Gruha Lakshmi Money transfer : ಗೃಹಲಕ್ಷ್ಮೀ ಯೋಜನೆ ಕರ್ನಾಟಕದಲ್ಲಿ ಆರಂಭಗೊಂಡು ಇದೀಗ ಆರು ತಿಂಗಳೇ ಕಳೆದಿದೆ. ಆದರೂ ಲಕ್ಷಾಂತರ ಮಹಿಳೆಯರ ಖಾತೆಗೆ ಇಂದಿಗೂ ಗೃಹಲಕ್ಷ್ಮೀ ಯೋಜನೆಯ ಹಣ ಜಮೆ ಆಗಿಲ್ಲ. ಇದೇ ಕಾರಣದಿಂದಲೇ ರಾಜ್ಯ ಸರಕಾರ ಗೃಹಲಕ್ಷ್ಮೀ ಹಣ ವರ್ಗಾವಣೆಗೆ ಹೊಸ ಸೂತ್ರವನ್ನು ಹೆಣೆದಿದ್ದು, ಮಹಿಳೆಯರಿಗೆ ಭರ್ಜರಿ ರಿಲೀಫ್ ನೀಡಿದೆ.

ಕರ್ನಾಟಕ ಸರಕಾರ ಮಹಿಳಾ ಮತ್ತು ಕಲ್ಯಾಣ ಇಲಾಖೆಯ ವತಿಯಿಂದ ಪ್ರತೀ ತಿಂಗಳು ಗೃಹಿಣಿಯ ಬ್ಯಾಂಕ್ ಖಾತೆಗಳಿಗೆ ಗೃಹಲಕ್ಷ್ಮೀ ಹಣವನ್ನು ನೇರ ವರ್ಗಾವಣೆ ಮಾಡುತ್ತಿದೆ. ಆದರೆ ನಾನಾ ಕಾರಣಗಳಿಂದಾಗಿ ಲಕ್ಷಾಂತರ ಮಹಿಳೆಯರಿಗೆ ಕಳೆದ ಆರು ತಿಂಗಳಿನಿಂದಲೂ ಗೃಹಲಕ್ಷ್ಮೀ ಭಾಗ್ಯ ದೊರೆಕಿಲ್ಲ. ಇದೇ ಕಾರಣದಿಂದಲೇ ಸರಕಾರ ಹಣ ಸಿಗದೇ ಇರುವವರಿಗೆ ಹಣಕೊಡಿಸುವ ಕಾರ್ಯಕ್ಕೆ ಮುಂದಾಗಿದೆ.
ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಸಿದ್ದರೂ ಹಣ ಸಿಗದೇ ಇರುವವರು ಹಾಗೂ ಕೆಲವೊಂದು ಕಂತಿನ ಹಣ ಸಿಗದವರ ಮಾಹಿತಿಯನ್ನು ಸರಕಾರ ಪಡೆದುಕೊಂಡಿದ್ದು, ಪ್ರತೀ ಹಳ್ಳಿಗೂ ಅಧಿಕಾರಿಗಳನ್ನು ಕಳುಹಿಸಿದೆ. ಬ್ಯಾಂಕುಗಳಲ್ಲಿ ಖಾತೆ ಹೊಂದಿದ್ದು, ಹಲವು ವರ್ಷಗಳ ಕಾಲ ಆ ಖಾತೆ ಸಕ್ರೀಯ ವಾಗಿಲ್ಲದೇ ಇದ್ದರೆ ಅಂತಹ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಜಮೆ ಆಗಿರುವುದಿಲ್ಲ.
ಇದನ್ನೂ ಓದಿ : ಈ ಮಹಿಳೆಯರಿಗೆ ಸಿಗಲ್ಲ ಗೃಹಲಕ್ಷ್ಮೀ ಯೋಜನೆಯ 6ನೇ ಕಂತಿನ ಹಣ
ಒಂದೊಮ್ಮೆ ಬ್ಯಾಂಕ್ ಖಾತೆಗಳಲ್ಲಿ ದೋಷಗಳು ಕಂಡು ಬಂದಿದ್ದರೆ, ಅಂಚೆ ಇಲಾಖೆಯ ಮೂಲಕ ಹೊಸ ಖಾತೆಯನ್ನು ತೆರೆದು ಗೃಹಲಕ್ಷ್ಮೀ ಯೋಜನೆಯ ಲಾಭವನ್ನು ಕೊಡಿಸುವ ಕಾರ್ಯಕ್ಕೆ ಸರಕಾರ ಮುಂದಾಗಿದೆ. ಅಲ್ಲದೇ ಬ್ಯಾಂಕ್ ಖಾತೆಯ ಜೊತೆಗೆ ಇಕೆವೈಸಿ ಮಾಡಿಸದೇ ಇರುವ ಕಾರಣಕ್ಕೆ ಹಣ ಸಂದಾಯವಾಗದೇ ಇದ್ದರೆ ಅಂತಹ ಖಾತೆಗಳನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದೆ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ ಬಿಗ್ ಅಪ್ಡೇಟ್ಸ್ : ಕೊನೆಗೂ ಜಮೆಯಾಯ್ತು ಬಾಕಿ ಹಣ, ಇಂದೇ ಬ್ಯಾಲೆನ್ಸ್ ಚೆಕ್ ಮಾಡಿ
ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಖಾತೆಗೆ ಕಡ್ಡಾಯವಾಗಿ ಆಧಾರ್ ಸೀಡಿಂಗ್, ಎನ್‌ಪಿಸಿಐ ಮ್ಯಾಪಿಂಗ್ ಕಡ್ಡಾಯವಾಗಿದೆ. ಈ ಕಾರ್ಯವನ್ನು ಮಾಡಿಸದೇ ಇರುವವರಿಂದಲೂ ಕೆವೈಸಿ ಸಂಬಂಧಿತ ಕಾರ್ಯವನ್ನು ಮಾಡಿಸಲಾಗುತ್ತಿದೆ. ತಾಂತ್ರಿಕ ಸಮಸ್ಯೆಗಳು ಪರಿಹಾರವಾದ್ರೆ ಶೀಘ್ರದಲ್ಲಿಯೇ ಫಲಾನುಭವಿಗಳ ಖಾತೆಗೆ ಬಾಕಿ ಮೊತ್ತೆ ಜಮೆ ಆಗಲಿದೆ.
ಇದನ್ನೂ ಓದಿ : ಬಿಪಿಎಲ್ ಕಾರ್ಡುದಾರರಿಗೆ 6 ಲಕ್ಷ, ಎಪಿಎಲ್‌ಗೆ 2 ಲಕ್ಷ : ಕೇಂದ್ರ ಸರಕಾರದ ಈ ಯೋಜನೆ ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ
ಇನ್ನು ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳು ಕಂಡು ಬಂದರೆ ಅಂಗನವಾಡಿ ಸಹಾಯಕಿಯರು ಹಾಗು ಆಶಾ ಕಾರ್ಯಕರ್ತೆಯರನ್ನು ಸಂಪರ್ಕ ಮಾಡಬಹುದಾಗಿದೆ. ಅವರು ನಿಮ್ಮ ಅರ್ಜಿಯಲ್ಲಿನ ದೋಷವನ್ನು ತಿಳಿ ಹೇಳುವ ಕಾರ್ಯವನ್ನು ಮಾಡುತ್ತಾರೆ. ಇದುವರೆಗೂ ಹಣ ಸಿಗದೇ ಇರುವವರು ಚಿಂತೆ ಬಿಟ್ಟು ಮುಂದಿನ ಕಂತಿನ ಹಣಕ್ಕೆ ಕಾಯಬಹುದಾಗಿದೆ.
Gruha Lakshmi Money transfer is a new formula, Karnataka Government Give good news for those who are not getting money