Gruha Lakshmi Yojana Big Updates : ಗೃಹಲಕ್ಷ್ಮೀ ಯೋಜನೆ ಜಾರಿ ಆಗಿ ಈಗಾಗಲೇ ಎಂಟು ತಿಂಗಳು ಕಳೆಯುತ್ತಾ ಬಂದಿದೆ. ಈಗಾಗಲೇ ಕರ್ನಾಟಕ ಸರಕಾರ ಗೃಹಲಕ್ಷ್ಮೀ ಯೋಜನೆಯ ಏಳನೇ ಕಂತಿನ ಹಣ ಗೃಹಿಣಿಯರ ಖಾತೆಗೆ ಜಮೆ ಆಗಿದೆ. ಆದರೂ ಲಕ್ಷಾಂತರ ಮಹಿಳೆಯರ ಖಾತೆಗೆ ಇನ್ನು ಹಣ ನೇರ ವರ್ಗಾವಣೆ ಆಗಿಲ್ಲ. ಇದೀಗ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಇದುವರೆಗೂ ಪಡೆದುಕೊಳ್ಳದೇ ಇರುವವರಿಗೆ ಗುಡ್‌ನ್ಯೂಸ್ ಸಿಕ್ಕಿದೆ.

ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಈಗಾಗಲೇ 6 ಮತ್ತು 7ನೇ ಕಂತಿನ ಹಣ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿದೆ. ಆದರೆ ನಿಮ್ಮ ಖಾತೆಗೆ ಈ ಹಣ ವರ್ಗಾವಣೆ ಆಗಿದೆಯಾ ಅನ್ನೋದ್ನು ಒಮ್ಮೆ ಪರಿಶೀಲಿಸಿಕೊಳ್ಳಿ. ಇದೀಗ 8ನೇ ಕಂತಿನ ಹಣ ವರ್ಗಾವಣೆಗೆ ರಾಜ್ಯ ಸರಕಾರ ಸಿದ್ದತೆ ಮಾಡಿಕೊಳ್ಳುತ್ತಿದೆ. ಕರ್ನಾಟಕದ ಪ್ರತೀ ಕುಟುಂಬದ ಯಜಮಾನಿಗೂ ಕೂಡ ಗೃಹಲಕ್ಷ್ಮೀ ಯೋಜನೆಯನ್ನು ತಲುಪಿಸುವುದು ಸರಕಾರ ಉದ್ದೇಶವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈ ಹಿಂದೆಯೇ ತಿಳಿಸಿದ್ದಾರೆ.
ಇದೇ ಕಾರಣದಿಂದಲೇ ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಎದುರಾಗಿರುವ ಎಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ಸರಕಾರ ನಾನಾ ಕಸರತ್ತುಗಳು ನಡೆಸಿದೆ. ಗೃಹಲಕ್ಷ್ಮೀ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಇದುವರೆಗೂ ಹಣ ವರ್ಗಾವಣೆ ಆಗದೇ ಇರುವ ಖಾತೆದಾರರು ಗೃಹಲಕ್ಷ್ಮೀ ಯೋಜನೆಯ ಹಣವನ್ನು ಪಡೆಯಲು ಮತ್ತೊಂದು ಅವಕಾಶವನ್ನು ಕಲ್ಪಿಸಲಾಗಿದೆ. ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿದವರು ಈ ಸರಕಾರ ತಿಳಿಸಿರುವ ಮೂರು ದಾಖಲೆಗಳನ್ನು ಸಲ್ಲಿಸುವ ಮೂಲಕ ಬಾಕಿ ಮೊತ್ತವನ್ನು ಪಡೆದುಕೊಳ್ಳ ಬಹುದಾಗಿದೆ.
ಇದನ್ನೂ ಓದಿ : ಗೃಹಜ್ಯೋತಿ ಗ್ರಾಹಕರಿಗೆ ಶಾಕ್: ಸದ್ಯದಲ್ಲೇ ಸ್ಥಗಿತಗೊಳ್ಳಲಿದ್ಯಾ ಫ್ರೀ ಕರೆಂಟ್ ಆಫರ್
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಿಳಿಸಿರುವ ಪ್ರಕಾರ, ಒಂದೊಮ್ಮೆ ನಿಮ್ಮ ಖಾತೆಗೆ ಗೃಹಲಕ್ಷ್ಮೀ ಯೋಜನೆಯ ಹಣ ಸಂದಾಯವಾಗದೇ ಇದ್ದಿದ್ರೆ ನೀವು ಅಗತ್ಯವಾಗಿ ಕೆಲವು ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್‌ಗಳೊಂದಿಗೆ ಸಮೀಪದಲ್ಲಿರುವ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ದಾಖಲೆ ಪರಿಶೀಲಿಸಿಕೊಳ್ಳಬಹುದಾಗಿದೆ.

ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿ ಇದುವರೆಗೂ ಯೋಜನೆಯ ಹಣ ಖಾತೆಗೆ ಜಮೆ ಆಗದೇ ಇರುವ ಗೃಹಿಣಿಯರು ನೇರವಾಗಿ ಸಿಡಿಪಿಒ ಕಚೇರಿಗೆ ಭೇಟಿ ನೀಡಬಹುದಾಗಿದೆ. ಒಂದೊಮ್ಮೆ ನೀವು ಸಲ್ಲಿಸಿದ ದಾಖಲೆಗಳಲ್ಲಿ ಅಥವಾ ಅರ್ಜಿಗಳಲ್ಲಿ ಯಾವುದಾದ್ರೂ ಲೋಪಗಳಿದ್ರೆ ಅದನ್ನು ಸರಿಪಡಿಸಿಕೊಳ್ಳಲು ಅವಕಾಶವಿದೆ.
ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯ 8 ನೇ ಕಂತಿನ ಹಣ ಪಡೆಯಲು ಸರಕಾರದಿಂದ ಹೊಸ ರೂಲ್ಸ್
ಒಂದೊಮ್ಮೆ ನೀವು ಸಲ್ಲಿಸಿರುವ ದಾಖಲೆಗಳಲ್ಲಿ ಯಾವುದೇ ಲೋಪದೋಷಗಳಿದ್ದಲ್ಲಿ ನೀವು ಹೊಸದಾಗಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಓಂದೊಮ್ಮೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್, ಆಧಾರ್ ಕಾರ್ಡ್ ಜೊತೆಗೆ ರೇಷನ್ ಕಾರ್ಡ್ ಲಿಂಕ್ ಆಗದೇ ಇದ್ರೆ, ಇಲ್ಲಾ ಆಧಾರ್ ಸೀಡಿಂಗ್ ಮಾಡಿಸದೇ ಇದ್ರೆ ಕೂಡಲೇ ಈ ಕಾರ್ಯವನ್ನು ಮಾಡಿಸಿಕೊಳ್ಳಿ.
ನಿಮ್ಮ ಬ್ಯಾಂಕ್ ಖಾತೆಯಲ್ಲಿ ಯಾವುದೇ ದೋಷಗಳಿದ್ದಲ್ಲಿ, ಕೂಡಲೇ ಬ್ಯಾಂಕ್‌ನಲ್ಲಿ ಹೊಸದಾಗಿ ಖಾತೆಯನ್ನು ತೆರೆಯುವ ಮೂಲಕ ಆ ಬ್ಯಾಂಕ್ ಖಾತೆಯನ್ನು ಗೃಹಲಕ್ಷ್ಮೀ ಯೋಜನೆಗೆ ಲಿಂಕ್ ಮಾಡಿದ್ರೆ ನೀವು ಬಾಕಿ ಉಳಿದಿರುವ ಎಲ್ಲಾ ಮೊತ್ತವನ್ನು ಪಡೆದುಕೊಳ್ಳಬಹುದಾಗಿದೆ.
ಇದನ್ನೂ ಓದಿ : ಗೃಹಜ್ಯೋತಿ ಗ್ರಾಹಕರಿಗೆ ಶಾಕ್: ಸದ್ಯದಲ್ಲೇ ಸ್ಥಗಿತಗೊಳ್ಳಲಿದ್ಯಾ ಫ್ರೀ ಕರೆಂಟ್ ಆಫರ್
Gruha Lakshmi Yojana Big Updates You will get the balance money if you register these 3 documents