ಮನೆ ಬಾಡಿಗೆ ಮೇಲೆ ಜಿಎಸ್‌ಟಿ ಇಲ್ಲ : ಇಂದಿನಿಂದ ಹೊಸ ರೂಲ್ಸ್

ನವದೆಹಲಿ : (Kannada News Next Desk) ಮನೆ ಬಾಡಿಗೆಯ ಮೇಲೆ ಸರಕು ಮತ್ತು ಸೇವಾ ತೆರಿಗೆ ವಿಧಿಸುತ್ತಿದ್ದ ನಿಯಮವನ್ನು (GST Not Payable house Rent) ಇಂದಿನಿಂದ ಕೈ ಬಿಡಲಾಗಿದೆ. ಇದರಿಂದಾಗಿ ಬಾಡಿಗೆದಾರರು ಹಾಗೂ ಮನೆ ಮಾಲೀಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಬಾಡಿಗೆದಾರರಿಂದ ವಸತಿ ಉದ್ದೇಶಕ್ಕೆ ಮನೆ ನೀಡಿ, ನಂತರ ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಿದ್ರೆ ಶೇಕಡಾ 18 ರಷ್ಟು ಜಿಎಸ್‌ಟಿ ಪಾವತಿಸಬೇಕಾಗುತ್ತದೆ.

ಮನೆ ಬಾಡಿಗೆ ಮೇಲೆ ಶೇಕಡಾ 18 ರಷ್ಟು ಜಿಎಸ್‌ಟಿ ತೆರಿಗೆ ವಿಧಿಸಲಾಗುತ್ತಿತ್ತು. ಆದರೆ ಇದೀಗ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ ಇಂದಿನಿಂದ ಜಾರಿಗೆ ಬರುವಂತೆ ಮನೆ ಬಾಡಿಗೆಯ ಮೇಲೆ ಜಿಎಸ್‌ಟಿ ನಿಯಮವನ್ನು ಕೈಬಿಟ್ಟಿದೆ. ಆದರೆ ವಸತಿ ಉದ್ದೇಶಕ್ಕೆ ಬಳಸಲಾಗುವ ಮನೆಗಳ ಬಾಡಿಗೆಗೆ ಮಾತ್ರವೇ ಈ ನಿಯಮ ಜಾರಿಗೆ ತರಲಾಗಿದೆ. ಡಿಸೆಂಬರ್ 17 ರಂದು ನಡೆದ ಜಿಎಸ್‌ಟಿ ಕೌನ್ಸಿಲ್ (CBIC) ಸಭೆಯಲ್ಲಿ ಈ ನಿಯಮವನ್ನು ಜಾರಿಗೆ ತರಲಾಗಿದೆ. ಒಂದೊಮ್ಮೆ ಕಮರ್ಷಿಯಲ್ ಉದ್ದೇಶಕ್ಕೆ ಬಳಕೆಯಾದ್ರೆ ಕಡ್ಡಾಯವಾಗಿ ಶೇ.೧೮ರಷ್ಟು ತೆರಿಗೆಯನ್ನು ಪಾವತಿ ಮಾಡಬೇಕಾಗಿದೆ.

ಹೊಸ ನಿಯಮದಿಂದಾಗಿ ಮನೆ ಮಾಲೀಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ ಹಲವು ವರ್ಷಗಳಿಂದಲೂ ಕೂಡ ಮನೆ ಬಾಡಿಗೆ ಮೇಲೆ ಜಿಎಸ್ಟಿ ವಿನಾಯಿತಿ ನೀಡಬೇಕೆಂಬ ಆಗ್ರಹ ಕೇಳಿಬರುತ್ತಲೇ ಇತ್ತು. ಇನ್ನು ಮೋಟಾರ್ ಸ್ಪಿರಿಟ್ (ಪೆಟ್ರೋಲ್) ನೊಂದಿಗೆ ಮಿಶ್ರಣ ಮಾಡಲು ಸಂಸ್ಕರಣಾಗಾರಗಳಿಗೆ ಸರಬರಾಜು ಮಾಡಲಾದ ಈಥೈಲ್ ಆಲ್ಕೋಹಾಲ್ ಜನವರಿ 1 ರಿಂದ ಶೇಕಡಾ 5 ರಷ್ಟು ಜಿಎಸ್‌ಟಿಯನ್ನು ಇಳಿಕೆಯಾಗಲಿದೆ. ಸದ್ಯ ಶೇಕಡಾ 18 ತೆರಿಗೆಯನ್ನು ಬಳಕೆ ಮಾಡಲಾಗುತ್ತಿದೆ. ಇನ್ನು ದ್ವಿದಳ ಧಾನ್ಯಗಳ ಮೇಲೆ ಶೇಕಡಾ 5 ರಷ್ಟು ತೆರಿಗೆಯನ್ನು ವಿಧಿಸಲಾಗುತ್ತಿದ್ದು, ಇದನ್ನು ಶೂನ್ಯ ತೆರಿಗೆಗೆ ಇಳಿಕೆ ಮಾಡಲಾಗಿದೆ. ಅಷ್ಟೇ ಅಲ್ಲದೇ ಹಣ್ಣಿನ ತಿರುಳು ಅಥವಾ ಹಣ್ಣಿನ ರಸ ಆಧಾರಿತ ಪಾನೀಯಗಳ’ (ಕಾರ್ಬೊನೇಟೆಡ್ ಪಾನೀಯಗಳನ್ನು ಹೊರತುಪಡಿಸಿ) ಶೇಕಡಾ 12 ತೆರಿಗೆ ವಿಧಿಸಲಾಗುವುದು ಎಂದು ತಿಳಿಸಿದೆ.

ಇದನ್ನೂ ಓದಿ : PAN Card Update News : ಇನ್ಮುಂದೆ ಹಣಕಾಸಿನ ವಹಿವಾಟಿಗೆ ಪಾನ್‌ ಕಾರ್ಡ್ ಅಗತ್ಯವಿಲ್ಲ

ಇದನ್ನೂ ಓದಿ : Post Office Scheme: ಅಂಚೆ ಕಚೇರಿ ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಹೊಸ ವರ್ಷಕ್ಕೆ ಬಂಪರ್ ಗಿಫ್ಟ್ !

GST Not Payable on house Rent to proprietor for residential purpose says CBIC

Comments are closed.