World Press Day 2022:ವಿಶ್ವ ಪತ್ರಿಕಾ ದಿನಾಚರಣೆ ಯಾಕೆ ಆಚರಿಸಲಾಗುತ್ತದೆ ?

ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ (fourth pillar of democracy)ಪತ್ರಕರ್ತರು, ಯಾವುದೇ ಹಗರಣದ ಹಿಂದಿನ ಸತ್ಯ ಬಹಿರಂಗ ಪಡಿಸಲು ತಮ್ಮ ಜೀವನವನ್ನೇ ಪಣಕ್ಕಿಟ್ಟ ಎಲ್ಲಾ ಪತ್ರಕರ್ತರಿಗೆ ( journalists)ಅರ್ಪಿಸಲಾಗಿದೆ . ದೇಶ ಕಾಯುವ ಯೋಧ, ವೈದ್ಯ ಹಾಗೂ ಪತ್ರಕರ್ತರು ಕುಂಟ ಕೂಡ ಅತಿಮುಖ್ಯ ಏಕೆಂದರೆ ಅವರ ಸೇವೆ ಅಪಾರ. ಪತ್ರಿಕಾ ಸ್ವಾತಂತ್ರ್ಯ ದಿನವಾಗಿ (World Press Freedom Day ) ಆಚರಿಸಲಾಗುತ್ತದೆ. ಈ ದಿನದಂದು ಪತ್ರಿಕೋದ್ಯಮದ ಕಾರ್ಯ ಹಾಗೂ ಕರ್ತ ಪತ್ರಕರ್ತರ ನಿಷ್ಪಕ್ಷ ಸೇವೆಯನ್ನು ಪರಿಗಣಿಸಿ ವಿಶ್ವಸಂಸ್ಥೆಯು ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ ಎಂದು  ಪರಿಗಣಿಸಿದೆ.

ಬಹುಶಹ ಭಾರತದ ಮಾಧ್ಯಮಗಳಿಗೆ ಇರುವಂತ ಸ್ವಾತಂತ್ರ ಉಳಿದ ದೇಶಗಳಲ್ಲಿ ಅಷ್ಟರಮಟ್ಟಿಗೆ ಇಲ್ಲ. ಪತ್ರಿಕಾ ಸ್ವಾತಂತ್ರ್ಯ ದಿನವು ಜಾಗೃತಿ ಮೂಡಿಸುವುದು ಮಾತ್ರವಲ್ಲದೆ, ನಿಷ್ಪಕ್ಷಪಾತ ವರದಿಗಾಗಿ ಜಗತ್ತಿನಾದ್ಯಂತ ತಮ್ಮ ಜೀವಕ್ಕೆ ಅಪಾಯವನ್ನು ಎದುರಿಸುತ್ತಿರುವ ಪತ್ರಕರ್ತರನ್ನು ರಕ್ಷಿಸಲು ಸರ್ಕಾರಗಳು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ನೆನಪಿಸುತ್ತದೆ. ಪ್ರಪಂಚದಾದ್ಯಂತದ ಸರ್ಕಾರಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಗೌರವಿಸಬೇಕು ಮತ್ತು ಎತ್ತಿಹಿಡಿಯಬೇಕು, ಇದು ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ, 1948 ರ ಆರ್ಟಿಕಲ್ 19 ರಲ್ಲಿ ಪ್ರತಿಪಾದಿಸಲ್ಪಟ್ಟಿದೆ. ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವನ್ನು ಈ ಸಾಲಿನಲ್ಲಿ ನಿಧನರಾದ ಎಲ್ಲ ಪತ್ರಕರ್ತರಿಗೆ ಶ್ರದ್ಧಾಂಜಲಿ ಸಲ್ಲಿಸಲು ಆಚರಿಸಲಾಗುತ್ತದೆ. ಕರ್ತವ್ಯದ ಮತ್ತು ಕಠಿಣ ಮತ್ತು ಅಸಾಮಾನ್ಯ ಸಂದರ್ಭಗಳಲ್ಲಿಯೂ ಸಹ ಸತ್ಯವನ್ನು ವರದಿ ಮಾಡಲು ಪಟ್ಟುಬಿಡದೆ ಕೆಲಸ ಮಾಡಿದವರು.ನೆನಪಿಸಲಾಗುತ್ತದೆ

ಯಾಕೆ ಆಚರಿಸಲಾಗುತ್ತಿದೆ ?

ಪ್ರತಿಯೊಂದು ದಿನಾಚರಣೆಗೂ ಅದರದೇ ಆದ ವಿಶಿಷ್ಟತೆ ಇದೆ,ಅಂತೆ ಪತ್ರಿಕಾ ದಿನಾಚರಣೆಗೆ ಒಂದು ವಿಶಿಷ್ಟವಾದ ಕಾರಣವಿದೆ.ಪ್ರತಿವರ್ಷ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನಾಚರಣೆಯಂದು ಒಂದು ನಿರ್ದಿಷ್ಟ ಥೀಮ್ ಅನ್ನು ಆಯ್ಕೆ ಮಾಡಲಾಗುತ್ತದೆ. ಆದರೆ ಈ ವರ್ಷದ ಥೀಮ್ “ಡಿಜಿಟಲ್ ಮುತ್ತಿಗೆಯಲ್ಲಿ ಪತ್ರಿಕೋದ್ಯಮ” ಆಗಿದೆ. ಈ ವರ್ಷದ ಥೀಮ್ ಕೇವಲ ಪತ್ರಿಕೋದ್ಯಮದಲ್ಲಿ ಆಗುವಂತಹ ಸವಾಲುಗಳ ಬಗ್ಗೆ ಮಾತ್ರವಲ್ಲ, ಡಿಜಿಟಲ್ ಸಂವಾದ ಮೇಲೆ ಜನರ ನಂಬಿಕೆ ಎಷ್ಟು ಮಟ್ಟಿಗೆ ಪರಿಣಾಮವಾಗಿ ಇದೆ ಎಂದು ತೋರಿಸಲಾಗುತ್ತಿದೆ.ಹೆಚ್ಚಾಗಿ, ಡಿಜಿಟಲ್ ಮಧ್ಯಸ್ಥಿಕೆಯ ದಾಳಿಯಿಂದ ಪತ್ರಕರ್ತರು ಎದುರಿಸುವ ಅಪಾಯಗಳ ಮೇಲೆ ಕೇಂದ್ರೀಕರಿಸುತ್ತದೆ. ವರ್ಲ್ಡ್ ಪ್ರೆಸ್ ಡೇಟ್ಸ್‌ನ ಮೂಲವು 1991 ರ ಹಿಂದಿನದು, ವಿಂಡ್‌ಹೋಕ್‌ನಲ್ಲಿ ನಡೆದ ಯುನೆಸ್ಕೋ ಸಮ್ಮೇಳನದಲ್ಲಿ ಆಫ್ರಿಕನ್ ಪತ್ರಕರ್ತರೊಬ್ಬರು ಹಾಜರಿದ್ದಾಗ,  ‘ಸ್ವತಂತ್ರ ಮತ್ತು ಬಹುತ್ವದ ಆಫ್ರಿಕನ್ ಮಾಧ್ಯಮವನ್ನು ಉತ್ತೇಜಿಸುವುದು’ ಅನ್ನು ಆಧರಿಸಿದೆ, ವಿಶ್ವದ ವಿವಿಧ ಭಾಗಗಳಲ್ಲಿ ಪತ್ರಿಕಾ ಮುಕ್ತ ಡೊಮಿನ್ ಅನ್ನು ಉತ್ತೇಜಿಸುವ ಕಲ್ಪನೆಯನ್ನು ತೆರೆಯಿತು.

ಮಹತ್ವದ ಇತಿಹಾಸ

UNESCO 1993 ರ ಮೇ 3 ರಂದು ವಿಂಡ್‌ಹೋಕ್ ಘೋಷಣೆಯನ್ನು ಅಂಗೀಕರಿಸಿತು, ಇದು ‘ಮುಕ್ತ, ಸ್ವತಂತ್ರ ಮತ್ತು ಬಹುತ್ವದ ಪತ್ರಿಕಾ ಅಭಿವೃದ್ಧಿಯ ಗುರಿಯನ್ನು ಹೊಂದಿದೆ. ಪತ್ರಿಕಾ ಸ್ವಾತಂತ್ರ್ಯವನ್ನು ತೀವ್ರವಾಗಿ ಸೀಮಿತಗೊಳಿಸಿರುವ ಚೀನಾ, ಉತ್ತರ ಕೊರಿಯಾ, ವಿಯೆಟ್ನಾಂ, ಲಾವೋಸ್, ಎರಿಟ್ರಿಯಾ, ಜಿಬೌಟಿ, ತುರ್ಕಮೆನಿಸ್ತಾನ್, ಸೌದಿ ಅರೇಬಿಯಾ, ಸಿರಿಯಾ, ಇರಾನ್ ಮತ್ತು ಕ್ಯೂಬಾದಂತಹ ಕೆಲವು ದೇಶಗಳಲ್ಲಿ ಪತ್ರಕರ್ತರ ಸ್ವಾತಂತ್ರ್ಯದ ಮಹತ್ವವನ್ನು ಈ ದಿನವು ಎತ್ತಿ ತೋರಿಸುತ್ತದೆ. ಕಳೆದ ವರ್ಷದ ಧ್ಯೇಯವಾಕ್ಯವೆಂದರೆ, “ಮಾಹಿತಿ ಸಾರ್ವಜನಿಕ ಒಳಿತಿಗಾಗಿ” ಪ್ರಾಮುಖ್ಯತೆಯ ಮೇಲೆ ಕೇಂದ್ರೀಕರಿಸಿತು ಮತ್ತು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವನ್ನು ಬಲಪಡಿಸುವ ಮಾರ್ಗಗಳನ್ನು ಅನ್ವೇಷಿಸಿತು.

ಈ ದಿನ ಮಾಧ್ಯಮದಲ್ಲಿ ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸಿರುವ ಪತ್ರಕರ್ತರಿಗೆ ಗೌರವಸೂಚಕವಾಗಿ ಸನ್ಮಾನ ಇನ್ನಿತರ ಮುಖಾಂತರ ಅಭಿನಂದಿಸಿ ಗೌರವಿಸಲಾಗುತ್ತದೆ

ಇದನ್ನೂ ಓದಿ : CA Day 2022 : ಇಂದು ಲೆಕ್ಕ ಪರಿಶೋಧಕರನ್ನು ಸ್ಮರಿಸುವ ದಿನ ! ಈ ಪರಿಕಲ್ಪನೆ ಪ್ರಾರಂಭವಾದದ್ದು ಯಾವಾಗ ಗೊತ್ತಾ?

ಇದನ್ನೂ ಓದಿ : International Joke Day: ಮನ್ನಸ್ಸನ್ನು ಹಗುರಾಗಿಸುವ ಹಾಸ್ಯದ ದಿನವಿಂದು !

Comments are closed.