ಈ ಮಹಿಳೆಯರಿಗೆ ಸಿಗಲ್ಲ ಗೃಹಲಕ್ಷ್ಮೀ ಯೋಜನೆಯ 6ನೇ ಕಂತಿನ ಹಣ

Gruha Lakshmi 6th installment : ಗೃಹಲಕ್ಷ್ಮೀ ಯೋಜನೆಯ 5 ಕಂತಿನ ಹಣ ಗೃಹಿಣಿಯರ ಬ್ಯಾಂಕ್‌ ಖಾತೆಗೆ ನೇರ ವರ್ಗಾವಣೆಯ ಮೂಲಕ ಜಮೆ ಆಗಿದೆ. ಆದರೆ ಕೆಲವು ಮಹಿಳೆಯರಿಗೆ 6ನೇ ಕಂತಿನ ಹಣ ಸಿಗೋದಿಲ್ಲ.

Gruha Lakshmi 6th installment : ಗೃಹಲಕ್ಷ್ಮೀ ಯೋಜನೆಯ 5 ಕಂತಿನ ಹಣ ಗೃಹಿಣಿಯರ ಬ್ಯಾಂಕ್‌ ಖಾತೆಗೆ ನೇರ ವರ್ಗಾವಣೆಯ ಮೂಲಕ ಜಮೆ ಆಗಿದೆ. ಆದರೆ 6ನೇ ಕಂತಿನ ಹಣದ ನಿರೀಕ್ಷೆಯಲ್ಲಿ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು ಇದ್ದಾರೆ. ಆದರೆ ಕೆಲವು ಮಹಿಳೆಯರಿಗೆ 6ನೇ ಕಂತಿನ ಹಣ ಸಿಗೋದಿಲ್ಲ.

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಪೈಕಿ ಗೃಹಲಕ್ಷ್ಮೀ ಯೋಜನೆ ಕೂಡ ಒಂದು. ಈ ಯೋಜನೆಯ ಮೂಲಕ ಮಹಿಳೆಯರಿಗೆ ಪ್ರತೀ ತಿಂಗಳು 2000 ರೂಪಾಯಿ ಹಣವನ್ನು ಬ್ಯಾಂಕ್‌ ಖಾತೆಗಳಿಗೆ ನೇರವರ್ಗಾವಣೆ ಮಾಡಲಾಗುತ್ತದೆ.

Gruha Lakshmi 6th installment money not get this woman
Image Credit to Original Source

ಇದುವರೆಗೆ ೫ ಕಂತುಗಳ ಮೂಲಕ ಒಟ್ಟು 10 ಸಾವಿರ ರೂಪಾಯಿ ಹಣವನ್ನು ಗೃಹಿಣಿಯರು ಪಡೆದುಕೊಂಡಿದ್ದಾರೆ. ಆದರೆ 6ನೇ ಕಂತಿನ ಗೃಹಲಕ್ಷ್ಮೀ ಯೋಜನೆಯ ಹಣಕ್ಕಾಗಿ ಫಲಾನುಭವಿಗಳು ಕಾದು ಕುಳಿತಿದ್ದಾರೆ. ಆದರೆ ಇದುವರೆಗೆ ಗೃಹಲಕ್ಷ್ಮೀ ಯೋಜನೆಯ ಹಣ ಪಡೆದುಕೊಂಡಿರುವ ಕೆಲವು ಮಹಿಳೆಯರಿಗೆ ಮುಂದಿನ ಕಂತಿನ ಹಣ ಸಿಗೋದಿಲ್ವಂತೆ.

ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವೊಂದು ಮಾನದಂಡಗಳನ್ನು ತಿಳಿಸಲಾಗಿತ್ತು. ಆದರೆ ಕೆಲವೊಬ್ಬರು ಮಾನದಂಡಗಳನ್ನು ಉಲ್ಲಂಘಿಸಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರು. ಅದ್ರಲ್ಲೂ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದ ಕೆಲವು ಮಹಿಳೆಯರು ಕೂಡ ಈ ಯೋಜನೆಯ ಫಲಾನುಭವಿ ಗಳಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸರಕಾರ ಗೃಹಲಕ್ಷ್ಮೀ ಯೋಜನೆಯ ಮಾನದಂಡಗಳನ್ನು ಉಲ್ಲಂಘನೆ ಮಾಡಿರುವ ಮಹಿಳೆಯರ ಖಾತೆಗೆ ಹಣ ಜಮಾ ಮಾಡದಿರಲು ನಿರ್ಧರಿಸಿದೆ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ : ಗೃಹಿಣಿಯರಿಗೆ ಭರ್ಜರಿ ಗುಡ್‌ನ್ಯೂಸ್‌ ಕೊಟ್ಟ ಲಕ್ಷ್ಮೀ ಹೆಬ್ಬಾಳ್ಕರ್‌

ಗೃಹಲಕ್ಷ್ಮೀ ಯೋಜನೆಯ ಹಣವನ್ನು ಪಡೆಯಲು ಫಲಾನುಭವಿಗಳು ಕಡ್ಡಾಯವಾಗಿ ಈಕೆವೈಸಿ ಮಾಡಿಸಬೇಕಾಗಿದೆ. ಜೊತೆಗೆ ಎನ್‌ಪಿಸಿಐ ಮ್ಯಾಪಿಂಗ್‌ ಮಾಡದಿದ್ದರೆ, ರೇಷನ್‌ ಕಾರ್ಡ್‌ ಹಾಗೂ ಆಧಾರ್‌ ಕಾರ್ಡ್‌ ಅಪ್ಡೇಟ್ಸ್‌ ಆಗೋದಿಲ್ಲ. ಇದರಿಂದಾಗಿ ಅಂತಹ ಫಲಾನುಭವಿಗಳ ಖಾತೆಗೆ ಹಣ ಜಮೆ ಆಗೋದಿಲ್ಲ. ಎಲ್ಲವೂ ಸರಿಯಾಗಿದ್ದವರಿಗೆ ಯಾವುದೇ ಸಮಸ್ಯೆ ಆಗದೆ ಬ್ಯಾಂಕ್‌ ಖಾತೆಗೆ ಹಣ ಜಮೆ ಆಗಲಿದೆ.

Gruha Lakshmi 6th installment money not get this woman
Image Credit to Original Source

ಡಿಬಿಟಿ ಸ್ಟೇಟಸ್‌ ಚೆಕ್‌ (DBT Status Check) ಮಾಡುವುದು ಹೇಗೆ ?

ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು ಮನೆಯಲ್ಲಿಯೇ ಕುಳಿತು ತಮ್ಮ ಖಾತೆಗೆ ಹಣ ಪಾವತಿ ಆಗಿದೆಯೋ ? ಇಲ್ಲವೋ ಅನ್ನೋ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಅಷ್ಟಕ್ಕೂ ನೀವು ಮಾಡಬೇಕಾಗಿರುವುದು ಇಷ್ಟೆ. ಮೊದಲು ಡಿಬಿಟಿ ಕರ್ನಾಟಕ ಆಪ್‌ ಡೌನ್‌ಲೋಡ್‌ ಮಾಡಬೇಕು.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ ಬಿಗ್‌ ಅಪ್ಡೇಟ್ಸ್ : ಕೊನೆಗೂ ಜಮೆಯಾಯ್ತು ಬಾಕಿ ಹಣ, ಇಂದೇ ಬ್ಯಾಲೆನ್ಸ್ ಚೆಕ್‌ ಮಾಡಿ

ನಿಮ್ಮ ಮೊಬೈಲ್‌ ಸಂಖ್ಯೆಯನ್ನು ನಮೂದಿಸಿ ಒಟಿಪಿ ಹಾಕಿದ ಕೂಡಲೇ ಲಾಗಿನ್‌ ಅವಕಾಶ ಪಡೆಯುತ್ತೀರಿ. ನಂತರದ್ಲಿ ನೀವು ನಾಲ್ಕು ಅಂಕೆಗಳ ಎಂಪಿನ್‌ ಕ್ರಿಯೇಟ್‌ ಮಾಡಿಕೊಳ್ಳಿ. ನಂತರ ಎಂಪಿನ್‌ ಬಳಕೆ ಮಾಡಿಕೊಂಡು ಆಪ್‌ ಓಪನ್‌ ಮಾಡಿ, ನಿಮ್ಮ ಖಾತೆಯ ಡಿಬಿಟಿಗೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿ ಯನ್ನು ಪಡೆದುಕೊಳ್ಳಬಹುದಾಗಿದೆ. ಅಷ್ಟೇ ಅಲ್ಲದೇ ಡಿಬಿಟಿ ಸ್ಟೇಟಸ್‌ ಸುಲಭವಾಗಿ ತಿಳಿಯಬಹುದಾಗಿದೆ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದ ಹೊಸ ರೂಲ್ಸ್‌ : ಅನರ್ಹರ ಲಿಸ್ಟ್‌ನಲ್ಲಿ ನಿಮ್ಮ ಹೆಸರಿದ್ಯಾ ? ಚೆಕ್‌ ಮಾಡಿ

Gruha Lakshmi 6th installment money not get this woman

Comments are closed.