Real Life Bahubali: ತೆಲಂಗಾಣದಲ್ಲೊಬ್ಬ ‘ರಿಯಲ್ ಲೈಫ್ ಬಾಹುಬಲಿ’; ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ವಿಡಿಯೋ

ತೆಲಂಗಾಣದ (Telangana )ಕೆಲವು ಭಾಗಗಳಲ್ಲಿ ನಿರಂತರ ಮಳೆ ಮತ್ತು ಪ್ರವಾಹವು ಹಾನಿಯನ್ನುಂಟುಮಾಡುತ್ತಿದೆ. ಪ್ರವಾಹ ಪೀಡಿತ ಭಾಗಗಳಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ನಾಪತ್ತೆಯಾದ ಜನರಿಗಾಗಿ ಶೋಧ ನಡೆಸುತ್ತಿದ್ದಾರೆ. ಇದರ ಜೊತೆಗೇ , ಪ್ರವಾಹ ಸಂದರ್ಭ ಹಲವಾರು ದೃಶ್ಯಗಳಿಗೆ ತೆಲಂಗಾಣ ಸಾಕ್ಷಿಯಾಗುತ್ತಿದೆ. ಅಂತಹ ದೃಶ್ಯದಲ್ಲಿ ಅದ್ಭುತವಾದ ದೃಶ್ಯವೊಂದು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿದೆ. ಬಾಹುಬಲಿಯನ್ನು(Real Life Bahubali) ಹೋಲುವ ವ್ಯಕ್ತಿಯೊಬ್ಬರು ಪ್ಲಾಸ್ಟಿಕ್ ಟಬ್ ನಲ್ಲಿ ಮೂರು ತಿಂಗಳ ಗಂಡು ಮಗುವಿನೊಂದಿಗೆ ಬೆಚ್ಚಗಿನ ಬಟ್ಟೆಯಲ್ಲಿ ಸುತ್ತಿ ತಲೆಯ ಮೇಲೆ ಹೊತ್ತುಕೊಂಡು ಹೋಗುತ್ತಿರುವುದು ಕಂಡುಬಂದಿದೆ.

ಅಂಬೆಗಾಲಿಡುವ ಮಗು ಹಾಗೂ ಕುಟುಂಬವೊಂದು ಪ್ರವಾಹದ ನೀರಿನಲ್ಲಿ ಸಿಲುಕಿಕೊಂಡಿರುವುದು ಗಮನಾರ್ಹ. ಪೆದ್ದಪಲ್ಲಿ ಜಿಲ್ಲೆಯ ಮಂಥನಿ ಪಟ್ಟಣದಲ್ಲಿ ಗುರುವಾರ ಕತ್ತಿನ ಆಳದ ನೀರಿನಲ್ಲಿ ರಕ್ಷಣಾ ಕಾರ್ಯಕರ್ತರು ತಲೆಯ ಮೇಲೆ ಪ್ಲಾಸ್ಟಿಕ್ ಟಬ್‌ನಲ್ಲಿ ಪುಟ್ಟ ಮಗುವನ್ನು ಹೊತ್ತೊಯ್ದು ರಕ್ಷಿಸಿದ್ದಾರೆ. ನಂತರ ಕುಟುಂಬವು ಮಗುವನ್ನು ಟಬ್‌ನಲ್ಲಿ ಸಾಗಿಸುವ ಮೂಲಕ ಮಗುವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿತು. ಮಗುವಿನ ತಾಯಿಯಂತೆ ಕಾಣುವ ಮಹಿಳೆಯೊಬ್ಬರು ಇನ್ನೊಬ್ಬ ಪುರುಷನ ಸಹಾಯದಿಂದ ಪ್ರವಾಹದ ನೀರಿನಲ್ಲಿ ಅಲೆದಾಡುತ್ತಿರುವುದನ್ನು ಸಹ ಕಾಣಬಹುದು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದಕ್ಕೂ ಮೊದಲು, ಮಂಚೇರಿಯಲ್ ಜಿಲ್ಲೆಯಲ್ಲಿ ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯಾಚರಣೆಯ ನಾಟಕೀಯ ದೃಶ್ಯಗಳು ಸಹ ವೈರಲ್ ಆಗಿದ್ದವು. ಪ್ರವಾಹಕ್ಕೆ ಸಿಲುಕಿದ ಗೋದಾವರಿ ನದಿಯಲ್ಲಿ ವಾಹನದ ಮೇಲೆ ಸಿಲುಕಿದ್ದ ಇಬ್ಬರನ್ನು ಎನ್‌ಡಿಆರ್‌ಎಫ್ ತಂಡ ಹೆಲಿಕಾಪ್ಟರ್ ಸಹಾಯದಿಂದ ರಕ್ಷಿಸಿದೆ.

ಪ್ರವಾಹಕ್ಕೆ ತತ್ತರಿಸಿದ ತೆಲಂಗಾಣ

ತೆಲಂಗಾಣದ ಹಲವಾರು ಗ್ರಾಮಗಳು ಮತ್ತು ಕೆಲವು ಪಟ್ಟಣಗಳು ​​ಜಲಾವೃತಗೊಂಡಿವೆ. ಉತ್ತರ ತೆಲಂಗಾಣ ಪ್ರದೇಶವು ಭಾರೀ ಮಳೆಯಿಂದ ತತ್ತರಿಸಿದ್ದು, ರಸ್ತೆಗಳ ಮೇಲೆ ನೀರು ಹರಿಯುತ್ತಿದೆ, ದೂರದ ಹಳ್ಳಿಗಳನ್ನು ಕಡಿತಗೊಳಿಸಿದೆ ಮತ್ತು ಸಾಮಾನ್ಯಜನರ ಜೀವನವು ಅತಂತ್ರ ಸ್ಥಿತಿಯಲ್ಲಿದೆ.

ಅತಿ ಹೆಚ್ಚು ಹಾನಿಗೊಳಗಾದ ಆದಿಲಾಬಾದ್, ನಿರ್ಮಲ್, ಕೊಮಾರಂ ಭೀಮ್ ಆಸಿಫಾಬಾದ್, ಮಂಚೇರಿಯಲ್ ಮತ್ತು ಜಗ್ತಿಯಾಲ್ ಜಿಲ್ಲೆಗಳಲ್ಲಿ ಗ್ರಾಮಗಳು ಮತ್ತು ಕೆಲವು ಪಟ್ಟಣಗಳ ಭಾಗಗಳು ಮುಳುಗಡೆ ಆಗಿದ್ದು ನೂರಾರು ಕುಟುಂಬಗಳು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮಾಡಿದೆ. ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಮನೆ ಕುಸಿದ ಘಟನೆಗಳು, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮತ್ತು ಬೆಳೆಗಳಿಗೆ ವ್ಯಾಪಕ ಹಾನಿಯಾಗಿದೆ.

ಇದನ್ನೂ ಓದಿ: Samsung Galaxy M Series: ಸ್ಯಾಮಸಂಗ್ ನಿಂದ ಎಂ ಸಿರೀಸ್ ಫೋನ್ ಬಿಡುಗಡೆ; ಈ ಫೋನಿನ ವೈಶಿಷ್ಟ್ಯಗಳೇನು ಗೊತ್ತಾ!

(Real Life Bahubali in Telangana )

Comments are closed.