ದಿನಭವಿಷ್ಯ 27 ಮಾರ್ಚ್‌ 2024: ನವಪಂಚಮ ಯೋಗದಿಂದ ಈ 2 ರಾಶಿಯವರಿಗೆ ಬಾರೀ ಅದೃಷ್ಟ

Horoscope Today 27th March 2024 : ದಿನಭವಿಷ್ಯ 27 ಮಾರ್ಚ್‌ 2024 ಗುರುವಾರ. ಜ್ಯೋತಿಷ್ಯದ ಪ್ರಕಾರ. ಚಂದ್ರನು ತುಲಾರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಜೊತೆಗೆ ದ್ವಾದಶ ರಾಶಿಗಳ ಮೇಲೆ ಚಿತ್ರಾ ನಕ್ಷತ್ರದ ಪ್ರಭಾವ ಇರುತ್ತದೆ. ನವ ಪಂಚಮ ಯೋಗ (Nava Panchama Yoga), ಬುಧಾದಿತ್ಯ ಯೋಗದ ಜೊತೆಗೆ ಚಿತ್ರ ನಕ್ಷತ್ರದ ಶುಭ ಸಂಯೋಗ ನಡೆಯಲಿದೆ

Horoscope Today 27th March 2024 : ದಿನಭವಿಷ್ಯ 27 ಮಾರ್ಚ್‌ 2024 ಗುರುವಾರ. ಜ್ಯೋತಿಷ್ಯದ ಪ್ರಕಾರ. ಚಂದ್ರನು ತುಲಾರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಜೊತೆಗೆ ದ್ವಾದಶ ರಾಶಿಗಳ ಮೇಲೆ ಚಿತ್ರಾ ನಕ್ಷತ್ರದ ಪ್ರಭಾವ ಇರುತ್ತದೆ. ನವ ಪಂಚಮ ಯೋಗ (Nava Panchama Yoga), ಬುಧಾದಿತ್ಯ ಯೋಗದ ಜೊತೆಗೆ ಚಿತ್ರ ನಕ್ಷತ್ರದ ಶುಭ ಸಂಯೋಗ ನಡೆಯಲಿದೆ. ಇದರಿಂದಾಗಿ ಕೆಲವು ರಾಶಿಯವರಿಗೆ ಅದೃಷ್ಟ ಬರಲಿದೆ. ಮೇಷರಾಶಿಯಿಂದ ಮೀನರಾಶಿಯ ವರೆಗೆ ಒಟ್ಟು 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷರಾಶಿ
ಸಂತೋಷದ ಜೊತೆಗೆ ಸಮೃದ್ದಿಯು ಹೆಚ್ಚಲಿದೆ. ನಿಮ್ಮ ಸಂಪತ್ತು ವೃದ್ದಿಸಲಿದೆ. ಕುಟುಂಬದಲ್ಲಿ ಶುಭ ಸುದ್ದಿಯೊಂದನ್ನು ಕೇಳುವಿರಿ. ಶುಭ ಸಮಾರಂಭಗಳಲ್ಲಿ ಪಾಲ್ಗೊಳ್ಳುವಿರಿ. ವ್ಯವಹಾರಿಕವಾಗಿ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರತಿಫಲ ದೊರೆಯಲಿದೆ.

ವೃಷಭರಾಶಿ
ಅನೇಕ ಕೆಲಸ ಕಾರ್ಯಗಳಲ್ಲಿ ಯಶಸ್ವಿ ಆಗುತ್ತೀರಿ. ಹೊಸ ಕಾರ್ಯವನ್ನು ಆರಂಭಿಸಿಲು ಇಂದು ಅನುಕೂಲಕರ ಸಮಯ. ಕುಟುಂಬದಲ್ಲಿನ ಭಿನ್ನಾಭಿಪ್ರಾಯಗಳು ಬಗೆ ಹರಿಯಲಿದೆ. ಬಹಳ ದಿನಗಳಿಂದ ಬಾಕಿ ಉಳಿದಿದ್ದ ಕಾರ್ಯಗಳು ಇಂದು ಪೂರ್ಣಗೊಳ್ಳಲಿದೆ. ಹಿಂದಿನ ತಪ್ಪುಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಿ.

ಮಿಥುನರಾಶಿ
ನಿಮ್ಮ ಬಂಡವಾಳಕ್ಕೆ ತಕ್ಕಂತೆ ಯೋಜನೆಗಳನ್ನು ರೂಫಿಸಿ. ಸಂಗಾತಿಯೊಂದಿಗೆ ಇಂದು ಸುದೀರ್ಘವಾಗಿ ಚರ್ಚೆ ನಡೆಸುವಿರಿ. ಇಂದು ಸಾಲ ಪಡೆಯುವ ಯೋಚನೆ ನಿಮಗೆ ಇದ್ದರೆ ಯಾರಿಂದಲೂ, ಯಾವುದೇ ಕಾರಣಕ್ಕೂ ಸಾಲವನ್ನು ಪಡೆದುಕೊಳ್ಳಬೇಡಿ. ಯಾಕೆಂದರೆ ಸಾಲ ಮರುಪಾವತಿಯು ಕಷ್ಟಕರವಾಗಬಹುದು.

ಇದನ್ನೂ ಓದಿ : ಎಷ್ಟೇ ದುಡಿದರೂ ಪರ್ಸ್ ನಲ್ಲಿ ಹಣ ಉಳಿತಿಲ್ವಾ ? ಇಲ್ಲಿದೆ ಹಣ ಉಳಿಸುವ ಸರಳ ಟಿಪ್ಸ್

ಕರ್ಕಾಟಕರಾಶಿ
ಯಾವುದೇ ರಹಸ್ಯವನ್ನು ನೀವು ಮರೆ ಮಾಚಬೇಡಿ. ಅಪರಿಚಿತರನ್ನು ಇಂದು ಭೇಟಿ ಮಾಡುವ ಸಾಧ್ಯತೆಯಿದೆ. ವೃತ್ತಿಯ ಬಗ್ಗೆ ಚಿಂತಿಸುವವರಿಗೆ ಇಂದು ಶುಭ ಸೂಚನೆ ದೊರೆಯಲಿದೆ. ಸಾಮಾಜಿಕವಾಗಿ ನಿಮಗೆ ಗೌರವ ಹೆಚ್ಚಲಿದೆ.

ಸಿಂಹರಾಶಿ
ಉದ್ಯೋಗದ ಸ್ಥಳದಲ್ಲಿ ಉತ್ತಮ ಲಾಭ ದೊರೆಯಲಿದೆ. ಮನೆಯಲ್ಲಿ ಇಂದು ಪ್ರಮುಖ ವಿಚಾರಗಳ ಕುರಿತು ಚರ್ಚೆ ನಡೆಸುವಿರಿ. ನೌಕರರು ಅಧಿಕಾರಿಗಳ ಜೊತೆಗೆ ತಮ್ಮ ಭಾವನೆಯನ್ನು ವ್ಯಕ್ತಪಡಿಸಲಿದ್ದಾರೆ. ಹಿರಿಯರ ಆಸ್ತಿಗೆ ಸಂಬಂಧಿಸಿದ ವಿಚಾರದಲ್ಲಿ ಇಂದು ನೀವು ಯಶಸ್ಸನ್ನು ಪಡೆಯಲಿದ್ದೀರಿ.

Horoscope Today 27th March 2024 Nava Panchama Yoga for these 2 zodiac sign
Image Credit to Original Source

ಕನ್ಯಾರಾಶಿ
ಪಾಲುದಾರಿಕೆಯಲ್ಲಿ ಆರಂಭಿಸುವ ವ್ಯವಹಾರದಲ್ಲಿ ನೀವು ಅಧಿಕ ಲಾಭವನ್ನು ಪಡೆಯಲಿದ್ದೀರಿ. ಆಧ್ಯಾತ್ಮಿಕ ವಿಚಾರದಲ್ಲಿ ನಿಮಗೆ ಆಸಕ್ತಿ ಹೆಚ್ಚಲಿದೆ. ಧಾರ್ಮಿಕ ಚಟುವಟಿಕೆಗಳಲ್ಲಿ ನೀವು ಇಂದು ಸಕ್ರೀಯರಾಗಿ ಇರುತ್ತೀರಿ. ಕೆಲಸ ಕಾರ್ಯಗಳಲ್ಲಿ ದೊಡ್ಡ ಮಟ್ಟದ ಲಾಭ ದೊರೆಯಲಿದೆ.

ತುಲಾರಾಶಿ
ಅಪರಿಚಿತ ವ್ಯಕ್ತಿಗಳಿಂದ ದೂರವಿರಿ. ಇಲ್ಲದಿದ್ದರೆ ಸಮಸ್ಯೆಗಳು ಉದ್ಬವಿಸುವ ಸಾಧ್ಯತೆಯಿದೆ. ಆರೋಗ್ಯದ ವಿಚಾರದಲ್ಲಿ ನೀವು ರಾಜಿ ಮಾಡಿಕೊಳ್ಳಬೇಡಿ. ಅಹಾರ ಪದ್ದತಿಗಳನ್ನು ಬದಲಾಯಿಸಿಕೊಳ್ಳುವುದು ಉತ್ತಮ. ಕುಟುಂಬದ ಚಿಕ್ಕ ಮಕ್ಕಳ ಜೊತೆಗೆ ಇಂದು ಸಮಯವನ್ನು ಕಳೆಯುತ್ತೀರಿ.

ವೃಶ್ಚಿಕರಾಶಿ
ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಸಮಸ್ಯೆಗಳು ಎದುರಾಗುವ ಸಾಧ್ಯತೆಯಿದೆ. ವೈವಾಹಿಕ ಜೀವನವು ಸುಖಮಯವಾಗಿ ಇರುತ್ತದೆ. ಪ್ರೀತಿ ಪಾತ್ರರ ಜೊತೆಗೆ ಇಂದು ಸಮಯವನ್ನು ಕಳೆಯುತ್ತೀರಿ. ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಇಂದು ಉತ್ತಮ ಅವಕಾಶ ದೊರೆಯಲಿದೆ.

ಇದನ್ನೂ ಓದಿ : ಬ್ರಹ್ಮಾವರ : ಮೀನು ಹಿಡಿಯುವ ವೇಳೆ ನದಿಯಲ್ಲಿ ಮುಳುಗಿ ಯುವಕರಿಬ್ಬರ ಸಾವು

ಧನಸ್ಸುರಾಶಿ
ವ್ಯವಹಾರಿಕವಾಗಿ ಜವಾಬ್ದಾರಿಗಳು ಹೆಚ್ಚಲಿದೆ. ಕಠಿಣ ಪರಿಶ್ರಮದಿಂದ ಇಂದು ಅಧಿಕ ಲಾಭ ದೊರೆಯಲಿದೆ. ಹೆಚ್ಚುತ್ತಿರುವ ವೆಚ್ಚಗಳಿಗೆ ನೀವು ಕಡಿವಾಣ ಹಾಕಬೇಕು. ಯಾವುದೇ ಕೆಲಸ ಕಾರ್ಯಗಳಲ್ಲಿ ನೀವಿಂದು ಯಶಸ್ಸು ಪಡೆಯುವ ಸಾಧ್ಯತೆಯಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲ.

ಮಕರರಾಶಿ
ಶೈಕ್ಷಣಿಕ ಕ್ಷೇತ್ರಗಳಲ್ಲಿ ಆಸಕ್ತಿ ಹೆಚ್ಚಲಿದೆ. ಅನೇಕ ಕ್ಷೇತ್ರಗಳಲ್ಲಿ ಬುದ್ದಿವಂತಿಕೆಯಿಂದ ಮುನ್ನೆಡೆಯಿರಿ. ಹಿರಿಯರ ಗೌರವವನ್ನು ಕಾಪಾಡಿಕೊಳ್ಳಬೇಕು. ಯಾವುದೇ ಸಮಸ್ಯೆಗಳನ್ನು ಚಾಣಾಕ್ಷತೆಯಿಂದ ಪರಿಹಾರ ಮಾಡಿಕೊಳ್ಳಿ. ಉದ್ಯೋಗ ಸ್ಥಳದಲ್ಲಿ ಇತರರ ಸಹಕಾರ ದೊರೆಯಲಿದೆ.

ಕುಂಭರಾಶಿ
ಮನೆಯಲ್ಲಿ ಸಂತೋಷ, ಸಮೃದ್ದಿ ಹೆಚ್ಚಲಿದೆ. ವಾಹನ ಖರೀದಿಸುವ ಯೋಗವಿದೆ. ವ್ಯವಹಾರದ ವಿಚಾರವಾಗಿ ಹೆಚ್ಚಿನ ಗಮನಹರಿಸಬೇಕಾಗುತ್ತದೆ. ತಾಯಿಯ ಕಡೆಯಿಂದ ಆರ್ಥಿಕ ಲಾಭವನ್ನು ನೀವಿಂದು ಪಡೆಯುವ ಸಾಧ್ಯತೆಯಿದೆ. ಸ್ನೇಹಿತರ ಜೊತೆಗೆ ದೀರ್ಘ ಪ್ರವಾಸಕ್ಕೆ ಯೋಜನೆ ರೂಪಿಸುವಿರಿ.

ಇದನ್ನೂ ಓದಿ : ಗೃಹಜ್ಯೋತಿ ಗ್ರಾಹಕರಿಗೆ ಶಾಕ್: ಸದ್ಯದಲ್ಲೇ ಸ್ಥಗಿತಗೊಳ್ಳಲಿದ್ಯಾ ಫ್ರೀ ಕರೆಂಟ್ ಆಫರ್

ಮೀನರಾಶಿ
ಕೆಲವೊಂದು ಪ್ರಮುಖ ವಿಚಾರಗಳಲ್ಲಿ ನೀವಿಂದು ಜಾಗರೂಕರಾಗಿ ಇರಬೇಕು. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶ ಎದುರಾಗಲಿದೆ. ಕುಟುಂಬದ ಸದಸ್ಯರಿಂದ ಇಂದು ಮದುವೆ ಪ್ರಸ್ತಾಪ ಬರಲಿದೆ. ಯಾವುದೇ ಅವಕಾಶವನ್ನು ನೀವು ಇಂದು ಕೈಚೆಲ್ಲಬೇಡಿ.

Horoscope Today 27th March 2024 Nava Panchama Yoga for these 2 zodiac sign

Comments are closed.