ಗೃಹಲಕ್ಷ್ಮಿ ಯೋಜನೆ ಹಣ ಖಾತೆಗೆ ಜಮೆ ಆಗಿದ್ಯಾ ? ಮನೆಯಲ್ಲಿಯೇ ಕುಳಿತು ಹೀಗೆ ಚೆಕ್‌

Gruha Lakshmi Yojana : ಕರ್ನಾಟಕ ರಾಜ್ಯದ ಪ್ರತೀ ಕುಟುಂಬದ ಯಜಮಾನಿಯರಿಗಾಗಿ ರಾಜ್ಯ ಸರಕಾರ ಜಾರಿಗೆ ತಂದಿರುವ ಗೃಹಲಕ್ಷ್ಮೀ ಯೋಜನೆ ಪ್ರಯೋಜನವನ್ನು ಕಳೆದ 11 ತಿಂಗಳಿನಿಂದಲೂ ಕೋಟ್ಯಾಂತರ ಮಂದಿ ಪಡೆಯುತ್ತಿದ್ದಾರೆ.

Gruha Lakshmi Yojana : ಕರ್ನಾಟಕ ರಾಜ್ಯದ ಪ್ರತೀ ಕುಟುಂಬದ ಯಜಮಾನಿಯರಿಗಾಗಿ ರಾಜ್ಯ ಸರಕಾರ ಜಾರಿಗೆ ತಂದಿರುವ ಗೃಹಲಕ್ಷ್ಮೀ ಯೋಜನೆ ಪ್ರಯೋಜನವನ್ನು ಕಳೆದ 11 ತಿಂಗಳಿನಿಂದಲೂ ಕೋಟ್ಯಾಂತರ ಮಂದಿ ಪಡೆಯುತ್ತಿದ್ದಾರೆ. ಆದರೆ ಗೃಹಲಕ್ಷ್ಮೀ ಯೋಜನೆಯ ಹಣ ತಮ್ಮ ಖಾತೆಗೆ ಜಮೆ ಆಗಿದೆಯಾ ? ಇಲ್ಲವೇ ಅನ್ನೋದನ್ನು ಚೆಕ್‌ ಮಾಡೋದು ತಲೆನೋವಾಗಿ ಪರಿಣಮಿಸಿದೆ. ಇನ್ಮುಂದೆ ಚಿಂತೆ ಬಿಡಿ ಮನೆಯಲ್ಲಿ ಕುಳಿತು ಗೃಹಲಕ್ಷ್ಮೀ ಯೋಜನೆಯ ಸ್ಟೇಟಸ್‌ ತಿಳಿದುಕೊಳ್ಳಿ.

Gruha Lakshmi Yojana money has been deposited in the account Sit at home and check like this
Image Credit to Original Source

ಕರ್ನಾಟಕ ಸರಕಾರ ಈಗಾಗಲೇ ಗೃಹಿಣಿಯರ ಬ್ಯಾಂಕ್‌ ಖಾತೆಗಳಿಗೆ ಪ್ರತೀ ತಿಂಗಳು 2000 ರೂಪಾಯಿಯನ್ನು ನೇರ ವರ್ಗಾವಣೆ ಮಾಡುತ್ತದೆ. ಗೃಹಲಕ್ಷ್ಮೀ ಯೋಜನೆಯ ಹಣವನ್ನು ಪ್ರತೀ ತಿಂಗಳ ಮೊದಲ ವಾರದಲ್ಲಿಯೇ ಜಮೆ ಮಾಡುವುದಾಗಿ ರಾಜ್ಯ ಸರಕಾರ ಹೇಳಿತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ಹಣ ಬ್ಯಾಂಕ್‌ ಖಾತೆಗಳಿಗೆ ಸಂದಾಯವಾಗುವುದು ವಿಳಂಭವಾಗುತ್ತಿದೆ.

ಇದನ್ನೂ ಓದಿ : Gruha Lakshmi Yojana : ಗೃಹಲಕ್ಷ್ಮೀ ಯೋಜನೆ ಹಣ ಜಮೆ ಆಗಿಲ್ವಾ : ಚಿಂತೆ ಬಿಡಿ ಎನ್‌ಪಿಸಿಐ ಚೆಕ್‌ ಮಾಡಿ

ಗೃಹಲಕ್ಷ್ಮೀ ಯೋಜನೆಯ ಹಣ ಜಮೆ ಆದ ಕೂಡಲೇ ಯೋಜನೆಯ ಫಲಾನುಭವಿಗಳ ಮೊಬೈಲ್‌ಗೆ ಮೆಸೇಜ್‌ ಬರುತ್ತದೆ. ಆದರೆ ಕೆಲವೊಮ್ಮೆ ತಾಂತ್ರಿಕ ಕಾರಣದ ಹಿನ್ನೆಲೆಯಲ್ಲಿ ಮೇಸೆಜ್‌ ಬಾರದೇ ಇರಬಹುದು. ಅಂತಹ ಸಂದರ್ಭದಲ್ಲಿ ಬ್ಯಾಂಕ್‌ ಶಾಖೆಗಳಿಗೆ ಅಲೆಯೋದು ಸರ್ವೆ ಸಾಮಾನ್ಯ. ಆದ್ರೆ ಇನ್ಮುಂದೆ ಈ ಸಮಸ್ಯೆ ನಿಮಗೆ ಇರೋದಿಲ್ಲ.

ಇದನ್ನೂ ಓದಿ : ಯುವನಿಧಿ ಯೋಜನೆಗೆ ಹೊಸ ರೂಲ್ಸ್‌ : ಈ ಕೆಲಸ ಮಾಡದಿದ್ರೆ ಜಮೆ ಆಗಲ್ಲ ಹಣ

ಗೃಹಲಕ್ಷ್ಮೀ ಯೋಜನೆಯ ಹಣ ನಿಮ್ಮ ಬ್ಯಂಕ್‌ ಖಾತೆಗೆ ವರ್ಗಾವಣೆ ಆಗಿದ್ಯಾ ? ಇಲ್ಲವೇ ಅನ್ನೋದನ್ನು ನೀವು ಮನೆಯಲ್ಲಿಯ ಕುಳಿತು ಚೆಕ್‌ ಮಾಡಬಹುದಾಗಿದೆ. ಇ ಆಡಳಿತ ಇಲಾಖೆ ಡಿಬಿಟಿ ಕರ್ನಾಟಕ ಅನ್ನೋ ಮೊಬೈಲ್‌ ಅಪ್ಲಿಕೇಶನ್‌ ಸಿದ್ದಪಡಿಸಿದ್ದು, ಈ ಆಪ್‌ ಬಳಸುವ ಮೂಲಕ ನಿಮ್ಮ ಗೃಹಲಕ್ಷ್ಮೀ ಯೋಜನೆಯ ಸ್ಟೇಟಸ್‌ ನೀವು ತಿಳಿದುಕೊಳ್ಳಬಹುದಾಗಿದೆ.

Gruha Lakshmi Yojana money has been deposited in the account Sit at home and check like this
Image Credit to Original Source

ಇದನ್ನೂ ಓದಿ :  ಗೃಹಲಕ್ಷ್ಮೀ ಯೋಜನೆಯ ಹಣ ಈ ಜಿಲ್ಲೆಗಳಿಗೆ ಬಿಡುಗಡೆ : ನಿಮ್ಮ ಜಿಲ್ಲೆಯ ಹೆಸರು ಪಟ್ಟಿಯಲ್ಲಿದ್ಯಾ ಚೆಕ್‌ ಮಾಡಿ

 

ಗೃಹಲಕ್ಷ್ಮೀ ಯೋಜನೆಯ ಹಣ ಜಮೆ ಆಗಿದ್ಯಾ ? ಹೀಗೆ ಚೆಕ್‌ ಮಾಡಿ

  • ಕರ್ನಾಟಕ ಸರಕಾರದ ಇ-ಆಡಳಿತ ಇಲಾಖೆಯ ʻDBT Karnatakaʼ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್‌ ಮಾಡಿಕೊಳ್ಳಿ.
  • ನಂತರ ಆಪ್‌ ಇನ್‌ಸ್ಟಾಲ್‌ ಮಾಡಿಕೊಂಡು, ನಿಮ್ಮ 12 ಅಂಕಿಯ ಆಧಾರ್‌ ಸಂಖ್ಯೆಯನ್ನು ನಮೂದಿಸಿ.
  • ನಿಮ್ಮ ನೋಂದಾಯಿತ ಮೊಬೈಲ್‌ ಸಂಖ್ಯೆಗೆ ೬ ಅಂಕಿಯ ಓಟಪಿ ಬರಲಿದ್ದು, ಅದನ್ನು ನಮೂದಿಸಿ.
  • ನಂತರದಲ್ಲಿ ನಿಮಗೆ ಅನುಕೂಲವಾಗುವಂತಹ 4 ಅಂಕಿಯ ಪಾಸ್ವರ್ಡ್ ರಚಸಿಕೊಳ್ಳಿ.
  • ಕೊನೆಯ ಕಾಲಂನಲ್ಲಿ ತೋರಿಸುವ ಬಟನ್‌ ಮೇಲ “ಸರಿ” ಎಂದು ಕ್ಲಿಕ್‌ ಮಾಡಿ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಗೆ ಸರಕಾರದಿಂದ ಹೊಸ ರೂಲ್ಸ್‌: ಇನ್ಮುಂದೆ ಈ ಮಹಿಳೆಯರಿಗೆ ಸಿಗೋದೆ ಇಲ್ಲ ಹಣ

ನೀವು ಆಪ್‌ ಲಾಗಿನ್‌ ಮಾಡಿದ ನಂತರ ಪಾತಿಯ ಸ್ಥಿತಿ ಎಂದು ತೋರಿಸುವ ಬಟನ್‌ ಮೇಲೆ ಕ್ಲಿಕ್‌ ಮಾಡುವ ಮೂಲಕ “ಗೃಹಲಕ್ಷ್ಮಿ” ಯೋಜನೆಯ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಅಲ್ಲದೇ ಗೃಹಲಕ್ಷ್ಮೀ ಯೋಜನೆಗೆ ಲಿಂಕ್‌ ಆಗಿರುವ ಬ್ಯಾಂಕ್‌ ಖಾತೆಯ ವಿವರ, ಮೊಬೈಲ್‌ ಸಂಖ್ಯೆ ಸೇರಿದಂತೆ ಎಲ್ಲಾ ಮಾಹಿತಿ ಲಭ್ಯವಾಗಿದೆ. .

Gruha Lakshmi Yojana money has been deposited in the account Sit at home and check like this

Comments are closed.