ್ಲಿ ನಕಲಿ ಬಿಲ್‌ಗಳನ್ನು ಪಾವತಿಸುವಂತೆ ಗೊಂದಲ ಸೃಷ್ಟಿಸುತ್ತಾರೆ.

ವಂಚಕರು ವಿದ್ಯುತ್‌ ಬಿಲ್‌ ಪಾವತಿಸುವಂತೆ ಮತ್ತು ತಪ್ಪಿದರೆ ಕನೆಕ್ಷನ್‌ ಕಟ್‌ ಮಾಡುವಂತೆ ಮೆಸ್ಸೇಜ್‌ಗಳನ್ನು ಕಳುಹಿಸುತ್ತಾರೆ. ಮತ್ತು ಅದಕ್ಕಾಗಿ ಕೊನೆಯ ದಿನಾಂಕ ನೀಡಿ, ತಕ್ಷಣ ಪಾವತಿಸುವಂತೆ ಬೆದರಿಕೆ ಒಡ್ಡುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಹುಡುಕಿದರೆ ಇದಕ್ಕೇ ಬೇಕಾದಷ್ಟು ಉದಾಹರಣೆಗಳು ಸಿಗುತ್ತವೆ.

ವಿದ್ಯುತ್‌ ಬಿಲ್‌ ಪಾವತಿಸುವ ಸಲುವಾಗಿ ವಂಚಕರು ನಕಲಿ ಸಂಖ್ಯೆಯನ್ನು ಸಹ ಒದಗಿಸುತ್ತಾರೆ ಮತ್ತು ಪರಿಶೀಲಿಸಲು ಕರೆ ಮಾಡಲು ಸಹ ಹೇಳುತ್ತಾರೆ. ಇವೆಲ್ಲಾ ಅವರ ವಂಚನೆಯ ಭಾಗವಾಗಿದೆ.

ವಿದ್ಯುತ್‌ ಬಿಲ್‌ ಹಗರಣದ ವಂಚಕರನ್ನು ಗುರುತಿಸುವುದು ಹೇಗೆ ?

  • ವಂಚಕರು ಕರೆ ಮಾಡುದಾಗ ಅಥವಾ ಸಂದೇಶದಲ್ಲಿ ತುರ್ತಾಗಿ ಬಿಲ್‌ ಪಾವತಿಸುವಂತೆ ಗಡಿಬಿಡಿ ಸೃಷ್ಟಿಸುತ್ತಾರೆ. ಅವರು ಕರೆ ಮಾಡುವಾಗ ತಾವು ವಿದ್ಯುತ್‌ ಕಂಪನಿಯ ಅಥವಾ ಪೂರೈಕೆದಾರರ ಪ್ರತಿನಿಧಿ ಎಂದು ಹೇಳಿಕೊಂಡು ಬಿಲ್‌ ಪಾವತಿಸುವಂತೆ ಬೆದರಿಸುತ್ತಾರೆ.
  • ಅವರು ನೀಡಿದ ನಕಲಿ ಬಿಲ್‌ ಸಂಪೂರ್ಣ ವಿವರಗಳನ್ನು ಹೊಂದಿರುವುದಿಲ್ಲ. ಆದರೆ ಅದರಲ್ಲಿ ನಿರ್ದಿಷ್ಟ ಮೊತ್ತವನ್ನು ನೀಡಿರುತ್ತಾರೆ.
  • ವಂಚಕರು ಹೆಚ್ಚಾಗಿ ಆನ್‌ಲೈನ್‌ನಲ್ಲಿಯೇ ಹಣ ಪಾವತಿಸುವಂತೆ ಒತ್ತಾಯಿಸುತ್ತಾರೆ. ನಿಮ್ಮ UPI ಮೂಲಕ ಆಗಿರಬಹುದು ಅಥವಾ ನಿಮ್ಮ ಕ್ರೆಡಿಟ್‌/ಡೆಬಿಟ್‌ ಕಾರ್ಡ್‌ ವಿವರಗಳನ್ನು ಕೇಳಬಹುದು.
  • ಬಹುತೇಕ ವಯಸ್ಸಾದವರನ್ನೇ ಬಲಿಪಶುಗಳನ್ನಾಗಿ ಮಾಡುತ್ತಾರೆ. ಬಹಳ ಚಾಣಾಕ್ಷತನದಿಂದ ವಿವರಗಳನ್ನು ಪಡೆಯುತ್ತಾರೆ.

ನೀವು ಮಾಡಬೇಕಾದದ್ದು ಏನು ?

  • ಮೊದಲನೆಯದಾಗಿ ಈ ರೀತಿಯ ಸಂದೇಶ ಅಥವಾ ಕರೆಗಳನ್ನು ಸ್ವೀಕರಿಸಿದಾಗ ಚಿಂತೆಗೆ ಒಳಗಾಗಬೇಡಿ.
  • ಬಿಲ್‌ನಲ್ಲಿರುವ ವಿವರಗಳನ್ನು ಸರಿಯಾಗಿ ಪರಿಶೀಲಿಸಿ.
  • ತಕ್ಷಣಕ್ಕೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ ಮತ್ತು ಅವರು ಹೇಳಿದ ಸಂಖ್ಯೆಗೆ ಹಣ ಪಾವತಿಸಬೇಡಿ.
  • ನಿಮ್ಮ ವಿದ್ಯುತ್‌ ಪೂರೈಕೆ ಮಾಡುವ ಕಛೇರಿ ಸಂಪರ್ಕಿಸಿ.

ಇದನ್ನೂ ಓದಿ : CA Day 2022 : ಇಂದು ಲೆಕ್ಕ ಪರಿಶೋಧಕರನ್ನು ಸ್ಮರಿಸುವ ದಿನ ! ಈ ಪರಿಕಲ್ಪನೆ ಪ್ರಾರಂಭವಾದದ್ದು ಯಾವಾಗ ಗೊತ್ತಾ?

ಇದನ್ನೂ ಓದಿ : Top 5 Automatic Cars: 8 ಲಕ್ಷಕ್ಕಿಂತ ಕಡಿಮೆ ಬೆಲೆಯ ಭಾರತದ ಟಾಪ್‌ 5 ಆಟೊಮೆಟಿಕ್‌ ಕಾರುಗಳು!

(Electricity Bill Scam how fraudsters target innocent people)

Comments are closed.